ಬಾಲಿವುಡ್‌ನ ಟಾಪ್ ನಟಿಯಾದ ಶ್ರದ್ಧಾ ಕಪೂರ್- ಕೋಟಿ ಕೋಟಿ ಅಭಿಮಾನಿಗಳ ಮನಸ್ಸು ಗೆದ್ದ ಶ್ರದ್ಧಾ
ದೀಪಿಕಾ-ಆಲಿಯಾಗಿಂತಲೂ ಜನಪ್ರಿಯ ನಟಿ

ಬಾಲಿವುಡ್‌ನ ಟಾಪ್ ನಟಿಯಾದ ಶ್ರದ್ಧಾ ಕಪೂರ್- ಕೋಟಿ ಕೋಟಿ ಅಭಿಮಾನಿಗಳ ಮನಸ್ಸು ಗೆದ್ದ ಶ್ರದ್ಧಾದೀಪಿಕಾ-ಆಲಿಯಾಗಿಂತಲೂ ಜನಪ್ರಿಯ ನಟಿ

ಬಾಲಿವುಡ್‌ನಲ್ಲಿ ಟಾಪ್ ನಟಿಯರು ಯಾರು ಅಂತಾ ಕೇಳಿದ್ರೆ, ಫಟ್ ಅಂತಾ ನೆನೆಪಿಗೆ ಬರೋದು   ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹೆಸರು. ಆದರೆ ಇವರನ್ನೂ ಒಬ್ಬರು ಹಿಂದಿಕ್ಕಿದ್ದಾರೆ. ಅವರೇ ಶ್ರದ್ಧಾ ಕಪೂರ್.   ಭಾರತದ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ ಶ್ರದ್ಧಾ ಕಪೂರ್.  ಇವರು ಬಾಲಿವುಡ್ನ ಟಾಪ್ ನಟಿಯಾರದ  ದೀಪಿಕಾ-ಆಲಿಯಾಗಿಂತಲೂ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ ನಟಿ ಶ್ರದ್ಧಾ ಕಪೂರ್.

ಇದನ್ನೂ ಓದಿ: ಧರ್ಮನಿಗೆ ಕೈಕೊಟ್ಟ ಐಶ್‌ – ಶಿಶಿರ್ ಕಿಸ್‌ ಗೆ ಸುಂದರಿ ಕ್ಲೀನ್​ ಬೌಲ್ಡ್

ಯಾವುದೇ ದೊಡ್ಡ ಹಿನ್ನೆಲೆ ಇಲ್ಲದೆ, ದೊಡ್ಡ ನಿರ್ಮಾಣ ಸಂಸ್ಥೆಗಳ ಬೆಂಬಲ ಇಲ್ಲದೆಯೂ ಕೇವಲ ತಮ್ಮ ಪ್ರತಿಭೆ ಹಾಗೂ ಸೌಂದರ್ಯದಿಂದ ಹಿಂದಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ  ಶ್ರದ್ಧಾ ಕಪೂರ್. ಹೀಗೆ ಇವರು ಭಾರತದ ಅತ್ಯಂತ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ಭಾರತದ ಯಾವುದೇ ನಟ ಅಥವಾ ನಟಿಯರಿಗೆ ಇಲ್ಲದಷ್ಟು ಫಾಲೋವರ್ಗಳನ್ನು ಶ್ರದ್ಧಾ ಸಂಪಾದಿಸಿದ್ದಾರೆ  ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ನಟರಲ್ಲಿ ಶ್ರದ್ಧಾ ಕಪೂರ್ ಈಗ ಮೊದಲ ಸ್ಥಾನಕ್ಕೆ ಏರಿದ್ದಾರೆ. ಭಾರತದ ಯಾವುದೇ ನಟ ಅಥವಾ ನಟಿಯರಿಗೆ ಇಲ್ಲದಷ್ಟು ಇನ್ಸ್ಟಾಗ್ರಾಂ ಫಾಲೋವರ್ಗಳನ್ನು ಶ್ರದ್ಧಾ ಕಪೂರ್ ಪಡೆದುಕೊಂಡಿದ್ದಾರೆ.

 

ಶ್ರದ್ಧಾ ಕಪೂರ್ ಅವರನ್ನು ಇನ್ಸ್ಟಾಗ್ರಾಂನಲ್ಲಿ 9.36 ಕೋಟಿ ಜನ ಫಾಲೋ ಮಾಡುತ್ತಾರೆ. ಭಾರತದ ಇನ್ಯಾವುದೇ ನಟ ಅಥವಾ ನಟಿಯನ್ನು ಇಷ್ಟು ದೊಡ್ಡ ಸಂಖ್ಯೆಯ ಜನ ಫಾಲೋ ಮಾಡುವುದಿಲ್ಲ. ಅಂದಹಾಗೆ ನಟಿ ಶ್ರದ್ಧಾ ಕಪೂರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಹಿಂದಿಕ್ಕಿದ್ದಾರೆ. ಶ್ರದ್ಧಾ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ, ಈಗ ಹಾಲಿವುಡ್ನಲ್ಲಿ ನೆಲೆಸಿದ್ದರೂ ಸಹ ಭಾರತೀಯ ನಟಿಯೇ ಆಗಿರುವ ಕಾರಣ ಪ್ರಿಯಾಂಕಾರನ್ನು ಗಣನೆಗೆ ತೆಗೆದುಕೊಳ್ಳಬಹುದು. ಪ್ರಿಯಾಂಕಾರನ್ನು 9.20 ಕೋಟಿ ಜನ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಪ್ರಿಯಾಂಕಾರ ನಂತರದ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ. ಆಲಿಯಾರನ್ನು 8.52 ಕೋಟಿ ಜನ ಫಾಲೋ ಮಾಡುತ್ತಾರೆ. ನಾಲ್ಕನೇ ಸ್ಥಾನದಲ್ಲಿ ಕತ್ರಿನಾ ಕೈಫ್ ಮತ್ತು ಐದನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ.

Kishor KV

Leave a Reply

Your email address will not be published. Required fields are marked *