ಬಂದ ಪುಟ್ಟ ಹೋದ ಪುಟ್ಟ ಜೈಸ್ವಾಲ್ – KL ವಿಕೆಟ್ ಭಾರತಕ್ಕೆ ಭಾರವಾಗುತ್ತಾ?
ಸತತ ಟಾಸ್ ಸೋಲು.. ರಿಯಲ್ ಟಾಸ್ಕ್

ಇಂಗ್ಲೆಂಡ್ ಗೆಲುವೋ.. ಸರಣಿ ಸಮಬಲವೋ ಅಥವಾ ಭಾರತದ ಸೋಲೋ.. ಈ ಮೂರೂ ಆಪ್ಶನ್ಸ್ ಇದೆ ಐದನೇ ಪಂದ್ಯದಲ್ಲಿ. ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಅನ್ನೋ ಹಾಗೇ ಐದನೇ ಮ್ಯಾಚ್ ತೀವ್ರ ಕುತೂಹಲ ಮೂಡಿಸಿದೆ. ಬೆನ್ ಸ್ಟೋಕ್ಸ್ ಇಲ್ಲದಿರುವುದು ಇಂಗ್ಲೆಂಡ್ಗೆ ಹೊಡೆತವಾಗಿದ್ದು, ಓಲಿ ಪೋಪ್ ನಾಯಕತ್ವ ವಹಿಸಿದ್ದಾರೆ. ಓವಲ್ನಲ್ಲಿ ಮ್ಯಾಚ್ ಆರಂಭವಾಗಿದ್ದು ಇಂಗ್ಲೆಂಡ್ ಪಡೆ ಆರಂಭದಲ್ಲೇ ಬ್ರೇಕ್ ಥ್ರ್ಯೂ ಪಡೆದಿದೆ.
ಇದನ್ನೂ ಓದಿ : 300 ಕೋಟಿ ಬಾಚಿದ ಸೈಯ್ಯಾರಾ – ಬಾಕ್ಸ್ಆಫೀಸ್ ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ನ ಹೊಸ ಜೋಡಿ
ಸರಣಿ ಸಮಬಲಕ್ಕೆ ಪಣತೊಟ್ಟು ಫೀಲ್ಡಿಗಿಳಿದಿರೋ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ನಾಲ್ಕು ಬದಲಾವಣೆಗಳನ್ನ ಮಾಡಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇಂಜುರಿಯಾಗಿರೋದ್ರಿಂದ ಅವ್ರ ಬದಲಿಗೆ ದ್ರುವ್ ಜುರೇಲ್ ಬಂದಿದ್ದಾರೆ. ಶಾರ್ದೂಲ್ ಠಾಕೂರ್ ಬದಲಿಗೆ ಕರುಣ್ ನಾಯರ್ಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದಾರೆ. ಜಸ್ಪ್ರೀತ್ ಬುಮ್ರಾ ಬದಲಿಗೆ ಪ್ರಸಿದ್ಧ್ ಕೃಷ್ಣ ಹಾಗೂ ಅನ್ಶುಲ್ ಕಾಂಬೋಜ್ ಬದಲಿಗೆ ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ. ಅಂದ್ರೆ ಈ ಮ್ಯಾಚ್ನಲ್ಲಿ ಒಬ್ಬ ಹೆಚ್ಚುವರಿ ಬ್ಯಾಟ್ಸ್ಮನ್ಗೆ ಮಣೆ ಹಾಕಲಾಗಿದೆ. ಕನ್ನಡಿಗರಿಗೆ ಖುಷಿಯ ವಿಚಾರ ಅಂದ್ರೆ ಈ ಪಂದ್ಯದಲ್ಲಿ ಮೂವರು ಕನ್ನಡಿಗರಿಗೆ ಚಾನ್ಸ್ ಸಿಕ್ಕಿದೆ. ಕರುಣ್ ನಾಯರ್, ಕೆಎಲ್ ರಾಹುಲ್ ಹಾಗೇ ಪ್ರಸಿದ್ಧ್ ಕೃಷ್ಣ ಮೂವರು ಕಣಕ್ಕಿಳಿದಿದ್ದಾರೆ.
ಐದನೇ ಪಂದ್ಯ ಆರಂಭವಾಗೋ ಮುನ್ನ ಇದ್ದ ಬಿಗ್ಗೆಸ್ಟ್ ಕ್ವಶ್ಚನ್ ಅಂದ್ರೆ ಸಾಯಿ ಸುದರ್ಶನ್ ಅಥವಾ ಕರುಣ್ ನಾಯರ್ ಇಬ್ಬರಲ್ಲಿ ಯಾರಿಗೆ ಚಾನ್ಸ್ ಕೊಡ್ತಾರೆ ಅನ್ನೋದು. ಬಟ್ ಇಬ್ಬರಿಗೂ ಚಾನ್ಸ್ ಸಿಕ್ಕಿದೆ. ಸಾಯಿ ಸುದರ್ಶನ್ ಮೂರನೇ ಸ್ಲಾಟ್ನಲ್ಲಿ ಬ್ಯಾಟ್ ಬೀಸಿದ್ರೆ ಕರುಣ್ ನಾಯರ್ ಐದನೇ ಕ್ರಮಾಂಕದಲ್ಲಿ ಬರ್ತಾರೆ. ಬಟ್ ಈ ಪಂದ್ಯದಲ್ಲಾದ್ರೂ ಬಿಗ್ ಇನ್ನಿಂಗ್ಸ್ ಬಂದ್ರಷ್ಟೇ ಟೀಂ ಇಂಡಿಯಾದಲ್ಲಿ ಮುಂದಿನ ಒಂದಷ್ಟು ವರ್ಷ ಕ್ರಿಕೆಟ್ ಜರ್ನಿ ಕಂಟಿನ್ಯೂ ಆಗುತ್ತೆ. ಇಲ್ದೇ ಇದ್ರೆ ಇದೇ ಕೊನೇ ಸರಣಿ ಆದ್ರೂ ಅಚ್ಚರಿ ಇಲ್ಲ. ಯಾಕಂದ್ರೆ ಮೊದಲ ಮೂರು ಪಂದ್ಯಗಳಲ್ಲಿ ಚಾನ್ಸ್ ಪಡೆದಿದ್ದ ಕರುಣ್ 6 ಇನ್ನಿಂಗ್ಸ್ ಬ್ಯಾಟ್ ಬೀಸಿದ್ರು. ಬಟ್ ಒಂದೇ ಒಂದು ಅರ್ಧಸೆಂಚುರಿನೂ ಬಂದಿರಲಿಲ್ಲ. 40 ರನ್ ಗಳಿಸಿದ್ದೇ ಹೈಯೆಸ್ಟ್ ಆಗಿತ್ತು. 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡರೂ, ಬಿಗ್ ಸ್ಕೋರ್ ಬರಲೇ ಇಲ್ಲ. 6 ಇನ್ನಿಂಗ್ಸ್ಗಳಲ್ಲಿ ಟೋಟಲ್ಲಾಗಿ ಕಲೆ ಹಾಕಿದ್ದೇ 131 ರನ್. ಹೀಗಾಗಿ ಈ ಪಂದ್ಯದಲ್ಲಿ ಮತ್ತೊಂದು ಅವಕಾಶ ಕೊಟ್ಟಿರೋದ್ರಿಂದ ಬಿಗ್ ಸ್ಕೋರ್ ಬರಲೇಬೇಕು. ಇದು ಕರುಣ್ ಕಥೆಯಾದ್ರೆ ಯಶಸ್ವಿ ಜೈಸ್ವಾಲ್ ಯಾಕೋ ಬಂದ ಪುಟ್ಟ ಹೋದ ಪುಟ್ಟ ಆಗಿದ್ದಾರೆ.
ಇನ್ನು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳ್ಕೊಳ್ತು. ಯಶಸ್ವಿ ಜೈಸ್ವಾಲ್ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ್ರು. 2 ರನ್ ಗಳಿಸಿದ್ದ ಜೈಸ್ವಾಲ್ ಗಸ್ ಅಟ್ಕಿನ್ಸನ್ ಅವ್ರ ಎಲ್ಬಿಡಬ್ಲ್ಯೂ ಬಲೆಗೆ ಬಿದ್ರು. ಬಟ್ ಆರಂಭಿಕ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಅವರು ರನ್ ಕಲೆ ಹಾಕುವಲ್ಲಿ ಪದೇಪದೆ ಫೇಲ್ಯೂರ್ ಆಗ್ತಿರೋದು ತಂಡದ ಚಿಂತೆ ಹೆಚ್ಚಿಸಿದೆ. 23 ವರ್ಷದ ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಆಡಿದ ಐದು ಪಂದ್ಯಗಳ 9 ಇನಿಂಗ್ಸ್ಗಳಿಂದ 427 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 1 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಬಟ್ ಓಪನರ್ ಆಗಿ ಕ್ರೀಸ್ ಕಚ್ಚಿನಿಂತು ಬಿಗ್ ಸ್ಕೋರ್ ಕಲೆ ಹಾಕದ ಜೈಸ್ವಾಲ್ ತಂಡವನ್ನ ಆರಂಭದಲ್ಲೇ ಪ್ರೆಶರ್ನಲ್ಲಿ ಸಿಲುಕುವಂತೆ ಮಾಡ್ತಿದ್ದಾರೆ. ಇನ್ನು ಕೆಎಲ್ ರಾಹುಲ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ಸದ್ಯ ಸರಣಿಯುದ್ದಕ್ಕೂ ಗಿಲ್, ರಾಹುಲ್ ಮತ್ತು ಜಡೇಜಾ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಿದ್ದಾರೆ. ಅದ್ರಲ್ಲೂ ಗಿಲ್ ಮತ್ತು ರಾಹುಲ್ ಸಾವಿರ ಪ್ಲಸ್ ಬಾಲ್ ಫೇಸ್ ಮಾಡಿದ್ದಾರೆ. ಬಟ್ ಒಂದು ಸೆಟ್ ಬ್ಯಾಕ್ ಏನಪ್ಪಾ ಅಂದ್ರೆ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತಿದ್ದೇವೆ. ಬ್ಯಾಟಿಂಗ್ ಆಡೋದಾ ಫೀಲ್ಡಿಂಗ್ ಆಡೋದಾ ಅಂತಾ ಸೆಟ್ ಮಾಡಿಕೊಳ್ಳೋಕೆ ಅವಕಾಶನೇ ಸಿಕ್ಕಿಲ್ಲ. ಇದು ಕೂಡ ಹೊಡೆತ ನೀಡ್ತಿದೆ.

ನೋಡಿರಿ

