‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? – ಅಂದು ಜೂಹಿ.. ಇಂದು ಯಾರು ಗೊತ್ತಾ?

‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? – ಅಂದು ಜೂಹಿ.. ಇಂದು ಯಾರು ಗೊತ್ತಾ?

‘ಕ್ರೇಜಿ ಸ್ಟಾರ್‌’ ರವಿಚಂದ್ರನ್‌ ಅವರು ಅವರಿಗೆ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಎಂದರೆ, ಅದು ‘ಪ್ರೇಮಲೋಕ’. 1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾವನ್ನು ಸ್ವತಃ ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಇಂದಿಗೂ ಆ ಸಿನಿಮಾದ ಹಾಡುಗಳು ಜನಜನಿತವಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಇದೀಗ ‘ಪ್ರೇಮಲೋಕ 2’ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲು ಸಜ್ಜಾಗಿದ್ದು, ಸಿನಿಮಾದ ನಾಯಕಿಯನ್ನು ಆಯ್ಕೆ ಮಾಡಲಾಗಿದೆ. ತಮಿಳು ನಟಿ ಪ್ರೇಮಲೋಕ 2 ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 6 ವರ್ಷ ಪ್ರೀತಿ, ಮಗುವಾದ ಮೇಲೆ ಮದುವೆ!  – ಪ್ಯಾಟ್ ಕಮಿನ್ಸ್ Love ಸ್ಟೋರಿ

ಹಲವು ವರ್ಷಗಳ ನಂತರ ಪ್ರೇಮಲೋಕ 2 ಸಿನಿಮಾ ಬರುತ್ತಿದೆ. ಮೇ 30 ರವಿಚಂದ್ರನ್ ಅವರ ಬರ್ತ್​ಡೇ. ಅಂದು ‘ಪ್ರೇಮಲೋಕ 2’ ಚಿತ್ರ ಲಾಂಚ್ ಆಗಲಿದೆ. ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ. ರವಿಚಂದ್ರನ್ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಅನ್ನೋ ಕುತೂಹಲ ಮೂಡಿದೆ. ಈ ಚಿತ್ರದಲ್ಲಿ 20-25 ಸಾಂಗ್​ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ. ಈ ಬೆನ್ನಲ್ಲೇ ಸಿನಿಮಾ ಹೀರೋಯಿನ್​ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ.  ‘ಪ್ರೇಮಲೋಕ 2’ ಚಿತ್ರಕ್ಕೆ ಈಗ ನಾಯಕಿ ಫೈನಲ್ ಆಗಿದ್ದಾರೆ. ಈ ಚಿತ್ರಕ್ಕೆ ತಮಿಳಿನ ತೇಜು ಅಶ್ವಿನಿ ಅವರು ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ರವಿಚಂದ್ರನ್ ಅವರು ಹೀರೋಯಿನ್​ಗಳ ಆಯ್ಕೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಅಳೆದು ತೂಗಿ ಅವರು ನಟಿಯರಿಗೆ ಅವಕಾಶ ನೀಡುತ್ತಾರೆ. ರವಿಚಂದ್ರನ್ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಅವರ ಅದೃಷ್ಟ ಬದಲಾಗುತ್ತದೆ ಅನ್ನೋ ಮಾತಿದೆ. ‘ಪ್ರೇಮಲೋಕ’ ಸಿನಿಮಾದಲ್ಲಿ ರವಿಚಂದ್ರನ್​ಗೆ ಜೊತೆಯಾಗಿ ಜೂಹಿ ಚಾವ್ಲಾ ನಟಿಸಿದ್ದರು. ಇವರ ಕಾಂಬಿನೇಷನ್ ಗಮನ ಸೆಳೆದಿತ್ತು. ಈಗ ಪ್ರೇಮಲೋಕ 2 ಚಿತ್ರದಲ್ಲಿ  ತೇಜುಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ. ಅವರು ಡ್ಯಾನ್ಸರ್ ಹಾಗೂ ಕೋರಿಯೋಗ್ರಫರ್ ಎರಡೂ ಹೌದು. ಇದರ ಜೊತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಅವರು ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅವರು ‘ಪ್ರೇಮಲೋಕ 2’ ಚಿತ್ರದ ಭಾಗವಾಗುತ್ತಾರೆ ಎನ್ನಲಾಗಿದೆ.

Shwetha M