ಪ್ರಿಯಕರನ ಜೊತೆ ಓಡಿ ಹೋದವಳು ಸೇರಿದ್ದು ಮಸಣಕ್ಕೆ -ಗಂಡ, ಮಕ್ಕಳನ್ನು ಬಿಟ್ಟು ಹೋದವಳಿಗೆ ಆಗಿದ್ದೇನು ಗೊತ್ತಾ?

ಪ್ರಿಯಕರನ ಜೊತೆ ಓಡಿ ಹೋದವಳು ಸೇರಿದ್ದು ಮಸಣಕ್ಕೆ  -ಗಂಡ, ಮಕ್ಕಳನ್ನು ಬಿಟ್ಟು  ಹೋದವಳಿಗೆ ಆಗಿದ್ದೇನು ಗೊತ್ತಾ?

ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದ ಮಹಿಳೆ ಹೆಣವಾಗಿ ಪತ್ತೆಯಾಗಿದ್ದಾಳೆ. ಕಟ್ಟಿಕೊಂಡು ಗಂಡನ ಜೊತೆೆಗೆ ಬಾಳಲಾಗದೇ ಬೇರೆಯವನ ಜೊತೆ ಅಕ್ಷತಾ ಓಡಿ ಹೋಗಿದ್ಲು. ಆದ್ರೆ ಯಾರನ್ನ ನಂಬಿ ಹೋಗಿದ್ಲೋ ಅವನ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು   ಹೊರವಲಯದ ಜಿಗಣಿಯ ಪಟಾಲಮ್ಮ ಬಡಾವಣೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಇಳಕಲ್​ ಮೂಲದ ಅಕ್ಷತಾ ಎಂದು ಗುರುತಿಸಲಾಗಿದೆ. ಇದೇ ತಿಂಗಳು 20ನೇ ತಾರೀಖು ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಮನೆ ಮಾಲೀಕ ಕಿಟಕಿ ತೆರೆದು ನೋಡಿದಾಗ ಅಕ್ಷತಾ ಶವ  ಪತ್ತೆಯಾಗಿದ್ದು, ತನಿಖೆ ವೇಳೆ ನಾನಾ ಸಾಹೇಬ್ ಎಂಬಾತ ಕೊಲೆಗೈದು  ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶನಿವಾರ ಏಕರೂಪದ ಶಾಲಾ ಅವಧಿ ಜಾರಿ – ಕರ್ನಾಟಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಕೊಳೆತ ಸ್ಥಿತಿಯಲ್ಲಿ ಅಕ್ಷತಾ ಶವ ಪತ್ತೆಯಾಗಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರೋ ಮಾಹಿತಿ ಲಭ್ಯವಾಗಿದ್ದು, ಜಿಗಣಿ ಪೊಲೀಸರು ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ನಾನಾ ಸಾಹೇಬ್ ಕೊಲೆಗೈದು ಪರಾರಿ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೃತ ಅಕ್ಷತಾ 2014 ರಲ್ಲಿ ಕೃಷ್ಣ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಅಕ್ಷತಾ ಮತ್ತು ಕೃಷ್ಣ ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಕೂಡ ಇತ್ತು. ಪತಿ ಕೃಷ್ಣ ವುಡ್ ವರ್ಕ್ ಕೆಲಸ ಮಾಡ್ತಿದ್ರೆ,  ಮೃತ ಅಕ್ಷತಾ ಸೀರೆ ನೇಯ್ಗೆ ಕೆಲಸ ಮಾಡ್ತಿದ್ರು. ಅಲ್ಲಿಯೇ ಕೆಲಸ ಮಾಡುತ್ತಿದ್ದ ನಾನಾ ಸಾಹೇಬ್ ಎಂಬಾತನ ಮೃತ ಮಂಜುಳಾ ಸ್ನೇಹ ಬೆಳೆಸಿದ್ದಳು ಎನ್ನಲಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ ಮಕ್ಕಳು ಪತಿಯನ್ನು ಬಿಟ್ಟು ಅಕ್ಷತಾ ನಾನಾ ಸಾಹೇಬ್​ ಜೊತೆ ಬಂದಿದ್ದಳು. ಕಳೆದ ನವೆಂಬರ್​ನಲ್ಲಿ ನಾನಾ ಸಾಹೇಬ್ ಜಿಗಣಿಯ ಪಟಾಲಮ್ಮ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ಗಂಡ ಹೆಂಡತಿ ಎಂದು ಬಾಡಿಗೆ ಮನೆ ಪಡೆದಿದ್ದರು ಎನ್ನಲಾಗಿದ್ದು, ಇದೀಗ ಅದೇ ಮನೆಯಲ್ಲಿ ಅಕ್ಷತಾ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸದ್ಯ, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ಆರೋಪಿ ನಾನಾ ಸಾಹೇಬ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಾರೆ, ಗಂಡ ಮತ್ತು ಇಬ್ಬರು ಮುದ್ದಾದ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಬಂದಿದ್ದ ಮಹಿಳೆ ಸಾವನ್ನಪ್ಪಿರೋದು ನಿಜಕ್ಕೂ ದುರಂತವೇ ಸರಿ..

Kishor KV

Leave a Reply

Your email address will not be published. Required fields are marked *