ಪ್ರಶ್ನೆ ಪತ್ರಿಕೆಯಲ್ಲೂ ಗಿಲ್ಲಿಯದ್ದೇ ಹವಾ! – ಗಿಲ್ಲಿ ಬಗ್ಗೆ ಕೇಳಿದ ಪ್ರಶ್ನೆ ಏನು?

ಪ್ರಶ್ನೆ ಪತ್ರಿಕೆಯಲ್ಲೂ ಗಿಲ್ಲಿಯದ್ದೇ ಹವಾ! – ಗಿಲ್ಲಿ ಬಗ್ಗೆ ಕೇಳಿದ ಪ್ರಶ್ನೆ ಏನು?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿದು ಎರಡು ತಿಂಗಳಾಗುತ್ತಾ ಬಂತು. ಆದ್ರೂ ಸ್ಪರ್ಧಿಗಳ ಹವಾ ಮಾತ್ರ ನಿಂತಿಲ್ಲ. ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದ್ರೆ ಗಿಲ್ಲಿ ಕ್ರೇಜ್‌ ಮಾತ್ರ ನೆಕ್ಸ್ಟ್‌ ಲೆಬೆಲ್‌ನಲ್ಲಿದೆ. ಇದೀಗ ಪರೀಕ್ಷೆಯಲ್ಲೂ ಗಿಲ್ಲಿ ವಿಚಾರ ಸದ್ದು ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – 9 ನಿಮಿಷಕ್ಕೊಂದು ರೈಲು ಲಭ್ಯ!

ಬಿಗ್‌ಬಾಸ್‌ ಮನೆಯಿಂದ ಬಂದ ಬಳಿಕ ಗಿಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಪ್ರಥಮ ಪಿಯುಸಿಯದ್ದು ಎನ್ನಲಾದ ಪ್ರಶ್ನೆ ಪತ್ರಿಕೆಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. fan_of_givya ಸೇರಿದಂತೆ ಹಲವು ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

ವೈರಲ್‌ ಆದ ಪ್ರಶ್ನೆಪತ್ರಿಕೆಯಲ್ಲಿ ಗಿಲ್ಲಿನಟನ ಬಗ್ಗೆ ಪ್ರಶ್ನೆಯೊಂದನ್ನ ಕೇಳಲಾಗಿದೆ. ಬಿಟ್ಟ ಸ್ಥಳ ತುಂಬುವ ಪ್ರಶ್ನೆ ಅದಾಗಿದೆ. ಗ್ರಾಮರ್​ ವಿಭಾಗದಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. Gilli stood on the Bigg Boss stage — pride after the grand finale — Kannada ‘Big Boss season 12’ among all the contestants, he reached vicotry to determination and support — the audience ಎನ್ನುವ ಪ್ರಶ್ನೆ ಇದಾಗಿದೆ. ಬಿಟ್ಟ ಸ್ಥಳದಲ್ಲಿ From, With In, Under ಅನ್ನು ಫಿಲ್​ ಮಾಡಬೇಕು.

ಈ ವಾಕ್ಯದ ತಾತ್ಪರ್ಯ ಹೇಳುವುದಾದರೆ, ಬಿಗ್ ಬಾಸ್ ವೇದಿಕೆಯಲ್ಲಿ ನಿಂತ ಗಿಲ್ಲಿ ಗ್ರ್ಯಾಂಡ್ ಫಿನಾಲೆಯ ನಂತರ ದೃಢನಿಶ್ಚಯ ಮತ್ತು ಬೆಂಬಲದೊಂದಿಗೆ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ, ಕನ್ನಡ ಬಿಗ್ ಬಾಸ್ ಸೀಸನ್ 12 ವಿಜಯವನ್ನು ಪಡೆದರು ಎನ್ನುವುದು. ಒಟ್ಟಿನಲ್ಲಿ ಗಿಲ್ಲಿ ನಟ ಪ್ರಶ್ನೆ ಪತ್ರಿಕೆಯಲ್ಲಿಯೂ ಬರುವ ಹಾಗೆ ಆಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

Shwetha M

Leave a Reply

Your email address will not be published. Required fields are marked *