ಪ್ರಶಾಂತ್ ನೀಲ್ ಸೃಷ್ಟಿಸಿದ ಸಲಾರ್ ಪ್ರಪಂಚ ಹೇಗಿದೆ? – ಧೂಳೆಬ್ಬಿಸಿದ ಪ್ರಭಾಸ್ ಸಿನಿಮಾದ ಟ್ರೈಲರ್

ಪ್ರಶಾಂತ್ ನೀಲ್ ಸೃಷ್ಟಿಸಿದ ಸಲಾರ್ ಪ್ರಪಂಚ ಹೇಗಿದೆ? – ಧೂಳೆಬ್ಬಿಸಿದ ಪ್ರಭಾಸ್ ಸಿನಿಮಾದ ಟ್ರೈಲರ್

ಪ್ರಭಾಸ್ ಮತ್ತು ಪ್ರಶಾಂತ್ ನೀಲ್​.. ದಕ್ಷಿಣ ಭಾರತ ಸಿನಿಮಾ ರಂಗದ ಇಬ್ಬರು ದೈತ್ಯ ಪ್ರತಿಭೆಗಳು ಜೊತೆ ಸೇರಿ ಮಾಡಿರೋ ಸಲಾರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಯೂಟ್ಯೂಬ್​ನಲ್ಲಂತೂ ಸಿನಿಮಾ ಟ್ರೈಲರ್ ಸುನಾಮಿಯಂತೆ ಓಡ್ತಿದೆ. ಸಲಾರ್ ಸಿನಿಮಾ ಟ್ರೈಲರ್​​​ನ ಸ್ಪೆಷಾಲಿಟಿ ಬಗ್ಗೆ ಮತ್ತು ಈ ಸಿನಿಮಾ ಪ್ರಭಾಸ್​ ಕೆರಿಯರ್​​ ದೃಷ್ಟಿಯಿಂದ ಯಾಕೆ ಇಂಪಾರ್ಟೆಂಟ್. ಜೊತೆಗೆ ಟ್ರೈಲರ್​​ನಲ್ಲಿ ನಿಜಕ್ಕೂ ಏನಿದೆ ಎಂಬ ಬಗ್ಗೆ ಇಲ್ಲಿದೆ ವರದಿ.

ಇದನ್ನೂ ಓದಿ: ಅಮೆರಿಕದಲ್ಲಿ ಸಲಾರ್‌ ಆರ್ಭಟ – ರಿಲೀಸ್‌ಗೂ ಮುನ್ನವೇ ಲಕ್ಷಡಾಲರ್ ಕಲೆಕ್ಷನ್ ಮಾಡಿದ ಪ್ರಭಾಸ್‌ ಸಿನಿಮಾ!

ಯಶ್​ ಅಭಿನಯದ ಕೆಜಿಎಫ್​ನಲ್ಲಿ ತಾಯಿ ಸೆಂಟಿಮೆಂಟ್​ ಆದ್ರೆ, ಪ್ರಭಾಸ್ ಅಭಿನಯದ ಸಲಾರ್ ಸಿನಿಮಾದಲ್ಲಿ ಸ್ನೇಹದ ಸೆಂಟಿಮೆಂಟ್. ಇಲ್ಲಿ ಮಲಯಾಳಂ ನಟ ಪೃಥ್ವಿರಾಜ್ ​ಅವರು ಪ್ರಭಾಸ್​​ರ ಪ್ರಾಣ ಸ್ನೇಹಿತ. ಸಿನಿಮಾ ಸೆಂಟಿಮೆಂಟ್​ನಿಂದ ಶುರುವಾದ್ರೂ ಚಿತ್ರದುದ್ದಕ್ಕೂ ಇರೋದು ಫುಲ್ ಆ್ಯಕ್ಷನ್. ಒಂಥರಾ ಕೆಜಿಎಫ್​ ಸಿನಿಮಾ ರೀತಿಯೇ..ಇಲ್ಲಿ ಕೂಡ ಕುರ್ಚಿಗೋಸ್ಕರವೇ, ಅಧಿಕಾರಕ್ಕೋಸ್ಕರವೇ ಸಮರ ನಡೆಯೋದು. ಟ್ರೈಲರ್​ ಶುರುವಾಗಿ ಎರಡು ನಿಮಿಷಗಳ ಬಳಿಕ ಪ್ರಭಾಸ್ ಎಂಟ್ರಿಯಾಗುತ್ತೆ. ಯುದ್ಧ ನಡೆಯೋದು ಹೊರಗಡೆ ಹೋಗೋಕೆ ಅಲ್ಲ.. ಒಳಗಡೆ ನುಗ್ಗೋಕೆ ಅಂತಾ ಪ್ರಭಾಸ್ ಒಂದು ಡೈಲಾಗ್ ಹೊಡೀತಾರೆ. ಟ್ರೈಲರ್​ ನೋಡೋವಾಗ ಅಲ್​​ಮೋಸ್ಟ್​ ಕೆಜಿಎಫ್​ ಚಿತ್ರವೇ ನೆನಪಾಗುತ್ತೆ. ಪ್ರಭಾಸ್ ಪ್ರಶಾಂತ್ ನೀಲ್ ಇನ್ನೂ ಕೂಡ ಕೆಜಿಎಫ್​ ಗುಂಗಿನಿಂದ, ಆ ಸೆಟ್​​ನಿಂದ ಹೊರಬಂದಂತೆ ಕಾಣ್ತಿಲ್ಲ. ಇಲ್ಲೂ ಅಷ್ಟೇ.. ಬರೀ ಕತ್ತಲೆ..ಕತ್ತಲೆ..ಕತ್ತಲೆ..  ಕೆಜಿಎಫ್​​ ಮತ್ತು ಉಪೇಂದ್ರ ಅಭಿನಯದ ಕಬ್ಜಾದ ಸೆಟ್​​ನಂತೆಯೇ ಕಾಣ್ಸುತ್ತೆ. ಫೈಟಿಂಗ್ ಕೂಡ ಅಷ್ಟೇ. ಸ್ಲೋಮೋಷನ್​​ನಲ್ಲಿ ಎತ್ತಿ ಬಿಸಾಕ್ತಾರೆ.. ಹೊಟ್ಟೆಗೆ ಇರೀತಾರೆ.. ಬೆಂಕಿ, ರಕ್ತ, ಗನ್, ಬ್ಲಾಸ್ಟ್ ಆಗೋದು ಬರೀ ಇವೇ ತುಂಬಿಕೊಂಡಿದೆ. ಆ್ಯಕ್ಷನ್ ಸಿನಿಮಾ ಪ್ರಿಯರಿಗೆ ಸಲಾರ್ ಇಷ್ಟವಾಗಬಹುದೋ ಏನೋ.. ಇನ್ನು ಕಾಸ್ಟ್ಯೂಮ್ಸ್ ಕೂಡ ಅಷ್ಟೇ.. ಇಲ್ಲೂ ಧೂಳು ತುಂಬಿರೋ ಕಪ್ಪು ಬಟ್ಟೆಯೇ ಹೆಚ್ಚು ಕಾಣ್ಸುತ್ತೆ. ಇನ್ನು ಬ್ಯಾಕ್​​ರೌಂಡ್ ಮ್ಯೂಸಿಕ್ ಎಫೆಕ್ಟಿವ್ ಆಗಿಯೇ ಇದೆ.. ರವಿ ಬಸ್ರೂರ್​ ಸಲಾರ್​ಗೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದಾರೆ.  ಕೆಜಿಎಫ್​ ಸಿನಿಮಾಗೂ ಇವರೇ ಮ್ಯೂಸಿಕ್ ಡೈರೆಕ್ಟರ್​ ಆಗಿದ್ರು. ಇಲ್ಲೂ ಅದೇ ರೀತಿ ಚಿತ್ರಕ್ಕೆ ತಕ್ಕಂತೆ ರಗಡ್ ಮ್ಯೂಸಿಕ್​​ನ್ನ ಕಂಪೋಸ್ ಮಾಡಿದ್ದಾರೆ. ​ಇನ್ನು ಶೃತಿ ಹಾಸನ್ ಸಿನಿಮಾದ ಹೀರೋಯಿನ್ ಅಂತಾ ಕಾನ್ಸುತ್ತೆ..ಯಾಕಂದ್ರೆ ಟ್ರೈಲರ್​​ನಲ್ಲಿ ಒಂದು ಫ್ರೇಮ್​ನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶೃತಿ ಹಾಸನ್ ಅಂತಾ ನೋಡುಗರಿಗೆ ಗೊತ್ತಾಗಲಿ ಅಂತಷ್ಟೇ ಟ್ರೈಲರ್​ನಲ್ಲಿ ಅವರನ್ನ ತೋರಿಸಿರೋ ಹಾಗಿದೆ. ಆದ್ರೆ ಅವರ ಕ್ಯಾರೆಕ್ಟರ್ ಏನು ಅನ್ನೋದೇನು ಅನ್ನೋದಂತೂ ಈ ಟ್ರೈಲರ್​​ ನೋಡೋವಾಗ ಗೊತ್ತಾಗಲ್ಲ.. ಯಾಕಂದ್ರೆ ಪ್ರಭಾಸ್ ಜೊತೆಗೆ ಒಂದೇ ಒಂದು ಸೀನ್​ನಲ್ಲಿ ಕಾಣಿಸಿಕೊಂಡಿಲ್ಲ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಪ್ರಭಾಸ್ ಮತ್ತು ಪೃಥ್ವಿರಾಜ್.. ಹೀಗಾಗಿ ಶೃತಿ ಹಾಸನ್ ಯಾರ ಹುಡುಗಿ ಅನ್ನೋದು ಗೊತ್ತಿಲ್ಲ. ಇನ್ನು ಕನ್ನಡದ ಮೂವರು ನಟರು ಸಲಾರ್​​ನಲ್ಲಿ ಆ್ಯಕ್ಟ್ ಮಾಡಿದ್ದಾರೆ. ವಿನಲ್​ ಪಾತ್ರದಲ್ಲಿ ನವೀನ್ ಮತ್ತು ಕೆಜಿಎಫ್​​ ಗರುಡ ಪಾತ್ರಧಾರಿ ಇಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಯುವ ನಟ ಪ್ರಮೋದ್ ಪಂಜು ಕೂಡ ಸಲಾರ್​ನಲ್ಲಿ ಒಂದು ರೋಲ್​ ಪಡೆದುಕೊಂಡಿದ್ದಾರೆ. ಇನ್ನು ಸಲಾರ್ ಸಿನಿಮಾದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಒಟ್ಟು ಐದು ಭಾಷೆಗಳ ನಟರನ್ನ ಟ್ರೈಲರ್​​ನಲ್ಲಿ ತೋರಿಸಿದ್ದಾರೆ. ಈ ಮೂಲಕ ಐದು ಭಾಷೆಗಳ ಜನರನ್ನ ಥಿಯೇಟರ್​ಗೆ ಸೆಳೆಯೋಕೆ ಪ್ರಶಾಂತ್​ ನೀಲ್​ ಪ್ಲ್ಯಾನ್ ಮಾಡಿದ್ದಾರೆ.

ಪ್ರಭಾಸ್ ಪಾಲಿಗೆ ಈ ಸಿನಿಮಾ ತುಂಬಾನೆ ಇಂಪಾರ್ಟೆಂಟ್. ಯಾಕಂದ್ರೆ ಬಾಹುಬಲಿ ಬಳಿಕ ಪ್ರಭಾಸ್ ಆ ರೇಂಜಿನ ಯಾವುದೇ ಹಿಟ್ ಸಿನಿಮಾಗಳನ್ನ ಕೊಟ್ಟಿಲ್ಲ. ಬಾಹುಬಲಿ ಸಿನಿಮಾ ಒಬ್ಬ ನಟನಾಗಿ ಪ್ರಭಾಸ್​ರನ್ನ ಇನ್ನೊಂದು ಲೆವೆಲ್​ಗೆ ತೆಗೆದುಕೊಂಡು ಹೋಗಿತ್ತು. ಪ್ರಭಾಸ್ ಸಿನಿಮಾಗಳ ಮೇಲಿನ ಎಕ್ಸ್​​ಪೆಕ್ಟೇಶನ್ ಕೂಡ ಹೆಚ್ಚಾಯ್ತು. ಬಳಿಕ ರಿಲೀಸ್ ಆದ ಯಾವುದೇ ಪ್ರಭಾಸ್ ಸಿನಿಮಾಗಳು ಆ ಎಕ್ಸ್​ಪೆಕ್ಟೇಷನ್​​ ಲೆವೆಲ್​ಗೆ ರೀಚ್ ಆಗಿರಲಿಲ್ಲ. ಸಾಹೋ ಆಗಿರಲಿ, ರಾಧೇ ಶ್ಯಾಮ್ ಆಗಿರ್ಲಿ ಮತ್ತು ಆದಿಪುರುಷ್ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ಕೆಲವು ನೂರು ಕೋಟಿಗಳಷ್ಟು ಬಾಚಿಕೊಂಡ್ರೂ ಪ್ರಭಾಸ್​​ಗೆ ಇದ್ರಿಂದ ಯಾವುದೇ ಮೈಲೇಜ್ ಸಿಕ್ಕಿಲ್ಲ. ಹೀಗಾಗಿ ಒಂದು ಬಿಗ್ ಸೂಪರ್​ ಡೂಪರ್ ಹಿಟ್ ಸಿನಿಮಾ ಪ್ರಭಾಸ್​ಗೆ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಕರ್ನಾಟಕದ ಸೂಪರ್​ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆಗೆ ಸೇರಿ ಸಲಾರ್ ಸಿನಿಮಾವನ್ನ ನಿರ್ಮಿಸಿದ್ದಾರೆ. ಸಲಾರ್​ ಪಾರ್ಟ್-2 ಕೂಡ ಬರಲಿದೆ.  ಇನ್ನು ಯೂಟ್ಯೂಬ್​​ನಲ್ಲಿ ಸಲಾರ್​ ಟ್ರೈಲರ್​​ ಫುಲ್​ ಟ್ರೆಂಡಿಂಗ್​ನಲ್ಲಿದೆ.

Sulekha