ಪೇರುಪೇಟೆ ಮಹಾ ಪತನ -ಕರಗಿದ ಭಾರದ 20 ಲಕ್ಷ ಕೋಟಿ!!
ಚಿನ್ನದ ಬೆಲೆ ಏರಿಕೆ ಫಿಕ್ಸ್!

ಡೊನಾಲ್ಡ್ ಟ್ರಂಪ್ ಅವರ ‘ಹೊಸ ತೆರಿಗೆ ನೀತಿ’ಯಿಂದಾಗಿ ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತೀಯ ಸ್ಟಾಕ್ ಮಾರ್ಕೆಟ್ ಸೇರಿದಂತೆ ವಿಶ್ವದ ದೈತ್ಯ ಮಾರುಕಟ್ಟೆಗಳು ಅಲುಗಾಡಿವೆ. ಬೆಳಗ್ಗೆ ಭಾರತೀಯ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 3000 ಪಾಯಿಂಟ್ಸ್ಗಿಂತಲೂ ಕಡಿಮೆ ಕುಸಿತಕಂಡಿದೆ. ನಿಫ್ಟಿ ಸೂಚ್ಯಂಕ 750 ಪಾಯಿಂಟ್ಸ್ ಕುಸಿದಿದೆ. ಟ್ರಂಪ್ ಅವರ ಹೊಸ ಆಮದು ನೀತಿಯಿಂದಾಗಿ ಹೂಡಿಕೆದಾರರಿಗೆ ಆತಂಕ ಶುರುವಾಗಿದ್ದು, ಕಂಪನಿಗಳು ತಮ್ಮೆಲ್ಲ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿವೆ.
10 ಸೆಕೆಂಡ್ನಲ್ಲಿ 20 ಲಕ್ಷ ಕೋಟಿ ರೂಪಾಯಿ ನಷ್ಟ
ಕಳೆದ ವಾರ ಜಾಗತಿಕವಾಗಿ 5 ಟ್ರಿಲಿಯನ್ ಡಾಲರ್ ಕುಸಿತವಾಗಿತ್ತು. ಭಾರತದ ಷೇರುಪೇಟೆಯಲ್ಲಿ 10 ಸೆಕೆಂಡ್ನಲ್ಲಿ 20 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ. ಭಾರತದ ಷೇರು ಮಾರುಕಟ್ಟೆ ಒಟ್ಟಾರೆ ಮೌಲ್ಯ 403 ಲಕ್ಷ ಕೋಟಿಯಿಂದ 384 ಲಕ್ಷ ಕೋಟಿ ರೂಪಾಯಿಗೆ ಕುಸಿತವಾಗಿದೆ.
ಜಾಗತಿಕ ಷೇರು ಮಾರಾಟ ಭರಾಟೆ
ಏಷ್ಯಾ, ಯೂರೋಪ್, ಅಮೆರಿಕಾ ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟವಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ ಹೆಚ್ಚಾಗಿರೋದ್ರಿಂದ ಸಹಜವಾಗಿಯೇ ಭಾರತದ ಷೇರುಪೇಟೆ ಏರುಪೇರು ಆಗಿದೆ. ಇದನ್ನು ಟ್ರಂಪ್ ‘ಆಮದು ಸುಂಕ ಮೆಡಿಸಿನ್’ ಎಂದು ಬಣ್ಣಿಸಿದ್ದಾರೆ.
ಆಮದು ಸುಂಕದ ಇಂಪ್ಯಾಕ್ಟ್ ಇನ್ನೂ ಖಚಿತವಾಗಿಲ್ಲ
ಟ್ರಂಪ್ ಅವರ ಆಮದು ಸುಂಕಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇನ್ನೂ ಗೊಂದಲ ಇದೆ. ದುಬಾರಿ ತೆರಿಗೆ ವಿಧಿಸಲು ಟ್ರಂಪ್ ನಿರ್ಧಾರ ಮಾಡಿದ್ದಾರೆ. ಇದನ್ನು ವಿಶ್ವದ ಬಹುತೇಕ ರಾಷ್ಟ್ರಗಳು ವಿರೋಧಿಸಿವೆ. ಈ ಸಂಬಂಧ ಆಯಾ ದೇಶದ ನಾಯಕರು ಅಮೆರಿಕ ಜೊತೆ ಮಾತುಕತೆ ನಡೆಸಿದ್ದರೂ, ಒಂದು ಧನಾತ್ಮಕ ನಿಲುವಿಗೆ ಬಂದಿಲ್ಲ. ಮಾತುಕತೆಯಿಂದ ಪಾಸಿಟಿವ್ ತೀರ್ಮಾನ ಬರದ ಕಾರಣ ಷೇರುಗಳ ಮಾರಾಟ ಹೆಚ್ಚಾಗಿದೆ.
ಗಗನಕ್ಕೇರಿದ ಚಿನ್ನದ ಬೆಲೆ
ದೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ವಿಶ್ವದಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆಯಾದಾಗ ಹಾಗೂ ಆರ್ಥಿಕ ಅಸ್ಥಿರತೆ ಎದುರಾದಾಗ ಜನ ಮೊದಲು ಖರೀದಿ ಮಾಡುವುದು ಹಾಗೂ ಹೂಡಿಕೆ ಮಾಡುವುದೇ ಚಿನ್ನದ ಮೇಲೆ ಹೀಗಾಗಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಶುರುವಾಗಿದೆ. ಅಲ್ಲದೇ ಈಗಾಗಲೇ ಚಿನ್ನದ ಬೆಲೆ ಭರ್ಜರಿ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಆರ್ಥಿಕ ಬೆಳವಣಿಗೆ ಕುಸಿಯುವ ಭೀತಿ
ದುಬಾರಿ ಸುಂಕ ನೀತಿಯಿಂದಾಗಿ ಹಣದುಬ್ಬರ, ಆರ್ಥಿಕ ಬೆಳವಣಿಗೆ ಕುಸಿಯುವ ಭೀತಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆಗಳು ಅಲುಗಾಡಲು ಶುರುವಾಗಿವೆ. ಇನ್ನು ಏಪ್ರಿಲ್ ತಿಂಗಳಲ್ಲಿ 13,750 ಕೋಟಿ ರೂಪಾಯಿ ಎಫ್‌ಪಿಐ ಹಿಂತೆಗೆದುಕೊಳ್ಳಲಾಗಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಬಂಡವಾಳ ಹೂಡಲು ಹಿಂದೇಟು ಹಾಕಿದ್ದಾರೆ. ಈ ವಾರ ಆರ್‌ಬಿಐ ತ್ರೈಮಾಸಿಕ ಹಣಕಾಸು ಸಮಿತಿ ಸಭೆ ನಿಗದಿಯಾಗಿದೆ. ಈ ವಾರ ರೆಪೋ ದರ ಕಡಿತ ಮಾಡುವ ನಿರೀಕ್ಷೆ ಇದೆ. ಇದರಿಂದ ಬ್ಯಾಂಕ್ ಸಾಲದ ಬಡ್ಡಿದರಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದಲೂ ಭಾರತದ ಷೇರುಪೇಟೆಯಲ್ಲಿ ಷೇರು ಬೆಲೆ ಕುಸಿತವಾಗಿದೆ.
ಏನು ಬೇಕಾದರೂ ಆಗಬಹುದು
ಆರ್ಥಿಕ ವಲಯಕ್ಕೆ ಡೊನಾಲ್ಡ್ ಟ್ರಂಪ್ ಕೊಟ್ಟಿರುವ ಪೆಟ್ಟು ಅಷ್ಟು ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ವಿವಿಧ ದೇಶಗಳಿಂದ ಅಮೆರಿಕಗೆ ಆಮದು ಆಗುವ ವಸ್ತುಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರು ಮಿತಿ ಮೀರಿ ಸುಂಕ ವಿಧಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಇನ್ನಷ್ಟು ಅನಿಶ್ಚಿತತೆ ಶುರುವಾಗಲಿದೆ. ಇದೆಲ್ಲವೂ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವುದಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಟ್ನಲ್ಲಿ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ ಆಗಿದ್ದು. ಹೊಡಿಕೆ ಮಾಡಿದವರು ಬೀದಿಗೆ ಬೀಳುವಂತಾಗಿದೆ. ಈ ಬಗ್ಗೆ ನಿಮ್ಮ ಅಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ.