ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಎಂಟ್ರಿ ಚಾನ್ಸ್ ಇದೆಯಾ ? – ವಾಸಿಂ ಅಕ್ರಂ ಕೊಟ್ಟ ಐಡಿಯಾ ಏನು ಗೊತ್ತಾ?

ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಎಂಟ್ರಿ ಚಾನ್ಸ್ ಇದೆಯಾ ? –  ವಾಸಿಂ ಅಕ್ರಂ ಕೊಟ್ಟ ಐಡಿಯಾ ಏನು ಗೊತ್ತಾ?

ಈ ಬಾರಿ ವರ್ಲ್ಡ್​​ಕಪ್​ನಲ್ಲಿ ಸೆಮಿಫೈನಲ್​ ಟೀಂಗಳು ಯಾವೆಲ್ಲಾ ಅನ್ನೋದು ಆಲ್​ರೆಡಿ ಫಿಕ್ಸ್ ಆಗಿದೆ. ಭಾರತ-ನ್ಯೂಜಿಲ್ಯಾಂಡ್-ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ. ಈ ನಾಲ್ಕೂ ಸ್ಟ್ರಾಂಗ್​ ಟೀಂಗಳು ಈಗಾಗ್ಲೇ ಸೆಮಿಫೈನಲ್​ಗೆ ಎಂಟ್ರಿಯಾಗಿದೆ. ನಂವೆಂಬರ್ 15ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಮೊದಲ ಸೆಮಿಫೈನಲ್ ಮ್ಯಾಚ್ ನಡೆಯುತ್ತೆ.. ನವೆಂಬರ್ 16ರಂದು ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಮಧ್ಯೆ ಎರಡನೇ ಸೆಮಿಫೈನಲ್ ಮ್ಯಾಚ್ ನಡೆಯುತ್ತೆ. ಆದ್ರೂ ಇಲ್ಲೊಂದು ಪ್ರಶ್ನೆ ಇದೆ. ಪಾಕಿಸ್ತಾನ ಸೆಮಿಫೈನಲ್​​ಗೆ ಎಂಟ್ರಿಯಾಗುತ್ತಾ? ಭಾರತ-ಪಾಕಿಸ್ತಾನ ಮಧ್ಯೆ ಸೆಮಿಫೈನಲ್ ಮ್ಯಾಚ್ ನಡೆಯುತ್ತಾ ಅನ್ನೋದು. ನವೆಂಬರ್​ 11ರಂದು ಪಾಕಿಸ್ತಾನ ಮತ್ತು ಇಂಗ್ಲೆಂಡ್​ ಮಧ್ಯೆ ಮ್ಯಾಚ್ ನಡೀತಾ ಇದೆ. ಎರಡೂ ಟೀಂಗಳಿಗೂ ಇದು ರಾಬಿನ್ ರೌಂಡ್ಸ್ ಸ್ಟೇಜ್​ನ ಕೊನೆಯ ಪಂದ್ಯ. ಇಂಗ್ಲೆಂಡ್​​ ಈಗಾಗ್ಲೇ ವರ್ಲ್ಡ್​​ಕಪ್​ನಿಂದ ಹೊರ ಬಿದ್ದಾಗಿದೆ. ಆದ್ರೆ ಪಾಕಿಸ್ತಾನಕ್ಕೆ ಇನ್ನೂ ಕೂಡ ಸೆಮಿಫೈನಲ್ ಚಾನ್ಸ್ ಇದೆ. ಆ ಚಾನ್ಸ್ ಎಷ್ಟಿದೆ ಅಂತಾ ಕೇಳಿದ್ರೆ 0000000.1 ಪಾರ್ಸೆಂಟ್​ನಷ್ಟು. ಆಕಾಶ-ಭೂಮಿ ಒಂದಾದ್ರೂ ಇದು ಸಾಧ್ಯವೇ ಇಲ್ಲ ಅಂದ್ರೂ ಆಶ್ಚರ್ಯ ಇಲ್ಲ. ಆದ್ರೂ ಕಂಡು ಕೇಳರಿಯದ ರೀತಿ ಕ್ರಿಕೆಟ್ ಆಡಿದ್ರಷ್ಟೇ ಪಾಕಿಸ್ತಾನಕ್ಕೆ ಸೆಮಿಫೈನಲ್​ಗೆ ಎಂಟ್ರಿಯಾಗಬಹುದು. ಹಾಗಿದ್ರೆ ಪಾಕಿಸ್ತಾನದ ಸೆಮಿಫೈನಲ್ ಚಾನ್ಸ್ ಹೇಗಿದೆ ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತದ ಎದುರಾಳಿ ನ್ಯೂಝಿಲೆಂಡ್ – ನವೆಂಬರ್ 15ರಂದು ನಡೆಯಲಿದೆ ರೋಚಕ ಪಂದ್ಯ

ವರ್ಲ್ಡ್​ಕಪ್​ ಟೂರ್ನಿ ಅಂದ್ಮೇಲೆ ಲೀಗ್​ ಸ್ಟೇಜ್​ನಲ್ಲಿ ರನ್​ರೇಟ್ ತುಂಬಾನೆ ಕ್ರೂಶಿಯಲ್ ಆಗಿರುತ್ತೆ. ಕೇವಲ ಮ್ಯಾಚ್​​ಗಳನ್ನಷ್ಟೇ ಗೆದ್ರಷ್ಟೇ ಸಾಕಾಗೋದಿಲ್ಲ, ಎಷ್ಟು ರನ್​ರೇಟ್​​ನಿಂದ ಗೆದ್ದಿದ್ದಾರೆ ಅನ್ನೋದು ಕೂಡ ತುಂಬಾನೆ ಇಂಪಾರ್ಟೆಂಟ್. ಒಂದೊಂದು ಮ್ಯಾಚ್​ನ ರನ್​ರೇಟ್ ಕೂಡ ಇಲ್ಲಿ ಕೌಂಟ್ ಆಗುತ್ತೆ. ಈಗ ಪಾಕಿಸ್ತಾನವನ್ನ ಇಕ್ಕಟ್ಟಿಗೆ ಸಿಲುಕಿಸಿರೋದು ಇದೇ ರನ್​ರೇಟ್. ಶ್ರಿಲಂಕಾ ವಿರುದ್ಧದ ಪಂದ್ಯವನ್ನ ನ್ಯೂಜಿಲ್ಯಾಂಡ್​ ಭಾರಿ ರನ್​​ರೇಟ್​ನಿಂದ ಗೆಲ್ಲುತ್ತಲ್ಲೇ ಪಾಕಿಸ್ತಾನದ ವರ್ಲ್ಡ್​​ಕಪ್​ ಕನಸು ಕಮರಿ ಹೋಗಿತ್ತು. ಆದ್ರೂ ಆಗ್ಲೇ ಹೇಳಿದ ಹಾಗೆ 0000000.1 ಪರ್ಸೆಂಟ್​​ನಷ್ಟು ಚಾನ್ಸ್​ ಇನ್ನೂ ಕೂಡ ಪಾಕಿಸ್ತಾನಕ್ಕಿದೆ. ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಸರೆ ಅನ್ನೋ ಹಾಗೆ, ಪಾಕಿಸ್ತಾನಿಗಳಿಗೆ ಈಗ ರನ್​ರೇಟ್ ಒಂದೇ ಆಸರೆಯಾಗಿದೆ. ಯಾಕಂದ್ರೆ ಕೊಲ್ಕತ್ತಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ವರ್ಲ್ಡ್​ಕಪ್​ ಟೂರ್ನಿಯ ತನ್ನ ಕೊನೆಯ ಪಂದ್ಯವನ್ನ ಪಾಕಿಸ್ತಾನ ಬರೋಬ್ಬರಿ 287 ರನ್​ಗಳ ಅಂತರದಿಂದ ಗೆದ್ರೆ ಮಾತ್ರ ಸೆಮಿಫೈನಲ್​ಗೆ ಎಂಟ್ರಿಯಾಗುತ್ತೆ. ಒಂದು ವೇಳೆ ಪಾಕಿಸ್ತಾನ ಚೇಸಿಂಗ್ ಮಾಡಬೇಕಾದ ಪರಿಸ್ಥಿತಿ ಬಂತು ಅಂದ್ರೆ ಇಂಗ್ಲೆಂಡ್ ಎಷ್ಟು ರನ್ ಟಾರ್ಗೆಟ್ ಕೊಟ್ರೂ ಅದನ್ನ ಕೇವಲ 16 ಬಾಲ್​ಗಳಲ್ಲೇ ರೀಚ್ ಆಗಬೇಕು. ಅಂದ್ರೆ ಇಂಗ್ಲೆಂಡ್ 250 ರನ್ ಮಾಡಿದ್ರೆ, ಪಾಕಿಸ್ತಾನ 16 ಬಾಲ್​ಗಳಲ್ಲೇ 251 ರನ್​ ಹೊಡೀಬೇಕು. ಸಾಧ್ಯಾನಾ? ಚಾನ್ಸೇ ಇಲ್ಲ? ಬೇಡ.. ಇಂಗ್ಲೆಂಡ್ 80 ರನ್​ಗೆ ಅಲೌಟ್ ಆಯ್ತು ಅಂತಾನೆ ಇಟ್ಕೊಳ್ಳಿ, ಆಗಲೂ ಪಾಕಿಸ್ತಾನ 16 ಬಾಲ್​ಗಳಲ್ಲೇ 81 ರನ್​ ಮಾಡಬೇಕು. ಹೀಗಾಗಿ ಇಲ್ಲಿ ಪಾಕಿಸ್ತಾನ ಹ್ಯೂಜ್ ರನ್​ರೇಟ್​​ನಿಂದ ಇಂಗ್ಲೆಂಡ್​​ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹ್ಯೂಜ್ ರನ್​​ರೇಟ್​ನಿಂದ.. ಫಸ್ಟ್ ಬ್ಯಾಟಿಂಗ್ ಮಾಡಲಿ.. ಇಲ್ಲಾ ಚೇಸಿಂಗೇ ಮಾಡಲಿ.. ಏನೇ ಆದ್ರೂ ಭಾರಿ ರನ್​ರೇಟ್​​ನಿಂದ ಗೆದ್ರಷ್ಟೇ ಪಾಕಿಸ್ತಾನಕ್ಕೆ ಸೆಮಿಫೈನಲ್​ಗೆ ಪ್ರವೇಶಿಸಬಹುದು. ಹೀಗಾಗಿ ಇಲ್ಲಿ ಪಾಕಿಸ್ತಾನಕ್ಕೆ ಚಾನ್ಸ್​ ಇರೋದು ಫಸ್ಟ್ ಬ್ಯಾಟಿಂಗ್ ಮಾಡಿದ್ರೆ ಮಾತ್ರ. ಫಸ್ಟ್ ಬ್ಯಾಟಿಂಗ್​ ಮಾಡಿ 400 ರನ್​ ಹೊಡೆದು ಇಂಗ್ಲೆಂಡ್​ನ್ನ 100ರನ್​ಗಳ ಒಳಗೆ ಆಲೌಟ್ ಮಾಡಿದ್ರೆ ಪಾಕಿಸ್ತಾನ ರನ್​ರೇಟ್ ಆಧಾರದಲ್ಲಿ ನ್ಯೂಜಿಲ್ಯಾಂಡ್​ನ್ನ ಬೀಟ್ ಮಾಡಿ ಸೆಮಿಫೈನಲ್​ಗೆ ಎಂಟ್ರಿಯಾಗುತ್ತೆ. ಆ್ಯಕ್ಚುವಲಿ ಇಂಗ್ಲೆಂಡ್ ವಿರುದ್ಧದ ಮ್ಯಾಚ್​ನಲ್ಲಿ ಪಾಕಿಸ್ತಾನದ ಭವಿಷ್ಯ ಏನು ಅನ್ನೋದು ಟಾಸ್ ಹಾಕಿದಾಗಲೇ ಗೊತ್ತಾಗುತ್ತೆ. ಒಂದು ವೇಳೆ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರೆ ಓಕೆ.. ಆಗ ದೊಡ್ಡಮೊತ್ತದ ಸ್ಕೋರ್ ಮಾಡೋಕೆ ಟ್ರೈ ಮಾಡಬಹುದು. ಒಂದು ವೇಳೆ ಟಾಸ್​ ಸೋತು ಮೊದಲು ಬೌಲಿಂಗ್​ ಮಾಡಬೇಕಾದ ಪರಿಸ್ಥಿತಿ ಬಂತು ಅಂದ್ರೆ ಪಾಕಿಸ್ತಾನ ಮನೆಗೆ ಹೋಗೋದು ಅಲ್ಲೇ ಗ್ಯಾರಂಟಿಯಾಗುತ್ತೆ. ಯಾಕಂದ್ರೆ ಚೇಸಿಂಗ್​ ವೇಳೆ ಇಂಗ್ಲೆಂಡ್​ ಎಷ್ಟೇ ಟಾರ್ಗೆಟ್ ಕೊಟ್ರೂ ಪಾಕಿಸ್ತಾನ ಕೇವಲ 16 ಬಾಲ್​​ಗಳಲ್ಲೇ ಮ್ಯಾಚ್​ ಗೆಲ್ಲಬೇಕು. ಅದು ಸಾಧ್ಯವೇ ಇಲ್ಲ ಬಿಡಿ. ಹೀಗಾಗಿ ಇಂಗ್ಲೆಂಡ್​ ವಿರುದ್ಧದ ಮ್ಯಾಚ್​​ನಲ್ಲಿ ಪಾಕಿಸ್ತಾನಕ್ಕೆ ಟಾಸೇ ಇಂಪಾರ್ಟೆಂಟ್ ಆಗುತ್ತೆ. ಟಾಸ್​ ಸೋತ್ರಾ? ಹಾಗಿದ್ರೆ ವರ್ಲ್ಡ್​ಕಪ್​ ಟೂರ್ನಿಯಿಂದ ಔಟ್ ಆದ್ರು ಅಂತಾನೆ ಅರ್ಥ. ಪಾಕಿಸ್ತಾನಿ ಕ್ರಿಕೆಟಿಗರು ಕೋಲ್ಕತ್ತಾದಿಂದ ಸೀದಾ ಕರಾಚಿಗೆ ಫ್ಲೈಟ್ ಏರಬೇಕಾಗುತ್ತೆ.

ಇನ್ನು ಇಂಗ್ಲೆಂಡ್​ ಟೀಂಗೆ ಈ ವರ್ಲ್ಡ್​ಕಪ್​ ದೃಷ್ಟಿಯಿಂದ ಪಾಕಿಸ್ತಾನ ವಿರುದ್ಧದ ಮ್ಯಾಚ್​ ಇಂಪಾರ್ಟೆಂಟ್ ಅಲ್ಲದೇ ಇರಬಹುದು. ಇಂಗ್ಲೆಂಡ್ ಗೆದ್ರೂ ವರ್ಲ್ಡ್​ಕಪ್​ನಿಂದ ಔಟಾಗೋದು ಗ್ಯಾರಂಟಿ. ಆದ್ರೆ, ಈ ಮ್ಯಾಚ್​ನ್ನ ಗೆದ್ರೆ 2025ರಲ್ಲಿ ನಡೆಯಲಿರುವ ಮಿನಿ ವರ್ಲ್ಡ್​ಕಪ್​ ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ಕ್ವಾಲಿಫೈ ಆಗಬಹುದು. ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಎರಡೂ ಟೀಂಗಳು ಈಗ ತಲಾ 4 ಪಾಯಿಂಟ್ಸ್​ಗಳನ್ನ ಪಡೆದಿವೆ. ಇಂಗ್ಲೆಂಡ್ 7ನೇ ಸ್ಥಾನದಲ್ಲಿದೆ. ಪಾಕ್​ ವಿರುದ್ಧದ ಮ್ಯಾಚ್ ಗೆದ್ರೆ ಇಂಗ್ಲೆಂಡ್ ಚಾಂಪಿಯನ್ಸ್​ ಟ್ರೋಫಿಗೆ ಕ್ವಾಲಿಫೈ ಆಗೋದು ಪಕ್ಕಾ ಆಗುತ್ತೆ. ಟೀಂ ಸೇಫ್ ಆಗಿಬಿಡುತ್ತೆ. ಹೀಗಾಗಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್​ ಕೂಡ ಸಾಕಷ್ಟು ಹೈವೋಲ್ಟೇಜ್ ಆಗಿದೆ. ​

ಪಾಕಿಸ್ತಾನವಂತೂ ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲಿ ಈ ಹಿಂದೆಂದೂ ಆಡಿರದಂಥಾ ರೀತಿಯಲ್ಲಿ ಪರ್ಫಾಮೆನ್ಸ್​ ನೀಡಲೇಬೇಕಿದೆ. ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗದಲ್ಲೂ ಪಾಕಿಸ್ತಾನ ಮ್ಯಾಜಿಕ್ ಮಾಡಬೇಕಷ್ಟೇ. ನ್ಯೂಜಿಲ್ಯಾಂಡ್ ವಿರುದ್ಧದ ಮ್ಯಾಚ್​​ನಲ್ಲಿ ಪಾಕಿಸ್ತಾನದ ಫಕರ್ ಜಮಾನ್ ಅದ್ಭೂತವಾಗಿ ಆಡಿದ್ರು. ಶರವೇಗದ ಸೆಂಚೂರಿ ಬಾರಿಸಿ ತಂಡವನ್ನ ಟೂರ್ನಿಯಲ್ಲಿ ಜೀವಂತವಾಗಿಸಿದ್ರು. ಇಂಗ್ಲೆಂಡ್ ವಿರುದ್ಧ ಫಸ್ಟ್ ಮಾಡಿದ್ದೇ ಆದಲ್ಲಿ ಪಾಕ್ ಬ್ಯಾಟ್ಸ್​ಮನ್​ಗಳು ಮತ್ತೊಮ್ಮೆ ನ್ಯೂಜಿಲ್ಯಾಂಡ್​​ ವಿರುದ್ಧದ ಮ್ಯಾಚ್​ಗಿಂತಲೂ ರಭಸವಾಗಿ ಬ್ಯಾಟ್ ಬೀಸಬೇಕಷ್ಟೆ.

ಆದ್ರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಸೆಮಿಫೈನಲ್​ಗೆ ಕ್ವಾಲಿಫೈ ಆಗೋಕೆ ಬಾಬರ್ ಆಜಂ ಟೀಂಗೆ ಒಂದು ಇಂಟ್ರೆಸ್ಟಿಂಗ್ ಐಡಿಯಾ ಕೊಟ್ಟಿದ್ದಾರೆ. ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಬೇಕು. ಬಳಿಕ ಇಂಗ್ಲೆಂಡ್ ಟೀಂನ್ನ ಡ್ರೆಸ್ಸಿಂಗ್​​ ರೂಮ್​ನ ಒಳಗಡೆಯೇ ಲಾಕ್​ ಮಾಡಿ, ಇಂಗ್ಲೆಂಡ್​ನ ಎಲ್ಲಾ​ ಬ್ಯಾಟ್ಸ್​ಮನ್​ಗಳನ್ನೂ​ ಟೈಮ್ಡ್ ಔಟ್ ಮಾಡಿ 20 ನಿಮಿಷಗಳಲ್ಲಿ ಮ್ಯಾಚ್ ಗೆಲ್ಲಬೇಕು ಅಂತಾ ಫನ್ನಿ ಟಿಪ್ಸ್ ಕೊಟ್ಟಿದ್ದಾರೆ. ಟೈಮ್ಡ್ ಔಟ್ ಬಗ್ಗೆ ಹೆಚ್ಚೇನೂ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಶ್ರೀಲಂಕಾದ ಆ್ಯಂಜಲೋ ಮ್ಯಾಥ್ಯೂಸ್​ಗೆ ಏನಾಯ್ತು ನಿಮಗೆಲ್ಲಾ ಗೊತ್ತೇ ಇದೆ.

ವಾಸಿಂ ಅಕ್ರಂ ಸಲಹೆ ಒಂದ್ಕಡೆಯಾದ್ರೆ, ಪಾಕಿಸ್ತಾನದ ಮತ್ತೊಮ್ಮೆ ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಇದಕ್ಕಿಂತಲೂ ಬೆಟರ್ ಟಿಪ್ಸ್ ಕೊಟ್ಟಿದ್ದಾರೆ. ಮೊದಲು ಇಂಗ್ಲೆಂಡ್​ ಬ್ಯಾಟಿಂಗ್​ಗೆ ಅವಕಾಶ ನೀಡಿ. ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ ಲಾಕ್​ ಮಾಡಿ ಅಂತಾ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ. ಹೀಗಾಗಿ ಪಾಕ್ ಕ್ಯಾಪ್ಟನ್ ಬಾಬರ್ ಆಜಂ ಅದ್ಯಾರ ಟಿಪ್ಸ್​​ನ್ನ ಫಾಲೋ ಮಾಡ್ತಾರೋ ಗೊತ್ತಿಲ್ಲ. ಒಂದಂತೂ ನಿಜ..ಕೊಲ್ಕತ್ತಾ ಏರ್​​ಪೋರ್ಟ್​​ನಲ್ಲಿ ಕರಾಚಿ ಫ್ಲೈಟ್ ಅಂತೂ ರೆಡಿಯಾಗಿದೆ. ಎನಿವೇ.. ಇಲ್ಲಿ ಸಂಗತಿ ಕೂಡ ಇದೆ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿ ಪರ್ಫಾಮ್ ಮಾಡಿ, ಪವಾಡ ನಡೆಸಿ ಭಯಂಕರ ರನ್​ರೇಟ್​ನಿಂದ ಪಂದ್ಯ ಗೆಲ್ತು ಅಂತಾನೆ ಇಟ್ಕೊಳ್ಳಿ. ಆಗ ಸೆಮಿಫೈನಲ್​ನಲ್ಲಿ ಇಂಡಿಯಾ VS ಪಾಕಿಸ್ತಾನ ಮ್ಯಾಚ್ ನಡೆಯುತ್ತೆ. ಆದ್ರೆ ಭಾರತ-ಪಾಕಿಸ್ತಾನ ಮ್ಯಾಚ್ ಮಾತ್ರ ಈಗ ನಿಗದಿಯಾಗಿರುವಂತೆ ಮುಂಬೈನಲ್ಲಿ ನಡೆಯೋದಿಲ್ಲ. ಈ ಪಂದ್ಯವನ್ನ ಕೊಲ್ಕತ್ತಾಗೆ ಶಿಫ್ಟ್ ಮಾಡಲಾಗುತ್ತೆ. ಯಾಕಂದ್ರೆ 2008ರ ಮುಂಬೈ ಮೇಲಿನ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಮುಂಬೈಗೆ ಪ್ರವೇಶ ನಿಷೇಧಿಸಲಾಗಿದೆ. ವರ್ಲ್ಡ್​ಕಪ್​ ಇರಲಿ.. ಯಾವುದೇ ಮ್ಯಾಚ್ ಆಗಿರಲಿ ಪಾಕ್​ ಕ್ರಿಕೆಟ್ ಟೀಂ ಮುಂಬೈಗೆ ಕಾಲಿಡುವಂತೆಯೇ ಇಲ್ಲ. ಹೀಗಾಗಿ ಭಾರತ-ಪಾಕಿಸ್ತಾನ ಮ್ಯಾಚ್​ನ್ನ ಕೊಲ್ಕತ್ತಾದಲ್ಲಿ ನಡೆಸಲಾಗುತ್ತೆ. ಆಸ್ಟ್ರೇಲಿಯಾ VS ಸೌತ್ ಆಫ್ರಿಕಾ ಸೆಮಿಫೈನಲ್ ಮ್ಯಾಚ್​ನ್ನ ಮುಂಬೈಗೆ ಶಿಫ್ಟ್ ಮಾಡಲಾಗುತ್ತೆ. ಇವೆಲ್ಲವೂ ನಡೀಬೇಕು ಅನ್ನೋದಾದ್ರೆ ಮೊದಲು ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 287 ರನ್​ಗಳ ಅಂತರದಿಂದ ಗೆಲ್ಲಬೇಕು. ಅಥವಾ 16 ಬಾಲ್​ಗಳಲ್ಲೇ ಚೇಸ್ ಮಾಡಿ ಮ್ಯಾಚ್ ಗೆಲ್ಲಬೇಕು.

Sulekha