ಪತ್ನಿ ಚೆನ್ನಮ್ಮಗೆ ತಾಳಿ ಕಟ್ಟಿ ವಿದಾಯ ಹೇಳಿದ ದೇವೇಗೌಡರು – ದೊಡ್ಡಗೌಡರ ಕುಟುಂಬಕ್ಕೆ ಗಣ್ಯರ ಸಾಂತ್ವನ

ದೊಡ್ಡಗೌಡರ ಗೌಡ್ತಿ ಇನ್ನಿಲ್ಲ. ಸುದೀರ್ಘ 7 ದಶಕಗಳ ದಾಂಪತ್ಯಕ್ಕೆ ವಿಧಿ ಅಂತ್ಯ ಬರೆದಾಗಿದೆ. ದೇವೇಗೌಡರಿಗೆ ಈ ಇಳಿವಯಸ್ಸಿನ ಪತ್ನಿಯ ಅಗಲಿಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪತ್ನಿ ಚೆನ್ನಮ್ಮರನ್ನು ಕೊನೇ ಬಾರಿ ನೋಡುವ ದೃಶ್ಯವಂತೂ ಮನಕಲಕುತ್ತಿದೆ. ಜೊತೆಗೆ ಕೊನೇ ಬಾರಿ ದೇವೇಗೌಡರು ಪತ್ನಿಗೆ ಮುತ್ತೈದೆ ಪೂಜೆ ಮಾಡುವಾಗಲೂ ದೊಡ್ಡಗೌಡರ ಕುಟುಂಬ ಕಣ್ಣೀರು ಹಾಕಿತು.
ಮಾಜಿ ಪ್ರಧಾನಿ ದೇವೇಗೌಡರು ಪತ್ನಿ ವಿಯೋಗದ ದುಃಖದಲ್ಲಿದ್ದಾರೆ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಗಲಿಕೆ ದೊಡ್ಡಗೌಡರ ಕುಟುಂಬ ಮತ್ತು ಹುಟ್ಟೂರಿನ ಜನತೆಯನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ. ಹೊಳನರಸೀಪುರದಲ್ಲಿ ಮಣ್ಣಿನ ಮಗಳಿಗೆ ಜನತೆ ಅಂತಿಮ ನಮನ ಸಲ್ಲಿಸಿದು. ಇನ್ನು ಚೆನ್ನಮ್ಮನವರ ಅಂತಿಮಯಾತ್ರೆಗೂ ಮುನ್ನ ಕೊನೆಯ ಬಾರಿಗೆ ದೇವೇಗೌಡರು ಪತ್ನಿಯನ್ನ ಕಣ್ತುಂಬಿಕೊಂಡರು. ಪತ್ನಿಗೆ ಅಳುತ್ತಲೇ ಅರಿಶಿ ಅರಿಶಿನ-ಕುಂಕುವಿಟ್ಟು ಪೂಜೆ ಮಾಡಿದರು. 7 ದಶಕಗಳ ದಾಂಪತ್ಯಜೀವನ ನಡೆಸಿದ್ದ ಪತ್ನಿಗೆ ಕೊನೇ ಬಾರಿ ತಾಳಿ ಕಟ್ಟೆ ಅರಿಶಿನ-ಕುಂಕುಮವಿಟ್ಟು ಪೂಜೆ ಸಲ್ಲಿಸಿದರು. ಈ ವೇಳೆ ಇಡೀ ಕುಟುಂಬವೇ ಕಣ್ಣೀರಾಗಿದೆ.
ಚೆನ್ನಮ್ಮ ಅವರಿಗೆ ಸ್ನಾನ ಮಾಡಿಸಿದ ಬಳಿಕ ಹೊಸ ಸೀರೆಯುಡಿಸಿ ಪೂಜಾ ಕಾರ್ಯ ನಡೆದಿದ್ದು, ಕೊನೆಯ ಬಾರಿಗೆ ದೇವೇಗೌಡರು ಪತ್ನಿಯನ್ನ ಕಣ್ತುಂಬಿಕೊಂಡರು. ಈ ವೇಳೆ ದೇವೇಗೌಡರು ಬಿಕ್ಕಿ ಬಿಕ್ಕಿ ಅಳುತ್ತಿದ್ದಂತೆ ಇಡೀ ಕುಟುಂಬ ಕಣ್ಣೀರು ಹಾಕಿತು. ರೇವಣ್ಣನ ಮನೆಯಲ್ಲಿ ಚೆನ್ನಮ್ಮ ಅವರಿಗೆ ಧಾರ್ಮಿಕ ವಿಧಿ-ವಿಧಾನದ ಕಾರ್ಯ ಮುಕ್ತಾಯಗೊಂಡಿದೆ. ದೇವೇಗೌಡರ ಕುಟುಂಬದ ಎಲ್ಲಾ ಸದಸ್ಯರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ರು. ಚೆನ್ನಮ್ಮನ ಮಕ್ಕಳು, ಮೊಮ್ಮಕ್ಕಳಿಂದ ಪೂಜೆ ನಡೆದಿದ್ದು, ಹರದನಹಳ್ಳಿಯತ್ತ ಅಂತಿಮ ಯಾತ್ರೆ ಸಾಗಿದೆ. ಚೆನ್ನಮ್ಮ ಅವರ ಪುತ್ರಿ ಅನಸೂಯಾ ತಾಯಿಯ ಪಾರ್ಥಿವ ಶರೀರದ ಎದುರು ಶ್ಲೋಕಗಳನ್ನು ಪಠಿಸುತ್ತಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ಭಾವುಕ ಕ್ಷಣದ ವೇಳೆ ರೇವಣ್ಣ ಕೂಡ ಕಣ್ಣೀರು ಹಾಕಿದರು.

ನೋಡಿರಿ

