ಪಂತ್ಗೆ ಆಗೋದು ಬುಮ್ರಾಗೆ ಆಗಲ್ವಾ? – ಫಿಟ್ಟಾಗಿದ್ರೂ 5ನೇ ಟೆಸ್ಟ್ ಆಡಲ್ವಾ?
Do Or Die ಮ್ಯಾಚ್ನಲ್ಲೇ ಕೈಕೊಟ್ರೆ ಹೇಗೆ?

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡ್ತಿರೋ ಟೀಂ ಇಂಡಿಯಾಗೆ 5 ನೇ ಪಂದ್ಯ ಅಗ್ನಿ ಪರೀಕ್ಷೆಯಾಗಿದೆ.. ಸೋತು ತವರಿಗೆ ಬರೋದ್ದಕ್ಕಿಂತ ಸರಣಿ ಡ್ರಾ ಮಾಡಿಕೊಳ್ಳೋಕೆ ಗಿಲ್ ಪಡೆಗೆ ಒಂದು ಅವಕಾಶವಿದೆ..ಈಗಾಗಲೇ ನಡೆದಿರೋ 4 ಪಂದ್ಯದಲ್ಲಿ ಇಂಡಿಯಾ ಗೆದ್ದಿರೋದು ಕೇವಲ ಒಂದೇ ಪಂದ್ಯ, ಇನ್ನೊಂದು ಡ್ರಾ ಆಗಿದೆ.. ಹಾಗಾಗಿ ಇಂಗ್ಲೆಂಡ್ ವಿರುದ್ಧ ಸರಣಿ ಸಮಬಲ ಮಾಡಿಕೊಳ್ಳೋಕೆ ಟೀಂ ಇಂಡಿಯಾ ಮುಂದಾಗಿದೆ. ಆದ್ರೆ ಆಟಗಾರರಿಗೆ ಇಂಜುರಿ ಕಂಟಕವಾಗಿ ಕಾಡ್ತಿದೆ.. ಎಲ್ಲದ್ದಕ್ಕಿಂತ ಹೆಚ್ಚಾಗಿ ಬುಮ್ರಾ 5ನೇ ಪಂದ್ಯ ಆಡ್ತಾರಾ ಅಡಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಜೊತೆಗೆ ಡು ಆರ್ ಡೈ ಮ್ಯಾಚ್ನಲ್ಲಿ ಬುಮ್ರಾಗೆ ರೆಸ್ಟ್ ಬೇಕಾ ಅನ್ನೋದು ಕೂಡ ಚರ್ಚೆ ಆಗ್ತಿದೆ.
ಬುಮ್ರಾ ಓವಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಆಡ್ತಾರಾ ಆಡಲ್ವಾ ಅನ್ನೋ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಈ ಸರಣಿಯಲ್ಲಿ ಬುಮ್ರಾ ಬೊಂಬಾಟ್ ಪ್ರದರ್ಶನ್ ತೋರಿಸಿದ್ದಾರೆ. 26.00 ಸರಾಸರಿಯಲ್ಲಿ 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಎರಡು ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಆದ್ರೆ ಡೂ ಆರ್ ಡೈ ಪಂದ್ಯದಲ್ಲಿ ಬುಮ್ರಾ ಕೈ ಕೊಟ್ರೆ ಸರಣಿ ಕೈ ಚೆಲ್ಲಬೇಕಾಗುವ ಸ್ಥಿತಿ ಬರಬಹುದು..
ಅಂದಹಾಗೇ ಕಳೆದ ವರ್ಷ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಬೆನ್ನುನೋವಿಗೊಳಗಾಗಿದ್ದ ಬುಮ್ರಾ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಬಳಿಕ ತಂಡಕ್ಕೆ ಹಿಂದುರಿಗಿದ್ದರು. ಐಪಿಎಲ್ನಲ್ಲೂ ಚೆನ್ನಾಗಿ ಆಡಿದ್ರು.. ಇಂಗ್ಲೆಂಡ್ ವಿರುದ್ಧ ಟೆಸ್ಟ್ಗೆ ಆಯ್ಕೆ ಆದ ಬುಮ್ರಾ ಮೇಲೆ ಒತ್ತಡ ಹೇರಬಾರದು ಎಂದು ವೈದ್ಯರು ಸಲಹೆ ನೀಡಿರುವುದರಿಂದ ಹೆಚ್ಚು ಹೊರೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ಹಾಗಾಗಿಯೇ ಸರಣಿ ಆರಂಭಕ್ಕೂ ಮುಂಚೆಯೇ 5 ಪಂದ್ಯದಲ್ಲಿ ಬುಮ್ರಾ 3 ಪಂದ್ಯಗಳನ್ನು ಮಾತ್ರ ಆಡುವುದೆಂದು ನಿರ್ಧಾರವಾಗಿತ್ತು. ಈಗಾಗಲೇ ಒಂದು ಪಂದ್ಯದಿಂದ ಹೊರಗುಳಿದಿದ್ದು ಬಿಟ್ರೆ ಉಳಿದ 3 ಪಂದ್ಯದಲ್ಲಿ ಬುಮ್ರಾ ಆಡಿದ್ದಾರೆ. ಲೀಡ್ಸ್, ಲಾರ್ಡ್ಸ್ ಮತ್ತು ಇದೀಗ ಓವಲ್ ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಮಾತ್ರ ಬುಮ್ರಾ ಆಡಬೇಕಿತ್ತು. ಆದರೆ 4ನೇ ಟೆಸ್ಟ್ನಲ್ಲಿ ವೇಗಿಗಳ ಪಾಳಯದಲ್ಲಿ ಗಾಯದ ಸಮಸ್ಯೆ ಹೆಚ್ಚಾದ ಕಾರಣ ಮ್ಯಾಂಚೆಸ್ಟರ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ಆಡಿಸಲಾಯಿತು. ಅಲ್ಲಿಗೆ ಬುಮ್ರಾ ಕೋಟ ಮುಗಿದಿದೆ..
5ನೇ ಪಂದ್ಯಕ್ಕೆ ತಂಡದಲ್ಲಿ ಬಲಿಷ್ಠ ಬೌಲರ್ಗಳಿಲ್ಲ.. ಇಂಜುರಿ ಬೂತದಿಂದ ಹೊರಗಿದ್ದವರ ಬದಲು ಬಂದ ಆಟಗಾರರು ನೆಟ್ಟಗೆ ಆಡುತ್ತಿಲ್ಲ.. ಕಳಪೆ ಬೌಲಂಗ್ ಮಾಡ್ತಿದ್ದಾರೆ. ಹೀಗಾಗಿ ಬುಮ್ರಾನು ಇಲ್ಲ ಅಂದ್ರೆ ಸರಣಿ ಕೈ ಚೆಲ್ಲಬೇಕಾಗುತ್ತೆ.. ಒಂದು ವೇಳೆ ಎಲ್ಲಾ ಆಟಗಾರರು ಎಫರ್ಟ್ ಹಾಕಿ ಆಡಿ ಗೆದ್ರೆ ಸರಣಿ ಸಮಬಲ ಆಗುತ್ತೆ.. ಹೀಗಾಗಿ ಇಂತಹ ಟೈಂನಲ್ಲಿ ಬುಮ್ರಾಗೆ ರೆಸ್ಟ್ ಬೇಕಾ ಈ ಒಂದು ಪಂದ್ಯ ಆಡಿ ಸರಣಿ ಸಮಬಲ ಮಾಡಿಕೊಳ್ಳಹುದು ಅಲ್ವಾ.. ಪಂತ್ ಕಾಲಿಗೆ ಗಾಯ ಆದ್ರೂ ಡಾಕ್ಟರ್ ರೆಸ್ಟ್ ಮಾಡಿ ಅಂದ್ರೂ ಅವರು 4ನೇ ಟೆಸ್ಟ್ನಲ್ಲಿ ಆಡಿದ್ದಾರೆ. ಹಾಗೇ ಬುಮ್ರಾ ಕೂಡ ದೊಡ್ಡ ಮನಸ್ಸು ಮಾಡಿ 5ನೇ ಟೆಸ್ಟ್ಗೆ ಆಡಬೇಕು ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ.
ಕಾರ್ಯದೊತ್ತಡ ನಿರ್ವಹಣೆ ನಿರ್ಧಾರವನ್ನೇ ಗಮನದಲ್ಲಿ ಇಟ್ಟುಕೊಂಡರೆ ಬುಮ್ರಾ ಅವರು ಕಣಕ್ಕಿಳಿಯುವುದು ಡೌಟ್. ಯಾಕಂದ್ರೆ ಬುಮ್ರಾ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಸಿದರೆ ಅವರು ಮತ್ತೆ ನೋವಿನ ಸಮಸ್ಯೆಗೆ ಸಿಲುಕಬಹುದು. ಅದು ಅವರ ಟೆಸ್ಟ್ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ರೆ ಭಾರತಕ್ಕೆ ಸರಣಿಯನ್ನು ಸಮಬಲಗೊಳಿಸಬೇಕಾದರೆ ಬುಮ್ರಾ 5ನೇ ಟೆಸ್ಟ್ನಲ್ಲಿ ಆಡೋದು ಒಳ್ಳೆಯದ್ದು.. ಹೀಗಾಗಿ 5ನೇ ಟೆಸ್ಟ್ನಲ್ಲಿ ಬುಮ್ರಾ ಕಣ್ಣಕ್ಕಿಳಿಯುವ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದ್ದನ್ನ ಕಾದು ನೋಡಬೇಕಿದೆ.

ನೋಡಿರಿ

