ನುಡಿದಂತೆಯೇ ನಡೆದ ಕಾಂಗ್ರೆಸ್ ಸರ್ಕಾರ – 5 ಗ್ಯಾರಂಟಿಗಳ ಜಾರಿಗೆ ಮುಹೂರ್ತ ಫಿಕ್ಸ್..!

ನುಡಿದಂತೆಯೇ ನಡೆದ ಕಾಂಗ್ರೆಸ್ ಸರ್ಕಾರ – 5 ಗ್ಯಾರಂಟಿಗಳ ಜಾರಿಗೆ ಮುಹೂರ್ತ ಫಿಕ್ಸ್..!

ಸಿಎಂ, ಡಿಸಿಎಂ ಹಾಗೂ ಸಚಿವರ ಪದಗ್ರಹಣದ ಬೆನ್ನಲ್ಲೇ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಸಲಾಯ್ತು. ಕಾಂಗ್ರೆಸ್ ನ ಗ್ಯಾರಂಟಿಗಳನ್ನ ಕುರಿತಂತೆ ಚರ್ಚೆ ನಡೆಸಲಾಯ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಭಾಗಿಯಾಗಿದ್ರು. ಹಾಗೂ ಕಾಂಗ್ರೆಸ್ ಕೊಟ್ಟಿದ್ದ 5 ಗ್ಯಾರಂಟಿಗಳ ಜಾರಿ ಬಗ್ಗೆಯೂ ಘೋಷಣೆ ಮಾಡಲಾಯ್ತು. ನಮ್ಮ ಸರ್ಕಾರ ನುಡಿದಂತೆಯೇ ನಡೆಯುತ್ತದೆ ಎಂದು ಹೇಳಿದ್ರು. ಹಾಗಾದ್ರೆ ಕಾಂಗ್ರೆಸ್ ನ 5 ಗ್ಯಾರಂಟಿಗಳೇನು? ಯಾಱರಿಗೆ ಅನ್ವಯ ಆಗುತ್ತೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

  1. ಗೃಹಜ್ಯೋತಿ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ 200 ಯುನಿಟ್ ವರೆಗೆ ಎಲ್ಲಾ ಮನೆಗಳಿಗೆ ಫ್ರೀಯಾಗಿ ವಿದ್ಯುತ್ ಕೊಡೋದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ತಿಂಗಳಿಗೆ ಸುಮಾರು 1,200 ಕೋಟಿ ಹೊರೆಯಾಗಲಿದೆ.

  1. ಗೃಹಲಕ್ಷ್ಮೀ

ಪ್ರತೀ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಹಣ. ಒಡತಿಯರ ಅಕೌಂಟ್ ಗೆ ನೇರ ಜಮೆ.

  1. ಅನ್ನಭಾಗ್ಯ

ಹಿಂದೆ ಕಾಂಗ್ರೆಸ್ ಸರ್ಕಾರ 7 ಕೆಜಿ ಅಕ್ಕಿ ಕೊಡುತ್ತಿತ್ತು. ಅದನ್ನ ಬಿಜೆಪಿ ಸರ್ಕಾರ 5ಕೆಜಿ ಇಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಪ್ರತೀ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡೋದಾಗಿ ಹೇಳಿಕೆ.

  1. ಯುವನಿಧಿ

ಯಾರು ನಿರುದ್ಯೋಗಿ ಪದವಿಧರರಿರುತ್ತಾರೆ ಅವರಿಗೆ 2 ವರ್ಷದವರೆಗೆ ತಿಂಗಳಿಗೆ 3 ಸಾವಿರ ರೂಪಾಯಿ ಹಣ. ಕೆಲಸಕ್ಕೆ ಸೇರಿದ ಮೇಲೆ ಕೊಡೋದಿಲ್ಲ. ಡಿಪ್ಲೊಮಾ ಮುಗಿಸಿ ಉದ್ಯೋಗ ಸಿಗದೆ ಇರುವವರಿಗೆ 1,500 ತಿಂಗಳಿಗೆ ಜಮೆ.

  1. ಮಹಿಳೆಯರಿಗೆ ಫ್ರೀ ಪ್ರಯಾಣ

ಸರ್ಕಾರಿ ಬಸ್ ನಲ್ಲಿ ಓಡಾಡುವವ ಮಹಿಳೆಯರಿಗೆ ಫ್ರೀ ಪಾಸ್. ಕರ್ನಾಟಕದ ಮಹಿಳೆಯರಿಗೆ ಮಾತ್ರ ಅನ್ವಯ. ಎಲ್ಲಿಂದ ಎಲ್ಲಿಗೆ, ಯಾವ್ಯಾವ ಬಸ್ ಗಳಲ್ಲಿ ಅನ್ನೋದು ಮುಂದಿನ ದಿನಗಳಲ್ಲಿ ನಿರ್ಧಾರ.

ಇನ್ನು ಈ 5 ಗ್ಯಾರಂಟಿಗಳ ಜಾರಿಗೆ ಎಷ್ಟೇ ವೆಚ್ಚವಾದ್ರೂ ಈಡೇರಿಸೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಷ್ಟು ದುಡ್ಡಾದ್ರೂ ನಾವು ಹಿಂದೆ ಸರಿಯಲ್ಲ. ಮುಂದಿನ ವಾರ ಸಚಿವ ಸಂಪುಟ ಆದ ಮೇಲೆ ಅಧಿಕೃತವಾಗಿ ಚಾಲನೆಗೆ ಬರುತ್ತೆ ಎಂದು ಘೋಷಣೆ ಮಾಡಿದ್ದಾರೆ.

suddiyaana