ದೊಡ್ಮನೆಯಿಂದ ಜಗದೀಶ್‌ ಔಟ್‌ – ಬಿಗ್​ಬಾಸ್​ನಿಂದ ಹೊರಬಂದು ಕ್ಷಮೆ ಕೇಳಿದ್ಯಾರಿಗೆ?

ದೊಡ್ಮನೆಯಿಂದ ಜಗದೀಶ್‌ ಔಟ್‌ – ಬಿಗ್​ಬಾಸ್​ನಿಂದ ಹೊರಬಂದು ಕ್ಷಮೆ ಕೇಳಿದ್ಯಾರಿಗೆ?

ಬಿಗ್‌ ಬಾಸ್‌ ಮನೆ ಆಟ ಈಗ ರಂಪಾಟ ಆಗಿದೆ. ಲಾಯರ್‌ ಜಗದೀಶ್‌ ಅವಾಚ್ಯ ಶಬ್ದಗಳನ್ನು ಬಳಸಿ ಮಹಿಳಾ ಸ್ಪರ್ಧಿಗಳನ್ನು ನಿಂದಿಸಿದ್ದಾರೆ. ಹೀಗಾಗಿ ಜಗದೀಶ್‌ ಬಿಗ್‌ ಬಾಸ್‌ ಮನೆಯಿಂದ ಗೇಟ್‌ ಪಾಸ್‌ ನೀಡಲಾಗಿದೆ. ಇದೀಗ ದೊಡ್ಮನೆಯಿಂದ ಹೊರಗೆ ಬಂದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೀರ್ತಿ ಪಾತ್ರಕ್ಕೆ ಬೇರೆ ನಟಿ ಎಂಟ್ರಿ! – ಲಕ್ಷ್ಮೀ ಬಾರಮ್ಮಗೆ ತನ್ವಿರಾವ್‌ ಗುಡ್‌ಬೈ?

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಬಳಿಕ  ಸಂದೇಶ ರವಾನಿಸಿರುವ ಜಗದೀಶ್, ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್​ಬಾಸ್​ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್​ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ’ ಎಂದಿದ್ದಾರೆ. ಮುಂದುವರೆದು, ‘ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್​ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು’ ಎಂದು ಬಿಗ್​ಬಾಸ್​ ಕಾರ್ಯಕ್ರಮವನ್ನು ಹೊಗಳಿದ್ದಾರೆ.

‘ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲ ತುಂಬಾ ಚಿಕ್ಕ ವಯಸ್ಸಿನಲ್ಲೇ ಅಧ್ಭುತ ಕಲಾವಿದರು, ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿದೆ, ಅದು ನಟನೆ ಅಥವಾ ಮನರಂಜನೆಯ ಒಂದು ಭಾಗವಷ್ಟೆ, ವೈಯಕ್ತಿಕ ದ್ವೇಷ ಯಾವುದೂ ಇಲ್ಲ’ ಎಂದಿದ್ದಾರೆ ಜಗದೀಶ್. ಮಾಧ್ಯಮಗಳನ್ನು ಭೇಟಿ ಆಗಲು ಕಾಯುತ್ತಿದ್ದೇನೆ ಎಂದಿರುವ ಜಗದೀಶ್, ಭಾನುವಾರದಂದು ಜಕ್ಕೂರು ಏರೋಸ್ಪೇಸ್​ ಬಳಿ ಸುದ್ದಿಗೋಷ್ಠಿ ನಡೆಸಲಿದ್ದೇನೆ’ ಎಂದಿದ್ದಾರೆ.

ಜಗದೀಶ್, ಬಿಗ್​ಬಾಸ್ ಮನೆಯಲ್ಲಿ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆಯೇ ಹರಡಿತ್ತು, ರಂಜಿತ್ ಹಾಗೂ ಜಗದೀಶ್ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರನ್ನೂ ಹೊರಗೆ ಹಾಕಲಾಗಿದೆ ಎನ್ನಲಾಗಿತ್ತು. ಶುಕ್ರವಾರ (ಅಕ್ಟೋಬರ್ 18) ಬೆಳಿಗ್ಗೆ ಪ್ರಸಾರವಾಗಿರುವ ಪ್ರೋಮೋನಲ್ಲಿ ಜಗದೀಶ್ ಹಾಗೂ ರಂಜಿತ್ ಹೊರಗೆ ಹೋಗುತ್ತಿರುವ ದೃಶ್ಯ ತೋರಿಸಲಾಗಿದೆ.

Shwetha M

Leave a Reply

Your email address will not be published. Required fields are marked *