ತೂತಾದ ಅಂಗಿ.. ತೆಂಗಿನ ಗರಿ ಬ್ಯಾಟ್! ಬಡ ಹುಡುಗನಿಗೆ ಬ್ಯಾಟಿಂಗ್ ಸಿದ್ದಿಸಿದ್ದೇಗೆ?
ಪೂರನ್ ಕ್ರಿಕೆಟ್ನ ರೋಚಕ ಕಹಾನಿ

ಲಕ್ನೋ ತಂಡದ ಪರ ಅಬ್ಬರಿಸಿ ಬೊಬ್ಬಿರಿಯುತ್ತಿರುವ ನಿಕೋಲಸ್ ಪೂರನ್ ಗೆ ಬ್ಯಾಟಿಂಗ್ ಸಿದ್ದಿಸಿದ್ದೆ ರೋಚಕ. ಕೆರಿಬಿಯನ್ ದ್ವೀಪಸಮೂಹದಲ್ಲಿ ಬರುವ ಟ್ರಿನಿಡ್ಯಾಡ್ ಆಂಡ್ ಟೊಬ್ಯಾಗೋಗೆ ಮೂಲದ ಪ್ರತಿಭೆ ನಿಕೋಲಸ್ ಕಡುಬಡತನದಲ್ಲಿ ಪ್ರಾಥಮಿಕ ಶಾಲಾ ವ್ಯಾಸಂಗವನ್ನು ಮಾಡುತ್ತಿದ್ದ ಪೂರನ್, ಬಿಡುವಿದ್ದಾಗಲೆಲ್ಲಾ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಹೀಗಿರುವಾಗ ಒಂದು ದಿನ ಇವರು ಇರೋ ರೋಡ್‌ನಲ್ಲೇ ಹೆಸರಾಂತ ಕ್ರಿಕೆಟ್ ಕೋಚ್ ಜಮೈಕಾದ ಜೆರೋಮ್ ನಾಗೇಲ್ ಕುಂಡಿಸನ್ ಹೋಗ್ತಾರೆ.. ಹೀಗೆ ನಾಗೇಲ್ ಹೋಗುವಾಗ ಕ್ರಿಕೆಟ್‌ನಲ್ಲೇ ತಲ್ಲೀನನಾಗಿದ್ದ ಪುಟ್ಟ ಬಾಲಕ ಪೂರನ್ ನನ್ನು ಕಂಡು ಅಲ್ಲಿಯೇ ಮರೆಯಲ್ಲಿ ನಿಂತು ಆತನ ಬ್ಯಾಟಿಂಗನ್ನು ನೋಡ್ತಾರೆ.. ಅಬ್ಬಾ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಬಗ್ಗೆ ಎಂತಹ ಆಸಕ್ತಿ. ಇವನಿಗೆ ಸರಿಯಾದ ತರಬೇತಿ ಸಿಕ್ಕರೆ ಮುಂದೊಂದುದಿನ ಜಗತ್ತನ್ನೇ ನಿಬ್ಬೆರಗಾಗಿಸುವ ಆಕ್ರಮಣಕಾರಿ ಬ್ಯಾಟ್ಸ್ಮ್ಯಾನ್ ಆಗುತ್ತಾನೆ” ಎಂದು ತನ್ನಲ್ಲೇ ಹೇಳಿಕೊಳ್ತಾರೆ ನಾಗೇಲ್..
ಆಟ ಮುಗಿಸಿ ಹೊರಡುತ್ತಿದ್ದ ಬಾಲಕನನ್ನು ಕರೆದ ನಾಗೇಲ್ ಮಗೂ, ಏನಪ್ಪಾ ನಿನ್ ಹೆಸರು? ನಿನ್ನ ಮುಖದಲ್ಲಿ ಏನಾದ್ರು ಸಾಧಿಸಬೇಕೆನ್ನುವ ಛಲ ಕಾಣುತ್ತಿದೆ.. ನನ್ ಜೊತೆ ಬರ್ತೀಯಾ.. ನಿನಗೆ ನಾನ್ ಕ್ರಿಕೆಟ್ ಟ್ರೈನಿಂಗ್ ಕೊಡ್ತೀನಿ.. ಉನ್ನತಮಟ್ಟದ ಕ್ರಿಕೆಟ್ ತರಬೇತಿಯನ್ನು ನಾನು ನೀಡುತ್ತೇನೆ ಅಂತ ಹೇಳ್ತಾರೆ.
ಆಗ ನಿಕೋಲಸ್ ನನಗೂ ದೊಡ್ಡ ಕ್ರಿಕೆಟ್ ಆಟಗಾರನಾಗಬೇಕು, ದೊಡ್ಡವನಾದಮೇಲೆ ವೆಸ್ಟ್ ಇಂಡಿಸ್ ತಂಡವನ್ನು ಪ್ರತಿನಿಧಿಸಬೇಕು ಎಂದೆಲ್ಲಾ ದೊಡ್ಡ ಕನಸಿದೆ. ಆದ್ರೇನು ಮಾಡೋದು ಸರ್? ನಾನು ಕಡುಬಡವ. ಬ್ಯಾಟ್ ಕೊಳ್ಳೋದಕ್ಕೂ ದುಡ್ಡಿಲ್ಲ. ಇಲ್ನೋಡಿ, ತೆಂಗಿನಗರಿಯ ಕಾಂಡವನ್ನ ಕತ್ತಿಯಲ್ಲಿ ಕೆತ್ತಿಕೊಂಡು ಬ್ಯಾಟ್ ಮಾಡಿಕೊಂಡಿದ್ದೇನೆ. ಬಟ್ಟೆ ಖರೀದಿಸೋಕು ಹಣವಿಲ್ಲ. ಇಲ್ನೋಡಿ, ತೂತಾದ ನನ್ನ ಅಂಗಿಯಿಂದ ಇಣುಕಿನೋಡಿದರೆ ಕೆರಿಬಿಯನ್ ದ್ವೀಪಸ್ಥೋಮವೇ ದರ್ಶನವಾಗುತ್ತದೆ. ನನ್ನಂತಹ ಬಡವನಿಗೆ ಯಾರು ತರಬೇತಿ ನೀಡುತ್ತಾರೆ“ ಎಂದು ಹೇಳುವಷ್ಟರಲ್ಲಿ ಬಾಲಕನ ಕಣ್ಣಂಚಲ್ಲಿ ನೀರುಬಂದಿತ್ತು.
ಆಗ ನಿಕೋಲಸ್ ಪೂರನ್‌ಗೆ ಕೋಚ್ ನಾಗೇಲ್ ಚಿಂತಿಸಬೇಡ ಪಟ್ಟ. ನಿನ್ನ ತರಬೇತಿಯ ಖರ್ಚು-ವೆಚ್ಚದ ಸಂಪೂರ್ಣ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ. ನೀನು ಕೇವಲ ವೆಸ್ಟ್ ಇಂಡಿಸ್ ತಂಡದ ಆಟಗಾರನಾದರೆ ನಿನ್ನ ಬಡತನ ಹೀಗೆಯೇ ಮುಂದುವರೆಯುತ್ತದೆ. ದೂರದ ಭಾರತದಲ್ಲಿ ಪ್ರತಿವರ್ಷ ಐಪಿಎಲ್ ಎನ್ನುವ ಚಿನ್ನದ ಮೊಟ್ಟೆಯಿಡುವ ಆಟ ನಡೆಯುತ್ತದೆ. ಅದರಲ್ಲಿ ನೀನು ಭಾಗವಹಿಸುವಂತಾದರೆ ನೀನು ಆಗರ್ಭ ಶ್ರೀಮಂತನಾಗಬಹುದು. ಇದ್ಯಾಕೆ? ನನ್ನ ಮಾತನ್ನು ಸರಿಯಾಗಿ ಕೇಳಿದರೆ ಬಂಗಾರದ ಬ್ಯಾಟನ್ನೇ ಖರೀದಿಸಬಹುದು ಎನ್ನುತ್ತಾ ಆತನ ಕೈಲಿದ್ದ ತೆಂಗಿನ ಮಡಲಿನಲ್ಲಿ ಮಾಡಿದ್ದ ಬ್ಯಾಟನ್ನು ಪಕ್ಕಕ್ಕೆಸೆದು ಬಾಲಕನನ್ನು ತಂನ್ನೊಂದಿಗೆ ಕರೆದುಕೊಂಡು ಜಮೈಕಾಗೆ ತೆರಳುತ್ತಾನೆ.
ಅಲ್ಲಿ ಸುದೀರ್ಘ ಸಮಯ ಕಠಿಣ ತರಬೇತಿನೀಡಿ ವೆಸ್ಟ್ ಇಂಡಿಸ್ ತಂಡಕ್ಕೆ ಸೇರುವಂತೆ ಮಾಡುತ್ತಾನೆ. ನಾಗೇಲ್ ನೀಡಿದ ತರಬೇತಿಯನ್ನು ಚಾಚು ತಪ್ಪದೆ ಪಾಲಿಸಿದ ಪೂರನ್ ಹಿಂತಿರುಗಿ ನೋಡಲೇ ಇಲ್ಲ. 2023ರ ವಿಶ್ವಕಪ್ ನಲ್ಲಿ ತನ್ನ ಬ್ಯಾಟಿಂಗ್ ವೈಭವವನ್ನು ಪ್ರದರ್ಶನಮಾಡುತ್ತಾನೆ. ಗುರು ನಾಗೇಲ್ ನ ಪ್ರಭಾವ ಹಾಗೂ ತನ್ನಲ್ಲಿರುವ ಪ್ರತಿಭೆಯಿಂದ ಐಪಿಎಲ್ ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗುತ್ತಾನೆ. ಹಿಂದೆ ಗುರು ಮುಂದೆ ಗುರಿ ಇದ್ರೆ ಎಂತಹ ಸಾಧನೆಯನ್ನೂ ಮಾಡಬಹುದು ಅನ್ನೋದ್ದಕ್ಕೆ ನಿಕೋಲಸ್ ಪೂರನ್ ಬೆಸ್ಟ್ ಎಕ್ಸಾಂಪಲ್ ಅಲ್ವಾ..