ತುಳಸಿ ಮಾಲೆ ಧರಿಸುತ್ತೀರಾ? – ಈ ನಿಯಮ ಪಾಲನೆ ಮಾಡದಿದ್ದರೇ ಲಾಭಕ್ಕಿಂತ ನಷ್ಟವೇ ಹೆಚ್ಚು!

ಮನೆಯ ಮುಂದೆ ತುಳಸಿಯನ್ನು ನೆಟ್ಟು ಪೂಜಿಸುವುದರಿಂದ ಎಷ್ಟು ಪುಣ್ಯ ಫಲ ಸಿಗುತ್ತದೋ, ಅಷ್ಟೇ ಪ್ರಮಾಣದಲ್ಲಿ ತುಳಸಿ ಮಾಲೆಯನ್ನು ಧರಿಸುವುದರಿಂದಲೂ ಆಧ್ಯಾತ್ಮಿಕ ಲಾಭ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ತುಳಸಿ ಮಾಲೆಯನ್ನು ಧರಿಸುವುದರಿಂದ ಮನಸ್ಸಿಗೆ ಶುದ್ಧತೆ, ಭಕ್ತಿಭಾವ, ಆತ್ಮಶಾಂತಿ ಮತ್ತು ದೈವಿಕ ರಕ್ಷಣೆಯ ಅನುಭವ ಉಂಟಾಗುತ್ತದೆ. ಆದರೆ ತುಳಸಿ ಮಾಲೆ ಧರಿಸುವುದಕ್ಕೂ ಕೆಲವು ನಿಯಮಗಳು ಮತ್ತು ಶಿಸ್ತುಗಳಿವೆ. ಅವುಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಚಳಿ ಇದೆ ಅಂತ ನೀರು ಕುಡಿತಿಲ್ವಾ? – ಚಳಿಗಾಲದಲ್ಲಿ ದಿನಕ್ಕೆ ಎಷ್ಟು ನೀರು ಕುಡಿಬೇಕು?
ತುಳಸಿ ಮಾಲೆಯನ್ನು ಧರಿಸಲು ಬಯಸುವವರು ಅದರ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅತ್ಯಂತ ಮುಖ್ಯ. ತುಳಸಿ ಮಾಲೆ ಧರಿಸಿದ ಬಳಿಕ ಮಾಂಸಾಹಾರ, ಮದ್ಯಪಾನ ಹಾಗೂ ಇತರ ಮಾದಕ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳಿತು. ಸಾಧ್ಯವಾದಷ್ಟು ಇಂತಹ ತಾಮಸಿಕ ಗುಣ ಹೊಂದಿರುವ ಆಹಾರಗಳಿಂದ ದೂರವಿದ್ದು, ಶುದ್ಧ, ಪವಿತ್ರ ಹಾಗೂ ಸಾತ್ವಿಕ ಆಹಾರವನ್ನೇ ಸೇವಿಸುವುದರಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ಇದರಿಂದ ತುಳಸಿ ಮಾಲೆಯ ದೈವಿಕ ಶಕ್ತಿ ಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ನಂಬಿಕೆ ಇದೆ.
ಕೆಲವರು ರುದ್ರಾಕ್ಷಿ ಹಾಗೂ ತುಳಸಿ ಮಾಲೆಯನ್ನು ಒಟ್ಟಿಗೆ ಧರಿಸಿರುವುದನ್ನು ನಾವು ಕೆಲವೊಮ್ಮೆ ಕಾಣಬಹುದು. ಆದರೆ ಶಾಸ್ತ್ರದ ಪ್ರಕಾರ ಇದು ಸರಿಯಾದ ವಿಧಾನವಲ್ಲ. ತುಳಸಿ ಮಾಲೆ ಧರಿಸಿರುವ ವ್ಯಕ್ತಿ ರುದ್ರಾಕ್ಷಿಯನ್ನು ಅಥವಾ ರುದ್ರಾಕ್ಷಿ ಮಾಲೆಯನ್ನು ಒಂದೇ ಸಮಯದಲ್ಲಿ ಧರಿಸಬಾರದು. ಇದರಿಂದ ಶುಭಫಲದ ಬದಲು ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಶಿವನಿಗೆ ತುಳಸಿ ಎಲೆಗಳು ಇಷ್ಟವಿಲ್ಲ ಎನ್ನುವ ನಂಬಿಕೆಯಿರುವುದರಿಂದ, ಶಿವನ ಪೂಜೆಗೆ ತುಳಸಿಯನ್ನು ಅರ್ಪಿಸುವುದೂ ಸೂಕ್ತವಲ್ಲ. ಹಾಗೆಯೇ ರುದ್ರಾಕ್ಷಿ ಶಿವನ ಸಂಕೇತವಾಗಿರುವುದರಿಂದ, ಅದನ್ನು ತುಳಸಿಯೊಂದಿಗೆ ಸೇರಿಸಿ ಧರಿಸುವುದನ್ನು ತಪ್ಪಿಸಬೇಕು.

ನೋಡಿರಿ

