ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್ – ರಾಜ್ಯದಿಂದ ತಿರುಪತಿಗೆ ನೂತನ ರೈಲು ಸೇವೆ!

ತಿರುಪತಿ ತಿಮ್ಮಪ್ಪ ಎಂದರೆ ಎಲ್ಲರಿಗೂ ಕೂಡ ಅಪಾರವಾದ ಭಕ್ತಿ. ಬಾಲಾಜಿಯನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಭಕ್ತರು ತಿರುಪತಿಗೆ ಬೇಟಿ ನೀಡ್ತಾರೆ. ಇದೀಗ ಕರ್ನಾಟಕದಿಂದ ತಿರುಪತಿಗೆ ತೆರಳುವವರಿಗೆ ಗುಡ್ನ್ಯೂಸ್ವೊಂದಿದೆ. ಇದೀಗ ತಿರುಪತಿಗೆ ಹೊಸ ರೈಲು ಸಂಚರಿಸಲಿದೆ.
ಇದನ್ನೂ ಓದಿ: 5 ಹುಲಿ ಕೊ*ದ ಕೇಸ್ಗೆ ಬಿಗ್ ಟ್ವಿಸ್ಟ್ – ಹಸುವಿನ ಮಾಲೀಕ ಸೇರಿದಂತೆ ಮೂವರು ಅಂದರ್
ರಾಜ್ಯದ ಲಕ್ಷಾಂತರ ಜನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನ ನೀಡಿದೆ. ವೆಂಕಟೇಶ್ವರನ ದರ್ಶನಕ್ಕಾಗಿ ಚಿಕ್ಕಮಗಳೂರಿನಿಂದ ನೂತನ ರೈಲು ಸಂಚಾರ ಆರಂಭವಾಗಿದೆ. ಚಿಕ್ಕಮಗಳೂರಿನಿಂದ ತಿರುಪತಿಗೆ ವಾರಕ್ಕೊಮ್ಮೆ ಈ ರೈಲು ಸಂಚರಿಸಲಿದೆ. ಪ್ರತಿ ಗುರುವಾರ ತಿರುಪತಿಯಿಂದ ಚಿಕ್ಕಮಗಳೂರಿಗೆ ರೈಲು ಸಂಚರಿಸಲಿದ್ದು, ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಹೊರಡಲಿದೆ.
ಪ್ರಮುಖವಾಗಿ ಈ ರೈಲು ಚಿತ್ತೂರು, ಕಟ್ಪಾಡಿ, ಕುಪ್ಪಂ, ಬಂಗಾರಪೇಟೆ, ವೈಟ್ ಫೀಲ್ಡ್, ಕೆಆರ್ ಪುರಂ, ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ತಿಪಟೂರು, ಬಿರೂರು, ಕಡೂರು ಸೇರಿದಂತೆ ಹಲವು ನಿಲ್ದಾಣಗಳನ್ನು ಹೊಂದಿದೆ. ಹೀಗಾಗಿ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರು ಈ ಸೌಲಭ್ಯ ಬಳಸಿಕೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.

ನೋಡಿರಿ

