ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ಇನ್ನಿಲ್ಲ! – ಹೋಗೋ ಮುಕ್ಕಾ ಅಂತ ಪ್ರೇಕ್ಷಕರ ರಂಜಿಸಿದ ಸಿಂಗ್ರೀಗೌಡ ಇನ್ನು ನೆನಪು ಮಾತ್ರ! 

ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ಇನ್ನಿಲ್ಲ! – ಹೋಗೋ ಮುಕ್ಕಾ ಅಂತ ಪ್ರೇಕ್ಷಕರ ರಂಜಿಸಿದ ಸಿಂಗ್ರೀಗೌಡ ಇನ್ನು ನೆನಪು ಮಾತ್ರ! 

ತಿಥಿ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರಕ್ಕೆ ಜೀವತುಂಬಿದ್ದ ಸಿಂಗ್ರಿಗೌಡ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರಿ ಗೌಡ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾಗೆ ಪೊಸೆಸಿವ್‌ನೆಸ್‌.. ಲವ್‌ ಮಾಡ್ತಿದ್ಯಾ ಎಂದು ಕೇಳೇ ಬಿಟ್ಟ ಗಿಲ್ಲಿ! – ರಕ್ಷಿತಾ POSSESSIVE ಗುಟ್ಟು ಕಡೆಗೂ ರಟ್ಟು!

ಸಿಂಗ್ರಿಗೌಡ ಅವರು ಮಂಡ್ಯ  ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ರಾತ್ರಿ ಮೃತಪಟ್ಟಿದ್ದು ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

2015ರಲ್ಲಿ ಬಿಡುಗಡೆಯಾದ ತಿಥಿ ಸಿನಿಮಾದಲ್ಲಿ ಸಿಂಗ್ರಿ ಗೌಡ ಅವರು ಸೆಂಚುರಿ ಗೌಡ ಎಂದೇ ಖ್ಯಾತಿ ಪಡೆದಿದ್ದರು. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದ್ದರು. ತಿಥಿ ಸಿನಿಮಾ ಹಲವು ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಇನ್ನು ತಿಥಿ ಸಿನಿಮಾ ನಿರ್ದೇಶಕರು ಸಿಂಗ್ರಿಗೌಡ ಅವರನ್ನು ಆಯ್ಕೆ ಮಾಡಿದ್ದೇ ಒಂದು ಅಚ್ಚರಿಯ ಘಟನೆ. ಸಿಂಗ್ರಿಗೌಡ ಅಣ್ಣ ಸತ್ತು ಹೋಗಿದ್ದರಂತೆ. ಅವರ ತಿಥಿಗೆ ತಿಥಿ ಸಿನಿಮಾ ನಿರ್ದೇಶಕರು ಬಂದಿದ್ದರು. ಈ ವೇಳೆ ಸಿನಿಮಾ ಸೆಂಚುರಿ ಗೌಡ ಇಷ್ಟ ಆಗಿ ಸಿನಿಮಾ ಆಫರ್ ಕೊಟ್ಟರು. ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದರು. ಈ ಚಿತ್ರಕ್ಕಾಗಿ ಅವರಿಗೆ 20 ಸಾವಿರ ಸಂಭಾವನೆ ಸಿಕ್ಕಿತ್ತು ಎನ್ನಾಗಿದೆ. ಅನೇಕ ಚಿತ್ರಗಳಲ್ಲಿ ಸಿಂಗ್ರಿಗೌಡ ನಟಿಸಿದ್ದಾರೆ. ಕೆಲವು ಸಿನಿಮಾ ತಂಡದವರು ಹಣ ಕೊಡದೆ ಅವರಿಗೆ ಮೋಸ ಮಾಡಿದ್ದಾರಂತೆ.

Shwetha M