ಡಿಕೆಶಿ ಕನಸಿಗೆ ಯತಿಂದ್ರ ಕೊಡಲಿ ಪೆಟ್ಟು – ಶಿವಕುಮಾರ್ಗಿರೋ ಸವಾಲುಗಳೇನು?

ರಾಜಕೀಯ ಅಂದ್ರೆನೇ ಹಾಗೇ.. ಯಾವಾಗ ಏನ್ ಆಗುತ್ತೆ ಅನ್ನೋದೇ ಗೊತ್ತಾಗಲ್ಲ.. ಇಲ್ಲಿ ತಂತ್ರದ ಜೊತೆ ರಣತಂತ್ರ ಇದ್ದೇ ಇರುತ್ತೆ.. ಇದ್ದನ್ನೇ ಈಗ ನಾವು ರಾಜ್ಯರಾಜಕೀಯದಲ್ಲಿ ನೋಡ್ತಾ ಇರೋದ್.. ಇಷ್ಟು ದಿನ ನವೆಂಬರ್ನಲ್ಲಿ ಕಾಂತ್ರಿ ನಡೆಯುತ್ತೆ.. ಸಿಎಂ ಸಿದ್ದರಾಮಯ್ಯ ಕುರ್ಚಿಯಿಂದ ಇಳಿದು ಡಿಕೆಶಿ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋ ಮಾತು ಸಖತ್ ಟ್ರೆಂಡ್ ಆಗಿತ್ತು. ಆದ್ರೆ ಸಿಎಂ ಸಿದ್ದರಾಮ್ಯರ ಮಗ ಯತಿಂದ್ರ ಸಿದ್ದರಾಮಯ್ಯ ಕೊಟ್ಟ ಒಂದೇ ಒಂದು ಹೇಳಿಕೆ ಡಿಕೆ ಶಿವಕುಮಾರ್ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಯತಿಂದ್ರ ಮಾತಿನಿಂದ ಕೇವಲ ಡಿಕೆಶಿಗೆ ಮಾತ್ರ ಅಲ್ಲ ರಾಜ್ಯದ ಜನರಿಗೂ ಕ್ಲಿಯರ್ ಪಿಚ್ಚರ್ ಸಿಕ್ಕಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಹೋರಿ ಓಟದ ಸ್ಪರ್ಧೆಯಲ್ಲಿ ದುರಂತ – ಜಿಲ್ಲೆಯ ಬೇರೆ ಬೇರೆ ಸ್ಥಳದಲ್ಲಿಒಟ್ಟು 3 ಬಲಿ
ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಉತ್ತಾರಧಿಕಾರಿ ಸತೀಶ್ ಜಾರಕಿಹೊಳಿ ಅನ್ನೋ ಕ್ಲಿಯರ್ ಕಟ್ ಮ್ಯಾಸೇಜ್ ಕೊಟ್ಟಿದ್ದಾರೆ. ಇದ್ದಕ್ಕೆ ಪೂರಕವಾದ ಕೆಲಸಗಳು ಕೂಡ ಸತೀಶ್ ಜಾರಕಿಹೊಳಿ ಕಡೆಯಿಂದ ನಡೆಯುತ್ತಿದೆ.. ಬೆಳಗಾವಿ ಮಾತ್ರ ಅಲ್ಲದೇ ಉತ್ತರಕರ್ನಾಟಕ ಭಾಗದಲ್ಲಿ ಅದ್ದಕ್ಕೆ ಬೇಕಾದ ಕೆಲಸಗಳನ್ನ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಬೈ ಎಲೆಕ್ಷನ್ನಲ್ಲಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲ್ಲೋಕೆ ಇವರೇ ಕಾರಣ. ಕಳೆದ ವಿಧಾನಸಭಾ ಎಲೆಕ್ಷನ್ನಲ್ಲಿ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿ ಇಡೀ ರಾಜ್ಯದಲ್ಲಿ ಕೆಲಸ ಮಾಡಿದ್ದಾರೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಸತೀಶ್ ಜಾರಕಿಹೊಳಿ ಪಾತ್ರ ತುಂಬಾ ಇತ್ತು. ಇನ್ನೂ ಅಹಿಂದ ವರ್ಗಗಳ ವಿಚಾರಕ್ಕೆ ಬಂದಾಗ ಆ ಸಿದ್ಧಾಂತದಲ್ಲಿ ಡಿಕೆ ಶಿವಕುಮಾರ್ ತುಂಬಾ ಕ್ಲಾರಿಟಿ ಇಟ್ಟುಕೊಂಡು ಮಾತನಾಡಿದಂತೆ ಇಚ್ಚಿನ ದಿನಗಳಲ್ಲಿ ಕಂಡು ಬಂದಿಲ್ಲ.. ಅದು ಸದನದಲ್ಲಿ ಆರ್ಎಸ್ಎಸ್ ಗೀತಾ ಹಾಡಿದ್ದು ಆಗಿರಬಹುದು, ಹಾಗೇ ಆರ್ಎಸ್ಎಸ್ ವಿವಾದ ಬಗ್ಗೆ ಏನೂ ಮಾತನಾಡಿಲ್ಲ. ಇವೆಲ್ಲಾ ಅಹಿಂದ ವರ್ಗ ಪರ ಇದ್ದಾರೆ ಡಿಕೆಶಿ ಅನ್ನೋ ತರ ಎಲ್ಲೂ ಕಾಣದಂತೆ ಮಾಡಿದೆ. ಆದ್ರೆ ಸತೀಶ್ ಜಾರಕಿಹೊಳಿ ಅಹಿಂದ ವರ್ಗಗಳ ಪೂರಕವಾದ ನಿಲುವುಗಳನ್ನ ಇಟ್ಟುಕೊಂಡು, ಬುದ್ದ ಬಸವ ಅಂಬೇಡ್ಕರ್ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಅಹಿಂದ ವರ್ಗಗಳಿಗೆ ತುಂಬಾ ಹತ್ತಿರ ಆಗುತ್ತಿದ್ದಾರೆ. ಇದ್ರ ಜೊತೆಗೆ ಕಾಂಗ್ರೆಸ್ನ ನಾಯಕರು ಮಾತ್ರ ಶಾಸಕರ ಜೊತೆ ಒಳ್ಳೆಯ ಒಡನಾಟ ಉಂಟು.. ಹಿಡಿತ ಉಂಟು.. ಇದು ಇವರಿಗೆ ಒಂದು ರೀತಿಯಲ್ಲಿ ಪ್ಲೆಸ್ ಆಗಿದೆ. ಹಾಗೇ ವಾಲ್ಮೀಕಿ ಸಮುದಾಯ ಕಳೆದ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಪರವಾಗಿ ನಿಂತಿತ್ತು. ಆದ್ರೆ ಈ ಯತಿಂದ್ರ ಅವರ ಹೇಳಿಕೆ ಕಾಂಗ್ರೆಸ್ನಲ್ಲಿ ಒಂದು ಮುಕ್ತ ಚರ್ಚೆಗೆ ನಾಂದಿ ಹಾಡಿದೆ. ಸಿದ್ದರಾಮಯ್ಯ ನಂತ್ರ ಯಾರು ಸಿಎಂ ಅನ್ನೋದ್ದಕ್ಕೆ ಒಂದು ಕ್ಲಾರಿಟಿ ಕೊಟ್ಟಿದೆ. ಇಷ್ಟು ದಿನ ಡಿಕೆಶಿ ಸಿಎಂ ಡಿಕೆಶಿ ಸಿಎಂ ಅಂತ ಹೇಳ್ತಾ ಇದ್ದರು. ಆದ್ರೆ ಈಗ ಅದ್ದಕ್ಕೆಲ್ಲಾ ಬ್ರೇಕ್ ಬಿದಿದ್ದು, ನಮ್ಮ ಮುಂದಿನ ಸಿಎಂ ಸತೀಶ್ ಜಾರಕಿ ಹೊಳಿ ಅನ್ನೋ ಹಿಂಟ್ನ್ನ ಕಾಂಗ್ರೆಸ್ ಯತಿಂದ್ರ ಮೂಲಕ ಕೊಡಿಸಿದೆ. ಸಿಎಂ ಮಗನೇ ಈ ಹೇಳಿಕೆ ನೀಡಿದ್ರಿಂದ ನೀರಿಂದು ನೀರಿಗೆ, ಹಾಲಿಂದು ಹಾಲಿಗೆ ಅನ್ನೋ ಕ್ಲಿಯರ್ ಪಿಚ್ಚರ್ ಎಲ್ಲರಿಗೂ ಸಿಕ್ಕಿದೆ. ಇದು ಡಿಕೆಶಿ ಮತ್ತು ಅವರ ಬಣಕ್ಕೆ ದೊಡ್ಡ ಶಾಕ್ ಅಂತಾನೇ ಹೇಳಬಹುದು. ಸಿಎಂ ರೇಸ್ನಲ್ಲಿ ಮೊದ್ಲಿದ್ದ ಡಿಕೆಶಿಯನ್ನ ಹಿಂದಿಕ್ಕಿ ಈಗ ಸತೀಶ್ ಜಾರಕಿಹೊಳಿ ತುಂಬಾ ಮುಂದೆ ಇದ್ದಾರೆ ಅನ್ನೋದು ಇಡೀ ರಾಜ್ಯದ ಜನರಿಗೆ ಈಗ ಗೊತ್ತಾಗ್ತಿದೆ. ಇಲ್ಲಿ ಕಾಂಗ್ರೆಸ್ ಬಲದ ಮೇಲೆ ಡಿಕೆಶಿ ಇರೋದ್. ಡಿಕೆಶಿ ಬಲದ ಮೇಲೆ ಕಾಂಗ್ರೆಸ್ ಇಲ್ಲ. ಆದ್ರೆ ಸಿದ್ದರಾಮಯ್ಯರ ಬಲ, ಜನಪ್ರಿಯತೆ ಮತ್ತು ಅಹಿಂದ ಶಕ್ತಿ ಶಿವಕುಮಾರ್ಗೆ ಸವಾಲು. ಈ ಅಹಿಂದ ಶಕ್ತಿ ಮತ್ತು ಸಿದ್ದರಾಮಯ್ಯರ ಜನಪ್ರಿಯತೆ ಸೇರಿದ್ರೆ ಮಾತ್ರ ಕಾಂಗ್ರೆಸ್ನ ಬಲ ಹೆಚ್ಚಾಗುತ್ತೆ. ಅದು ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ. ಆದ್ರೆ ಇಲ್ಲಿ ಡಿಕೆಶಿಗೆ ಇರೋ ಬಲ ಏನಂದ್ರೆ ಕೇವಲ ಹೈಕಮಾಂಡ್ ಆಶೀರ್ವಾದ.. ಸಿದ್ದು ನಂತ್ರ ಡಿಕೆಶಿ ಅನ್ನೋ ಅಶೀರ್ವಾದ ಸಿಗಬಹುದು ಹೊರತು ಹೈಕಮಾಂಡ್ ಹೇಳಿದ ತಕ್ಷಣ ಡಿಕೆಶಿ ಸಿಎಂ ಆಗೋಕೆ ಆಗಲ್ಲ.. ಅಲ್ಲಿ ಶಾಸಕರ ಬೆಂಬಲ ಕೂಡ ಮುಖ್ಯವಾಗುತ್ತೆ.. ನಾವು ಇಲ್ಲೇ ನೋಡೋಣ ಸತೀಶ್ ಜಾರಕಿಹೊಳಿಯ ಪ್ಲೆಸ್ ಅಂಡ್ ಮೈನೇಸ್ ಏನು ಅನ್ನೋದ್ದನ್ನ ನೋಡೋಣ.
ಸತೀಶ್ ಜಾರಕಿ ಪ್ಲಸ್ ಏನು?
ಸತೀಶ್ ಜಾರಕಿಹೊಳಿ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರು
ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಹಾಗೂ ಹಿಡಿತ
ಪ್ರಭಾವಿ ಕುಟುಂಬದ ಹಿನ್ನೆಲೆ, ಚುನಾವಣಾ ತಂತ್ರಗಾರಿಕೆಯಲ್ಲೂ ಪಳಗಿದವರು
ಸಂಘಟನಾತ್ಮಕವಾಗಿ ಅನುಭವ, ಅಹಿಂದ ವರ್ಗವನ್ನು ಸೆಳೆಯುವ ಸಾಮರ್ಥ್ಯ
ಸೈದ್ದಾಂತಿಕವಾಗಿಯೂ ಅವರು ಸಿದ್ದರಾಮಯ್ಯ ಮನಸ್ಥಿತಿಯವರಾಗಿದ್ದಾರೆ
ಜಾತ್ಯತೀತ ಮತ್ತು ವೈಚಾರಿಕ ನಡೆಯ ಮೂಲಕ ಗುರುತಿಸಿಕೊಂಡಿದ್ದಾರೆ
ಕಾಂಗ್ರೆಸ್ನಲ್ಲಿ ಒಂದಿಷ್ಟು ಶಾಸಕರ ಮತ್ತು ನಾಯಕರ ಬೆಂಬಲ ಇದೆ
ಸಿದ್ದು ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ಸಚಿವರು, ಮುಖಂಡರ ಸಾಥ್
ಸಿದ್ದು ಆಪ್ತರು ಸತೀಶ್ ಜಾರಕಿಹೊಳಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ
ಸತೀಶ್ ಜಾರಕಿಹೊಳಿ ಮೈನಸ್ ಪಾಯಿಂಟ್
ಸತೀಶ್ ಉತ್ತಮ ವಾಗ್ಮಿ ಅಲ್ಲ, ರಾಜಕಾರಣಕ್ಕೆ ಮಾತಿನ ಕಲೆ ಅಗತ್ಯ
ಉತ್ತರ ಕರ್ನಾಟಕ ಭಾಗಕ್ಕೆ ಅಷ್ಟೇ ಸೀಮಿತವಾಗಿದ್ದಾರೆ ಎಂಬ ಆರೋಪ
ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡಿಲ್ಲ
ಅಖಂಡ ಕರ್ನಾಟಕಕ್ಕೆ ನಾಯಕತ್ವವನ್ನು ನೀಡುವ ಸಾಮರ್ಥ್ಯ ಇದ್ಯಾ ಅನ್ನೋ ಪ್ರಶ್ನೆ
ಸತೀಶ್ ಜಾರಕಿಹೊಳಿಗೆ ಕುಟುಂಬ ರಾಜಕಾರಣದ ಸಮಸ್ಯೆ ನೆಗೆಟ್ಯೂ ಪಾಯಿಂಟ್
ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಸತೀಶ್ ಕಾಂಗ್ರೆಸ್ನಲ್ಲಿ ಇದ್ದಾರೆ
ಇಡೀ ಕುಟುಂಬ ರಾಜಕೀಯದಲ್ಲಿ ಇದೆ, ಕುಟುಂಬ ರಾಜಕಾರಣ ಅನ್ನೋ ಆರೋಪ

ನೋಡಿರಿ

