ಟೀಕೆಗೆ ಸಂಜು ಡೋಂಟ್ಕೇರ್ – ಸೂರ್ಯವಂಶಿಗೆ DK ವಾರ್ನಿಂಗ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ನ್ಯೂಜಿಲ್ಯಾಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ ನಂತ್ರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ವ್ಯಕ್ತವಾಗುವ ಟೀಕೆಗಳ ಸಂಜು ಮಾತನಾಡಿದ್ದಾರೆ. ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಭಾರತಕ್ಕಾಗಿ ಆಡುವುದು ಸುಲಭವಲ್ಲ. ಸಾಕಷ್ಟು ಚರ್ಚೆಗಳು ನಡೆಯುತ್ತವೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಹೇಳುತ್ತಾರೆ ಎಂಬುದನ್ನು ನಾನು ಗಮನಿಸುವುದಿಲ್ಲ ಎಂದಿದ್ದಾರೆೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೂ, ತಂಡಕ್ಕೆ ಗಾಯದ ಆತಂಕ ಎದುರಾಗಿದೆ. ಬ್ಯಾಟರ್ ಇಶಾನ್ ಕಿಶನ್ ಬಲ ತೊಡೆಯ ಸ್ನಾಯುವಿನ ಗಾಯದಿಂದ ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಚೇತರಿಕೆಯ ಮೇಲೆ ನಿಗಾ ಇಟ್ಟಿದೆ. ಇಶಾನ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವ ಬದಲಾವಣೆ ಆಗಲಿದೆ ಎಂಬುದು ಈಗ ಪ್ರಮುಖ ಚರ್ಚೆಯಾಗಿದೆ.
ಭಾರತದ ಮಾಜಿ ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಯುವ ಆಟಗಾರನಿಗೆ ಮಹತ್ವದ ಸಲಹೆ ನೀಡಿದ್ದಾರೆ. ರಾಷ್ಟ್ರೀಯ ತಂಡದ ಭಾಗವಾಗಿರುವಾಗ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿದ್ದರೂ ತಾಳ್ಮೆಯಿಂದ ಕಾಯಬೇಕು ಮತ್ತು ತಂಡದೊಂದಿಗೆ ಉಳಿದುಕೊಂಡು ಕಲಿಯುವುದನ್ನು ಮುಂದುವರಿಸಬೇಕು ಎಂಬುದು ಕಾರ್ತಿಕ್ ಅವರ ಅಭಿಪ್ರಾಯ. ವೈಭವ್ ಸೂರ್ಯವಂಶಿ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ಗೆ ಬ್ಯಾಕಪ್ ಆಟಗಾರನಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡದ ಪರ ರಿಂಕು ಸಿಂಗ್ ಸತತ ಎರಡು ಶತಕಗಳನ್ನು ದಾಖಲಿಸಿ ಗಮನ ಸೆಳೆದಿದ್ದಾರೆ. ಬಿಹಾರ ವಿರುದ್ಧ 112 ರನ್ ಗಳಿಸಿದ ಬಳಿಕ ಗೋವಾ ವಿರುದ್ಧ ಅಜೇಯ 118 ರನ್ ಸಿಡಿಸಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ರಿಂಕು ತೋರಿದ ಹೋರಾಟದ ಮನೋಭಾವ ವಿಶೇಷವಾಗಿ ಮೆಚ್ಚುಗೆ ಪಡೆದಿದೆ. ದೇಶೀಯ ಕ್ರಿಕೆಟ್ನಲ್ಲಿ ಇಂತಹ ಪ್ರದರ್ಶನ ನೀಡುತ್ತಿರುವ ರಿಂಕು, ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತಾರೆಯೇ ಎಂಬ ಚರ್ಚೆಯೂ ನಡೆಯುತ್ತಿದೆ.
ಇದನ್ನೂ ಓದಿ: ENG ಬೌಲರ್ಸ್ ಅಟ್ಟಾಡಿಸಿದ ಲಂಕಾ – 430 ರನ್ಸ್ ಟಾರ್ಗೆಟ್ ಗೆದ್ದು ಚರಿತ್ರೆ
ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ತಂಡದ ಸ್ಪಿನ್ನರ್ ತಾನಯ್ ಥೈಗರಾಜನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಆಂಧ್ರ ವಿರುದ್ಧದ ಪಂದ್ಯದಲ್ಲಿ ಅವರು ಒಟ್ಟು 11 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 35 ರನ್ ನೀಡಿ ಆರು ವಿಕೆಟ್ ಪಡೆದರು. ಜೊತೆಗೆ ಬ್ಯಾಟಿಂಗ್ನಲ್ಲೂ 53 ರನ್ ಗಳಿಸಿದರು. ಅವರ ಆಲ್ರೌಂಡ್ ಪ್ರದರ್ಶನದಿಂದ ಹೈದರಾಬಾದ್ ತಂಡ 267 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡುತ್ತಿರುವ ಪ್ರಿಯಾಂಶ್ ಆರ್ಯ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರೂ ದ್ವಿಶತಕದ ಅವಕಾಶವನ್ನು ಕಳೆದುಕೊಂಡಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅವರು 199 ರನ್ ಗಳಿಸಿ ಕೇವಲ ಒಂದು ರನ್ ಅಂತರದಲ್ಲಿ 200ರ ಗಡಿ ತಲುಪಲು ವಿಫಲರಾದರು. ಯುವ ಬ್ಯಾಟರ್ನ ಈ ಇನ್ನಿಂಗ್ಸ್ ದೇಶೀಯ ಕ್ರಿಕೆಟ್ನಲ್ಲಿ ಗಮನ ಸೆಳೆದಿದೆ. ಶತಕ ಗಳಿಸುವುದಷ್ಟೇ ಅಲ್ಲ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವ ಸಾಮರ್ಥ್ಯವೂ ಎಷ್ಟು ಮುಖ್ಯ ಎಂಬುದನ್ನು ಈ ಇನ್ನಿಂಗ್ಸ್ ತೋರಿಸಿದೆ.
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಜಾರ್ಖಂಡ್ನ ಆರಂಭಿಕ ಬ್ಯಾಟರ್ ಶಿಖರ್ ಮೋಹನ್ ಅವರಿಗೆ ಭಾರತ ಎ ತಂಡದಲ್ಲಿ ಅವಕಾಶ ಸಿಕ್ಕಿದೆ. ನ್ಯೂಜಿಲೆಂಡ್ ಪ್ರವಾಸದ ಕೊನೆಯ ಎರಡು ನಾಲ್ಕು ದಿನಗಳ ಪಂದ್ಯಗಳಿಗೆ ಅವರು ಆಯ್ಕೆಯಾಗಿದ್ದಾರೆ. ಕೆ.ಎಲ್. ರಾಹುಲ್ ಬದಲಿಗೆ ತಂಡ ಸೇರಿರುವ 21 ವರ್ಷದ ಆಟಗಾರನಿಗೆ ಇದು ಮಹತ್ವದ ಅವಕಾಶವಾಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭವಿಷ್ಯದಲ್ಲಿ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆಯುವ ಸಾಧ್ಯತೆಯಿದೆ.
ನ್ಯೂಜಿಲೆಂಡ್ನ ಸ್ಫೋಟಕ ಬ್ಯಾಟ್ಸ್ಮನ್ ಬೆವನ್ ಜೇಕಬ್ಸ್ ಅವರನ್ನು ಅಪರೂಪದ ರೀತಿಯಲ್ಲಿ ರನೌಟ್ ಮಾಡುವ ಮೂಲಕ ಅರ್ಷದೀಪ್ ಅಚ್ಚರಿ ಮೂಡಿಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅರ್ಷದೀಪ್ ಅವರ ಸಮಯಪ್ರಜ್ಞೆಗೆ ಅಭಿಮಾನಿಗಳು ಸಲಾಂ ಹೊಡೆದಿದ್ದಾರೆ. ಗ್ಲೆನ್ ಫಿಲಿಪ್ಸ್ ಮತ್ತು ಬೆವನ್ ಜೇಕಬ್ಸ್ ಒಂದು ರನ್ ಕದಿಯಲು ಪ್ರಯತ್ನಿಸಿದರು. ಈ ವೇಳೆ ಚೆಂಡನ್ನು ಕೈಯಲ್ಲಿ ತೆಗೆದುಕೊಂಡು ವಿಕೆಟ್ಗೆ ಎಸೆಯುವ ಬದಲು, ಅರ್ಷದೀಪ್ ತಮ್ಮ ಕಾಲಿನಿಂದಲೇ ಚೆಂಡನ್ನು ವಿಕೆಟ್ನತ್ತ ತಳ್ಳಿದರು. ಅವರ ಈ ಫುಟ್ಬಾಲ್ ಶೈಲಿಯ ಚಾಣಾಕ್ಷ ನಡೆಗೆ ಜೇಕಬ್ಸ್ ರನೌಟ್ ಆದರು. ಈ ವಿಡಿಯೋ ಈಗ ವೈರಲ್ ಆಗ್ತಿದೆ.
ಆಕಾಶ್ ಚೋಪ್ರಾ ಜೊತೆಗಿನ ಮಾತುಕತೆಯಲ್ಲಿ ಅಮಿತ್ ಮಿಶ್ರಾ ತಮ್ಮ ಕಮ್ಬ್ಯಾಕ್ ಕುರಿತು ನಿರಾಸೆ ವ್ಯಕ್ತಪಡಿಸಿ, ಕೊಹ್ಲಿ ಬಗ್ಗೆ ಆರೋಪ ಮಾಡಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆಗಿದ್ದರೂ ತಮಗೆ ತಂಡದಲ್ಲಿ ಮರಳಿ ಅವಕಾಶ ಸಿಗಲಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಮರುಪ್ರವೇಶದ ಬಗ್ಗೆ ಭರವಸೆ ನೀಡಿದ್ದರೂ, ನಂತರ ಫೋನ್ ಕರೆಗಳಿಗೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 430 ರನ್ಗಳ ಗುರಿ ಬೆನ್ನಟ್ಟುವುದು ಸುಲಭದ ಮಾತಲ್ಲ. ಆದರೆ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಎರಡು ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಪವನ್ ರತ್ನನಾಯಕೆ 130 ರನ್ ಗಳಿಸಿದರೆ, ಅವಿಷ್ಕಾ ಫರ್ನಾಂಡೊ ಮತ್ತು ದಸುನ್ ಶನಕ ತಲಾ 97 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಜನಿತ್ ಲಿಯಾನಗೆ ಸಿಕ್ಸರ್ ಬಾರಿಸಿ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ನೋಡಿರಿ

