ಟೀಂ ಇಂಡಿಯಾದಲ್ಲಿ ಚಾನ್ಸ್ ಮಿಸ್ – ಸಿಟ್ಟು , ಹತಾಶೆಯಿಂದ ಸಿಡಿದೆದ್ದ ಇಶನ್
ಕೌಂಟಿ ಕ್ರಿಕೆಟ್ನಲ್ಲಿ ಕಿಶನ್ ಅಬ್ಬರ

ಭಾರತದ ಸ್ಟಾರ್ ಎಡಗೈ ಬ್ಯಾಟರ್ ಇಶಾನ್ ಕಿಶನ್ ಟೀಮ್ ಇಂಡಿಯಾ ದಿಂದ ದೂರವಾಗಿ 19 ತಿಂಗಳುಗಳೇ ಕಳೆದಿವೆ. ಸದ್ಯ ಐಪಿಎಲ್ ಸೇರಿದಂತೆ ಡೊಮೆಸ್ಟಿಕ್ ಲೀಗ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಇಶಾನ್. ಕಳೆದೊಂದು ವರ್ಷದಿಂದಲೂ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಅದರಲ್ಲೂ ದೇಶಿಲೀಗ್ಗಳಲ್ಲೂ ಆಡದೆ ಇದ್ದ ಕಾರಣ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದಲೂ ಕೈಬಿಟ್ಟಿತ್ತು. ಇದಾದ ಬಳಿಕ ಕೇವಲ ಐಪಿಎಲ್ನಲ್ಲಿ ಮಾತ್ರ ಕಿಶನ್ ಕಾಣಿಸಿಕೊಳ್ಳುತ್ತಿದ್ದಾರೆ. 2021ರಲ್ಲಿ ಟಿ20ಗೆ ಪಾದರ್ಪಣೆ ಮಾಡುವ ಮೂಲಕ ಇಶಾನ್ ಕಿಶನ್ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದರು. ಇದಾದ ಬೆನ್ನಲ್ಲೆ 2021ರಲ್ಲೇ ಏಕದಿನ ಸರಣಿಗೂ ಕಾಲಿಟ್ಟರು ನಂತರ 2023ರಲ್ಲಿ ವೆಸ್ಟ್ ಇಂಡೀಸ್ನೊಂದಿಗೆ ಟೆಸ್ಟ್ಗೂ ಪಾದಾರ್ಪಣೆ ಮಾಡಿದರು. ಆದ್ರೆ ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋಕೆ ಇಶಾನ್ ಸರ್ಕಸ್ ಮಾಡುತ್ತಿದ್ದಾರೆ..
ಇನ್ನು ಇಶಾನ್ ಕಿಶಾನ್ ಟೆಸ್ಟ್, ಏಕದಿನ ಮತ್ತು ಟಿ20 ಸ್ವರೂಪ ಸೇರಿ ಮೂರರಲ್ಲೂ 61 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕಿಶನ್ 78 ರನ್ ಬಾರಿಸಿದ್ದರು. ಏಕದಿನ ಸ್ವರೂಪದಲ್ಲಿ 27 ಪಂದ್ಯಗಳಲ್ಲಿ 1 ಶತಕ ಮತ್ತು 7 ಅರ್ಧಶತಕ ಸಹಾಯದಿಂದ 933 ರನ್ ಕಲೆಹಾಕಿದ್ದಾರೆ. ಇದಲ್ಲದೇ 32 ಟಿ20 ಪಂದ್ಯಗಳನ್ನು ಆಡಿದ್ದು 6 ಅಧರ್ಶತಕ ಬಾರಿಸಿ 796 ರನ್ಗಳನ್ನು ಗಳಿಸಿದ್ದಾರೆ. ) ಇದೀಗ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಲು ಬಯಸಿದರು ತಂಡದಲ್ಲಿ ಅವರಿಗೆ ಸ್ಥಾನ ಸಿಗುತ್ತಿಲ್ಲ.
ಕೌಂಟಿ ಕ್ರಿಕೆಟ್ನಲ್ಲಿ ಇಶಾನ್ ಹವಾಳಿ
ಐಪಿಎಲ್ ಮುಗಿದ ಮೇಲೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗುತ್ತೆ ಅಂತ ಅಂದ್ಕೊಂಡಿದ್ರು ಆದ್ರೆ ಸಿಕ್ಕಿಲ್ಲ. ಹೀಗಾಗಿ ಕೌಂಟಿ ಲೀಗ್ನಲ್ಲಿ ಕಣಕ್ಕಿಳಿದಿದ್ದಾರೆ. ಇಂಗ್ಲೆಂಡ್ನ ನಾಟಿಂಗ್ ಹ್ಯಾಮ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾರೆ. ಇದೇ ತಂಡದಲ್ಲಿ ಪಾಕಿಸ್ತಾನಿ ಸೀಮರ್ ಮೊಹಮ್ಮದ್ ಅಬ್ಬಾಸ್ ಕೂಡ ಇದ್ದಾರೆ. ಕೆಲ ಸಮಯದಿಂದ ಟೀಮ್ ಇಂಡಿಯಾದಿಂದ ದೂರವಿದ್ದ ಇಶಾನ್ ಕಿಶನ್, ತಮ್ಮ ರೆಡ್-ಬಾಲ್ ಕ್ರಿಕೆಟ್ ಕೌಶಲ್ಯವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ, ಅವರು ನಾಟಿಂಗ್ಹ್ಯಾಮ್ಶೈರ್ ಜೊತೆ ಎರಡು ಪಂದ್ಯಗಳಿಗೆ ಅಲ್ಪಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಜೂನ್ 22, 2025 ರಂದು ಯಾರ್ಕ್ಷೈರ್ ವಿರುದ್ಧದ ಪಂದ್ಯದಲ್ಲಿ ಇಶಾನ್ ನಾಟಿಂಗ್ಹ್ಯಾಮ್ಶೈರ್ ಪರ ಪಾದಾರ್ಪಣೆ ಮಾಡಿದರು. ಅದರಂತೆ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್ 87 ರನ್ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಮೊಹಮ್ಮದ್ ಅಬ್ಬಾಸ್ ಒಟ್ಟಿಗೆ ಆಡುತ್ತಿರುವುದರಿಂದ, ಅಭಿಮಾನಿಗಳು ಮೈದಾನದಲ್ಲಿ ಅವರ ಇಬ್ಬರ ನಡುವಿನ ಸಂಭಾಷಣೆ ಮತ್ತು ವಿಕೆಟ್ಗಳು ಬಿದ್ದಾಗ ಇಬ್ಬರ ಸಂಭ್ರಮ ಹೇಗಿರುತ್ತದೆ ಎಂದು ನೋಡಲು ಕುತೂಹಲದಿಂದ ಎದುರ ನೋಡುತ್ತಿದ್ದಾರೆ.

ನೋಡಿರಿ

