ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿನ ಕೊಂದ ಮಗಳು? – 40 ಲಕ್ಷ ಹಣಕ್ಕಾಗಿ ಹೀಗೆ ಮಾಡಿದ್ಲಾ?

ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಮಗಳು ಕೊಲೆಗೈದಿರುವ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡೇಪಾಳ್ಯದಲ್ಲಿ ನಡೆದಿದೆ. ನಗರದ ಬಂಡೇಪಾಳ್ಯದ ಶ್ರೀನಗರದಲ್ಲಿ ಮೃತ ಪುಷ್ಪಲತಾ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದರು. ಮದುವೆ ಬಳಿಕ ಮಗಳು ಸುಚಿತ್ರಾ ಹಾಗೂ ಆಳಿಯ ಕೂಡ ಅದೇ ಮನೆಯಲ್ಲಿ ವಾಸವಿದ್ದರು.ಫೆ.11ರ ರಾತ್ರಿ ಪುಷ್ಪಲತಾ ನಿಗೂಢವಾಗಿ ಸಾವನಪ್ಪಿದ್ದು, ಅಂತ್ಯಕ್ರಿಯೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಮಗಳು ಸುಚಿತ್ರಾಳೇ ತಾಯಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ.
ಕಳೆದ ಕೆಲ ದಿನಗಳಿಂದ ಮಂಡಿನೋವು ಎಂದು ಹಾಸಿಗೆ ಹಿಡಿದಿದ್ದ ಪುಷ್ಪಲತಾ ಅವರನ್ನು ಮಗಳೇ ಕೊಂದು ಹೃದಯಘಾತದ ಕಥೆ ಕಟ್ಟಿದ್ದಳು. ಪುಷ್ಪಲತಾ ದಿಢೀರ್ ಸಾವಿನ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಅನುಮಾನ ಮೂಡಿತ್ತು. ತಕ್ಷಣ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗಳ ಬಣ್ಣ ಬಯಲು ಮಾಡಿದ್ದಾರೆ. ಜ್ಯೋತಿಷಿಯ ಮಾತು ಕೇಳಿ ಕೊಲೆ ಮಾಡಿದೆ ಎಂದು ಸುಚಿತ್ರಾ ಹೇಳಿಕೆ ನೀಡಿದ್ದು, ಇದರ ಹಿಂದೆ ಮತ್ತೊಂದು ಸತ್ಯ ಅಡಗಿದೆ ಎಂಬುದು ತನಿಖೆಯಿಂದ ಬಯಲಾಗಿದೆ.
ಇದನ್ನೂ ಓದಿ: ತಾಯಿಗೆ ಕಣ್ಣು ಕಾಣಲ್ಲ.. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮನೆಗೆ ಆಧಾರವಾಗಿದ್ದ!– ಭೀಕರ ಅಪಘಾತಕ್ಕೆ ಗಗನ್ ಬಲಿ!
ನಿಜಕ್ಕೂ ಜ್ಯೋತಿಷಿಯೊಬ್ಬರ ಮಾತು ಕೇಳಿಯೇ ಆರೋಪಿ ಸುಚಿತ್ರಾ ತಾಯಿಯ ಕೊಲೆ ಮಾಡಿದ್ರಾ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಇದರ ನಡುವೆ ಆಸ್ತಿ ಹಾಗೂ ಹಣಕ್ಕಾಗಿ ತಾಯಿಯನ್ನು ಕೊಂದು ಬಳಿಕ ಜ್ಯೋತಿಷಿ ಹೇಳಿದ ಎಂದು ಸುಚಿತ್ರಾಳೇ ಕಥೆ ಕಟ್ಟುತ್ತಿದ್ದಾಳಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.
ಮೃತ ಪುಷ್ಪವತಿ ಪತಿ ಆಟೋ ಚಾಲಕರಾಗಿದ್ದರು. ಹಿಂದೆ ಈ ದಂಪತಿ 2 ಸೈಟ್ ಖರೀದಿಸಿದ್ದು, ಒಂದರಲ್ಲಿ ಮನೆ ಕಟ್ಟಿ ಮತ್ತೊಂದು ಸೈಟನ್ನು ಮಾರಾಟ ಮಾಡಿದ್ದರು. ಸೈಟು ಮಾರಾಟ ಮಾಡಿದ್ದ 40 ಲಕ್ಷ ಹಣವನ್ನು ಪತಿಯೇ ತಾಯಿ ಪುಷ್ಪವತಿ ಹೆಸರಲ್ಲಿ ಇಟ್ಟಿದ್ದರು. ಈ ಹಣಕ್ಕಾಗಿಯೇ ಮಗಳು ಪ್ರತಿನಿತ್ಯ ಮನೆಯಲ್ಲಿ ಜಗಳವಾಡ್ತಾ ತಾಯಿಗೆ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಸುಚಿತ್ರಾ ಕಿರುಕುಳದ ಬಗ್ಗೆ ತನ್ನ ತಮ್ಮನ ಬಳಿ ಪುಷ್ಪವತಿ ಹೇಳಿಕೊಂಡಿರುವ ವಿಚಾರ ತಿಳಿದುಬಂದಿದೆ.

ನೋಡಿರಿ

