ಜೀವನದಲ್ಲಿ ಸಂತೋಷ, ಐಶ್ವರ್ಯ, ಅದೃಷ್ಟ, ಪ್ರೀತಿ, ನೆಮ್ಮದಿ ಬೇಕಾ?- ಲಕ್ಷ್ಮೀ ದೇವಿಯನ್ನ ಶುಕ್ರವಾರ ಈ ತರ ಪೂಜಿಸಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರವು ಶುಕ್ರ ದೇವನಿಗೂ ಹಾಗೂ ಐಶ್ವರ್ಯಸೌಂದರ್ಯದ ಅಧಿದೇವತೆಯಾದ ತಾಯಿ ಲಕ್ಷ್ಮಿ ದೇವಿಗೂ ಅತ್ಯಂತ ಪ್ರಿಯವಾದ ದಿನ. ಈ ದಿನ ಶ್ರದ್ಧೆಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಸಂತೋಷ, ಐಶ್ವರ್ಯ, ಅದೃಷ್ಟ, ಪ್ರೀತಿ ಮತ್ತು ದಾಂಪತ್ಯ ಸುಖ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ವಿಶೇಷವಾಗಿ ವಿವಾಹಿತರು ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸುವುದು ಅತ್ಯಂತ ಶುಭಕರವೆಂದು ಧರ್ಮಗ್ರಂಥಗಳು ಹೇಳುತ್ತವೆ. ಹಾಗಿದ್ರೆ ಹೇಗೆ ಪೂಜೆ ಮಾಡಬೇಕು ಅನ್ನೋದ್ದನ್ನ ನೋಡೋಣ..
ಸಾಮಾನ್ಯವಾಗಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆರಿಸುವ ಅಭ್ಯಾಸವಿದೆ. ಆದರೆ ಶುಕ್ರವಾರ ರಾತ್ರಿ ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮಲಗಬೇಕು. ಸಾಧ್ಯವಿಲ್ಲದಿದ್ದರೆ, ಆ ದಿಕ್ಕಿನಲ್ಲಿ ಲೈಟ್ ಆನ್ ಇರಿಸಬಹುದು. ಇದರಿಂದ ಲಕ್ಷ್ಮಿ ದೇವಿಗೆ ಮನೆ ಪ್ರವೇಶಿಸಲು ದಾರಿ ಸಿಗುತ್ತದೆ ಹಾಗೂ ಆರ್ಥಿಕ ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ಶುಕ್ರವಾರ ರಾತ್ರಿ ನಿದ್ರೆಗೆ ಹೋಗುವ ಮೊದಲು ಲಕ್ಷ್ಮಿ ದೇವಿಯ ಚಿತ್ರ ಅಥವಾ ವಿಗ್ರಹಕ್ಕೆ ಮಲ್ಲಿಗೆ ಹೂವಿನ ಸುಗಂಧ ದ್ರವ್ಯ ಅಥವಾ ಹಾರವನ್ನು ಅರ್ಪಿಸಬೇಕು. ಇದರಿಂದ ಹಣದ ಕೊರತೆ ದೂರವಾಗುತ್ತದೆ.
ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಆಕರ್ಷಣೆ ಕಡಿಮೆಯಾಗಿದೆ ಎನ್ನುವವರು ಗುಲಾಬಿ ಸುಗಂಧವನ್ನು ಅರ್ಪಿಸುವುದು ಅತ್ಯಂತ ಲಾಭಕರವೆಂದು ಹೇಳಲಾಗುತ್ತದೆ.
ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಶುಕ್ರವಾರ ಸಂಜೆ ಪಂಚಮುಖಿ ದೀಪದಿಂದ ಲಕ್ಷ್ಮಿ ದೇವಿಗೆ ಆರತಿ ಮಾಡಬೇಕು. ಈ ಆರತಿಯಿಂದ ಮನೆಗೆ ಸಕಾರಾತ್ಮಕತೆ ಹರಿದುಬರುತ್ತದೆ ಹಾಗೂ ಸಂಪತ್ತಿನ ವೃದ್ಧಿ ಆಗುತ್ತದೆ.

ನೋಡಿರಿ

