ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲೇ ತಡವಾಗ್ತಿದೆ WPL – ಸಂಜೆ 7.30ರ ಬದಲಿಗೆ 8 ಗಂಟೆಗೆ ಟೈಂ ಬದಲಿಸಿದ್ದೇಕೆ.?

ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲೇ ತಡವಾಗ್ತಿದೆ WPL – ಸಂಜೆ 7.30ರ ಬದಲಿಗೆ 8 ಗಂಟೆಗೆ ಟೈಂ ಬದಲಿಸಿದ್ದೇಕೆ.?

ವುಮೆನ್ಸ್ ಪ್ರೀಮಿಯರ್ ಲೀಗ್ (WPL). ಭಾರೀ ಕುತೂಹಲ ಹುಟ್ಟಿಸಿರುವ ಟೂರ್ನಿ ಆರಂಭಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಇಂದು ಸಂಜೆ 7.30ಕ್ಕೆ ನವಿ ಮುಂಬೈನ ಡಿವೈ ಪಾಟೀಲ್‌ ಮೈದಾನದಲ್ಲಿ ಪಂದ್ಯ ಆರಂಭವಾಗಬೇಕಿತ್ತು. ಆದ್ರೆ ಮುಂಬೈ ಇಂಡಿಯನ್ಸ್‌ ಹಾಗೂ ಗುಜರಾತ್ ಜೈಂಟ್ಸ್‌ ನಡುವಿನ ಪಂದ್ಯವು ಕೊಂಚ ತಡವಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯವು ಅರ್ಧ ಗಂಟೆ ತಡವಾಗಿ ಅಂದರೆ ಇಂದು ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ.

ಉದ್ಘಾಟನಾ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭವು ಇಂದು ಸಂಜೆ 6.25ಕ್ಕೆ ಆರಂಭವಾಗಲಿದೆ ಎಂದು ಟೂರ್ನಿಯ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಸಮಯವನ್ನು ಪರಿಷ್ಕರಿಸಲಾಗಿದೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್‌ ಹಾಗೂ ಬೆಥ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್‌ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಟಾಸ್ ಇಂದು ಸಂಜೆ ಭಾರತೀಯ ಕಾಲಮಾನ 7.30ಕ್ಕೆ ನಡೆಯಲಿದೆ.

ಇದನ್ನೂ ಓದಿ : ಮಾಸ್ಟರ್ ಬ್ಲಾಸ್ಟರ್ 50ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ವಾಂಖೆಡೆಯಲ್ಲಿ ಕ್ರಿಕೆಟ್ ದೇವರ ಪ್ರತಿಮೆ

ಟೂರ್ನಿ ಆಯೋಜಕರು ಹೊರಡಿಸಿರುವ ಪ್ರಕಟಣೆಯಲ್ಲಿ, ಸ್ಟೇಡಿಯಂನ ಬಾಗಿಲುಗಳು ಸಂಜೆ 4 ಗಂಟೆಯಿಂದಲೇ ಓಪನ್ ಆಗಿರಲಿದ್ದು, ಪ್ರೇಕ್ಷಕರು 6.25ರಿಂದ ಆರಂಭವಾಗಲಿರುವ ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಉದ್ಘಟನಾ ಪಂದ್ಯಕ್ಕೂ ಮೊದಲು ಅದ್ಧೂರಿ ಒಪನಿಂಗ್ ಸೆರೆಮನಿ ಆಯೋಜಿಸಲಾಗಿದೆ. ಬಾಲಿವುಡ್ ನಟಿ ಕೃತಿ ಸನನ್, ಕಿಯಾರ ಅಡ್ವಾನಿ ಹೆಜ್ಜೆ ಹಾಕಲಿದ್ದಾರೆ. ಇದರ ಜೊತೆಗೆ ಕೆನಡಾದ ಖ್ಯಾತ ಸಿಂಗರ್ AP ದಿಲೋನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೈದಾನದಲ್ಲಿ WPL ಟೂರ್ನಿ ಕಣ್ತುಂಬಿಕೊಳ್ಳಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದೆ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಗೆ ಅಭಿಮಾನಿಗಳನ್ನು ಸೆಳೆಯಲು ಬಿಸಿಸಿಐ ಅತೀ ಕಡಿಮೆ ಮೊತ್ತದ ಟಿಕೆಟ್ ಘೋಷಿಸಿದೆ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಎಲ್ಲಾ 20 ಪಂದ್ಯದ ಟಿಕೆಟ್ 100 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಿಕೆಟ್ ಆನ್‌ಲೈನ್ ಬುಕಿಂಗ್ ಆರಂಭಗೊಂಡಿದೆ.

WPLನಲ್ಲಿ ಯಾವೆಲ್ಲಾ ತಂಡಗಳು ಪಾಲ್ಗೊಳ್ಳಲಿವೆ? ಯಾರು ಯಾವ ತಂಡದ ನಾಯಕಿಯರು? ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ತಂಡಗಳು                                                ನಾಯಕಿಯರು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು          ಸ್ಮೃತಿ ಮಂಧನಾ
ಮುಂಬೈ ಇಂಡಿಯನ್ಸ್‌                                   ಹರ್ಮನ್‌ಪ್ರೀತ್ ಕೌರ್
ಡೆಲ್ಲಿ ಕ್ಯಾಪಿಟಲ್ಸ್‌                                          ಮೆಗ್‌ ಲ್ಯಾನಿಂಗ್
ಯುಪಿ ವಾರಿಯರ್ಸ್‌                                       ಎಲಿಸಾ ಹೀಲಿ
ಗುಜರಾತ್ ಜೈಂಟ್ಸ್‌                                           ಬೆಥ್ ಮೂನಿ

 

ಟೂರ್ನಿ ನಿಯಮಗಳು!

ಡಬಲ್‌ ರೌಂಡ್‌ ರಾಬಿನ್‌ ಮಾದ​ರಿ​ಯಲ್ಲಿ ಲೀಗ್‌ ಹಂತ ನಡೆ​ಯ​ಲಿದ್ದು, ಪ್ರತಿ ತಂಡ ಇತರ 4 ತಂಡ​ಗಳ ವಿರುದ್ಧ ತಲಾ 2 ಬಾರಿ ಸೆಣ​ಸಲಿದೆ. ಲೀಗ್‌ ಹಂತ​ದಲ್ಲಿ ಅಗ್ರ​ಸ್ಥಾನ ಪಡೆದ ತಂಡ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸ​ಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡ​ಗಳು ಎಲಿ​ಮಿ​ನೇ​ಟ​ರ್‌​ನಲ್ಲಿ ಸೆಣ​ಸ​ಲಿ​ವೆ. ನಾಕೌಟ್ ಪಂದ್ಯಕ್ಕೂ ಮುನ್ನ ಪ್ರತಿ ತಂಡವು 8 ಪಂದ್ಯಗಳನ್ನಾಡಲಿದೆ.

suddiyaana