ಚಾಮುಂಡಿ ಬೆಟ್ಟ ಹತ್ತಿ ಫಾರಿನ್ ಗೆ? ‘ಡೆವಿಲ್’ಗೆ ಫುಲ್ ರಿಲೀಫ್?
ಡಿ ಬಾಸ್ ಫ್ಯಾನ್ಸ್ ಗೆ ಹಬ್ಬ ಫಿಕ್ಸ್?

ಚಾಮುಂಡಿ ಬೆಟ್ಟ ಹತ್ತಿ ಫಾರಿನ್ ಗೆ? ‘ಡೆವಿಲ್’ಗೆ ಫುಲ್ ರಿಲೀಫ್?ಡಿ ಬಾಸ್ ಫ್ಯಾನ್ಸ್ ಗೆ ಹಬ್ಬ ಫಿಕ್ಸ್?

ಕಳೆದ ವರ್ಷ ಇದೇ ತಿಂಗಳು ದಾಸನ ಜೀವನದ ಕರಾಳ ವರ್ಷ. ಕಂಬಿ ಹಿಂದೆ ಹೋದ ದಾಸ ಹೊರಗೆ ಬರೋದಕ್ಕೆ ತೆಗೆದುಕೊಂಡಿದ್ದು ಬರೋಬ್ಬರಿ 6 ತಿಂಗಳು. ಅಜ್ನಾತವಾಸದಲ್ಲಿದ್ದ ದರ್ಶನ್ ಜೈಲಿಂದ ಹೊರ ಬರ್ತಾರಾ ಬರಲ್ವಾ ಅನ್ನೋ ಭಯ ಫ್ಯಾನ್ಸ್ ಗೆ ಕಾಡಿತ್ತು.  ಆದರೆ ಅಭಿಮಾನಿಗಳ ಆರೈಕೆ ದೈವ ಬಲ ವಿಜಯಲಕ್ಷ್ಮಿ ಪೂಜಾ ಪಲ ದರ್ಶನ್ ಜೀವನದ ದಿಕ್ಕನ್ನೇ ಬದಲಿಸಿ ಹೊರಬರುವಂತೆ ಮಾಡಿತ್ತು. ಹೊರ ಬಂದಾಗಲೂ ಅಷ್ಟೇ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಕೊನೆಗೂ ಮತ್ತೆ ಡೆವಿಲ್ ಅಡ್ಡಾಕ್ಕೆ ಎಂಟ್ರಿ ಕೊಟ್ಟರು. ಈ ಫುಲ್ ಶೂಟಿಂಗ್‌ನಲ್ಲಿ ಡಿ ಬಾಸ್ ಈಗ ಬ್ಯುಸಿಯಾಗಿದ್ದಾರೆ.  ಫ್ಯಾನ್ಸ್ ಗೂ ಗುಡ್‌ನ್ಯೂಸ್ ಕೊಟ್ಟಿದ್ದಾರೆ.

ದರ್ಶನ್‌ಗೆ ಫಾರಿನ್ ಹೋಗೋಕೆ ಸಿಕ್ಕು ಪರ್ಮಿಷನ್

ಕಳೆದ 2 ದಿನಗಳಿಂದ ಡೆವಿಲ್ ಶೂಟಿಂಗ್ ಬೆಂಗಳೂರಿನಲ್ಲೆ ನಡೆಯುತಿದೆ. ಡೆವಿಲ್ ಸಿನಿಮಾದ ಶೂಟಿಂಗ್ ಮುಗಿದಿದ್ದು ಒಂದು ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ.   ಪ್ಯಾಲೆಸ್ ಗ್ರೌಂಡ್ ನಲ್ಲಿ ಆಕ್ಷನ್ ಸೀಕ್ವೆನ್ಸ್ ನಲ್ಲಿ ಬ್ಯುಸಿ ಯಾಗಿರುವ ದರ್ಶನ್ ಅವರು ರಾಮ್, ಲಕ್ಷ್ಮಣ್ ನಿರ್ದೇಶನದಲ್ಲಿ ಆಕ್ಷನ್ ಸೀನ್ ಮಾಡುತ್ತಿದ್ದಾರೆ. ಇನ್ನೂ ಮೂರು ದಿನಗಳು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಈಗ ದರ್ಶನ್ ಗೆ 27 ದಿನಗಳು ವಿದೇಶಕ್ಕೆ ಹೋಗಲು ಅನುಮತಿ ಸಿಕ್ಕಿದ್ದು ಜುಲೈ 9 ರ ನಂತರ ಬ್ಯಾಂಕಾಕ್ ಗೆ ತೆರಳಿ ಸಾಂಗ್ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಬ್ಯಾಂಕಾಕ್ ನಲ್ಲಿ 10 ದಿನ ಸಾಂಗ್ ಶೂಟ್ ಮುಗಿಸಲಿದೆ.  ಕೊಲೆ ಕೇಸ್ ಸಂಬಂಧ ದರ್ಶನ್ ಪಾಸ್ ಪೋರ್ಟ್ ಕೂಡ ಮುಟ್ಟುಗೋಲು ಹಾಕಿಕೊಂಡಿತ್ತು ಕೋರ್ಟ್. ಆ ನಂತ್ರ ಜಾಮೀನು ಸಿಕ್ಕು ಜೈಲಿನಿಂದ ಬಂದ ನಂತರ, ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳು ಅನುಮತಿ ಕೇಳಿದ್ದರು ನಟ ದರ್ಶನ್. ಅವರಿಗೆ ಈಗ ಅನುಮತಿ ಸಿಕ್ಕಿದೆ. ಹಾಗಾಗಿ ಸದ್ಯದಲ್ಲೇ ವಿದೇಶ ವಿಮಾನ ಏರಲು ಸಜ್ಜಾಗಿದ್ದಾರೆ.   ಜುಲೈ 28ರ ವರೆಗೂ ದರ್ಶನ್ ಅವರಿಗೆ ಕೋರ್ಟ್ ನಿಂದ ವಿದೇಶಕ್ಕೆ ಹೋಗಲು ಅನುಮತಿ ಸಿಕ್ಕಿದೆ. ಹಾಗಾಗಿ ಜುಲೈ ಮೊದಲ ವಾರದಲ್ಲೇ ಅವರು ವಿದೇಶಕ್ಕೆ ಹಾರಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಡಿನ ಚಿತ್ರೀಕರಣಕ್ಕೆ ಪ್ಲ್ಯಾನ್ ಆಗಿದ್ದು, ಟಿಕೆಟ್ ಕೂಡ ಬುಕ್ ಆಗಿದೆಯಂತೆ.

ಬೆಂಗಳೂರಿನಲ್ಲಿ ನಡೆಯುತ್ತಿದೆ ಡೆವಿಲ್ ಶೂಟಿಂಗ್ 

ಸದ್ಯ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಸಾಹಸ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಈ ವಾರದಲ್ಲಿ ಬಹುತೇಕ ಸಾಹಸ ಸನ್ನಿವೇಶಗಳ ಶೂಟಿಂಗ್ ಮುಗಿಯಲಿದೆಯಂತೆ. ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಇಡೀ ಟೀಮ್ ವಿದೇಶಕ್ಕೆ ಹಾರಲಿದೆ. ವಿದೇಶದಲ್ಲಿ ಹಾಡಿನ ಶೂಟಿಂಗ್ ಗೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕ ಪ್ರಕಾಶ್.

  ಫ್ಲೈಟ್ ಹತ್ತೋ ಮುನ್ನ ಚಾಮುಂಡಿ ದರ್ಶನ

ದರ್ಶನ್ ಫಾರಿನ್ ಫ್ಲೈಟ್ ಹತ್ತೋ ದೇವಿ ಬಲ ಪಡೆಯೋದು ಬಾಕಿ ಇದೆ. ಹೌದು ಕಳೆದ ಆಷಾದ ಮಾಸದಲ್ಲಿ ಬೆಟ್ಟದ ತಾಯಿಯ ದರ್ಶನ್ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಅದರಲ್ಲೂ ಫಾರಿನ್‌ಗೆ ಹೊರಡೋಕು ಮುನ್ನ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ. ದರ್ಶನ್ ಜೈಲಿಂದ ಹೊರಬಂದಾಗ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಉಕ್ಕಡ ಮಾರಮ್ಮನ ಸನ್ನಿಧಿಗೆ ಹೋಗಿ ದೃಷ್ಟಿ ತೆಗೆಸಿಬಂದಿದ್ದರು. ಅದಾದ ನಂತರ ಮೈಸೂರಿನಲ್ಲಿನಡೆದ ಡೆವಿಲ್ ಶೂಟಿಂಗಲ್ಲಿ ಭಾಗಿಯಾಗಿದ್ದರು ಇದಾದ ನಂತರ ಅಂದರೆ ರಾಜಸ್ಥಾನ ಹಾಗೂ ಜೈಪುರ್ ಹೋಗೋ ಮುನ್ನ ಕೇರಳದ ಮಡಾಯಿಕಾವು ಭದ್ರಕಾಳಿ ಸನ್ನಿಧಿಗೆ ಕುಟುಂಬ ಸಮೇತರಾಗಿ ಭೇಟಿ ಕೊಟ್ಟು ಬಂದಿದ್ದರು. ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುವಾಗ ಕೇರಳದ ಕೊಟ್ಟಿಯೂರ್ ಶಿವನ ದರ್ಶನ ಮಾಡಿದ್ದರು ಇದೀಗ  ದುಬೈಗೆ ಹೊರಡೋಕು ಮುನ್ನ ಚಾಮುಂಡೆ  ತಾಯಿಯ ದರ್ಶನ ಮಾಡೋಕೆ ಸನ್ನದ್ದರಾಗಿದ್ದಾರೆ.

ಡೆವಿಲ್ ಮೇಲೆ ಇದೆ ಬೆಟ್ಟದಷ್ಟು ನಿರೀಕ್ಷೆ

 ದರ್ಶನ್ ಕೊನೆಯದಾಗಿ ಕಾಣಿಸಿಕೊಂಡಿದ್ದು ಕಾಟೇರ ಸಿನಿಮಾದಲ್ಲಿ . ಕಾಟೇರಮ್ಮನ ಆಶೀರ್ವಾದ ದಾಸನಿಗೆ ಎಷ್ಟರ ಮಟ್ಟಿಗಿತ್ತು ಅನ್ನೋದು ಆ ಸಿನಿಮಾ ಎಷ್ಟು ಬೇಗ ಶೂಟಿಂಗ್ ಮುಗಿಸಿತ್ತೋ ಅಷ್ಟೇ ಬೇಗ ಬಾಕ್ಸಾಫೀಸ್ ಚಿಂದಿ ಉಡಾಯಿಸಿತ್ತು. ಇದೀಗ ದಾಸನ ಅಭಿಮಾನಿಗಳು ಈ ಸಿನಿಮಾದ ಮೇಲೆಯೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ದರ್ಶನ್ ಅವರು ಕೂಡಾ ಸಮಯ ವ್ಯರ್ಥ ಮಾಡದೆ ಫುಲ್ ಟೈಮ್ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ನಟ ದರ್ಶನ್ ಅವರು ಸಂಪೂರ್ಣವಾಗಿ ಡೆವಿಲ್ ಮೇಲೆ ಗಮನ ಹರಿಸಿದ್ದು ಬಿಡುವಿನ ವೇಳೆಯಲ್ಲಿ ಮೈಸೂರಿನ ತಮ್ಮ ಫಾರ್ಮ್ ಹೌಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಒ

Kishor KV