ಗೊಂದಲ, ಗದ್ಧಲಗಳಿಗೆ ತೆರೆ ಎಳೆದ ಸಚಿವ ಕೆ.ಜೆ ಜಾರ್ಜ್ – ಫ್ರೀ ವಿದ್ಯುತ್ ಬೇಕೆಂದರೆ ಹೀಗೆ ನೋಂದಣಿ ಮಾಡಿ!

ಗೊಂದಲ, ಗದ್ಧಲಗಳಿಗೆ ತೆರೆ ಎಳೆದ ಸಚಿವ ಕೆ.ಜೆ ಜಾರ್ಜ್ – ಫ್ರೀ ವಿದ್ಯುತ್ ಬೇಕೆಂದರೆ ಹೀಗೆ ನೋಂದಣಿ ಮಾಡಿ!

ಚುನಾವಣೆ ವೇಳೆ ನೀಡಿದ್ದ ಐದೂ ಗ್ಯಾರಂಟಿಗಳನ್ನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಆದರೆ ಗೃಹಲಕ್ಷ್ಮೀ ಯೋಜನೆ ಬಗ್ಗೆ ಜನರಿಗೆ ಇರುವ ಗೊಂದಲಗಳು ಮಾತ್ರ ಕಡಿಮೆಯಾಗಿಲ್ಲ. ಬಾಡಿಗೆದಾರರಿಗೆ 200 ಯುನಿಟ್ ವಿದ್ಯುತ್ ಫ್ರೀ ಕೊಡ್ತಾರಾ..? ಯಾವೆಲ್ಲಾ ದಾಖಲೆಗಳನ್ನ ಸಲ್ಲಿಸಬೇಕು..? ವಾಣಿಜ್ಯ ಬಳಕೆದಾರರ ಕಥೆ ಏನು..? ಹೀಗೆ ಸಾಲು ಸಾಲು ಪ್ರಶ್ನೆಗಳಿದ್ವು. ಈ ಎಲ್ಲಾ ಗೊಂದಲ, ಗದ್ಧಲಗಳಿಗೆ ಇವತ್ತು ಇಂಧನ ಸಚಿವ ಕೆ.ಜೆ ಜಾರ್ಜ್ ತೆರೆ ಎಳೆದಿದ್ದಾರೆ.

ಇದನ್ನೂ ಓದಿ : ವೃದ್ಧಾಪ್ಯ ವೇತನ ಕೇಳಿದ್ದಕ್ಕೆ ನೀವು ಬದುಕೇ ಇಲ್ಲ ಎಂದ ಅಧಿಕಾರಿಗಳು! – ಆಫೀಸರ್‌ ಎಡವಟ್ಟಿನಿಂದ ವಂಚಿತರಾದ ವೃದ್ಧ..

ಗೃಹ ಬಳಕೆ ಬಳಕೆದಾರರು ಸರಾಸರಿ ಒಂದು ವರ್ಷ ಬಳಕೆ ಮಾಡಿದ ವಿದ್ಯುತ್ ಅಂಕಿ ಅಂಶಗಳನ್ನು ಪಡೆದು ಫ್ರೀ  ವಿದ್ಯುತ್ ನೀಡಲಾಗುತ್ತದೆ ಎಂದು ಜಾರ್ಜ್ ಹೇಳಿದ್ದಾರೆ. ಜೂನ್ 15 ರಿಂದ ಯೋಜನೆಯನ್ನು ಜಾರಿ ಮಾಡುತ್ತೇವೆ. ಗ್ರಾಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ. ರಾಜ್ಯದಲ್ಲಿ ಒಟ್ಟು  2.16 ಕೋಟಿ ಗ್ರಾಹಕರು ಇದ್ದಾರೆ. ಈ ಪೈಕಿ 200 ಯುನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರು 2.14 ಕೋಟಿ ಇದ್ದಾರೆ. ಈ ಗ್ರಾಹಕರು ಸರಾಸರಿ 53 ಯುನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ.‌ ಎರಡು ಲಕ್ಷ ಜನರು 200 ಯುನಿಟ್ ಗಿಂತ ಹೆಚ್ಚು ಬಳಕೆ ಮಾಡುತ್ತಾರೆ ಎಂದು‌ ತಿಳಿಸಿದ್ದಾರೆ. ಉಚಿತ ಯೋಜನೆ ಅಡಿಯಲ್ಲಿ ಗ್ರಾಹಕರು ನಿಗದಿತ ಶುಲ್ಕವನ್ನು ಕಟ್ಟುವ ಹಾಗಿಲ್ಲ. ಅದರೆ ಸರಾಸರಿ ಬಳಕೆಗಿಂತ ಹೆಚ್ಚುವರಿ ಬಳಕೆ ಮಾಡಿದರೆ ಅಂತಹ ಗ್ರಾಹಕರು ನಿಗದಿತ ಶುಲ್ಕ ಕಟ್ಟಬೇಕಿದೆ ಎಂದು‌ ತಿಳಿಸಿದ್ದಾರೆ.

ಗೃಹಜ್ಯೋತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಜನರು ಆಧಾರ್ ಕಾರ್ಡ್ ಅನ್ನು ಆರ್‌ಆರ್ ನಂಬರ್‌ಗೆ ಲಿಂಕ್ ಮಾಡಬೇಕು. ವಾಸದ ಕರಾರುಪತ್ರ ಅಥವಾ ವೋಟರ್ ಐಡಿ ನೀಡಬೇಕು. ಬಾಡಿಗೆ ಮನೆಯವರಿಗೂ, ಸ್ವಂತ ಮನೆಯವರಿಗೂ ಇದು ಅನ್ವಯಿಸುತ್ತದೆ. ಬೆಂಗಳೂರು ಒನ್ ಸೇವಾಕೇಂದ್ರದಲ್ಲಿ ಈ ವ್ಯವಸ್ಥೆಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು. ಹಾಗಾದ್ರೆ ಫ್ರೀ ವಿದ್ಯುತ್ ಗಾಗಿ ನೋಂದಣಿ ಮಾಡಿಸುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ನೋಂದಣಿ ಮಾಡುವುದು ಹೇಗೆ?

* ಸೇವಾ ಸಿಂಧು ಪೋರ್ಟಲ್‌ನಲ್ಲಿ ಯೋಜನೆಗಾಗಿ ಅಪ್ಲೈ ಮಾಡಬೇಕು. ಅದರಲ್ಲಿ ಪ್ರತ್ಯೇಕ ವ್ಯವಸ್ಥೆಯ ಪೋರ್ಟಲ್ ಲಭ್ಯವಿರುತ್ತದೆ.

* ಆಧಾರ್ ಕಾರ್ಡ್ ಬೇಕು, ಕನೆಕ್ಷನ್ ಐಡಿ, ಸ್ವಂತ ಕನೆಕ್ಷನ್ ಇದ್ದರೆ ಹೆಚ್ಚುವರಿ ಮಾಹಿತಿ ಬೇಡ.

* ಸ್ವಂತ ಮನೆ ಇಲ್ಲದವರು ಕರಾರು ಪತ್ರ ನೀಡಬೇಕು.

* ಸ್ವಯಂ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

* ಬಾಡಿಗೆದಾರರು ಲೀಸ್ ಆಗ್ರಿಮೆಂಟ್ ವೋಟರ್ ಐಡಿ (ಅದೇ ಮನೆಯ ಅಡ್ರೆಸ್), ಕರಾರು ಪತ್ರ ಸಲ್ಲಿಸಬೇಕು.

* ಆಧಾರ್, ಆರ್‌ಆರ್, ನಂಬರ್ ಬೇಕು.

* ನೋಟರಿ, ರಿಜಿಸ್ಟರ್ ಎರಡು ಆಗುತ್ತೆ ಕರಾರು. ಅದಕ್ಕೆ ಕಂಡಿಷನ್ ಇರುವುದಿಲ್ಲ.

* ಬೋಗಸ್ ಎಂಬುದು ಗೊತ್ತಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೂ ಅವರಿಗೆ ಯೋಜನೆ ಕ್ಯಾನ್ಸಲ್ ಆಗುತ್ತದೆ.

suddiyaana