ಗುರುವೇ ನಿನ್ನಾಟ ಬಲ್ಲವರ್ ಯಾರ್ ಯಾರೋ – ಮೈಸೂರು ಹುಡುಗರ ರೀಲ್ಸ್ ಹವಾ

ಗುರುವೇ ನಿನ್ನಾಟ ಬಲ್ಲವರ್ ಯಾರ್ ಯಾರೋ – ಮೈಸೂರು ಹುಡುಗರ ರೀಲ್ಸ್ ಹವಾ

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮೈಸೂರು ಹುಡುಗರ ಗ್ಯಾಂಗ್​ವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಗುರುವೇ ನಿನ್ನಾಟ ಬಲ್ಲವರ್ ಯಾರ್ಯಾರೋ.. ಶಿವನೇ ನಿನ್ನಾಟ ಬಲ್ಲವರ್ ಯಾರ್ಯಾರೋ ಅಂತಾ ಧೂಳೆಬ್ಬಿಸಿದ್ದಾರೆ. ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಯಾರು ನೋಡಿದ್ರೂ ಓನಲ್ಲ ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲ ಅಂತಿದ್ರು. ಈ ವರ್ಷದ ಆರಂಭದಲ್ಲೇ ಗುರುವೇ ನಿನ್ನಾಟ ಬಲ್ಲವರ್ ಯಾರ್ ಯಾರೋ ಅಂತಾ ಕುಣಿಯೋಕೆ ಶುರು ಮಾಡಿದ್ದಾರೆ. ಡಿಸೆಂಬರ್ 24ರಂದು ಜೋಗಿ ಪ್ರೇಮ್ ನಿರ್ದೇಶನದ ದ್ರುವ ಸರ್ಜಾ ನಟನೆಯ ಕೆಡಿ-ದಿ ವಿಲನ್ ಸಿನಿಮಾದ ಶಿವ ಶಿವ ಹಾಡಿನ ಲಿರಿಕ್ಸ್ ರಿಲೀಸ್ ಆಗಿತ್ತು. ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ ಶಿವನೇ ನಿನ್ನಾಟ ಬಲ್ಲವರ್ ಯಾರ್ಯಾರೋ ಅನ್ನೋ ಹಾಡು ಕೇಳಿ ಸಿನಿಪ್ರಿಯರೆಲ್ಲಾ ಥ್ರಿಲ್ ಆಗಿದ್ರು. ಬಟ್ ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಲೆವೆಲ್​ನಲ್ಲೇ ಟ್ರೆಂಡ್ ಆಗ್ತಿದೆ. ಅದೂ ಕೂಡ ಮೈಸೂರು ಹುಡುಗ್ರ ಮಸ್ತ್ ಮಸ್ತ್ ಡ್ಯಾನ್ಸ್​ನಿಂದ.

ಇದನ್ನೂ ಓದಿ : ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ- ಜ.14ಕ್ಕೆ ಅಧಿಕಾರ ಸ್ವೀಕಾರ

​ಎಲ್ಲರ ಹುಬ್ಬೇರುವಂತೆ ರೀಲ್ಸ್ ಮಾಡಿರೋರ ಹೆಸ್ರು ಸಿದ್ಧಾರ್ಥ್, ಅಭಿರಥ, ಹರ್ಷ, ಮಂಜು, ಸಂಜಯ್ ಅಂತಾ. ಮೈಸೂರಿನ ಯುವಕರು. ತಾವು ಕೆಲಸ ಮಾಡೋ ಸ್ಥಳದಲ್ಲೇ ಸ್ವಲ್ಪ ಫ್ರೀ ಮಾಡ್ಕೊಂಡು ಡಿಫ್ರೆಂಟ್ ಸ್ಟೈಲಲ್ಲಿ ರೀಲ್ಸ್ ಮಾಡಿದ್ರು. ಬಳಿಕ ಇನ್ಸ್​​ಟಾಗ್ರಾಮ್​ನಲ್ಲಿ ಬಾಂಡ್ ತ್ರಿಬಲ್ ಫೋರ್ ಹೆಸರಿನ ಅಕೌಂಟ್​ನಲ್ಲಿ ಅಪ್​ಲೋಡ್ ಮಾಡಿದ್ರು. ಈ ಮೂವರ ಡ್ಯಾನ್ಸ್​ಗೆ ಸಖತ್ ರೆಸ್ಪಾನ್ಸ್ ಸಿಗೋಕೆ ಶುರುವಾಯ್ತು. ನೋಡ ನೋಡುತ್ತಲೆ ಸಾವಿರಾರು ಶೇರ್, ಲಕ್ಷಾಂತರ ಲೈಕ್ಸ್, ಮಿಲಿಯನ್​ಗಟ್ಟಲೆ ವ್ಯೂಸ್ ಪಡ್ಕೊಂಡಿದೆ.  ಕೋರಿಯೊಗ್ರಫಿ, ಕ್ಯಾಮೆರಾ ವರ್ಕ್ ಮೇನ್ ಹೈಲೆಟ್. ಹೀಗಾಗಿ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇವ್ರದ್ದೇ ಕ್ರೇಜ್. ಇವ್ರ ರೀಲ್ಸ್ ಫೇಮಸ್ ಆಗಿದೆ. ಸಿನಿಮಾ ಟೀಮ್​ವರೆಗೂ ತಲುಪಿದೆ. ನಟ ಧ್ರುವ ಸರ್ಜಾ ಹಾಗೇ ನಾಯಕಿ ರೀಷ್ಮಾ ನಾಣಯ್ಯ ಕೂಡ ಇವ್ರ ರೀಲ್ಸ್​​ಗೆ ಕಮೆಂಟ್ ಮಾಡಿದ್ದಾರೆ. ಫೆಂಟಾಸ್ಟಿಕ್.. ಥ್ಯಾಂಕ್ಯೂ.. ಜೈ ಹನುಮಾನ್ ಅಂತಾ ಧ್ರುವ ರಿಯಾಕ್ಟ್ ಮಾಡಿದ್ದಾರೆ. ಇನ್ನು ಖುದ್ದು ನಿರ್ದೇಶಕ ಪ್ರೇಮ್ ಅವ್ರೇ ಫೋನ್ ಮಾಡಿ ಹುಡುಗರ ಜೊತೆ ಮಾತ್ನಾಡಿದ್ದಾರೆ. ಒಂದು ಮೀಟ್ ಆಗೋಣ ಅಂತಾನೂ ಹೇಳಿದ್ದಾರೆ.

ಧ್ರುವ ಸರ್ಜಾ ನಟನೆಯ, ಪ್ರೇಮ್ ನಿರ್ದೇಶನದ ಕೆಡಿ ದಿ ಡೆವಿಲ್ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಕೆಡಿ ದಿ ಡೆವಿಲ್ ಸಿನಿಮಾಗೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನ‌ರ್ ಅಡಿ ಕೋನ ವೆಂಕಟನಾರಾಯಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪ್ರೇಮ್ ಮತ್ತು ಕೈಲಾಶ್ ಕೇರ್ ಕಂಠದಲ್ಲಿ ಮೂಡಿಬಂದಿರೋ ಸಾಂಗ್ ಕೇಳೋಕೂ ಕೂಡ ತುಂಬಾ ಮಜಾ ಕೊಡ್ತಿದೆ. ಜೋಗಿ ಪ್ರೇಮ್ ಸಾಂಗ್ ಅಂದ್ರೆ ಅದು ನೆಕ್ಸ್ ಟ್ ಲೆವೆಲ್ ನಲ್ಲೇ ಇರುತ್ತೆ ಬಿಡಿ. ಅಲ್ದೇ ಮೊದಲ ಬಾರಿಗೆ 260 ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತ ನೀಡಲಾಗುತ್ತಿದೆ. ಹೀಗಾಗಿ ರಿಲೀಸ್​ಗೂ ಮುನ್ನವೇ  ಈ ಸಾಂಗ್​ನಿಂದಾಗಿ ಸಿನಿಮಾ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ. ಶಿವಶಿವ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದ್ದು, ರೀಲ್ಸ್​ಗಳಲ್ಲೂ ಸದ್ದು ಮಾಡ್ತಿದೆ.

Shantha Kumari