ಗುಜರಾತ್​​ ಚುನಾವಣೆ: ಬಿಜೆಪಿ ಗೆದ್ದಿದ್ದು ಹೇಗೆ? ಕಾಂಗ್ರೆಸ್ ಸೋತಿದ್ಯಾಕೆ?

ಗುಜರಾತ್​​ ಚುನಾವಣೆ: ಬಿಜೆಪಿ ಗೆದ್ದಿದ್ದು ಹೇಗೆ? ಕಾಂಗ್ರೆಸ್ ಸೋತಿದ್ಯಾಕೆ?

ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ ಸತತ ಏಳನೇ ಬಾರಿಗೆ ಗದ್ದುಗೆ ಏರಿದೆ. ಅತೀ ಹೆಚ್ಚು ಪಡೆಯುವುದರೊಂದಿಗೆ ಗುಜರಾತ್​ ರಾಜಕೀಯ ಇತಿಹಾಸದಲ್ಲೇ ಬಿಜೆಪಿ ಹೊಸ ದಾಖಲೆ ಬರೆದಿದೆ. 1985ರಲ್ಲಿ ಮಾಧವ್‌ಸಿಂಗ್‌ ಸೋಳಂಕಿ ನೇತೃತ್ವದಲ್ಲಿ ಕಾಂಗ್ರೆಸ್‌ 149 ಸೀಟುಗಳನ್ನು ಗೆದ್ದಿದ್ದು ಇದುವರೆಗೆ ಗುಜರಾತ್‌ನಲ್ಲಿ ಯಾವುದೇ ಪಕ್ಷ ಗಳಿಸಿದ್ದ ಅತಿ ಹೆಚ್ಚು ಸ್ಥಾನಗಳಾಗಿದ್ದವು. ಈಗ ಆ ದಾಖಲೆ ಅಳಿಸಿ ಹಾಕಿರುವ ಬಿಜೆಪಿ 156 ಸ್ಥಾನಗಳನ್ನ ಗೆದ್ದುಕೊಂಡಿದೆ.  ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸೋಕೆ ಕಾರಣ ಏನು ಅನ್ನೋದು ಇಲ್ಲಿದೆ.

ಗುಜರಾತ್​​ನಲ್ಲಿ ಬಿಜೆಪಿ ಗೆಲುವಿನ ಗುಟ್ಟೇನು?

  • ಮೋದಿ ಸಮರ್ಥ ನಾಯಕತ್ವ & ಜನರಿಗೆ ಮೋದಿ ಮೇಲಿರುವ ವಿಶ್ವಾಸ
  • ಗುಜರಾತ್​ನಲ್ಲಿ ಹಿಂದುತ್ವ ಮಾಡೆಲ್‌ ರಾಜಕಾರಣದ ಬಳಕೆ
  • 31 ಸಮಾವೇಶ & ಹಲವು ರೋಡ್​ ಶೋ ನಡೆಸಿದ್ದ ಮೋದಿ
  • ಅಹ್ಮದಾಬಾದ್​ನಲ್ಲಿ ಮೋದಿ 50 ಕಿ.ಮೀ. ರೋಡ್ ​ಶೋ
  • 10 ಲಕ್ಷಕ್ಕೂ ಅಧಿಕ ಮಂದಿ ಮೋದಿ ರೋಡ್​​ ಶೋಗೆ ಸಾಕ್ಷಿ
  • ಒಂದು ತಿಂಗಳ ಕಾಲ ಗುಜರಾತ್​​ನಲ್ಲಿ ಠಿಕಾಣಿ ಹೂಡಿದ್ದ ಅಮಿತ್ ಶಾ
  • ಚುನಾವಣೆಗೂ 1 ವರ್ಷ  ಮೊದಲು ಆಡಳಿತ ವಿರೋಧಿ ಅಲೆ ಹೆಚ್ಚಾಗಿತ್ತು
  • ಸಿಎಂ ಸ್ಥಾನದಿಂದ ವಿಜಯ್​ ರೂಪಾಣಿಯನ್ನು ಕೆಳಗಿಳಿಸಿದ್ದ ಹೈಕಮಾಂಡ್
  • ಭೂಪೇಂದ್ರ ಪಟೇಲ್​ಗೆ ಸಿಎಂ ಪಟ್ಟ ಕಟ್ಟಿದ್ದ ಬಿಜೆಪಿ ಹೈಕಮಾಂಡ್‌
  • ಗುಜರಾತ್ ಸಚಿವ ಸಂಪುಟವನ್ನೇ ಬದಲಾಯಿಸಿದ್ದ ಮೋದಿ-ಅಮಿತ್‌ ಶಾ

ಹೀಗೆ ಬಿಜೆಪಿ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಎದುರಾಳಿಗಳನ್ನು  ಕಟ್ಟಿಹಾಕಿ, ಗೆಲುವು ತನ್ನದೇ ಎಂಬ ರೀತಿಯಲ್ಲಿ ಆರಂಭದ ದಿನದಿಂದಲೂ ವಿಜಯದ ಕಡೆಗೆ ಬಿಜೆಪಿ ಹೆಜ್ಜೆ ಹಾಕಿತ್ತು. ಮತ್ತೊಂದೆಡೆ ಕಾಂಗ್ರೆಸ್‌ಗೆ ತನ್ನ ವೋಟ್‌ಬ್ಯಾಂಕ್‌ ಉಳಿಸಿಕೊಳ್ಳುವುದೇ ಸವಾಲಾಗಿತ್ತು. ಗುಜರಾತ್​ನಲ್ಲಿ ಕಾಂಗ್ರೆಸ್ ಸೋಲಿಗೆ ಹಲವು ಕಾರಣಗಳಿವೆ.

ಗುಜರಾತ್​ನಲ್ಲಿ ಕಾಂಗ್ರೆಸ್ ಸೋತಿದ್ದು ಹೇಗೆ? :

  • ಸಂಘಟಿತವಾಗಿ ಕೆಲಸ ಮಾಡಲು ಮುಂದಾಗದ ಕಾಂಗ್ರೆಸ್‌ ನಾಯಕರು
  • ಸರ್ಕಾರದ ಆಡಳಿತ ವಿರೋಧಿ ಅಭಿಪ್ರಾಯ ಸದ್ಬಳಕೆಗೆ ವಿಫಲ
  • ಚುನಾವಣೆಗೆ ಆರಂಭದಿಂದಲೂ ಉತ್ಸಾಹ ತೋರದ ‘ಕೈ’ ನಾಯಕರು
  • ಆಪ್‌ ಎಂಟ್ರಿಯಿಂದ ಕಾಂಗ್ರೆಸ್‌ ಮತಬ್ಯಾಂಕ್‌ ಕೂಡ ಛಿದ್ರ
  • 2017ರಲ್ಲಿ ನೇತೃತ್ವವಹಿಸಿದ್ದ ರಾಹುಲ್‌.. 2022ರಲ್ಲಿ ಮಾಯ

ಹೀಗೆ ಕಾಂಗ್ರೆಸ್‌ ಸೋಲನ್ನು ಸ್ವೀಕರಿಸಲು ಸ್ಜಜಾಗಿಯೇ ಈ ಬಾರಿಯ ಚುನಾವಣೆ ಎದುರಿಸಿತ್ತು. ಮೊದಲೇ ಹೇಳಿದಂತೆ ಕಾಂಗ್ರೆಸ್‌ಗೆ ಸವಾಲಾಗಿದ್ದ ಇದ್ದದ್ದು ಆಪ್‌ ತನ್ನ ಮತಬ್ಯಾಂಕ್‌ಗೆ ಕೈ ಹಾಕುತ್ತದೆ ಎಂಬ ವಿಷಯವಷ್ಟೇ ಹೊರತು, ಬಿಜೆಪಿಯನ್ನು ಸೋಲಿಸುವುದು ಹೇಗೆ ಎಂಬ ಯೋಚನೆಯಿರಲಿಲ್ಲ. ಅತ್ತ ಆಪ್ ಕೂಡ ಬಿಜೆಪಿ ವಿರೋಧಿ ಮತಗಳಿಗೆ ಬಾಸ್‌ ರೀತಿಯಲ್ಲಿದ್ದ ಕಾಂಗ್ರೆಸ್‌ನ ಮತಗಳನ್ನು ಬುಟ್ಟಿಗೆ   ಹಾಕಿಕೊಳ್ಳುವುಲ್ಲಿ ಯಶಸ್ವಿಯಾಗಿತ್ತು.

2017ರ ಚುನಾವಣೆಯಲ್ಲಿ ಶೇಕಡಾ 49.1 ಮತಗಳಿಸಿದ್ದ ಬಿಜೆಪಿ, ಈ ಬಾರಿ ಗುಜರಾತ್​​ನಲ್ಲಿ ಶೇಕಡಾ 53ರಷ್ಟು ಮತಗಳಿಸಿದೆ. ಕಳೆದ ಬಾರಿ ಶೇಕಡಾ 41.4ರಷ್ಟು ಮತಗಳಿಸಿದ್ದ ಕಾಂಗ್ರೆಸ್ ಈ ಬಾರಿ  ಕೇವಲ ಶೇಕಡಾ 27ರಷ್ಟು ಮಾತ್ರ ಮತಗಳಿಸಿದೆ. ಜೊತೆಗೆ ಮುಸ್ಲಿಮರು ಹೆಚ್ಚಾಗಿರೋ 17 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

suddiyaana