ಗಿಲ್, ಪಂತ್ ಔಟ್ – ಎರಡನೇ ದಿನವೂ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದ ಬ್ಯಾಟಿಂಗ್‌ನಲ್ಲಿ ಭಾರತದ ನಾಯಕ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡಿದೆ. ಎರಡನೇ ದಿನದಾಟದ ಆರಂಭದಲ್ಲಿ ಗಿಲ್ ಮತ್ತು ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಇದನ್ನೂ ಓದಿ:ಔಟಾಗಿದ್ದು ಗೊತ್ತಾದರೂ ಕೆ.ಎಲ್ ರಾಹುಲ್ ಡ್ರಾಮಾ – ಔಟ್ ಕೊಡದ ಅಂಪೈರ್, ಕನ್ನಡಿಗ ಬಚಾವ್..!
ಮುಲ್ಲನ್‌ಪುರದಲ್ಲಿ ಭಾರತದ ಬ್ಯಾಟಿಂಗ್ ಪ್ರಾಬಲ್ಯ ಮುಂದುವರೆದಿದೆ. ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಭಾರತ, ಮೊದಲು ಶುಭ್ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ಮೊದಲ ದಿನ ಶತಕ ಸಿಡಿಸಿದ ಶುಭ್ಮನ್ ಗಿಲ್, ಎರಡನೇ ದಿನದಾಟದಲ್ಲಿ 126 ರನ್ ಗಳಿಸಿ ಔಟಾದರು. ಇನ್ನು ಶತಕ ಸಿಡಿಸುವ ಭರವಸೆ ಮೂಡಿಸಿದ್ದ ರಿಷಭ್ ಪಂತ್ ಕೂಡಾ 81 ರನ್ ಗಳಿಸಿ ಔಟಾದರು. ನಂತರ ಮತ್ತೊಬ್ಬ ವಿಕೆಟ್ ಕೀಪರ್ ಧ್ರುವ ಜ್ಯುರೇಲ್ 19 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ ಮತ್ತು ಮಾನವ್ ಸುತಾರ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಕೆ.ಎಲ್ ರಾಹುಲ್ ಸೆಂಚುರಿ ಗಳಿಸಿದ್ದರ.ು ಜೊತೆಗೆ ಸಾಯಿ ಸುದರ್ಶನ್ ಕೂಡಾ 81 ರನ್ ಗಳಿಸಿ ಔಟಾಗಿದ್ದರು.

ನೋಡಿರಿ

