ಗಂಭೀರ್ ಮ್ಯೂಸಿಕಲ್ ಚೇರ್ – KINGಗೆ ಮಾಡ್ತಿರೋ ಅವಮಾನನಾ?
ಇಂಥಾ ಪ್ರಯೋಗಕ್ಕೆ ಕೊನೆ ಎಂದು?

ಗಂಭೀರ್ ಮ್ಯೂಸಿಕಲ್ ಚೇರ್ – KINGಗೆ ಮಾಡ್ತಿರೋ ಅವಮಾನನಾ?ಇಂಥಾ ಪ್ರಯೋಗಕ್ಕೆ ಕೊನೆ ಎಂದು?

ಸ್ಕೂಲ್​ಗಳಲ್ಲೋ ಇಲ್ಲ ಕಾಂಪಿಟೇಷನ್​ಗಳಲ್ಲೋ ಮ್ಯೂಸಿಕಲ್ ಚೇರ್ ಆಡ್ಸೋದನ್ನ ನೋಡಿದ್ದೀವಿ. ಆಡಿದ್ದೀವಿ. ಬಟ್ ಟೀಂ ಇಂಡಿಯಾ ಹೆಡ್​ಕೋಚ್ ಗೌತಮ್ ಗಂಭೀರ್ ಮೈದಾನದಲ್ಲೇ ಮ್ಯೂಜಿಕಲ್ ಚೇರ್ ಆಡಿಸ್ತಿದ್ದಾರೆ. ಅವ್ರ್ ಬಿಟ್ ಇವ್ರ್ ಬಿಟ್ ಅವರ್ಯಾರು ಅಂತಾ ಎಕ್ಸ್​ಪೆರಿಮೆಂಟ್ಸ್ ನಡೀತಾನೇ ಇದೆ. ಬ್ಯಾಟಿಂಗ್ ಆರ್ಡರ್ ಅಂತೂ ಎಕ್ಕುಟ್ ಹೋಗಿದೆ. ಅದ್ರಲ್ಲೂ ನಂಬರ್ 3ಗೆ ಇರೋ ಮರ್ಯಾದೆಗೆ ತೆಗೆದುಬಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಕಟ್ಟಿದ್ದ ಸಾಮ್ರಾಜ್ಯವನ್ನ ದಿನೇದಿನೇ ಕೆಡುವುತ್ತಲೇ ಇದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ-20ಐ ಮ್ಯಾಚಲ್ಲೂ ಅದೇ ಆಗಿದೆ.

ಇದನ್ನೂ ಓದಿ : 7 ವೈಡ್ ಹಾಕಿದ ಅರ್ಶ್‌ದೀಪ್ ಮೇಲೆ ಕೋಚ್ ಸಿಟ್ಟು – ಗಂಭೀರ್ ಬೈಗುಳಕ್ಕೆ ಬೌಲರ್ ಥಂಡಾ

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಎರಡನೇ ಟಿ-20ಐ ಮ್ಯಾಚ್​ನಲ್ಲಿ ಭಾರತದ ಬ್ಯಾಟಿಂಗ್ ಶುರುವಾಗ್ತಿದ್ದಂತೆ ಮ್ಯಾಚ್ ನೋಡ್ತಿದ್ದ ಕೋಟ್ಯಂತರ ಫ್ಯಾನ್ಸ್ ಫುಲ್ ಶಾಕ್ ಆಗಿದ್ರು. ಒಂದ್ಕಡೆ ಫಸ್ಟ್ ಓವರ್​ನಲ್ಲೇ ಶುಭ್​ಮನ್ ಗಿಲ್ ಡಕ್​ಔಟ್. ಏನ್ ಗುರು ಇವನದ್ದು ರೋದ್ನೆ ಮೊದ್ಲಿ ತಂಡದಿಂದ ಹೊರಗಾಕ್ರಪ್ಪ ಅಂತಾ ಗೊಣಗಾಡ್ತಿದ್ರು. ಅಷ್ಟ್ರಲ್ಲೆ ಇನ್ನೊಂದ್ಕಡೆ ಬ್ಯಾಟ್ ಹಿಡ್ಕೊಂಡು ಪ್ಯಾಡ್ ಕಟ್ಕೊಂಡ್ ಅಕ್ಷರ್ ಪಟೇಲ್​ ಸೀದಾ ಕ್ರೀಸ್​ಗೆ ಬಂದ್ರು. ಅರೆ ಅಕ್ಷರ್​ಪಟೇಲ್ ಒನ್ ಡೌನ್ ಬ್ಯಾಟರ್ರಾ ಅಂತಾ ಕಣ್ಣರಳಿಸಿ ನೋಡ್ತಿದ್ರು. ಯಾಕಂದ್ರೆ ಗೌತಮ್ ಗಂಭೀರ್ ಎಕ್ಸ್​ಪೆರಿಮೆಂಟ್ ಆ ಲೆವೆಲ್​ಗಿತ್ತು. ಯೆಸ್ ನಂಬರ್ 3 ಸ್ಲಾಟ್​ ಅಂದ್ರೆ ಓಪನರ್ಸ್​ಗಿಂತ ಜಾಸ್ತಿ ಜವಾಬ್ದಾರಿ ಇರೋ ಸ್ಲಾಟ್. ದಿಗ್ಗಜ ಕ್ರಿಕೆಟಿಗರು ಈ ನಂಬರ್​ನಲ್ಲಿ ಜಗತ್ತನ್ನೇ ಆಳಿದ್ದಾರೆ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್​ರಂಥ ಲೆಜೆಂಡರ್ಸ್ ಇತಿಹಾಸ ಸೃಷ್ಟಿಸಿದ್ದಾರೆ. ಆದ್ರೆ ಇದನ್ನೆಲ್ಲಾ ಹಾಳು ಮಾಡ್ತಿರೋದು ಗೌತಮ್ ಗಂಭೀರ್ ಪ್ರಯೋಗ.

ಟಿ-20ಐನಲ್ಲೂ ನಿಲ್ಲದ ನಂಬರ್ 3 ಸ್ಲಾಟ್ ಕಣ್ಣಾಮುಚ್ಚಾಲೆ!

ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ಯಾವ ಸ್ಲಾಟ್​ನಲ್ಲೂ ಇಂಥದ್ದೇ ಬ್ಯಾಟರ್ ಅಂತಾ ಫಿಕ್ಸ್ ಇಲ್ಲ. ಅದ್ರಲ್ಲೂ ನಂಬರ್ 3 ಅಂತೂ ಮ್ಯೂಸಿಕಲ್ ಚೇರ್ ಆಗ್ಬಿಟ್ಟಿದೆ. ಕಳೆದೊಂದು ವರ್ಷದಲ್ಲಿ ಆರರಿಂದ ಏಳು ಬ್ಯಾಟ್ಸ್​ಮನ್ ಗಳು ಬಂದು ಹೋಗಿದ್ದಾರೆ. ಬಟ್ ಯಾರೂ ಸೆಟಲ್ ಆಗಿಲ್ಲ. ಌಕ್ಚುಲಿ ಟಿ-20ಐನಲ್ಲಿ ಪ್ರಸ್ತುತ ನಂಬರ್ 3ನಲ್ಲಿ ಬ್ಯಾಟ್ ಬೀಸೋದು ಸೂರ್ಯಕುಮಾರ್ ಯಾದವ್. ಹೀಗಿದ್ರೂ ಗಂಭೀರ್ ಬೇರೆ ಬೇರೆ ಬ್ಯಾಟರ್​ಗಳನ್ನ ಕಳಿಸ್ತಾನೇ ಇದ್ದಾರೆ. ಏಷ್ಯಾಕಪ್, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೇ ಹಲವು ಬ್ಯಾಟರ್ಸ್ ಚೇಂಜ್ ಆಗಿದ್ದಾರೆ.  ಏಷ್ಯಾಕಪ್​ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್, ಮೂರನೇ ಮ್ಯಾಚಲ್ಲಿ ಸಂಜು ಸ್ಯಾಮ್ಸನ್, ಐದನೇ ಮ್ಯಾಚಲ್ಲಿ ಶಿವಂ ದುಬೆ, ಫೈನಲ್​ನಲ್ಲಿ ಮತ್ತೆ ಸೂರ್ಯ, ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಮ್ಯಾಚಲ್ಲಿ ಸೂರ್ಯಕುಮಾರ್, ಎರಡನೇ ಪಂದ್ಯಕ್ಕೆ ಸಂಜು, ಮೂರನೇ ಮ್ಯಾಚಲ್ಲಿ ಮತ್ತೆ ಸೂರ್ಯ, ಆ ಬಳಿಕ ಮತ್ತೆ ಶಿವಂ ದುಬೆ ಹೀಗೆ ಒಬ್ಬೊಬ್ರನ್ನೇ ಎಕ್ಸ್​ಪೆರಿಮೆಂಟ್ ಥರ ಬಳಸಿಕೊಳ್ತಾನೇ ಇದ್ದಾರೆ. ಬಟ್ ಯಾರೊಬ್ರಿಂದಲೂ ನಿರೀಕ್ಷಿತ ರನ್ಸ್ ಬಂದೇ ಇಲ್ಲ. ಈಗ ಎರಡನೇ ಮ್ಯಾಚಲ್ಲಿ ಅಕ್ಷರ್​ ಪಟೇಲ್​ಗೆ ನಂಬರ್ 3ನಲ್ಲಿ  ಚಾನ್ಸ್ ಕೊಟ್ರು. ಬಟ್ ಪಟೇಲ್ ಕೂಡ ಬ್ಯಾಟ್ ಬೀಸೋಕೆ ತುಂಬಾನೇ ಸ್ಟ್ರಗಲ್ ಕಾಣ್ತಿತ್ತು. ನಿಜ ಏನಂದ್ರೆ ನಂಬರ್ 3ನಲ್ಲಿ ವಿರಾಟ್ ಕೊಹ್ಲಿ ಕಿಂಗ್ ಆಗಿ ಮೆರೆದಿದ್ದಾರೆ. ಆದ್ರೀಗ ಅದೇ ನಂಬರ್​ಗೆ ಗಂಭೀರ್ ಅವಮಾನ ಮಾಡ್ತಿದ್ದಾರೆ. ನಂಬರ್ 3ನಲ್ಲಿ ಕೊಹ್ಲಿ ಟಿ-20ಐನಲ್ಲಿ 84 ಇನ್ನಿಂಗ್ಸ್ ಆಡಿದ್ದು 54ರ ಆವರೇಜ್​ನಲ್ಲಿ 4320ರನ್ಸ್ ಕಲೆ ಹಾಕಿದ್ದಾರೆ. ಏಕದಿನ ಮಾದರಿಯಲ್ಲಿ 61ರ ಸರಾಸರಿಯಲ್ಲಿ ರನ್ಸ್ ಕಲೆ ಹಾಕಿದ್ದಾರೆ. ದಶಕದವರೆಗೆ ನಂಬರ್ 3 ಮಹಾರಾಜನಾಗಿ ಮರೆದಿರೋ ಕಿಂಗ್ ಸ್ಥಾನ ಈಗ ಮ್ಯೂಸಿಕಲ್ ಚೇರ್ ಆಗಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಇಂಥಾ ಪ್ರಯೋಗಕ್ಕೆ ಕೊನೆ ಯಾವಾಗ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari