ಪಾಂಡ್ಯ ಸಿಡಿಸಿದ ಸಿಕ್ಸ್‌ನಿಂದ ಕ್ಯಾಮರಾಮ್ಯಾನ್‌ಗೆ ಗಾಯ – ಓಡಿ ಹೋಗಿ ತಬ್ಬಿ ಕ್ಷಮೆ ಕೇಳಿದ ಹಾರ್ದಿಕ್‌

ಪಾಂಡ್ಯ ಸಿಡಿಸಿದ ಸಿಕ್ಸ್‌ನಿಂದ ಕ್ಯಾಮರಾಮ್ಯಾನ್‌ಗೆ ಗಾಯ  – ಓಡಿ ಹೋಗಿ ತಬ್ಬಿ ಕ್ಷಮೆ ಕೇಳಿದ ಹಾರ್ದಿಕ್‌

ಟಿ20 ಪಂದ್ಯದಲ್ಲಿ ವೇಗವಾಗಿ ರನ್ ಗಳಿಸುತ್ತಿಲ್ಲ ಎನ್ನುವ ತನ್ನ ಮೇಲೆ ಬಂದಿದ್ದ ಆಪಾದನೆಗೆ ಪಾಂಡ್ಯ, ಭರ್ಜರಿ ಉತ್ತರವನ್ನು ಕೊಡುವುದರ ಜೊತೆ ಮಾನವೀಯತೆ ಗುಣವನ್ನ ತೋರಿಸಿದ್ದಾರೆ. ನಾಯಕ ಸೂರ್ಯ ಕುಮಾರ್ ಯಾದವ್ ಬೇಗನೇ ಔಟ್ ಆದ ನಂತರ ಬಂದ ಪಾಂಡ್ಯ, ತಿಲಕ್ ವರ್ಮ ಜೊತೆ ಇನ್ನಿಂಗ್ಸ್ ಕಟ್ಟಿದರು. 25 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 63 ರನ್ ಬಾರಿಸಿದರು. ಈ ಮ್ಯಾಚ್​ನಲ್ಲಿ ಹಾರ್ದಿಕ್ ಪಾಂಡ್ಯ  ಸಿಡಿಸಿದ ಸಿಕ್ಸ್ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಆ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಇದನ್ನೂ ಓದಿ: ಪವರ್‌ಫುಲ್ ಪಾಂಡ್ಯ ವಿಶ್ವದಾಖಲೆ – 2000 ರನ್, 100 ವಿಕೆಟ್‌ಗಳ ಸರದಾರ ಹಾರ್ದಿಕ್ ಪಾಂಡ್ಯ

ಪಾಂಡ್ಯಾ ಸಿಡಿಸಿದ ಒಂದು ಸಿಕ್ಸ್  ಬೌಂಡರಿ ಲೈನ್ ಪಕ್ಕ ಪಂದ್ಯವನ್ನು ಕವರ್ ಮಾಡುತ್ತಿದ್ದ ಕ್ಯಾಮರಾಮ್ಯಾನ್ ಮೇಲೆ ಬಿದ್ದಿದೆ. ಕ್ಯಾಮರಾಮ್ಯಾನ್  ಭುಜಕ್ಕೆ ಬಾಲ್ ಬಡಿದಿದ್ದರಿಂದ ಪಾಂಡ್ಯ  ಕ್ರೀಸ್ ನಿಂದಲೇ ಆತನ ಬಗ್ಗೆ ವಿಚಾರಿಸಿಕೊಂಡು, ಇನ್ನಿಂಗ್ಸ್ ಮುಂದುವರಿಸಿದರು.ನಂತ್ರ ಔಟಾದ ಕೂಡಲೇ ಆ ಕ್ಯಾಮರಾಮ್ಯಾನ್ ಬಳಿ, ಐಸ್ ಪ್ಯಾಕ್ ತೆಗೆದುಕೊಂಡು ಹೋದ ಪಾಂಡ್ಯ, ಆತನ ಭುಜದ ಮೇಲೆ ಐಸ್ ಪ್ಯಾಕ್ ಇಟ್ಟು ಕ್ಯಾಮರಾಮ್ಯಾನ್  ಯೋಗ ಕ್ಷೇಮವನ್ನು ವಿಚಾರಿಸಿಕೊಂಡರು. ಅಲ್ಲದೇ, ಆತನನ್ನು ಅಪ್ಪಿಕೊಂಡರು ಮತ್ತು ಸೂಕ್ತ ಚಿಕಿತ್ಸೆ ನೀಡುವಂತೆ, ಮೈದಾನದ ಸಿಬ್ಬಂದಿಗೆ ಸೂಚಿಸಿದರು. ಪಾಂಡ್ಯರ ಈ ಕೆಲಸಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಮ್ಯಾಚ್​ನಲ್ಲಿ 25 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 63 ರನ್ ಬಾರಿಸಿದರು. ಈ 63 ರನ್​ಗಳ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೇವಲ 201 ರನ್ ಗಳಿಸಿ 30 ರನ್ ಗಳಿಂದ ಸೋಲೊಪ್ಪಿಕೊಂಡಿದೆ.

Kishor KV