ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಅರ್ಧ ವೇತನದ ಆಫರ್ – ವಿಪ್ರೋ ನಿರ್ಧಾರದ ಹಿಂದಿನ ಉದ್ದೇಶವೇನು!?
ವಿಶ್ವದಾದ್ಯಂತ ದೈತ್ಯ ಐಟಿ ಕಂಪನಿಗಳು ನಾನಾ ಕಾರಣ ನೀಡಿ ತಮ್ಮ ಸಿಬ್ಬಂದಿಯನ್ನ ಸಾಮೂಹಿಕವಾಗಿ ವಜಾ ಮಾಡುತ್ತಿವೆ. ಇಂಥಾ ಟೈಮಲ್ಲೇ ಭಾರತದ ಐಟಿ ಪ್ರಮುಖ ಸಂಸ್ಥೆ ವಿಪ್ರೋಗೆ ಸೇರಲು ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಶಾಕ್ ಕೊಟ್ಟಿದೆ. ವಾರ್ಷಿಕ ವೇತನದ ಪ್ಯಾಕೇಜ್ ಅನ್ನು ಅರ್ಧಕ್ಕೆ ಇಳಿಸಿದೆ.
ವಿಪ್ರೋ ಕಂಪನಿ ಈ ಹಿಂದೆ ಕೆಲಸಕ್ಕೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ವಾರ್ಷಿಕ 6.5 ಲಕ್ಷ ರೂ. ಪ್ಯಾಕೇಜ್ ನೀಡಿತ್ತು. ಆದ್ರೆ ಈಗ ಏಕಾಏಕಿ ವಾರ್ಷಿಕ 3.5 ಲಕ್ಷ ರೂ. ಆಫರ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ ಎಂದು ಕೇಳಿದೆ. ಅನಿಶ್ಚಿತ ಬೇಡಿಕೆಯ ವಾತಾವರಣ, ಮಾರ್ಜಿನ್ ಒತ್ತಡಗಳು ಮತ್ತು ಹಿಂಜರಿತದ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇ-ಮೇಲ್ ಮಾಡಿದೆ.
ಇದನ್ನೂ ಓದಿ : ಟರ್ಕಿ ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪ- ಮೂವರು ಬಲಿ, 200ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಈಗಷ್ಟೇ ಪದವಿ ಮುಗಿಸಿರುವವರಿಗೆ ಕಂಪನಿಯು ಎರಡು ನೇಮಕಾತಿ ಆಫರ್ ನೀಡಿದೆ. ಎಲೈಟ್ ಮತ್ತು ಟರ್ಬೊ. ಎಲೈಟ್ ಅಭ್ಯರ್ಥಿಗಳಿಗೆ ವಾರ್ಷಿಕ ₹3.5 ಲಕ್ಷ ರೂ ಪ್ಯಾಕೇಜ್ ನೀಡಲಾಗುತ್ತದೆ. ಹಾಗೇ ಟರ್ಬೊ ಅಭ್ಯರ್ಥಿಗಳಿಗೆ ವಾರ್ಷಿಕ ₹6.5 ಲಕ್ಷ ರೂ ನೀಡಲಾಗುತ್ತದೆ. ಎಲೈಟ್ ಅಭ್ಯರ್ಥಿಗಳು ಟರ್ಬೊಗೆ ಅರ್ಹತೆ ಪಡೆಯಬೇಕಾದರೆ 6 ತಿಂಗಳು ತರಬೇತಿ ಪಡೆದು ತಮ್ಮ ಕೌಶಲ್ಯಗಳ ಮೂಲಕ ಹೋಗಬೇಕು ಎಂದು ತಿಳಿಸಿದೆ.
ಕೆಲಸಕ್ಕಾಗಿ ವಿಪ್ರೋಗೆ ಅರ್ಜಿ ಸಲ್ಲಿಸಿದ್ದವರು ಕಂಪನಿಯ ಇ-ಮೇಲ್ ನೋಡಿ ಆಕ್ರೋಶಗೊಂಡಿದ್ದಾರೆ. ಇಲ್ಲಿಯವರೆಗೆ ಕಾಯಿಸಿ ಅರ್ಧವೇತನದ ಆಫರ್ ಕೊಟ್ಟರೆ ಏನು ಪ್ರಯೋಜನ ಎಂದು ಕಿಡಿ ಕಾರಿದ್ದಾರೆ.