ಕೀರ್ತಿ ಪಾತ್ರಕ್ಕೆ ಬೇರೆ ನಟಿ ಎಂಟ್ರಿ! – ಲಕ್ಷ್ಮೀ ಬಾರಮ್ಮಗೆ ತನ್ವಿರಾವ್‌ ಗುಡ್‌ಬೈ?
ಲಕ್ಷ್ಮೀ ಕತೆನೂ ಮುಗಿಸಿದ್ಲಾ ಕಾವೇರಿ?

ಕೀರ್ತಿ ಪಾತ್ರಕ್ಕೆ ಬೇರೆ ನಟಿ ಎಂಟ್ರಿ! – ಲಕ್ಷ್ಮೀ ಬಾರಮ್ಮಗೆ ತನ್ವಿರಾವ್‌ ಗುಡ್‌ಬೈ?ಲಕ್ಷ್ಮೀ ಕತೆನೂ ಮುಗಿಸಿದ್ಲಾ ಕಾವೇರಿ?

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ಘಟ್ಟ ತಲುಪಿದೆ. ಸೀರಿಯಲ್‌ ಕತೆ ಈಗ ಭಾರಿ ಕುತೂಹಲ ಮೂಡಿಸಿದೆ. ಕಾವೇರಿ ತಾನು ಸೇಫ್‌ ಆಗಲು ಏನು ಬೇಕಾದ್ರೂ ಮಾಡ್ತಾಳೆ ಅಂತಾ ಫ್ರೂವ್‌ ಆಗಿದೆ.. ಕೀರ್ತಿ ಬಳಿಕ ಲಕ್ಷ್ಮೀಯನ್ನ ಕೂಡ ಮುಗಿಸಲು ಮುಂದಾಗಿದ್ದಾಳೆ. ಈಗ ಲಕ್ಷ್ಮೀಯನ್ನ ಮುಸುಕುಧಾರಿಗಳು ಎಳೆದುಕೊಂಡು ಹೋಗಿದ್ದಾರೆ.. ಕೀರ್ತಿ ಬಳಿಕ ಲಕ್ಷ್ಮೀ ಕತೆ ಕೂಡ ಮುಗಿತು ಅಂತಾ ಅಂದುಕೊಳ್ಳುತ್ತಿರುವಾಗಲೇ ಸೀರಿಯಲ್‌ ಡೈರೆಕ್ಟರ್‌ ದೊಡ್ಡ ಟ್ವಿಸ್ಟ್‌ ನೀಡಿದ್ದಾರೆ. ಸೀರಿಯಲ್‌ ಗೆ ಹೊಸ ಪಾತ್ರದ ಎಂಟ್ರಿ ಆಗಿದೆ.. ಅಷ್ಟಕ್ಕೂ ಆ ಪಾತ್ರ ಯಾವುದು? ಸತ್ತಿದ್ದಾಳೆ ಅಂತಾ ಅಂದ್ಕೊಂಡಿರುವ ಕೀರ್ತಿ ಬಂದಿದ್ದಾ? ಹಾಗೇ ತನ್ವಿ ರಾವ್‌ ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಭವಾನಿ ರೇವಣ್ಣಗೆ ಬಿಗ್‌ ರಿಲೀಫ್‌ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌!

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸಾಕಷ್ಟು ಟ್ವಿಸ್ಟ್‌ ನಿಂದ ಕೂಡಿದೆ. ವಿಲನ್‌ ಕಾವೇರಿಯ ಆಟ ಒಂದಾ.. ಎರಡಾ.. ಮಗನಿಗೋಸ್ಕರ ಏನ್‌ ಬೇಕಾದ್ರು ಮಾಡಲು ಕಾವೇರಿ ಹೇಸೋದಿಲ್ಲ.. ಇದು ವೀಕ್ಷಕರಿಗೆ ಸಿಟ್ಟು ತರಿಸಿದೆ.. ಯಾಕಂದ್ರೆ, ಪ್ರತಿ ಸಲಾನೂ ಸುಳ್ಳು, ಮೋಸಕ್ಕೆ ಜಯ ಸಿಗೋದನ್ನ ಯಾರು ಇಷ್ಟಪಡ್ತಾರೆ ಅಲ್ವಾ? ಲಕ್ಷ್ಮೀ ಬಾರಮ್ಮ ಸೀರಿಯಲ್‌ ನಲ್ಲೂ  ಆಗ್ತಿರೋದು ಅದೇ. ಎಲ್ಲಾ ಸಲವೂ ಕಾವೇರಿಗೆ ಗೆಲುವಾಗ್ತಿದೆ.

ಹೌದು, ಕಾವೇರಿ ತನ್ನ ಮಗನನ್ನು ತನ್ನ ಬಳಿಯೇ ಉಳಿಸಿಕೊಳ್ಳಲು, ಮೊದಲಿಗೆ ವೈಷ್ಣವ್ -ಕೀರ್ತಿ ಪ್ರೀತಿಯನ್ನು ಬಲಿ ಕೊಟ್ಲು.. ಅದಾದ್ಮೇಲೆ ಲಕ್ಷ್ಮೀಯನ್ನ ಮುಗಿಸೋ ಪ್ಲ್ಯಾನ್, ಇದಾದ ನಂತ್ರ ತನ್ನ ದಾರಿಗೆ ಅಡ್ಡ ಬಂದ ಕೀರ್ತಿಯನ್ನೇ ಬೆಟ್ಟದಿಂದ ನೂಕಿ ಕೊಲೆ ಮಾಡಿದ್ಲು.. ಇದೀಗ ತನ್ನ ಮೇಲೆ ಅಪವಾದ ಮಾಡ್ತಿರೋ ಲಕ್ಷ್ಮೀಯನ್ನೇ ಕೊಲ್ಲೋ ಪ್ಲ್ಯಾನ್ ಮಾಡಿದ್ದಾಳೆ ಕಾವೇರಿ.  ಇದು ಒಂದು ಬಾರಿಯಲ್ಲ, ಪ್ರತಿ ಸಲವೂ ಲಕ್ಷ್ಮೀ ಕಾವೇರಿಯ ಮೋಸದಾಟವನ್ನು ಬಯಲಿಗೆಳೆಯಲು ಹೋದಾಗಲೆಲ್ಲಾ, ಒಂದಲ್ಲ ಒಂದು ರೀತಿಯಾಗಿ ಲಕ್ಷ್ಮೀಗೆ ಸೋಲು ಆಗ್ತಾನೆ ಇದೆ. ಇದೀಗ ಲಕ್ಷ್ಮೀ ತಲೆ ಕೆಟ್ಟಿದೆ ಅನ್ನೋ  ಭಾವನೆ ಮನೆಯವರಿಗೆ ಮೂಡಿಸಲು ಏನೇನೋ ಪ್ಲ್ಯಾನ್ ಮಾಡಿರುವ ಕಾವೇರಿ, ಲಕ್ಷ್ಮೀಯನ್ನ ಮುಗಿಸಲು ಹೊರಟಿದ್ದಾಳೆ. ರೂಮಲ್ಲಿ ಮಲಗಿರೋ ಲಕ್ಷ್ಮೀಯನ್ನೇ ರೌಡಿಗಳು ಹೊತ್ತೊಯ್ದು.. ಲಕ್ಷ್ಮಿ ಕಥೆ ಮುಗಿಸುವಂತೆ ಮಾಡಿದ್ದಾಳೆ ಕಾವೇರಿ.

ಪದೇ ಪದೆ ಕಾವೇರಿಗೆ ಜಯ ಸಿಗ್ತಿರೋದನ್ನ ನೋಡಿ, ಅದೇ ಕಥೆಯನ್ನ ಎಳೆಯೋದು ನೋಡಿ ಬೇಸತ್ತಿರೋ ವೀಕ್ಷಕರು, ಇನ್ನು ಮುಂದೆ ಸೀರಿಯಲ್ ನೋಡೋದಿಲ್ಲ, ಈ ಕಥೆ ನೋಡೋದಕ್ಕೆ ಬೇಜಾರು, ಕೀರ್ತಿ ಇಲ್ಲದ ಮೇಲೆ ಕಥೆ ಯಾವುದೋ ದಾರಿಯಲ್ಲಿ ಸಾಗುತ್ತಿದೆ, ಎಲ್ಲಾ ಗೊತ್ತಾದ ಮೇಲೂ ಇಲ್ಲಿ ಏನೂ ನಡಿತಾನೆ ಇಲ್ಲ ಅಂದ್ರೆ ಅದಕ್ಕೆ ಅರ್ಥ ಏನು? ತಲೆ ಬುಡ ಇಲ್ಲದೆ ಕಥೆ ಸಾಗುತ್ತಿದೆ ಎಂದು ಛೀಮಾರಿ ಹಾಕಿದೋರೆ ಹೆಚ್ಚು.

ಇದೀಗ ಲಕ್ಷ್ಮೀ ಕಾಣೆಯಾಗಿದ್ದು, ಒಂದೆಡೆ ಲಕ್ಷ್ಮಿಯನ್ನು ಹುಡುಕಿ ವೈಷ್ಣವ್ ಮತ್ತು ಕೃಷ್ಣ ಹೊರಟಿದ್ದರೆ, ಇನ್ನೊಂದೆಡೆ ಮನೆಗೆ ದುರ್ಗಾಳ ಎಂಟ್ರಿಯಾಗಿದೆ.. ತಾನು ಪೊಲೀಸ್ ಎಂದು ಹೇಳುವ ದುರ್ಗಾ, ಲಕ್ಷ್ಮೀ ಕಾಣೆಯಾಗಿರೋದರ ಬಗ್ಗೆ ಕಾವೇರಿ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದ್ದಾಳೆ.. ಜೊತೆಗೆ ಕಾವೇರಿಯನ್ನು ರೂಮಿಗೆ ಕರೆದುಕೊಂಡು ಹೋಗಿ ಲಕ್ಷ್ಮೀ ಬಗ್ಗೆ ಎಂಕ್ವೈರಿ ಮಾಡೋದಾಗಿ ಕೂಡ ಹೇಳಿದ್ದಾಳೆ.

ಇದನ್ನೆಲ್ಲಾ ನೋಡಿ ವೀಕ್ಷಕರಿಗೆ ಫುಲ್‌ ಕನ್ ಫ್ಯೂಶನ್ ಶುರುವಾಗಿದೆ.  ಸಡನ್ ಆಗಿ ಬಂದಿರೋದು ಯಾರು? ನಿಜವಾಗಿ ಆ ದೇವಿ ದುರ್ಗಾ ಮಾತೆನೆ ಬಂದು ಕಾವೇರಿ ಬಾಯಿಯಿಂದ ಸತ್ಯ ಬಾಯಿ ಬಿಡಿಸ್ತಾಳ ಅಂತ ಕೇಳಿದ್ರೆ. ಇನ್ನೂ ಕೆಲವು ಜನರು ಇಲ್ಲ ಇದು ಖಂಡಿತವಾಗಿಯೂ ಕೀರ್ತಿನೆ ಇರಬೇಕು. ಕೀರ್ತಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಈ ರೀತಿಯಾಗಿ ಬದಲಾಗಿ ಬಂದಿದ್ದಾಳೆ.. ಯಾಕಂದ್ರೆ ಕೀರ್ತಿ ಕಾವೇರಿಯನ್ನ ಆಂಟಿ, ಆಂಟಿ ಅಂತಾ ಕರಿಯೋದು.. ಈಗ ದುರ್ಗಾ ಕೂಡ ಕಾವೇರಿಯನ್ನ ಆಂಟಿ ಅಂತಾ ಕರಿತಾ ಇದ್ದಾಳೆ.. ಅವಳ ಹಾವ ಭಾವ ಕೂಡ ಕೀರ್ತಿ ತರಾನೆ ಇದೆ.. ಹೀಗಾಗಿ ಇದು ಕೀರ್ತಿಯೇ..  ಇನ್ನುಮುಂದೆ ಕಾವೇರಿಗೆ ಹಬ್ಬ ಕಾದಿದೆ ಅಂತಾ ವೀಕ್ಷಕರು ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಅದು ಕೀರ್ತಿನಾ? ಅಥವಾ ದೇವಿನಾ ಅಂತಾ ಇನ್ನಷ್ಟೇ ಗೊತ್ತಾಗ್ಬೇಕಿದೆ.. ಒಂದು ವೇಳೆ ಇದು ಕೀರ್ತಿ ಪಾತ್ರವೇ ಆಗಿದ್ರೇ ತನ್ವಿರಾವ್‌ ಸೀರಿಯಲ್‌ ಬಿಟ್ರಾ ಅನ್ನೋ ಪ್ರಶ್ನೆ ಕೂಡ ವೀಕ್ಷಕರನ್ನ ಕಾಡುತ್ತಿದೆ. ಈ ಬಗ್ಗೆ ಇನ್ನಷ್ಟೇ ಗೊತ್ತಾಗ್ಬೇಕಿದೆ.

Shwetha M