ಕಿರಿಕ್ ಮಾಡಿ ಸನ್ನೆ ಮಾಡಿದ ಲಿಟ್ಟನ್ – ಪ್ರತಿಸನ್ನೆಯಲ್ಲಿ ಉತ್ತರಿಸಿದ ವಿರಾಟ್ ಮತ್ತು ಸಿರಾಜ್

ಕಿರಿಕ್ ಮಾಡಿ ಸನ್ನೆ ಮಾಡಿದ ಲಿಟ್ಟನ್ – ಪ್ರತಿಸನ್ನೆಯಲ್ಲಿ ಉತ್ತರಿಸಿದ ವಿರಾಟ್ ಮತ್ತು ಸಿರಾಜ್

ಚಟ್ಟೋಗ್ರಾಮ್:  ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಸಿರಾಜ್ ಹಾಗೂ ಬಾಂಗ್ಲಾ ತಂಡದ ಆಟಗಾರ ಲಿಟ್ಟನ್ ದಾಸ್ ಮಧ್ಯೆ ಮಾತಿನ ಚಕಮಕಿ ನಡೆಯುತ್ತದೆ. ಇದಾದ ಮೇಲೆ ಮೈದಾನದಲ್ಲಿ ನಡೆದ ಹೈಡ್ರಾಮ ಈಗ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:  ಫೈನಲ್‌ಗೆ ಲಗ್ಗೆಯಿಟ್ಟ ಫ್ರಾನ್ಸ್ – ಅರ್ಜೆಂಟೀನಾ ವಿರುದ್ಧ ವಿಶ್ವಕಪ್‌ಗಾಗಿ ಸೆಣಸಾಟ

ಬಾಂಗ್ಲಾದ ಇನ್ನಿಂಗ್ಸ್‌ನಲ್ಲಿ 14ನೇ ಓವರ್ ಹಾಕುತ್ತಿದ್ದ ಸಿರಾಜ್ , ಲಿಟ್ಟನ್ ದಾಸ್ ಗೆ ಏನೋ ಹೇಳಲು ಮುಂದಾದರು. ಆಗ ಲಿಟ್ಟನ್ ನನಗೆ ಸರಿಯಾಗಿ ಕೇಳುತ್ತಿಲ್ಲ. ಮತ್ತೊಮ್ಮೆ ಹೇಳು ಎಂದು ಕಿವಿ ಹತ್ತಿರ ಕೈಹಿಡಿದುಕೊಂಡು ಸನ್ನೆ ಮಾಡಿದ್ದಾರೆ. ಆಗ ಮಾತಿನ ಚಕಮಕಿ ಶುರುವಾಗಿದೆ. ಈ ಇಬ್ಬರ ನಡುವಿನ ಪರಿಸ್ಥಿತಿ ತಿಳಿಗೊಳಿಸಲು ಅಂಪೈರ್ ಮಧ್ಯೆ ಪ್ರವೇಶಿಸಬೇಕಾಯ್ತು. ಇದಾದ ನಂತರ ಮುಂದಿನ ಎಸೆತದಲ್ಲಿ ಸಿರಾಜ್, ಲಿಟ್ಟನ್ ಅವರನ್ನ ಬೋಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದ್ದಾರೆ.  ಲಿಟ್ಟನ್ ಬೋಲ್ಡ್ ಆದ ಕೂಡಲೇ ಸಿರಾಜ್, ಬೆರಳು ತೋರಿಸಿ ಸುಮ್ಮನಿರುವಂತೆ ಸನ್ನೆ ಮಾಡಿದರು. ಇತ್ತ ಸ್ಲಿಪ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ, ಈ ಮೊದಲು ಲಿಟ್ಟನ್ ಮಾಡಿದ ಸನ್ನೆಯಂತೆಯೇ ತಾವು ಕೂಡ ಬಾಂಗ್ಲಾ ಅಭಿಮಾನಿಗಳತ್ತ ತಿರುಗೆ ಸನ್ನೆ ಮಾಡಿದರು. ಇದನ್ನು ಸಿರಾಜ್ ಕೂಡಾ ಅನುಕರಿಸಿದರು. ಕ್ರೀಡಾಂಗಣದಲ್ಲಿ ನಡೆದ ಪ್ರಹಸನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಟೀಂ ಇಂಡಿಯಾ ಬಾಂಗ್ಲಾ ಎದುರು 404 ರನ್‌ಗಳ ಟಾರ್ಗೆಟ್ ಮುಂದಿಟ್ಟಿದೆ. ಆದರೆ ಈ ಗುರಿ ಬೆನ್ನಟ್ಟಿರುವ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಗಿದೆ. ಕೇವಲ 56 ರನ್‌ಗಳಿಗೆ ತಂಡದ ಪ್ರಮುಖ 4 ವಿಕೆಟ್‌ಗಳು ಉರುಳಿವೆ. ಆರಂಭದಿಂದಲೇ ಬಾಂಗ್ಲಾ ಆಟಗಾರರ ಮೇಲೆ ಸವಾರಿ ಮಾಡಿರುವ ಸಿರಾಜ್ ಹಾಗೂ ಉಮೇಶ್ ಯಾದವ್ ರನ್‌ಗಳಿಗೆ ಕಡಿವಾಣ ಹಾಕಿದ್ದಾರೆ.

suddiyaana