ಕಿರಿಕ್ ಪಾರ್ಟಿ ಸ್ಯಾಮ್ ಕಾನ್ ಸ್ಟಾಸ್ – 19 ವರ್ಷಕ್ಕೇ ಪ್ರಚಾರಕ್ಕಾಗಿ ಧಿಮಾಕು
ಆಸ್ಟ್ರೇಲಿಯಾ ತಂಡ ಎಂತೆಂಥಾ ಲೆಜೆಂಡರಿ ಪ್ಲೇಯರ್ಗಳನ್ನ ಕಂಡಿದೆ. ಸದ್ಯ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲೂ ಘಟಾನುಘಟಿ ಪ್ಲೇಯರ್ಗಳೇ ಇದ್ದಾರೆ. ಬಟ್ ಈ ಎಲ್ಲಾ ಪ್ಲೇಯರ್ಸ್ ನಡುವೆ ಕಾಂಗರೂನಾಡಿನ 19 ವರ್ಷದ ಚಿಗುರುಮೀಸೆಯ ಹುಡುಗ ಸ್ಯಾಮ್ ಕಾನ್ಸ್ ಟಾಸ್ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದ್ದಾನೆ. ಆಡಿರೋದು ಮೂರೇ ಇನ್ನಿಂಗ್ಸ್ ಆದ್ರೂ ಇಷ್ಟೊಂದು ಸುದ್ದಿಯಲ್ಲಿರೋಕೆ ಕಾರಣ ಆತನ ದರ್ಪ, ದೌಲತ್ತು, ಧಿಮಾಕು, ದುರಹಂಕಾರ. ಪಬ್ಲಿಸಿಟಿ ಹುಚ್ಚಿಗೆ ಬಿದ್ದಿರೋ ಆ ಹುಡ್ಗ ಚೀಪ್ ಗಿಮಿಕ್ಗಳನ್ನ ಮಾಡ್ತಿದ್ದಾನೆ.
ಇದನ್ನೂ ಓದಿ : ಭಾರತ 141 ರನ್.. 6 ವಿಕೆಟ್! – ಗೆಲ್ಲಿಸೋಕೆ ಬೌಲರ್ ಗಳೇ ಬೇಕಾ?
ಸ್ಯಾಮ್ ಕಾನ್ಸ್ಟಾಸ್. ಆಸ್ಟ್ರೇಲಿಯಾದ 19 ವರ್ಷ ಯುವ ಕ್ರಿಕೆಟಿಗ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ. ಮೊದಲನೇ ಪಂದ್ಯದಲ್ಲಿ ಆಫ್ ಸೆಂಚುರಿ ಸಿಡಿಸಿ ಭರವಸೆಯನ್ನೂ ಮೂಡಿಸಿದ್ದ. ಆದ್ರೀಗ ಆಟಕ್ಕಿಂತ ಜಾಸ್ತಿ ಗಿಮಿಕ್ಗಳನ್ನ ಮಾಡೋಕೆ ನೋಡ್ತಿದ್ದಾನೆ. ಅದೂ ಕೂಡ ಟೀಂ ಇಂಡಿಯಾ ಆಟಗಾರರನ್ನ ಕೆಣಕಿ ತನ್ನ ರಾಷ್ಟ್ರದಲ್ಲಿ ಹೀರೋ ಆಗಿ ಮೆರೆಯೋಕೆ ಹೊರಟಿದ್ದಾನೆ. ತಾನು ಆಡಿದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಕಿರಿಕ್ ಮಾಡ್ಕೊಂಡಿದ್ದ ಕಾನ್ಸ್ಟಾಸ್ ಸಿಡ್ನಿ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾರನ್ನೇ ಕೆಣಕಿದ್ದಾನೆ. ಟೀಂ ಇಂಡಿಯಾ ಆಟಗಾರರ ಜೊತೆ ಪದೇಪದೆ ಕಾಲು ಕೆರೆದು ಜಗಳ ಮಾಡ್ತಿದ್ದಾನೆ. ಬುಮ್ರಾ ಅದೆಂಥಾ ಸ್ಟ್ರಾಂಗೆಸ್ಟ್ ಬೌಲರ್ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಆದ್ರೂ ಬುಮ್ರಾ ಯಾವತ್ತೂ ಎದುರಾಳಿಗಳನ್ನ ಟ್ರಿಗರ್ ಮಾಡೋ ಥರ ಬೌಲಿಂಗ್ ಮಾಡೋದಾಗ್ಲಿ, ವಿಕೆಟ್ ಬಿದ್ದಾಗ ಸೆಲೆಬ್ರೇಟ್ ಮಾಡಿದವ್ರಲ್ಲ. ಬಟ್ ಇಂಥಾ ಬುಮ್ರಾರನ್ನೇ ದುರುಗುಟ್ಟಿ ನೋಡಿ ಮಾತ್ನಾಡಿದ್ದಾನೆ ಈ ಸ್ಯಾಮ್ ಕಾನ್ ಸ್ಟಾಸ್. ಜಸ್ಪ್ರೀತ್ ಬುಮ್ರಾ ಅವರ ಸಾಮರ್ಥ್ಯ ತಿಳಿದ ಯಾವ ಬ್ಯಾಟರ್ ಕೂಡ ಅವರನ್ನು ಕೆಣಕೋಕೆ ಹೋಗಲ್ಲ. ಬಟ್ ಇನ್ನೂ 2ನೇ ಪಂದ್ಯವನ್ನಷ್ಟೇ ಆಡುತ್ತಿರುವ ಕಾನ್ ಸ್ಟಾಸ್ ಈ ದುಸ್ಸಾಹಸ ಮಾಡಿದ್ದ. ಮೆಲ್ಬೊರ್ನ್ ಪಂದ್ಯದ ಆರಂಭಕ್ಕೂ ಮುನ್ನವೇ ಬುಮ್ರಾ ಬೌಲಿಂಗ್ನ ಟೀಕಿಸಿ ದೊಡ್ಡ ದೊಡ್ಡ ಹೇಳಿಕೆಗಳನ್ನ ಕೊಟ್ಟಿದ್ದ. ಸಾಲ್ದು ಅಂತಾ ನಾಲ್ಕನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬುಮ್ರಾ ಓವರ್ನಲ್ಲಿ ಸಿಕ್ಸ್, ಫೋರ್ ಬಾರಿಸಿ ಈ ಬೌಲರ್ ನನಗೆ ಲೆಕ್ಕನೇ ಇಲ್ಲ ಎನ್ನುವಂತೆ ಌಟಿಟ್ಯೂಡ್ ತೋರಿಸಿದ್ದ. ಬಟ್ ಅದೇ ಆಟ ಎರಡನೇ ಇನ್ನಿಂಗ್ಸ್ ನಲ್ಲಿ ಕಂಟಿನ್ಯೂ ಮಾಡೋಕೆ ಆಗಿರಲಿಲ್ಲ. ಇದೀಗ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನದಲ್ಲೂ ಬುಮ್ರಾ ಜೊತೆ ಕಿರಿಕ್ ಮಾಡಿದ್ದಾನೆ. ಸಿಡ್ನಿಯ ಮೈದಾನ ಕಾನ್ ಸ್ಟಾಸ್ಗೆ ತವರು ನೆಲ. ಲೋಕಲ್ ಬಾಯ್ ಆಗಿರುವ ಕಾನ್ ಸ್ಟಾಸ್ ಗೆ ಓವರ್ ಕಾನ್ಫಿಡೆನ್ಸ್ ಜಾಸ್ತಿ ಇದೆ. ಇದೇ ಮೈಂಡ್ ಸೆಟ್ನಲ್ಲೇ ಬುಮ್ರಾರನ್ನ ಕೆಣಕಿದ್ದಾನೆ.
ಸಿಡ್ನಿಯ ಫಸ್ಟ್ ಇನ್ನಿಂಗ್ಸ್ನಲ್ಲಿ ಆಸಿಸ್ ತಂಡ ಬ್ಯಾಟಿಂಗ್ ಆರಂಭಿಸಿದ್ದು. ಸ್ಯಾಮ್ ಕಾನ್ಸ್ಟಾಸ್ ಮತ್ತು ಉಸ್ಮಾನ್ ಖ್ವಾಜಾ ಬ್ಯಾಟಿಂಗ್ಗೆ ಇಳ್ದಿದ್ರು. ಮೊದಲನೇ ದಿನದಾಟದ ಕೊನೇ ಓವರ್ನಲ್ಲಿ ಉಸ್ಮಾನ್ ಖವಾಜ ಅವರು ಬುಮ್ರಾ ಬೌಲಿಂಗ್ ಮಾಡಲು ರನ್ ಅಪ್ ತೆಗೆದುಕೊಳ್ಳುತ್ತಿದ್ದಾಗ ಆಟವಾಡಲು ಸಿದ್ಧರಾಗಿರಲಿಲ್ಲ. ಇದಕ್ಕೆ ಬುಮ್ರಾ ಅವರು ಆಕ್ಷೇಪಿಸಿದರು. ಈ ಕಡೆ ನಾನ್ ಸ್ಟೈಕರ್ನಲ್ಲಿ ನಿಂತಿದ್ದ ಸ್ಯಾಮ್ ಕಾನ್ಸ್ಟಾಸ್ ಮಧ್ಯೆ ಎಂಟ್ರಿ ಕೊಟ್ಟು ಬುಮ್ರಾ ಅವರನ್ನು ಬೌಲಿಂಗ್ ಮಾಡದಂತೆ ಹೇಳಿದ್ದ. ಈ ವೇಳೆ ಬುಮ್ರಾ ಕಾನ್ ಸ್ಟಾಸ್ ಗೆ ಏನು ಸಮಸ್ಯೆ ಅಂತಾ ಪ್ರಶ್ನಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿತ್ತು. ಕೂಡ್ಲೇ ಅಂಪೈರ್ಗಳು ಬಂದು ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು. ಬಟ್ ನೆಕ್ಸ್ಟ್ ಎಸೆತದಲ್ಲೇ ಬುಮ್ರಾ ಉಸ್ಮಾನ್ ಕ್ವಾಜಾ ಅವ್ರ ವಿಕೆಟ್ ಎಗರಿಸಿದ್ರು. ಉಸ್ಮಾನ್ ಬ್ಯಾಟಿನ ಎಡ್ಜ್ ಟಚ್ ಮಾಡಿಕೊಂಡು ಹೋದ ಚೆಂಡು ಸ್ಲಿಪ್ ನಲ್ಲಿ ನಿಂತಿದ್ದ ಕೆಎಲ್ ರಾಹುಲ್ ಅವರ ಕೈಸೇರಿತು. ಕಾನ್ ಸ್ಟಾಸ್ ಅವರು ಬುಮ್ರಾ ಅವರನ್ನು ಕೆಣಕಿದ್ದಕ್ಕೆ ಉಸ್ಮಾನ್ ಖವಾಜ ಅವರ ವಿಕೆಟ್ ಪತನವಾಯಿತು. ಈ ವಿಕೆಟ್ ಬೀಳ್ದಿದ್ದಂತೆ ಬುಮ್ರಾ ಅವರು ಕಾನ್ಸ್ಟಾಸ್ರನ್ನ ದುರುಗುಟ್ಟಿ ನೋಡಿ ತಿರುಗೇಟು ನೀಡಿದ್ರು. ಇಡೀ ಟೀಂ ಇಂಡಿಯಾ ಆಟಗಾರರು ಕಾನ್ಸ್ಟಾಸ್ ಬಳಿ ಬಂದು ಸಂಭ್ರಮಿಸಿದ್ದರು. ಸದ್ಯ ಭಾರತದಲ್ಲೂ ಕೂಡ ಸ್ಯಾಮ್ ಕಾನ್ ಸ್ಟಾಸ್ ಅತಿರೇಖದ ವರ್ತನೆ ವಿರುದ್ಧ ಆಕ್ರೋಶಗಳು ಕೇಳಿ ಬರ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಟ್ರೋಲ್ ಗಳು ಹೆಚ್ಚಾಗ್ತಿವೆ.