ಕಾರ್ಯಕರ್ತರನ್ನು ಕಂಡು ಕಣ್ಣೀರು ಹಾಕಿದ ರೇವಣ್ಣ –  ಹೊಳೆನರಸೀಪುರದಲ್ಲಿ ಭರ್ಜರಿ ಸ್ವಾಗತಕ್ಕೆ ಸಿದ್ಧತೆ

ಕಾರ್ಯಕರ್ತರನ್ನು ಕಂಡು ಕಣ್ಣೀರು ಹಾಕಿದ ರೇವಣ್ಣ –  ಹೊಳೆನರಸೀಪುರದಲ್ಲಿ ಭರ್ಜರಿ ಸ್ವಾಗತಕ್ಕೆ ಸಿದ್ಧತೆ

ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿರುವ ಆರೋಪದ ಮೇಲೆ ಜೈಲು ಸೇರಿದ್ದ ರೇವಣ್ಣ ಕೊನೆಗೂ ರಿಲೀಸ್‌ ಆಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ರೇವಣ್ಣ ದೇವೇಗೌಡ ಅವರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಂದೆ-ತಾಯಿಯ ಆಶಿರ್ವಾದ ಪಡೆದಿದ್ದಾರೆ. ಈ ವೇಳೆ ಮನೆ ಮುಂದೆ ನೂರಾರು ಜೆಡಿಎಸ್​ ಕಾರ್ಯಕರ್ತರು ಜಮಾಯಿಸಿದ್ರು. ಈ ವೇಳೆ ಕಾರ್ಯಕರ್ತರನ್ನು ಭೇಟಿಯಾದ ರೇವಣ್ಣ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಸನ್ಮಾನ – 5 ಲಕ್ಷ ಪ್ರೋತ್ಸಾಹ ಧನ ನೀಡಿದ ಡಿಸಿಎಂ ಡಿಕೆಶಿ

ರೇವಣ್ಣ ದೇವೇಗೌಡರ ನಿವಾಸದಿಂದ ಹೊರ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ರೇವಣ್ಣ ಪರ ಜೈಕಾರ ಘೋಷಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಕಂಡ ರೇವಣ್ಣ ಕಣ್ಣೀರು ಹಾಕಿದ್ದಾರೆ. ನೀವು ಅಳಬೇಡಿ ಕಣಣ್ಣ ಎಂದು ಡಿಕೆಶಿ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು. ಈ ವೇಳೆ ರೇವಣ್ಣ ಅವರು, ಹಂಗೆಲ್ಲ ಮಾತನಾಡಬಾರದು ಅಂದಾಗ ಯಾಕಣ್ಣ ಮಾತಾಡಬಾರದು ಎಂದು ಕಾರ್ಯಕರ್ತರು ರೊಚ್ಚಿಗೆದ್ದರು. ರೇವಣ್ಣ ಜೊತೆ ಕೆಲ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿಂದ ತೆರಳಿದರು.

ಇನ್ನು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೆ ಹೆಚ್‌.ಡಿ.ರೇವಣ್ಣ ಅವರು ತಾಯಿ ಚಾಮುಂಡಿ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಅದರಂತೆ ಮಂಗಳವಾರ ಸಂಜೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಲಿರುವ ಅವರು, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.   ಮಂಗಳವಾರ ಬೆಂಗಳೂರಿನ ಮನೆಗೆ ತೆರಳಿರುವ ರೇವಣ್ಣ ಅವರು ಮೇ.15 ರಂದು ಹೊಳೆನರಸೀಪುರದ ಮನೆಗೆ ಆಗಮಿಸಿ, ಬಳಿಕ ಆರಾಧ್ಯ ದೇವಾಲಯಗಳಾದ ಹೊಳೆನರಸೀಪುರದ ಲಕ್ಷ್ಮಿ‌ನರಸಿಂಹ, ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ‌ರುವ ಮನೆ ದೇವರು ದೇವೇಶ್ವರ, ಮಾವಿನಕೆರೆಯ ಬೆಟ್ಟದ ರಂಗನಾಥನಿಗೆ ಪೂಜೆ ಸಲ್ಲಿಸುವ ಸಾಧ್ಯತೆಯಿದೆ.

ಇನ್ನು ರೇವಣ್ಣ ಜೈಲಿನಿಂದ ಬಿಡುಗಡೆ ಹಿನ್ನಲೆ ಮಂಕಾಗಿದ್ದ ದಳ ಕೋಟೆಯಲ್ಲಿ ಉತ್ಸಾಹ ಹೆಚ್ಚಿದೆ. ತಮ್ಮ ನಾಯಕನ ಸ್ಚಾಗತಕ್ಕೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ. ಮೇ.15 ರೇವಣ್ಣ ಅವರು ಸ್ವಕ್ಷೇತ್ರ ಹೊಳೆನರಸೀಪುರಕ್ಕೆ ತೆರಳುವ ಸಾಧ್ಯತೆಯಿದ್ದು, ರೇವಣ್ಣ ಸ್ವಾಗತಕ್ಕೆ ಜೆಡಿಎಸ್​ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗಡಿಯಲ್ಲೇ ಸ್ವಾಗತಕೋರುವುದಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.

Shwetha M