‘ಕಾಂತಾರ ಚಾಪ್ಟರ್ 1’ ಬಿಡುಗಡೆ ದಿನಾಂಕದ ಬಗ್ಗೆ ಬಿಗ್‌ ಅಪ್‌ಡೇಟ್‌ – ಹೊಂಬಾಳೆ ಫಿಲಂಸ್ ಹೇಳಿದ್ದೇನು?

‘ಕಾಂತಾರ ಚಾಪ್ಟರ್ 1’ ಬಿಡುಗಡೆ ದಿನಾಂಕದ ಬಗ್ಗೆ ಬಿಗ್‌ ಅಪ್‌ಡೇಟ್‌ – ಹೊಂಬಾಳೆ ಫಿಲಂಸ್ ಹೇಳಿದ್ದೇನು?

ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಶುರುವಾದಗಿನಿಂದ ಒಂದಲ್ಲಾ ಒಂದು ವಿಚಾರದ ಬಗ್ಗೆ ಚಿತ್ರ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್‌ ದಿನಾಂಕ ಮುಂದೂಡಲಾಗಿದೆ ಎಂಬ ಸುದ್ದಿ ವೈರಲ್‌ ಆಗಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ರಿಲೀಸ್ ಬಗ್ಗೆ ಮತ್ತೊಮ್ಮೆ ಸ್ಪಷ್ಟವಾಗಿ ಹೊಂಬಾಳೆ ಫಿಲಂಸ್ ತಿಳಿಸಿದೆ.

ಇದನ್ನೂ ಓದಿ: ದಾಸನ ಮೀಟ್‌ ಆದ ಬಳಿಕ ಪವಿತ್ರಾಗೌಡ ಪೋಸ್ಟ್‌! – ಎಲ್ಲ ಕಳೆದುಕೊಂಡಂತೆ ನಟಿಸು ಎಂದಿದ್ಯಾಕೆ ನಟಿ?

ಕಾಂತಾರ ಸಿನಿಮಾ ರಿಲೀಸ್ ಬಗ್ಗೆ ಊಹಾಪೋಹಗಳು ಹರಿದಾಡಿದ ಬೆನ್ನಲ್ಲೇ ಹೊಸ ಪೋಸ್ಟ್ವೊಂದನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ. ಅಕ್ಟೋಬರ್ 2ರಂದು ‘ಕಾಂತಾರ ಚಾಪ್ಟರ್ 1’ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.

ಹೊಂಬಾಳೆ ಸಂಸ್ಥೆ ಹಂಚಿಕೊಂಡ ಪೋಸ್ಟ್‌ನಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2, 2025ಕ್ಕೆ ನಿಗದಿಪಡಿಸಲಾಗಿದೆ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಘೋಷಿಸಿತ್ತು. ಆದರೆ, ಇತ್ತೀಚೆಗೆ ಈ ದಿನಾಂಕದ ಬಗ್ಗೆ ಕೆಲವು ಊಹಾಪೋಹಗಳು ಹರಡಿದ್ದವು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಹೊಂಬಾಳೆ ಫಿಲಂಸ್, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.

ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಈ ಹಿಂದಿನ `ಕಾಂತಾರ’ ಚಿತ್ರದ ಯಶಸ್ಸಿನ ನಂತರ, ‘ಕಾಂತಾರ ಚಾಪ್ಟರ್ 1’ ಸಹ ಪ್ರೇಕ್ಷಕರನ್ನು ಮತ್ತಷ್ಟು ಆಳವಾದ ಕಥೆ, ಸಂಸ್ಕೃತಿ ಮತ್ತು ದೈವಿಕ ಲೋಕಕ್ಕೆ ಕರೆದೊಯ್ಯಲಿದೆ. ನಿಮ್ಮ ಕಾತರಕ್ಕೆ ತಕ್ಕಂತೆ ಚಿತ್ರವು ಅಂದುಕೊಂಡ ದಿನಾಂಕದಂದೇ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಆದ್ದರಿಂದ, ಯಾವುದೇ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ, ಅಧಿಕೃತ ಪ್ರಕಟಣೆಗಳನ್ನಷ್ಟೇ ನಂಬಲು ಚಿತ್ರತಂಡ ಮನವಿ ಮಾಡಿದೆ.

ಕಾಂತಾರ 2 ಈ ಹಿಂದೆ ಸೆಪ್ಟೆಂಬರ್ 30, 2022 ರಂದು ರಿಲೀಸ್ ಆಗಿತ್ತು. ಇದರಲ್ಲಿ ರಿಷಬ್ ಶೆಟ್ಟಿ ಜೊತೆ ಸಪ್ತಮಿ ನಟಿಸಿದ್ದರು. ಈ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು.

 

Shwetha M

Leave a Reply

Your email address will not be published. Required fields are marked *