ಕರ್ನಾಟಕದ ಕೈಜಾರುತ್ತಾ HAL? ಕೇಂದ್ರದಲ್ಲಿ ಆಂಧ್ರ ನಾಯ್ಡು ಲಾಭಿ!
ಕೈಕಟ್ಟಿ ಕುಳಿತ್ರಾ ಕರ್ನಾಟಕದ MPಗಳು?

ಕರ್ನಾಟಕದ ಕೈಜಾರುತ್ತಾ HAL? ಕೇಂದ್ರದಲ್ಲಿ ಆಂಧ್ರ ನಾಯ್ಡು ಲಾಭಿ!ಕೈಕಟ್ಟಿ ಕುಳಿತ್ರಾ ಕರ್ನಾಟಕದ MPಗಳು?

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂಬ ಕಾರಣಕ್ಕೆ ಎಷ್ಟೋ ಕಂಪನಿಗಳು ಬೇರೆ ಬೇರೆ ರಾಜ್ಯಗಳಿಗೆ ಶಿಫ್ಟ್ ಆಗ್ತಿವೆ.. ಈ ನಡುವೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ಡು ಕಣ್ಣು ಈಗ ಬೆಂಗಳೂರಿನ ಎಚ್‌ಎಎಲ್ ಮೇಲೆ ಬಿದ್ದಿದೆ..  ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇರವಾಗಿ ಕರ್ನಾಟಕ ಆಸ್ತಿಗೆ ಕೈಹಾಕಿದ್ದಾರೆ. ಕೇಂದ್ರದ ಜೊತೆ ಸೇರಿ ಹೆಚ್‌ಎಎಲ್‌ನ ಶಿಫ್ಟ್ ಮಾಡಿ ನಮ್ಮ ಆಂಧ್ರಕ್ಕೆ ನಾವ್ ಜಾಗ ಕೊಡ್ತೀನಿ ಅಂತ ಹೇಳಿದ್ದಾರೆ. ಅಂದ್ರೆ   ಎಚ್‌ಎಎಲ್‌ನ ಐದನೇ ತಲೆಮಾರಿನ ಅಡ್ವಾನ್ಸ್ಡ್‌ ಮೀಡಿಯಂ ಕಾಂಬಾಟ್‌ ಏರ್‌ಕ್ರಾಫ್ಟ್‌  ಅಂದ್ರೆ ಎಎಂಸಿಎ  ಹಾಗೂ ಲೈಟ್‌ ಕಾಂಬಾಟ್‌ ಏರ್‌ಕ್ರಾಫ್ಟ್‌ ಅಂದ್ರೆ ಎಲ್‌ಸಿಎ ಉತ್ಪಾದನೆಯನ್ನು ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಶಿಫ್ಟ್‌ ಮಾಡುವಂತೆ ಪ್ರಸ್ತಾಪ ಮಾಡಿದ್ದಾರೆ.

ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣದ ಬಳಿ HAL ನ AMCA ಸೌಲಭ್ಯಕ್ಕಾಗಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಆದರೆ, ಈ ಪ್ರಾಜೆಕ್ಟ್‌ಅನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಶಿಫ್ಟ್‌ ಮಾಡಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಗೆ ಮನವಿ ಮಾಡಿದ್ದು, ಇದಕ್ಕಾಗಿ 10 ಸಾವಿರ ಎಕರೆ ಜಾಗ ನೀಡಲು ಸಿದ್ದವಿದ್ದೇನೆ ಎಂದಿದ್ದಾರೆ ಆಂಧ್ರ ಸಿಎಂ. ಅದರೊಂದಿಗೆ ಆಂಧ್ರಪ್ರದೇಶದಾದ್ಯಂತ ರಕ್ಷಣಾ ಕೈಗಾರಿಕಾ ಕಾರಿಡಾರ್ ಅನ್ನು ನಿರ್ಮಾಣ ಮಾಡುವುದಾಗಿಯೂ ತಿಳಿಸಿದ್ದಾರೆ. ಅವರು ಈ ಪ್ರಸ್ತಾಪವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ಮಾಡಿದ್ದು, ಈ ಯೋಜನೆಯಲ್ಲಿ ವಾಯುಪಡೆಯ ಕೇಂದ್ರಗಳು, ನೌಕಾ ಉಪಕರಣಗಳ ಪರೀಕ್ಷೆ ಮತ್ತು ಡ್ರೋನ್ ಉತ್ಪಾದನಾ ಕೇಂದ್ರಗಳು ಸೇರಿವೆ.

 10 ಸಾವಿರ ಎಕರೆ ಭೂಮಿ ಮೀಸಲಿಟ್ಟ ಆಂಧ್ರ 

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎಚ್ಎಎಲ್ ಸಂಸ್ಥೆಯ ಎಎಂಸಿಎ  ಮತ್ತು ಎಲ್‌ಸಿ ಎ ಉತ್ಪಾದನಾ ಘಟಕವನ್ನು ಬೆಂಗಳೂರಿನಿಂದ, ಆಂಧ್ರಕ್ಕೆ ಶಿಫ್ಟ್ ಮಾಡಲು ಭಾರೀ ಲಾಬಿಯನ್ನು ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಎಚ್ಎಎಲ್ ಪ್ರೊಡಕ್ಟ್ ಉತ್ಪಾದನೆಯನ್ನು ಆಂಧ್ರಕ್ಕೆ ಸ್ಥಳಾಂತರ ಮಾಡಲು ಜಾಗವನ್ನೂ ಚಂದ್ರಬಾಬು ನಾಯ್ಡು ಗುರುತಿಸಿಯಾಗಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆ ಪ್ರಯಾಣದ ಲೇಪಾಕ್ಷಿ – ಮಡಕಶಿರಾ ಭಾಗದಲ್ಲಿ ಹತ್ತು ಸಾವಿರ ಎಕರೆ ಭೂಮಿಯನ್ನು ನಾಯ್ಡು ಸರ್ಕಾರ ಮೀಸಲಿಟ್ಟಿದೆ. .

ಕೇಂದ್ರದ ಮೇಲೆ ಒತ್ತಡ  ಹಾಕುತ್ತಿರುವ ನಾಯ್ಡು

ಇನ್ನೂ ಇಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳ್ತಾ ಇರೋದ್ ಏನು ಅಂದ್ರೆ, ಬೆಂಗಳೂರಿನಲ್ಲಿ ಹೆಚ್‌ಎಲ್‌ಎಗೆ ಜಾಗ ಇಲ್ಲ ಅದ್ದಕ್ಕೆ ನಾವ್ ಕೊಡ್ತೀವಿ ಅನ್ನೋದು.  ಎಚ್ಎಎಲ್ ಸಂಸ್ಥೆ ತಮ್ಮ ಹೊಸ ಪ್ರೊಡಕ್ಟ್ ಗಳನ್ನು ಪರಿಚಯಿಸುತ್ತಿದ್ದು, ಬೆಂಗಳೂರಿನಲ್ಲಿರುವ ಜಾಗ ಅದ್ದಕ್ಕೆ ಸಾಗುತ್ತಿಲ್ಲ. ನಾವು ಇದಕ್ಕಾಗಿ ಜಮೀನು ಮತ್ತು ಇತರ ಸೌಲಭ್ಯಗಳನ್ನು ನೀಡಲು ಸಿದ್ದರಿದ್ದೇವೆ. ಎಎಂಸಿಎ ಮತ್ತು ಎಲ್‌ಸಿಎಗಳ ಉತ್ಪಾದನೆಯನ್ನು ಆಂಧ್ರಕ್ಕೆ ಶಿಫ್ಟ್ ಮಾಡಿ ಅಂತ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮನವಿಯನ್ನ ಸಲ್ಲಿಸಿದ್ದಾರೆ. ದೆಹಲಿ ಮಟ್ಟದಲ್ಲಿ ಏನೇನು ಪ್ರಯತ್ನ ಮಾಡಬೇಕು ಅದ್ದನ್ನೆಲ್ಲಾ ಆಂಧ್ರ ಸಿಎಂ ಮಾಡಿದ್ದಾರೆ.

ಮೊನ್ನೆ ಅಂದ್ರೆ  ಮೇ 23 ರಂದು ನಾಯ್ಡು ಅವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಅವರನ್ನ ಸುಖಾ ಸುಮ್ಮನೆ ಭೇಟಿ ಮಾಡಿಲ್ಲ, ಆಂಧ್ರಪ್ರದೇಶವನ್ನು ರಕ್ಷಣಾ ಉತ್ಪಾದನೆಗೆ ರಾಷ್ಟ್ರೀಯ ಕೇಂದ್ರವಾಗಿ ರೂಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆಂಧ್ರಪ್ರದೇಶವು ಸ್ಥಳೀಯ ರಕ್ಷಣಾ ಕಾರ್ಯಕ್ರಮಗಳನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನ ನಂತರ ಆಂಧ್ರಪ್ರದೇಶದಲ್ಲಿ ಭಾರತದ ಮೂರನೇ ರಕ್ಷಣಾ ಕೈಗಾರಿಕಾ ಕಾರಿಡಾರ್ ಸ್ಥಾಪನೆಯನ್ನು ಪ್ರಸ್ತಾಪಿಸಿದ್ದಾರೆ. “ಆಂಧ್ರಪ್ರದೇಶವು ಭಾರತದ ರಕ್ಷಣಾ ಉತ್ಪಾದನಾ ಕ್ರಾಂತಿಯನ್ನು ಮುನ್ನಡೆಸಲು ಸಿದ್ಧವಾಗಿದೆ” ಎಂದು ನಾಯ್ಡು ಹೇಳಿದರು, ರಾಜ್ಯದ ಕಾರ್ಯತಂತ್ರದ ಸ್ಥಳ ಮತ್ತು ಕೈಗಾರಿಕಾ ಬಲವನ್ನು ಒತ್ತಿ ಹೇಳಿದರು.  .

ಅಲ್ಲದೇ ಶ್ರೀಹರಿಕೋಟಾ ಪ್ರದೇಶದಲ್ಲಿ, ಖಾಸಗಿ ಉಪಗ್ರಹ ಉತ್ಪಾದನೆ ಮತ್ತು ಉಡಾವಣಾ ಸೌಲಭ್ಯಗಳಿಗಾಗಿ 2,000 ಎಕರೆ ಕ್ಲಸ್ಟರ್ ಅನ್ನು ಪ್ರಸ್ತಾಪಿಸಲಾಗಿದೆ ಮತ್ತು ಲೇಪಾಕ್ಷಿ-ಮಡಕಶಿರ ಕ್ಲಸ್ಟರ್‌ನಲ್ಲಿ, ಅವರು ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಕೇಂದ್ರಗಳನ್ನು ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೇ, ಆಂಧ್ರದ ದೊನಕೊಂಡಾದಲ್ಲಿ ಭಾರತೀಯ ವಾಯುಪಡೆಯ ವಾಯುನೆಲೆ ನಿರ್ಮಿಸಲು ಆರು ಸಾವಿರ ಎಕರೆ ಜಮೀನು ನೀಡಲು ಸಿದ್ದರಿರುವ ಇನ್ನೊಂದು ಪ್ರಸ್ತಾವನೆಯನ್ನೂ ನಾಯ್ಡು, ಕೇಂದ್ರಕ್ಕೆ ಸಲ್ಲಿಸಿದ್ದಾರೆ. ವಾಯುಪಡೆಯು ಈ ಜಾಗದಲ್ಲಿ ವಾಯುನೆಲೆ, ಟ್ರೈನಿಂಗ್ ಸೆಂಟರ್, ಸಂಶೋಧನಾ ವಿಭಾಗಕ್ಕಾಗಿ ಬಳಸಿಕೊಳ್ಳಬಹುದು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ವಿಶಾಖಪಟ್ಟಣಂ – ಅಂಕಪಲ್ಲಿಯ ಭಾಗದ ಮೂರು ಸಾವಿರ ಎಕರೆ ಜಮೀನನ್ನು ನೌಕಾಪಡೆಯ ಟೆಸ್ಟಿಂಗ್ ಸೆಂಟರ್, ಕರ್ನೂಲ್ – ಒರ್ವಾಕಾಲ್ ಭಾಗದ ನಾಲ್ಕು ಸಾವಿರ ಎಕರೆ ಜಾಗದಲ್ಲಿ ಮಿಲಿಟರಿ ಡ್ರೋನ್, ರೊಬೊಟಿಕ್ಸ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಜಾಗ ನೀಡುವ ಪ್ರಸ್ತಾವನೆಯನ್ನೂ ಚಂದ್ರಬಾಬು ನಾಯ್ಡು ಸಲ್ಲಿಸಿದ್ದಾರೆ.  ಏನ್ ಇದ್ದರು ನಮ್ಗೆ ಬರ್ಲಿ ಬೇರೆ ರಾಜ್ಯಗಳ  ಅಭಿವೃದ್ಧಿ ನಮಗೇಕೆ ಅನ್ನೋ ರೀತಿಯಲ್ಲಿ ಚಂದ್ರಬಾಬು ನಾಯ್ಡು ವರ್ತಿಸುತ್ತಿದ್ದಾರೆ. ಅದ್ದಕ್ಕಾಗಿ ಕೇಂದ್ರ ಹಿಂದೆ ಬಿದ್ದಿದ್ದಾರೆ. ಇಲ್ಲಿ ಆಂಧ್ರ ಸಿಎಂ ಹೇಳಿದ್ದಂತೆ ಕೇಂದ್ರ ಸರ್ಕಾರ ಕೇಳುವುದ್ದಕ್ಕೆ ಆಗಲ್ಲ, ಹೇಳಿದ್ದಕ್ಕೆಲ್ಲಾ ಸರಿ ಮಾಡ್ಕೊಳ್ಳಿ ಅಂತ ಹೇಳುವುದ್ದಕ್ಕೂ ಆಗಲ್ಲ.. ಯಾಕಂದ್ರೆ ಕೇಂದ್ರಕ್ಕೆ ಕರ್ನಾಟಕದ ಬಲ ಕೂಡ ಇದೆ. ಕರ್ನಾಟಕದವರು  19 ಜನ ಎಂಪಿಗಳಾಗಿದ್ದಾರೆ. ಹೀಗಾಗಿ ಕೇಂದ್ರ ಅಳೆದು ತೂಗಿಯೇ ನಿರ್ಧಾರ ತೆಗೆದುಕೊಳ್ಳುತ್ತೆ.

ಇನ್ನೂ ಎಚ್ಎಎಲ್ ಉತ್ಪಾದನಾ ಘಟಕ ಸ್ಥಳಾಂತರದ ಆಂಧ್ರ ಲಾಬಿಯ ಬಗ್ಗೆ ಮಾತನಾಡಿದ ಸಚಿವ ಪಾಟೀಲ್,  ಚಂದ್ರಬಾಬು ನಾಯ್ಡು ಅವರ ಈ ಪ್ರಯತ್ನ ಸರಿಯಲ್ಲ. ನಮ್ಮ ರಾಜ್ಯವು ಭಾರತದ ವಾಯುಮಾನ ಮತ್ತು ರಕ್ಷಣಾ ಕ್ಷೇತ್ರಕ್ಕೆ ಕೊಡುತ್ತಿರುವ ಕೊಡುಗೆಯನ್ನು ಪರಿಗಣಿಸಬೇಕು. ರಾಜ್ಯಕ್ಕೆ ರಕ್ಷಣಾ ಕೈಗಾರಿಕಾ ಕಾರಿಡಾರ್  ನೀಡಬೇಕೆಂದು ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ. ಎಚ್ಎಎಲ್ ವಿಸ್ತರಣೆಯ ಸಂದರ್ಭದಲ್ಲಿ ಆಂಧ್ರ ಪ್ರದೇಶವನ್ನೂ ಪರಿಗಣಿಸುವಂತೆ ಅವರು ಕೇಳಲಿ, ಅವರೊಂದು ರಾಜ್ಯದ ಮುಖ್ಯಮಂತ್ರಿ, ರಾಜ್ಯದ ಅಭಿವೃದ್ದಿಗೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಕರ್ನಾಟಕದಲ್ಲಿರುವ ಘಟಕವನ್ನು ಸ್ಥಳಾಂತರಿಸಲು ಲಾಬಿ ನಡೆಸುತ್ತಿರುವುದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ಅತಿಹೆಚ್ಚು ಭಾರತೀಯ ಮಿಲಿಟರಿಯ ಘಟಕಗಳು ಇರುವುದು ಕರ್ನಾಟಕದಲ್ಲಿ. ಆದರೆ, 2022-23ರಲ್ಲಿ ನಮಗೆ ರಕ್ಷಣಾ ಕಾರಿಡಾರ್ ಕೊಡುವ ಬದಲು ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ನೀಡಲಾಯಿತು. ಭಾರತದ ವಾಯುಯಾನ ಮತ್ತು ರಕ್ಷಣಾ ಕ್ಷೇತ್ರಕ್ಕೆ ಶೇ. 65 ಕೊಡುಗೆ ಕರ್ನಾಟಕದ್ದು ಎನ್ನುವುದು ಕೇಂದ್ರದ ಗಮನದಲ್ಲಿ ಇರಲಿ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಆಂಧ್ರ ಬೇಡಿಕೆಗೆ ಕೆರಳಿದ ಡಿಕೆಶಿ

ಇಂದು ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್‌ ಅವರು ಎಚ್‌ಎಎಲ್‌ ಉತ್ಪಾದನಾ ಘಟಕದ ಕುರಿತು ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಏನೇ ಬೇಡಿಕೆ ಇಟ್ಟರೂ ಅದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಈ ಬಗ್ಗೆ ನಮ್ಮ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ಪ್ರತಿಕ್ರಿಯೆ ಕೊಡಬೇಕು. ಆದರೆ ರಾಜ್ಯ ಸರ್ಕಾರವಾಗಿ ನಾವು ಏನನ್ನೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಖಡಕ್‌ ತಿರುಗೇಟು ನೀಡಿದ್ದಾರೆ.   ಒಂದು ವೇಳೆ ಎಚ್‌ಎಎಲ್‌ನವರು ಇದನ್ನು ವಿಸ್ತರಿಸಲು ಬಯಸಿದರೆ ನಾವು ಭೂಮಿ ನೀಡುತ್ತೇವೆ. ನಾಯ್ಡು ಅವರು ಬಯಸಿದರೆ ಬೇರೆ ಏನಾದರೂ ಹೊಸದನ್ನು ಪಡೆಯಬಹುದು. ನಾವು ಅವರ ದಾರಿಗೆ ಅಡ್ಡ ಬರುವುದಿಲ್ಲ. ಆದರೆ ಕರ್ನಾಟಕದ ಮಟ್ಟಿಗೆ ಎಚ್‌ಎಎಲ್ ನಮ್ಮ ಹೆಮ್ಮೆ, ನೆಹರೂ ಜೀ ಅವರು ಇದನ್ನು ನಮಗೆ ನೀಡಿದರು ಎಂದು ತಿರುಗೇಟು ನೀಡಿದ್ದಾರೆ. ಎಚ್‌ಎಎಲ್‌ನ ಬೆಳವಣಿಗೆಗೆ ಎಲ್ಲ ಅವಕಾಶ ನೀಡಲು ರಾಜ್ಯ ಸಿದ್ಧವಿದೆ. ನಮ್ಮ ಬಳಿಯೇ ಅವರಿಗೆ ಬೇಕಾದ ಎಲ್ಲ ಭೂಮಿಗಳಿವೆ. ನಾವು ಎಚ್‌ಎಎಲ್‌ಗಾಗಿ ತುಮಕೂರಿನಲ್ಲಿ ಭೂಮಿಯನ್ನು ನೀಡಿದ್ದೇವೆ. ಹೆಲಿಕಾಪ್ಟರ್ ವಿಭಾಗಕ್ಕಾಗಿ ನಾವು ನೀಡಿದ್ದೇವೆ. ಎಚ್‌ಎಎಲ್‌ನವರು ಇನ್ನೂ ಹೆಚ್ಚಿನದನ್ನು ಬಯಸಿದರೆ, ಅದನ್ನೂ ನಾವು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Kishor KV

Leave a Reply

Your email address will not be published. Required fields are marked *