ಕಥೆಯಲ್ಲಿ ಬರುತ್ತಿದ್ದ ಥೇಟ್ ಸುಂದರ ಕುದುರೆ ಇದೇ ಅಲ್ಲವೇ? – ಚಿನ್ನದ ಹೊಳಪಿನ ಮೈಬಣ್ಣದ ಈ ಕುದುರೆಯ ಬೆಲೆ ಎಷ್ಟು ಗೊತ್ತಾ?

ಕಥೆಯಲ್ಲಿ ಬರುತ್ತಿದ್ದ ಥೇಟ್ ಸುಂದರ ಕುದುರೆ ಇದೇ ಅಲ್ಲವೇ? – ಚಿನ್ನದ ಹೊಳಪಿನ ಮೈಬಣ್ಣದ ಈ ಕುದುರೆಯ ಬೆಲೆ ಎಷ್ಟು ಗೊತ್ತಾ?

ನಾವು ಬಾಲ್ಯದಲ್ಲಿ ಕೆಲವೊಂದು ಕಥೆ ಕೇಳುತ್ತೇವೆ. ಆ ಕಥೆಗಳಲ್ಲಿ ಕುದುರೆಗಳ ಪಾತ್ರ ಮಹತ್ವದ್ದು ಆಗಿರುತ್ತದೆ. ಅಷ್ಟೇ ಅಲ್ಲ, ಸಹಾಯಕ್ಕೆ ಬರುವ ಕುದುರೆ ತುಂಬಾ ಸುಂದರವಾಗಿರುತ್ತವೆ. ಆ ಕುದುರೆಯನ್ನು ವರ್ಣಿಸುವ ರೀತಿಯೇ ಬೇರೆ. ಆ ಕುದುರೆಗೆ ಬಂಗಾರದಂತಹ ಮೈಬಣ್ಣ ಇರುತ್ತದೆ. ಆ ಕುದುರೆ ಹಾರುತ್ತಾ ಹೋಗತ್ತದೆ. ಆ ಕುದುರೆಯಷ್ಟು ಚೆಂದದ ಕುದುರೆ ಎಲ್ಲಿಯೂ ಸಿಗುವುದಿಲ್ಲ. ಹೀಗೆ.. ಕಾಲ್ಪನಿಕ ಕುದುರೆ ನಮ್ಮ ಮನಸಿನಲ್ಲಿ ಮೂಡುತ್ತಲೇ ಹೋಗುತ್ತದೆ. ಆದರೆ, ಅಂಥದ್ದೇ ಕುದುರೆಯೊಂದನ್ನು ರಿಯಲ್ ಆಗಿಯೇ ನೋಡಬಹುದು.

ಇದನ್ನೂ ಓದಿ: ಕುದುರೆ ಬಾಲದ ಕೂದಲಿನ ಹಾಸಿಗೆ ಇದು – ಇದರ ಬೆಲೆಯೇ 5.5 ಕೋಟಿ ರೂಪಾಯಿ!

ಸಾಮಾನ್ಯವಾಗಿ ಕೆಲವೊಂದು ತಳಿಯ, ವಿವಿಧ ಬಣ್ಣದ ಕುದುರೆಗಳು ಇರುತ್ತವೆ. ಆದರೆ, ವಿಶ್ವದ ಅತ್ಯಂತ ಸುಂದರವಾದ ಕುದುರೆಯನ್ನು ನೀವೇನಾದರೂ ನೋಡಿದ್ದೀರಾ?. ಇಂಥೊದ್ದೊಂದು ಕುದುರೆ ಈಗ ಕಾಣಲು ಸಿಕ್ಕಿದೆ.  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಥೇಟ್ ಯುನಿಕಾರ್ನ್ ಅಂತೆಯೇ ಕಾಣುವ ಜಗತ್ತಿನ ಅತ್ಯಂತ ಸುಂದರವಾದ ಕುದುರೆಯನ್ನು ನೀವು ನೋಡಬಹುದು. ಕಾಲ್ಪನಿಕ ಕಥೆಗಳಲ್ಲಿ ರಾಜಕುಮಾರಿಯನ್ನು ಹೊತ್ತು ತಿರುಗುವ ಕುದುರೆಯಂತೆಯೇ ಕಾಣುವ ಈ ಅತೀ ಸುಂದರವಾದ  ಕುದುರೆಯನ್ನು ಕಂಡು  ಹಲವರು ಆಶ್ಚರ್ಯಚಕಿತರಾಗಿದ್ದಾರೆ. ಅಖಲ್-ಟೆಕೆ ತಳಿಯ  ಈ ಕುದುರೆ ಮೂಲತಃ  ತುರ್ಕಮೆನಿಸ್ತಾನ್ ರಾಷ್ಟ್ರದ್ದು,  ಚಿನ್ನದಂತೆ ಹೊಳೆಯುವ ಮೈ ಬಣ್ಣವನ್ನು ಹೊಂದಿರುವ ಈ ಸುಂದರ ಕುದುರೆಯನ್ನು ಸ್ವರ್ಗದಿಂದ ಇಳಿದು ಬಂದ ಪ್ರಾಣಿ ಎಂದು ನಂಬಲಾಗುತ್ತದೆ. ವಿಶೇಷವಾಗಿ ಈ ಕುದುರೆಗಳು ತುಂಬಾ ನಿಷ್ಠಾವಂತ ಪ್ರಾಣಿಗಳು. ಅವುಗಳ ಮಾಲೀಕರು ಮಾತ್ರ ಅವುಗಳ ಮೇಲೆ ಕುಳಿತು ಸವಾರಿ ಮಾಡಲು ಅದು ಅವಕಾಶ ನೀಡುತ್ತದೆ. ಇಡೀ ಪ್ರಪಂಚದಲ್ಲಿ  7000 ಕ್ಕಿಂತಲೂ ಕಡಿಮೆ ಈ ತಳಿಯ ಕುದುರೆಗಳಿವೆ. ಅಲ್ಲದೆ ಇದು ತುರ್ಕುಮೆನಿಸ್ತಾನದ ರಾಷ್ಟ್ರೀಯ ಪ್ರಾಣಿ ಕೂಡಾ ಹೌದು. ನೋಡಲು ಯುನಿಕಾರ್ನ್ ಅಂತೆಯೇ ಕಾಣುವ ಈ ಕುದುರೆಗೆ ಹೆಚ್ಚಿನ ಬೇಡಿಕೆಯಿದ್ದು, ಭಾರತದಲ್ಲಿ ಈ ಕುದುರೆಯ ಬೆಲೆ ಸುಮಾರು 30 ಲಕ್ಷ ರೂಪಾಯಿಗಳು.

Gabriele Corno  ಎಂಬವರು ತಮ್ಮ  X  ಖಾತೆಯಲ್ಲಿ  ಈ ಕುದುರೆಯ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದು,  ಇದು ಅಖಲ್-ಟೆಕೆ ಎಂದು ಕರೆಯಲ್ಪಡುವ ಅಪರೂಪದ ತಳಿಯ ಕುದುರೆಯಾಗಿದೆ. ಇದರ ಮೈಬಣ್ಣ ಕಾಣಲು ಚಿನ್ನದ ಹೊಳಪಿನಂತಿದ್ದು,  ಈ ಕಾರಣದಿಂದಾಗಿ ಈ ಕುದುರೆಯನ್ನು ಗೋಲ್ಡನ್ ಹಾರ್ಸ್ ಎಂದೂ ಕರೆಯುತ್ತಾರೆ ಎಂಬ ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ.  13 ಸೆಕೆಂಡಿನ ಈ ವಿಡಿಯೋದಲ್ಲಿ ಬಹಳ ಸುಂದರವಾಗಿರುವ ಶ್ವೇತವರ್ಣದ ಅಖಲ್-ಟೆಕೆ ತಳಿಯ ಕುದುರೆ ಓಡಾಡುವುದನ್ನು ಕಾಣಬಹುದು.

Sulekha