ಕಡಲ ತೀರಕ್ಕೆ ತೇಲಿಬಂತು ವಿಚಿತ್ರ ಜೀವಿ! – ಸಮುದ್ರ ದಡದಲ್ಲಿ ಸಿಕ್ಕಿದ್ದು ಮತ್ಸ್ಯಕನ್ಯೆಯಾ? 

ಕಡಲ ತೀರಕ್ಕೆ ತೇಲಿಬಂತು ವಿಚಿತ್ರ ಜೀವಿ! – ಸಮುದ್ರ ದಡದಲ್ಲಿ ಸಿಕ್ಕಿದ್ದು ಮತ್ಸ್ಯಕನ್ಯೆಯಾ? 

ಕಡಲ ತೀರದಲ್ಲಿ ಆಗಾಗ ಪ್ರಾಕೃತಿಕ ವಿದ್ಯಾಮಾನಗಳು ನಡೆಯುತ್ತಲೇ ಇರುತ್ತವೆ. ಕೆಲವು ತಿಂಗಳ ಹಿಂದೆ ಮಲ್ಪೆ ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ಅಪರೂಪದ ಬಿಳಿ ಬಣ್ಣದ ತ್ಯಾಜ್ಯ ಬಂದು ಬಿದ್ದಿತ್ತು. ಶ್ಯಾವಿಗೆ ರೀತಿಯಲ್ಲಿರುವ ಎಳೆ ಎಳೆಯಾದ ಬಿಳಿ ಬಣ್ಣದ ಈ ಕಸದ ರಾಶಿಯನ್ನು ಸ್ಥಳೀಯರು ಗಂಗಾದೇವಿಯ ಕೂದಲು ಎಂದು ಸ್ಥಳೀಯರು ಕರೆದಿದ್ದರು. ಈ ಅವರೂಪದ ಪ್ರಾಕೃತಿಕ ವಿದ್ಯಾಮಾನ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಇಂತಹದ್ದೇ ಅಪರೂಪದ ವಿದ್ಯಾಮಾನ  ಪಾಪುವಾ ನ್ಯೂಗಿನಿಯಾದ ಕಡಲತೀರದಲ್ಲಿ ಸಂಭವಿಸಿದೆ. ಮತ್ಸ್ಯಕನ್ಯೆ ರೀತಿಯ ವಿಚಿತ್ರ ಜೀವಿಯೊಂದು ಕಡಲ ತೀರಕ್ಕೆ ತೇಲಿಬಂದಿದ್ದು, ವಿಜ್ಞಾನಿಗಳನ್ನು ಅಚ್ಚರಿಗೆ ದೂಡಿದೆ.

ಮತ್ಸ್ಯಕನ್ಯೆಯ ಆಕಾರದಲ್ಲಿರುವ ಪ್ರೇತ ಬಿಳಿ ಬಣ್ಣದ ವಿಚಿತ್ರ ಜೀವಿಯ ಫೋಟೋಗಳನ್ನು “ನ್ಯೂ ಐರ್ಲೆಂಡರ್ಸ್​ ಓನ್ಲಿ” ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿವೆ. ಮತ್ಸ್ಯಕನ್ಯೆಯನ್ನು ಹೋಲುವ ವಿಚಿತ್ರವಾದ, ಮಸುಕಾದ ಮತ್ತು ಕೊಳೆತ ದ್ರವ್ಯರಾಶಿ ಪಾಪುವ ನ್ಯೂಗಿನಿಯಾದ ಬಿಸ್ಮಾರ್ಕ್ ಸಮುದ್ರದ ಸಿಂಬೆರಿ ದ್ವೀಪದಲ್ಲಿ ಜನರ ಕಣ್ಣಿಗೆ ಬಿದ್ದಿದೆ. ಈ ವಿಚಿತ್ರ ಜೀವಿಯ ನಿಜ ಸ್ವರೂಪದ ಬಗ್ಗೆ ತಜ್ಞರಿಗೆ ಇನ್ನೂ ಖಚಿತವಾಗಿಲ್ಲ. ಆದರೆ, ಇದು ನಿಗೂಢ ಜೀವಿಗಿಂತ ಸಮುದ್ರದ ಜೀವಿಯಾಗಿರಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ಮಲ್ಪೆ ಬೀಚ್‌ನಲ್ಲಿ ವಿಸ್ಮಯ ದೃಶ್ಯ – ಕಡಲ ಕಿನಾರೆಯಲ್ಲಿ ರಾಶಿ ರಾಶಿ ಗಂಗಾದೇವಿ ಕೂದಲು?

ತಜ್ಞರ ಪ್ರಕಾರ ಈ ಅಪರೂಪದ ಜೀವಿಯನ್ನು ಗ್ಲೋಬ್​ಸ್ಟರ್​ ಎಂದು ಕರೆಯಲಾಗುತ್ತದೆ. ಗ್ಲೋಬ್​ಸ್ಟರ್​ ಎಂಬುದು ಕಡಲ ತೀರಕ್ಕೆ ತೊಳೆಯುವ ಗುರುತಿಸಲಾಗದ ಸಾವಯವ ದ್ರವ್ಯರಾಶಿಯಾಗಿದೆ. ಈ ನಿಗೂಢ ಗ್ಲೋಬ್​ಸ್ಟರ್​ಗಳ ಮೂಲವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಏಕೆಂದರೆ ಶವದ ಹೆಚ್ಚಿನ ಭಾಗವು ಕೊಳೆತಿರುತ್ತದೆ ಮತ್ತು ದೇಹದ ಭಾಗಗಳು ಸಮುದ್ರದಲ್ಲಿ ಕಳೆದು ಹೋಗಿರುತ್ತವೆ. ಸ್ಥಳೀಯರು ಅದನ್ನು ಹೂಳುವ ಮೊದಲು ಅದನ್ನು ಸರಿಯಾಗಿ ಅಳತೆ ಮಾಡದ ಕಾರಣ ಶವದ ಗಾತ್ರ ಮತ್ತು ತೂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಅಲ್ಲದೆ, ಯಾರೊಬ್ಬರು ಕೂಡ ಡಿಎನ್ಎ ಮಾದರಿಗಳನ್ನು ಸಂಗ್ರಹಿಸದೇ ಇರುವುದರಿಂದ ನಿಗೂಢ ಜೀವಿಯ ಗುರುತಿಸುವಿಕೆಯು ಅಸಾಧ್ಯವಾಗಿದೆ ಎಂದು ತಜ್ಷರು ತಿಳಿಸಿದ್ದಾರೆ.

ಇದು ಸಮುದ್ರದ ಸಸ್ತನಿಯಂತೆ ಕಾಣುತ್ತದೆ ಎಂದು ಆಸ್ಟ್ರೇಲಿಯಾದ ಜೇಮ್ಸ್ ಕುಕ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಹೆಲೆನ್ ಮಾರ್ಷ್ ತಿಳಿಸಿದ್ದಾರೆ.

Shwetha M