ಓ..ಓ..ಪಂಜುರ್ಲಿ ಬಿಟ್ಟರು ನಾನು ಬಿಡಲ್ಲ- ಪಂರ್ಜುಲಿ ತಮ್ಮ ಗುಳಿಗ ಹುಟ್ಟಿದ್ದು ಹೇಗೆ?
ತಂದೆ, ತಾಯಿ ರಕ್ತ ಕುಡಿದ ಗುಳಿಗನ ಕಥೆ

ನೀವು ಕಾಂತಾರದಲ್ಲಿ ಪಂಜುರ್ಲಿಯ ನುಡಿ ಕೇಳಿರಬಹುದು ನನ್ನ ಹಿಂದೆ ಉಗ್ರ ರೂಪಿ ಗುಳಿಗ ಬರ್ತಾನೆ ಅನ್ನೋ ನುಡಿಯನ್ನ.. ಹಾಗೇ ಗುಳಿಗ ಎಷ್ಟು ಪವರ್ ಫುಲ್ ಅನ್ನೋದ್ದು ಗೊತ್ತಾಗುತ್ತೆ… ಹಾಗಾದರೆ ಈ ಗುಳಿಗ ಯಾರು? ಕಾಡುಹಂದಿ ಮೂಲದ ದೈವ ಪಂಜುರ್ಲಿಗೂ ಗುಳಿಗನಿಗೂ ಹೇಗೆ ಸಂಬಂಧ? ಗುಳಿಗನ ಜನ್ಮ ಆಗಿದ್ದು ಹೇಗೆ? ಪಂಜುರ್ಲಿ ಹಿಂದೆ ಗುಳಿಗ ಬರೋದ್ಯಾಕೆ ಅನ್ನೋದ್ದನ್ನ ನೋಡೋಣ.

ತುಳುನಾಡಿನಲ್ಲಿ ಒಂದು ಮಾತಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಮೂರು ಘಟ್ಟ ಬರುತ್ತವೆ. ತಾನು ಮಾಡುವುದು ತಪ್ಪೋ ಸರಿಯೋ ಎನ್ನದೇ ಮಾಡುತ್ತಿರುವಾಗ ಸತ್ಯದ ದಾರಿ ತೋರಿಸಿ ಎಚ್ಚರಿಸುವವನು ಬಬ್ಬು ಸ್ವಾಮಿ ಅಂತೆ. ಅದರಲ್ಲೂ ಎಡವಿ ಅದನ್ನೇ ಮುಂದುವರೆಸಿದರೆ ಆ ಪಾಪ ಕರ್ಮ ಅನುಭವಿಸುವ ಹಾಗೆ ಮಾಡುವವನು ಕೊರಗಜ್ಜ ಅಂತೆ.. ಅಷ್ಟರ ಮೇಲೂ ಬುದ್ಧಿ ಗಟ್ಟಿಯಾಗದಿದ್ದರೆ ಗುಳಿಗನಿಂದ ಸಂಹಾರ ಶತಸಿದ್ಧ ಅಂತ ಹೇಳ್ತಾರೆ.. ಹಾಗಾದರೆ ಯಾರು ಈ ಗುಳಿ ಅನ್ನೋದ್ದನ್ನ ನೋಡೋಣ ಬನ್ನಿ..
ನೀವು ಕಾಂತಾರದಲ್ಲಿ ಉಲ್ಕೆಯ ರೂಪದಲ್ಲಿ ಒಂದು ಬೆಂಕಿ ಚಂಡು ಭೂಮಿಗೆ ಬೀಳೋದು ನೋಡಿ ಇರ್ತೀರಾ.. ಇದ್ದಕ್ಕೆ ಹೊಲಿಸಿ ಹೇಳುವುದಾದ್ರೆ ಕೈಲಾಸದಲ್ಲಿ ಪಾರ್ವತಿಗೆ ಭಸ್ಮದಲ್ಲಿ ಒಂದು ಕಲ್ಲು ಸಿಗುತ್ತೆ.. ಆ ಕಲ್ಲನ್ನ ಶಿವನಿಗೆ ಕೊಟ್ಟಾಗ ಆತ ಅದನ್ನು ಭೂಮಿಗೆ ಎಸೆಯುತ್ತಾನೆ. ಅದರಿಂದ ಹುಟ್ಟುವುದೇ ಗುಳಿಗ.. ಆದ್ರೆ ಗುಳಿಗೆ ಶಿವಗಣನಾಗಿ ಸೇವೆ ಸಲ್ಲಿಸುತ್ತಾ ಇರುವಾಗ ಒಂದು ತಪ್ಪು ಮಾಡಿ ಸಂಕೆ ಮತ್ತು ಗಾಳಿ ಭದ್ರ ಕುಮಾರನಾಗಿ ಹುಟ್ಟುವಂತೆ ಶಾಪ ಪಡೆಯುತ್ತಾನೆ. ಆದ್ರೆ ಈ ಶಾಪ ಘನಘೋರ ವಾಗಿತ್ತು.. ಅದೇನೆಂದರೆ ಗುಳಿಗನೇ ಅವನ ತಂದೆ-ತಾಯಿಯರ ಸಾವಿಗೆ ಕಾರಣನಾಗುತ್ತಾನೆ ಅನ್ನೋದು. ಹೀಗೆ ಸಂಕೆ-ಗಾಳಿಭದ್ರಕುಮಾರರ 25 ನೇ ಮಗುವಾದ ಗುಳಿಗ 7 ತಿಂಗಳ ಗರ್ಭದಲ್ಲೇ ಇರುವಾಗ ತಾಯಿ ಸಂಕೆಗೆ ಓ ಅಮ್ಮ…. ಓ ಅಮ್ಮ… ನನಗೆ ಹಸಿವಾಗುತ್ತಿದೆ… ನಾನು ಯಾವ ಜಾಗದಿಂದ ಭೂಮಿಗೆ ಬರಲಿ ಅ ಅಂತ. ಆಗ ತಾಯಿ ಎಲ್ಲರೂ ಬರುವ ಹಾಗೆ ಬಾ ಎನ್ನುತ್ತಾಳೆ. ಗುಳಿಗ ಆಕೆಯ ಮಾತು ಕೇಳದೇ ತಾಯಿಯ ಹೊಟ್ಟೆಯನ್ನ ಸೀಳಿ ಹೊರ ಬರುತ್ತಾನೆ. ಬಂದವನೇ ತನ್ನ ತಾಯಿಯ ರಕ್ತ ಕುಡಿದು ತಂದೆಯನ್ನೂ ಬಲಿ ಪಡೆದುಶಾಪ ಪೂರೈಸಿಕೊಳ್ಳುತ್ತಾನೆ. ಆದ್ರೆ ಅಲ್ಲಿಗೆ ಗುಳಿಗನ ಹಸಿವು ತೀರುವುದಿಲ್ಲ..

ಗುಳಿಗೆ ನಿಗೆ ಅಪಾರ ಹಸಿವು ಭೂಮಿಯ ಮೇಲಿನ ಸಾವಿರ ಆನೆ ತಿನ್ನುತ್ತಾನೆ, ಸಾವಿರ ಕುದುರೆ ತಿನ್ನುತ್ತಾನೆ. ಸೂರ್ಯನನ್ನೂ ತಿನ್ನಲು ಹೊರಡುತ್ತಾನೆ. ಆಗ ದೇವತೆಗಳಿಗೆ ಭಯವಾಗಿ ವಿಷ್ಣುವಿನ ಮೊರೆ ಹೋಗುತ್ತಾರೆ. ಗುಳಿಗ ಕೂಡ ಹಸಿವು ನೀಗದೆ ವಿಷ್ಣುವಿನ ಬಳಿ ಹೋಗಿ ಹಸಿವು ಎಂದು ಅಬ್ಬರಿಸುತ್ತಾನೆ. ಏನೇ ಕೊಟ್ಟರು ಹಸಿವು ನೀಗದ ಗುಳಿಗ ನಿಗೆ ನಂತರ ವಿಷ್ಣು ತನ್ನ ಕಿರುಬೆರಳನ್ನು ನೀಡುತ್ತಾನೆ. ಇದರಿಂದ ಗುಳಿಗ ಶಾಂತನಾಗುತ್ತಾನೆ ಗುಳಿಗನ ಅಬ್ಬರವನ್ನು ಕಂಡ ವಿಷ್ಣು ಗುಳಿಗನನ್ನು ಭೂಲೋಕದ ರಕ್ಷಣೆಗಾಗಿ ದೈವ ಸ್ವರೂಪವನ್ನು ಕೊಟ್ಟು ಭೂಮಿಗೆ ಕಳುಹಿಸುತ್ತಾನೆ.

ಇನ್ನೂ ಗುಳಿಗ ದೈವ ಸಪ್ತ ಜಲದುರ್ಗೆಯರನ್ನು ಸಪ್ತಸಾಗರದಾಚೆಯಿಂದ ತುಳು ನಾಡಿಗೆ ಕರೆದುಕೊಂಡು ಬರುವಾಗ ನಾವಿಕನಾಗಿ ಬರುತ್ತಾನೆ. ಆಗ ತುಳುನಾಡಿನಲ್ಲಿ ಏಳು ಸ್ಥಾನದಲ್ಲಿ ನೆಲೆಸುವ ದುರ್ಗೆಯರು ಗುಳಿಗನ ನಿಷ್ಠೆಗೆ ಪ್ರತಿಯಾಗಿ ಕ್ಷೇತ್ರಪಾಲನಾಗಿ ನೆಲೆಸುವಂತೆ ಆಶೀರ್ವಾದಿಸಿದರು. ಅದಾಗಲೇ ಪಂಜುರ್ಲಿಯ ಕ್ಷೇತ್ರಪಾಲನಾಗಿ ತುಳುನಾಡಿನಲ್ಲಿ ನೆಲೆ ನಿಂತಿದ್ದರಿಂದ ಪಂಜುರ್ಲಿಗೂ ಗುಳಿಗನಿಗೂ ಯುದ್ಧವಾಯಿತು. ಆಗ ದುರ್ಗೆ ಪ್ರತ್ಯಕ್ಷಳಾಗಿ ನೀವಿಬ್ಬರೂ ಅಣ್ಣ-ತಮ್ಮರಾಗಿ ಕ್ಷೇತ್ರಪಾಲರಾಗಿ ನೆಲೆಸಿ ಎಂದು ವರ ಕೊಡುತ್ತಾಳೆ. ಅದರ ಪ್ರಕಾರ ಪಂಜುರ್ಲಿ ಅಣ್ಣನ ತರಹ ಕ್ಷೇತ್ರಪಾಲನಾಗಿ ನೆಲೆಸಿದರೆ ಗುಳಿಗ ತಮ್ಮನಂತೆ ಬಂಟನಾಗಿ ಅವನ ಆಜ್ಲೆಯನ್ನ ಕೇಳುತ್ತಾ ಜೊತೆಗಿರುತ್ತಾನೆ. ಹೀಗಾಗಿಯೇ ಕೇಳುವುದು ಪಂಜುರ್ಲಿ ಜೊತೆ ಅವನ ಬಂಟ ಗೂಳಿಗ ಕೂಡ ಜೊತೆಗೆ ಬರ್ತಾರೆ ಅನ್ನೋದು.. ಗುಳಿಗ ಬರೀ ಒಂದೇ ದೈವವಲ್ಲ ಸ್ಥಾನದ ದೈವದ ಜೊತೆ ಸೇರಿ ಚಾವುಂಡಿ ಗುಳಿಗ, ರಾಹು ಗುಳಿಗ, ತಂತ್ರ ಗುಳಿಗ, ನೆತ್ತರ ಗುಳಿಗ, ಅಗ್ನಿ ಗುಳಿಗ, ಮೂಕಾಂಬಿ ಗುಳಿಗ, ಸನ್ಯಾಸಿ ಗುಳಿಗ, ಒರಿಮಾಣಿ ಗುಳಿಗ, ಹಾಯಿ ಗುಳಿಗ ಎಂದೆಲ್ಲಾ ವಿವಿಧ ರೂಪದಲ್ಲಿ ಆರಾಧನೆ ಪಡೆಯುತ್ತಾನೆ..ತುಳುನಾಡಿನ ಭಕ್ತರು ಕೋಲಾದ ಮೂಲದ ಗುಳಿನನ್ನ ಆರಾಧನೆ ಮಾಡ್ತಾರೆ. ಕೊನೆಯಲ್ಲಿ ಕ್ಷೇತ್ರ ಪಾಲನಿಗೆ ಆಹಾರವಾಗಿ ಕೋಳಿ, ಹರಳು, ಹಾಗೂ ಎಳನೀರು ನೀಡುತ್ತಾರೆ. ಹೀಗೆ ಸದಾ ಹಸಿವು ಹಾಗೂ ಉಗ್ರರೂಪಿ ಯಾಗಿರುವ ಗುಳಿಗ ಕ್ಷೇತ್ರಪಾಲನಾಗಿ ತುಳುನಾಡಿನ ಮನೆಗಳಲ್ಲಿ ನೆಲೆಯೂರಿ ತನ್ನ ಕಾರ್ನಿಕವನ್ನು ತೋರಿಸುತ್ತಾ ಬಂದಿದ್ದಾನೆ.


ನೋಡಿರಿ

