ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ ನ 6 ವಿಭಾಗಗಳಲ್ಲಿ ಭಾರತ ನಂ.1 – ಏಷ್ಯಾದ ಮೊದಲ ಕ್ರಿಕೆಟ್ ಟೀಂ ಸಾಧನೆ..!

ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ ನ 6 ವಿಭಾಗಗಳಲ್ಲಿ ಭಾರತ ನಂ.1 – ಏಷ್ಯಾದ ಮೊದಲ ಕ್ರಿಕೆಟ್ ಟೀಂ ಸಾಧನೆ..!

ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ನ ಎಲ್ಲಾ ವಿಭಾಗಗಳಲ್ಲೂ ಟೀಂ ಇಂಡಿಯಾ ನಂಬರ್ 1 ಪಟ್ಟಕ್ಕೇರಿದೆ. ಈ ಮೂಲಕ ಇಂಥಾದ್ದೊಂದು ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಎರಡನೇ ಹಾಗೂ ಏಷ್ಯಾದ ಮೊದಲ ಕ್ರಿಕೆಟ್ ತಂಡ ಅನ್ನೋ ಸಾಧನೆ ಮಾಡಿದೆ.

ಇದನ್ನೂ ಓದಿ : ಐವರು ಮಕ್ಕಳಿಗೆ ಜನ್ಮ ನೀಡಿದ 7 ಮಕ್ಕಳ ಮಹಾತಾಯಿ – 12 ಮಕ್ಕಳನ್ನ ಹೆತ್ತು ದೇವರ ಆಶೀರ್ವಾದ ಎಂದ ದಂಪತಿ..!

ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ20 ಮ್ಯಾಚ್​ಗಳಲ್ಲಿ ಟೀಂ ಇಂಡಿಯಾ ನಂಬರ್ 1 ಸ್ಥಾನ ಪಡೆದುಕೊಂಡಿದ್ದು, ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಈ ಮೊದಲು ಇಂಥಾದ್ದೊಂದು ಸಾಧನೆಯನ್ನ ದಕ್ಷಿಣಾ ಆಫ್ರಿಕಾ ಮಾಡಿದ್ದು ಇದೀಗ ಭಾರತ ವಿಶ್ವದ ಎರಡನೇ ತಂಡ ಎಂಬ ಕೀರ್ತಿ ಪಡೆದಿದೆ. ಅಲ್ಲದೆ ಏಷ್ಯಾದ ಮೊದಲ ಕ್ರಿಕೆಟ್ ಟೀಂ ಎಂಬ ಹೆಗ್ಗುರುತು ಮೂಡಿಸಿದೆ.

ಫೆಬ್ರವರಿ 15 ಟೀಂ ಇಂಡಿಯಾ ಪಾಲಿಗೆ ವಿಶೇಷ ದಿನವಾಗಿದ್ದು, ಟೀಂ ಇಂಡಿಯಾ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದೆ. ಟೀಂ ಇಂಡಿಯಾ ಜೊತೆಗೆ ತಂಡದ ಮೂವರು ಆಟಗಾರರು ಕೂಡ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ. ಒಟ್ಟು 6 ವಿಭಾಗಗಳಲ್ಲಿ ಭಾರತ ನಂ.1 ಆಗಿದೆ.

ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಎರಡನೇ ಸ್ಥಾನದಿಂದ ನಂಬರ್ 1 ಸ್ಥಾನಕ್ಕೆ ಜಿಗಿದಿದ್ದು, ತಂಡದ ಜೊತೆಗೆ ತಂಡದ ಮೂವರು ಆಟಗಾರರು ಕೂಡ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ. ಒಟ್ಟು 6 ವಿಭಾಗಗಳಲ್ಲಿ ಭಾರತ ನಂ.1 ಆಗಿದೆ. ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಆಗುವ ಮುನ್ನ ಟೀಂ ಇಂಡಿಯಾ ವಿಶ್ವದ ನಂ.1 ಟಿ20 ಹಾಗೂ ಏಕದಿನ ತಂಡವಾಗಿ ಹೊರಹೊಮ್ಮಿತ್ತು. ಇನ್ನು ಆಟಗಾರರ ವಿಚಾರಕ್ಕೆ ಬಂದರೆ, ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಮೊಹಮ್ಮದ್ ಸಿರಾಜ್ ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್ 1 ಬೌಲರ್ ಆಗಿದ್ದಾರೆ.

ಈ ಇಬ್ಬರ ಜೊತೆಗೆ ರವೀಂದ್ರ ಜಡೇಜಾ ಕೂಡ ವಿಶ್ವದ ನಂ. 1 ಟೆಸ್ಟ್ ಆಲ್​ರೌಂಡರ್ ಎನಿಸಿಕೊಂಡಿದ್ದಾರೆ.

suddiyaana