ಐದರಲ್ಲಿ ಸೊನ್ನೆ.. 6ರಲ್ಲಿ 12! – ಇಲ್ಲಿಂದ ಸಿಗುತ್ತಾ ಮೂಳೆಗಳ ರಾಶಿ?

ಐದರಲ್ಲಿ ಸೊನ್ನೆ.. 6ರಲ್ಲಿ 12! –   ಇಲ್ಲಿಂದ ಸಿಗುತ್ತಾ ಮೂಳೆಗಳ ರಾಶಿ?

ಧರ್ಮಸ್ಥಳದಲ್ಲಿ ಮಾಸ್ಕ್ ಮ್ಯಾನ್ ತೋರಿಸಿದ 13 ಜಾಗದ ಪೈಕಿ ಪಾಯಿಂಟ್ ನಂ 1.2.3.4.5 ಜಾಗದಲ್ಲಿ ಎಷ್ಟೇ ಜಾಲಿಡಿದ್ರೂ, ಎಷ್ಡೇ ಅಗೆದ್ರು ಏನೇನು ಸಿಕ್ಕಿರಲಿಲ್ಲ.. ಎರಡು ದಿನ ಏನೂ ಸಿಕ್ಕಿಲ್ಲ ಅನ್ನೋದ್ದನ್ನ ನೋಡಿದ ಜನ ಏನೇನು ಇಲ್ಲ..ಆ ಮಾಸ್ಕ್ ಮ್ಯಾನ್ ಬುರಡೆ ಬಿಡ್ತಾ ಇದ್ದಾನೆ ಅಂತ ಎಲ್ಲರೂ ಅಂದ್ಕೊಂಡಿದ್ರು..  ಆದ್ರೆ 3ನೇ ದಿನ ಅಂದ್ರೆ ಇವತ್ತು 6ನೇ ಜಾಗದಲ್ಲಿ ಅಗೆದಾಗ ಅಧಿಕಾರಿಗಳು ಶಾಕ್ ಆದ್ರೂ ಯಾಕಂದ್ರೆ  ಮಾಸ್ಕ್ ಮ್ಯಾನ್ ಹೇಳಿದ್ದಂತೆ ಆ ಜಾಗದಲ್ಲಿ ಮನುಷ್ಯನ ಅಸ್ತಿ ಪಂಜರ ಸಿಕ್ಕಿದೆ.. ಮಾಸ್ಕ್ ಮ್ಯಾನ್ ತೋರಿಸಿದ 6 ನೇ ಜಾಗದಲ್ಲಿ ಅಗೆಯುವಾಗ ಎಸ್‌ಐಟಿಗೆ ಮಾನವ ದೇಹದ ಕೆಲ ಮೂಳೆಗಳು ಸಿಕ್ಕಿವೆ. ಈ ಮೂಳೆಗಳು ಸೊಂಟದ ಕೆಳಬಾಗದ್ದು ಅನ್ನೋದು ಗೊತ್ತಾಗಿದೆ. ಅಗೆಯುತ್ತಾ ಹೊದಂತೆ ಹೆಚ್ಚು ಹೆಚ್ಚು ಮೂಳೆಗಳು ಸಿಗುತ್ತಾ ಹೋಗಿವೆ.. ಸಿಕ್ಕ ಎಲ್ಲಾ ಮೂಳೆಗಳನ್ನ ಪ್ಯಾಕ್ ಮಾಡಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಜೊತೆಗೆ ಮಣ್ಣಿನ ಮಾದರಿಯನ್ನ ಕೂಡ ಸಂಗ್ರಹ ಮಾಡಲಾಗಿದೆ.

ಯಾರು ಮೂಳೆ ಅಂತ ಹೇಗೆ ಕಂಡು ಹಿಡಿಯುತ್ತಾರೆ?

6ನೇ ಗುಂಡಿಯಲ್ಲಿ ಸಿಕ್ಕಿರೋ ಮೂಳೆಗಳನ್ನು ಸಂಗ್ರಹಿಸಿರೋ ಎಸ್‌ಐಟಿ  ಸೀಲ್ ಮಾಡಿ ಎಫ್‌ಎಸ್‌ಎಲ್‌ ಗೆ ರವಾನಿಸಿದೆ.. ಮನುಷ್ಯನ ಮೂಳೆಯೇ ಎಂದು ಖಚಿತಪಡಿಸಲಾಗುತ್ತೆ.. ವಯಸ್ಸು ಎಷ್ಟು ಅನ್ನೋದು ತಿಳಿದುಕೊಳ್ತಾರೆ.. ನಂತರ ಸಾವಿಗೆ ಕಾರಣಗಳನ್ನು ಪತ್ತೆಹಚ್ಚಲಾಗುತ್ತೆ. ಕೊನೆಗೆ ಡಿಎನ್‌ಎ ಅನಾಲಿಸಿಸ್ ಕೂಡಾ ಮಾಡಲಾಗುತ್ತೆ.. ಈಗ ಕೆಲ ಸುದ್ದಿ ಪ್ರಕಾರ ಇದು ಪುರಷನ ಮೂಳೆ ಅಂತ ಹೇಳ್ತಿದ್ದಾರೆ. ಆದ್ರೆ ಇದು ಪಕ್ಕಾ ಮಾಹಿತಿ ಅಲ್ಲ.. ಎಫ್‌ಎಸ್‌ಎಲ್ ವರದಿ ಬಂದ ಬಳಿಕವೇ ಪುರುಷನದ್ದಾ, ಮಹಿಳೆಯದ್ದಾ ಅನ್ನೋದು ಗೊತ್ತಾಗಲಿದೆ..

ಅನನ್ಯಾ ಭಟ್‌ಗೆ  ನ್ಯಾಯ ಸಿಗೋ ಭರವಸೆ 

ಅನನ್ಯಾ ಭಟ್‌ರ ತಾಯಿ ಸುಜಾತಾ ಭಟ್, ಕಳೆದ 22 ವರ್ಷಗಳಿಂದ ತಮ್ಮ ಮಗಳ ಕಾಣೆಯಾದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಅಸ್ಥಿಪಂಜರದ ಪತ್ತೆಯಿಂದ ಅವರಿಗೆ ಭರವಸೆಯ ಕಿರಣ ಮೂಡಿದೆ. “ನನ್ನ ಮಗಳ ಅಸ್ಥಿಯಾದರೂ ಸಿಕ್ಕರೆ, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿ ಮುಕ್ತಿ ಪಡೆಯುವೆ ಎಂದು ಈಗಗಾಲೇ ಕಣ್ಣೀರು ಹಾಕುತ್ತಾ ಅವರು ಹೇಳಿದ್ದಾರೆ. ಇದು ಕರುಳು ಕಿತ್ತು ಬರುವಂತೆ ಇತ್ತು.. ಈಗ ಸಿಕ್ಕಿರೋ ಅಸ್ತಿ ಪಂಜರವನ್ನ ಅನನ್ಯ ಭಟ್ ತಾಯಿ ಸುಜಾತಾಭಟ್ ಅವರೊಂದಿಗೆ ಡಿಎನ್‌ಎ ಹೋಲಿಕೆ ಮಾಡಲಾಗುತ್ತೆ. ಒಂದು ವೇಳೆ ಅದು ಹೊಲಿಕೆ ಆದ್ರೆ ಅದು ಅನನ್ಯ ಭಟ್‌ ಅವರದ್ದೇ ಅನ್ನೋದು ಪಕ್ಕಾ ಆಗುತ್ತೆ.. ಈಗಾಗಲೇ ಕಾಲ್ ಸೆಂಟರ್ ನಂಬರ್ ಕೊಟ್ಟಿದ್ದು ಯಾರದ್ರೂ ನಮ್ಮವರು ಮಿಸ್ ಆಗಿದ್ದಾರೆ ಅಂತ ಬಂದ್ರೆ ಅವರ ಜೊತೆ ಡಿಎನ್‌ಎ ಟೆಸ್ಟ್ ಮಾಡಿ ನೋಡಲಾಗುತ್ತೆ.

ಇನ್ನೂ ಈಗಾಗಲೇ ಅಸ್ತಿಪಂಜರ ಪತ್ತೆಯಾಗಿರೋ  ಜಾಗ ಯಾವುದೂ ಅನ್ನೋದ್ದನ್ನ ಕೂಡ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಅದು ಕಂದಾಯ ಭೂಮಿನಾ ಅಥವಾ ರಿಸರ್ವ್ ಫಾರೆಸ್ಟಾ ಅನ್ನೋ ಮಾಹಿತಿ ಕಲೆ ಹಾಕ್ತಿದ್ದಾರೆ.ಯಾಕಂದ್ರೆ ಧರ್ಮಸ್ಥಳದ ಗ್ರಾಮ ಪಂಜಾಯ್ತಿ ಅವರು ನಾವು ಈ ಪ್ರದೇಶದಲ್ಲಿ ಸಾಕಷ್ಟು ಅನಾಥ ಹೆಣಗಳನ್ನ ಹೂತು ಹಾಕಿದ್ದೇವೆ ಅದ್ರ ರೆಕಾರ್ಡ್ಸ್ ನಮ್ಮ ಬಳಿ ಇದೆ ಅನ್ನೋದ್ದನ್ನ ಹೇಳಿದ್ರು.. ಹೀಗಾಗಿ ಈ ಸಿಕ್ಕಿರೋ ಜಾಗದಲ್ಲೇ ಗ್ರಾಮ ಪಂಚಾಯ್ತಿ ಅವರು ಶವ ಸಮಾಧಿ ಮಾಡಿದ್ರಾ ಅಥವಾ ಮಾಸ್ಕ್ ಮ್ಯಾನ್ ಹೇಳಿದ್ದಂತೆ ಬೇರೆ ರೀತಿಯಲ್ಲೇ ಆಗಿ ಅವನೇ ಆ ಶವಗಳನ್ನ ಹೂತು ಹಾಕಿದ್ದನ್ನ ಅನ್ನೋದು ಇನ್ನು ಮುಂದೆ ತನಿಖೆ ಆಗುತ್ತಾ ಹೊಗುತ್ತೆ.. ಬಟ್ ಮಾಸ್ಕ್ ಮ್ಯಾನ್ ಮತ್ತು ಅವನ ಪರ ಇರೋರು ತುಂಬಾ ಕನ್ಫಿಡೆನ್ಸ್‌ ಬಂದಿದೆ. ಕಳೆದ 5 ಪಾಯಿಂಟ್ಸ್ ನದಿ ತೀರದಲ್ಲೇ ಇದಿದ್ರಿಂದ ಪ್ರವಾಹ ಬಂದಾಗ ಆಗದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿರಬಹುದು ಆಮೇಲೆ ಮತ್ತೆ ಬಂದು ಕೂತಿರಬಹುದು.. ಹೀಗಾಗಿ ಆ ಜಾಗದಲ್ಲಿ ಅಸ್ತಿಪಂಜರ ಸಿಗದೇ ಇರಬಹುದು.. ಆದ್ರೆ 6 ನೇ ಪಾಯಿಂಟ್ಸ್ ನಲ್ಲಿ ಈಗ ಅಸ್ತಿಪಂಜರ ಸಿಕ್ಕಿರೋದು ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಟ್ಟಿದೆ.. ಎಲ್ಲದ್ದಕ್ಕಿಂತ ಹೆಚ್ಚಾಗಿ ಇನ್ನೂ ಹೀಗೆ ಅಸ್ತಿಪಂಜರ ಸಿಗುತ್ತಲೇ ಹೋಗುತ್ತೆ.. ಒಂದು ಮಾಹಿತಿಯ ಪ್ರಕಾರ 9ರಿಂದ 12 ಪಾಯಿಂಟ್‌ನಲ್ಲಿ ಅತೀ ಹೆಚ್ಚು ಅಸ್ತಿಪಂಜರ ಇದೆ ಅಂತೆ. ಒಂದೇ ಜಾಗದಲ್ಲಿ 5 ಕ್ಕೂ ಹೆಚ್ಚು ಅಸ್ತಿಪಂಜರ ಸಿಗತ್ತಾ ಹೋಗಲಿದೆ ಅನ್ನೋ ಮಾಹಿತಿ ಕೂಡ ಇದೆ.. ಅದ್ರಲ್ಲೂ 11 ಮತ್ತು 12 ಪಾಯಿಂಟ್‌ನಲ್ಲಿ ಸಾಕಷ್ಟು ಅಸ್ತಿ ಪಂಜರ ಸಿಕ್ಕಿದ್ರೂ ಅಚ್ಚರಿ ಇಲ್ಲ ಅನ್ನೋ ಮಾಹಿತಿ ಇದೆ.. ಅಂದ್ರೆ ಒಂದೇ ಸಮಾಧಿಯಲ್ಲಿ 10ಕ್ಕೂ ಹೆಚ್ಚು ಅಸ್ತಿ ಪಂಜರ ಸಿಗಬಹುದು.. ಹಾಗೇ 13 ಪಾಯಿಂಟ್ಸ್ ಸಾಕಷ್ಟು ಕುತೂಹಲ ಕೆರಳಿಸಿದೆ. ಇಲ್ಲಿ ಒಂದೇ ಜಾಗದಲ್ಲಿ 20ಕ್ಕೂ ಹೆಚ್ಚು ಅಸ್ತಿ ಪಂಜರ ಸಿಗೋ ಸಾಧ್ಯತೆ ಇದೆ. ಆದ್ರೆ ಇದು ನೇತ್ರವತಿ ನದಿ ತೀರದಲ್ಲೇ ಇರೋದ್ರಿಂದ  ಈ ಜಾಗಕ್ಕೆ ಪ್ರವಾಹದ ನೀರು ನುಗ್ಗಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ  ಕೂಡ ಇದೆ.. ಹೀಗಾಗಿ ಮುಂದೆ ಅಗೆಯೋ ಅಂದ್ರೆ 9 ರಿಂದ 13ನೇ ಸಮಾಧಿಗಳಲ್ಲಿ ಅಸ್ತಿಪಂಜರ ಸಾಕಷ್ಟು ಇವೆ ಅನ್ನೋ ಮಾಹಿತಿ ಇದೆ.. ಹೀಗಾಗಿ ಮಾಸ್ಕ್ ಮ್ಯಾನ್ ಮತ್ತು ಅವನ ಪರ ಇರೋರು ಬಹಳಷ್ಟು ಕಾನ್ಪಿಡೆನ್ಸ್‌ ನಲ್ಲಿ ಇದ್ದಾರೆ..

ಐಡಿ ಕಾರ್ಡ್‌ ರಹಸ್ಯ ಬಯಲು 

6ನೇ ಗುಂಡಿಯಲ್ಲಿ ಅಸ್ಥಿಪಂಜರ ಅವಶೇಷಗಳು ಪತ್ತೆಯಾದ ಬೆನ್ನಲ್ಲೇ   ಸ್ಪಾಟ್‌ 1ರಲ್ಲಿ 2 ಐಡಿ ಕಾರ್ಡ್‌ಗಳು   ಯಾರದ್ದು ಅನ್ನೋ ರಹಸ್ಯ ಕೂಡ ಬಯಲಾಗಿದೆ. ಪಾಯಿಂಟ್‌ ನಂಬರ್‌ 1ರಲ್ಲಿ ಸಿಕ್ಕ ಪ್ಯಾನ್‌ ಕಾರ್ಡ್ ಹೋಲ್ಡರ್‌ನ ಮಾಹಿತಿ ಬಯಲಾಗಿದೆ. ಈ ಪ್ಯಾನ್‌ ಕಾರ್ಡ್ ಹೋಲ್ಡರ್‌‌ 2025ರಲ್ಲಿ ಮೃತಪಟ್ಟಿದ್ದರು. ಮಾರ್ಚ್ 2025ರಲ್ಲಿ ಜಾಂಡೀಸ್‌ನಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿಯ ತಂದೆಯನ್ನು ಎಸ್‌ಐಟಿ ಸಂರ್ಪಕಿಸಿದ್ದಾರೆ ಅನ್ನೋ ಮಾಹಿತಿ ದೊರೆತಿದೆ.

Kishor KV