ಎಲ್ರೂ ಜಾಲಿ.. RCB ಖಾಲಿ ಖಾಲಿ – ಕಡ್ಲೇಕಾಯಿ ಪರಿಷೆಗೆ ಹಣ ಉಳಿಸಿದ್ರಾ?
RCB ಜೋಕರ್ಸ್ ಮ್ಯಾನೇಜ್ ಮೆಂಟ್

ಎಲ್ರೂ ಜಾಲಿ.. RCB ಖಾಲಿ ಖಾಲಿ – ಕಡ್ಲೇಕಾಯಿ ಪರಿಷೆಗೆ ಹಣ ಉಳಿಸಿದ್ರಾ?RCB ಜೋಕರ್ಸ್ ಮ್ಯಾನೇಜ್ ಮೆಂಟ್

ಎಲ್ಲಾ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನ ಖರೀದಿ ಮಾಡ್ಕೊಂಡು ಜಾಲಿ ಜಾಲಿ ಅಂತಾ ಜಾಲಿ ಮಾಡ್ತಿದ್ದಾರೆ. ಬಟ್ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಪರ್ಸ್​ ತುಂಬಾ ಬ್ಯಾಲೆನ್ಸ್ ಇಟ್ಕೊಂಡು ಖಾಲಿ ಖಾಲಿ ಎನ್ನುವಂತಾಗಿದೆ. ಅದೇನು ಈ ಸಲನೂ ಕಪ್ ಗೆಲ್ಲೋದು ಬೇಡ ಅಂತಾನೇ ಡಿಸೈಡ್ ಮಾಡಿಕೊಂಡವ್ರಂತೆ ಬಿಡ್ಡಿಂಗ್ ಮಾಡಿದ್ದಾರೆ. ಕೈಗೆ ಸಿಗೋ ಆಟಗಾರರನ್ನೆಲ್ಲಾ ದಾರಾಳವಾಗಿ ಬಿಟ್ಟುಕೊಟ್ಟು ಕೂತಿದ್ದಾರೆ. ಫ್ರಾಂಚೈಸಿಯ ಇದೇ ಆಟ ಈಗ ಆರ್​ಸಿಬಿ ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ. ಹಾಗಾದ್ರೆ ಬೆಂಗಳೂರು ತಂಡ ಎಲ್ಲೆಲ್ಲಿ ಮಿಸ್ಟೇಕ್ಸ್ ಮಾಡಿಕೊಳ್ತು..? ಯಾರನ್ನೆಲ್ಲಾ ಬಿಟ್ಟುಕೊಡ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ – ಇತಿಹಾಸ ಪ್ರಸಿದ್ಧ ಹಬ್ಬಕ್ಕೆ ಜನಸಾಗರ

ಅಂದುಕೊಂಡಿದ್ದೆ ಒಂದು ಆಗಿದ್ದೆ ಇನ್ನೊಂದು. 83 ಕೋಟಿ ಪರ್ಸ್ ನಲ್ಲಿ ಬ್ಯಾಲೆನ್ಸ್ ಅಯ್ತೆ. ಸೊ ಪಂಜಾಬ್ ಬಿಟ್ರೆ ನಾವೇ ಹೈಎಷ್ಟ್ ಅಮೌಂಟ್ ಇಟ್ಕೊಂಡಿರೋದು. ಸ್ಟಾರ್ ಪ್ಲೇಯರ್ಸ್ ಅರಸೀಬಿಗೆ ಬರ್ತಾರೆ ಅಂತ ಕಾಯ್ತಿದ್ರೆ ಮ್ಯಾನೇಜ್ಮೆಂಟ್ ಮಾತ್ರ ಈ ಸಲನು ಕಪ್ ಬೇಡ ಅಂತ ಮೆಂಟಲಿ ಫಿಕ್ಸ್ ಆಗಿದೆ. ಕೈ ತುಂಬಾ ಕಾಸ್ ಇಟ್ಕೊಂಡು ಜೆಡ್ಡಾಗೆ ಹಾರಿದ್ದವ್ರು ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೆಗಾ ಹರಾಜಿಗೂ ಮುನ್ನ ಬೆಂಗಳೂರು ತಂಡ ಉಳುಸ್ಕೊಂಡಿದ್ದು ಮೂವರನ್ನೇ. ಸೋ ಬಿಡ್ಡಿಂಗ್ ನಲ್ಲಿ ಜಾಸ್ತಿ ಅಮೌಂಟ್ ಕೊಟ್ಟು ಒಳ್ಳೊಳ್ಳೆ ಪ್ಲೇಯರ್ಸ್ ತಗೋಳ್ತಾರೆ ಅಂದ್ರೆ ಫ್ರಾಂಚೈಸಿ ಮಾಲೀಕರು ಬಂದ ಪುಟ್ಟ ಹೋದ ಪುಟ್ಟ ಅಂತ ಬಿಡ್ಡಿಂಗ್​ನಲ್ಲೀ ಚೆಲ್ಲಾಟ ಆಡಿದ್ರು.

ಬರೀ 14 ಕೋಟಿಗೆ ದೆಹಲಿ ಪಾಲಾದ ಕನ್ನಡದ ಕೆಎಲ್ ರಾಹುಲ್!

ಟೀಮ್ ಇಂಡಿಯಾ ಸ್ಟಾರ್​ ವಿಕೆಟ್ ಕೀಪರ್ ಬ್ಯಾಟರ್​ ಕೆಎಲ್ ರಾಹುಲ್ ಖರೀದಿಗೆ ಬೆಂಗಳೂರು ಫ್ರಾಂಚೈಸಿ ಇಂಟ್ರೆಸ್ಟ್ ತೋರಿಸ್ಲೇ ಇಲ್ಲ. ಲೋಕಲ್ ಬಾಯ್​ ರಾಹುಲ್​ ಆರ್​ಸಿಬಿ ಖರೀದಿಸುವುದು ಪಕ್ಕಾ ಎಂದು ಮೂಲಗಳು ಹೇಳಿದ್ದವು. ಬಟ್ ತನ್ನ ಪರ್ಸ್​​ನಲ್ಲಿ ದುಡ್ಡಿದ್ದರೂ ಬಿಚ್ಚಲು ಹಿಂದೆ ಮುಂದೆ ನೋಡಿದ್ರು. ಎರಡನೇ ಸೆಟ್​ನಲ್ಲಿ 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಕನ್ನಡಿಗ ಕೆಎಲ್ ರಾಹುಲ್ ಖರೀದಿಗೆ ಆರ್‌ಸಿಬಿ ಆರಂಭದಿಂದಲೇ ಬಿಡ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಬಲ ಪೈಪೋಟಿ ನೀಡ್ತು. ಸೆಕೆಂಡ್ ಕೂಡ ಗ್ಯಾಪ್ ಕೊಡದೆ ಉಭಯ ಫ್ರಾಂಚೈಸಿಗಳು ಜಿದ್ದಿಗೆ ಬಿದ್ದವು. ಇದು ಆರ್​ಸಿಬಿ ಫ್ಯಾನ್ಸ್ ಗಂತೂ ಫುಲ್ ಹ್ಯಾಟಿ ಎನ್ನುವಂತಿತ್ತು. ಎಷ್ಟು ಕೋಟಿಯಾದ್ರೂ ಆರ್​ಸಿಬಿ ಖರೀದಿ ಮಾಡುತ್ತೆ ಅನ್ಕೊಂಡಿದ್ರು. ಬಟ್ ಆರಂಭದಲ್ಲಿ ಬಿಡ್ ಮಾಡಿದ ರೆಡ್ ಆರ್ಮಿ, 10 ಕೋಟಿ ದಾಟುತ್ತಿದ್ದಂತೆಯೇ ಸೈಲೆಂಟ್ ಆಯ್ತು. ಅಷ್ಟರಲ್ಲಿ ಅಖಾಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಅಖಾಡಕ್ಕೆ ಎಂಟ್ರಿಕೊಟ್ಟಿತು. ಕೊನೆಗೆ ಕೆಎಲ್ ರಾಹುಲ್ 14 ಕೋಟಿಗೆ ಡೆಲ್ಲಿ ಪಾಲಾದರು. ಕ್ಯಾಪ್ಟನ್ಸಿ ಮೆಟಿರಿಯಲ್, ಅದ್ಭುತ ಫೀಲ್ಡರ್​, ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡಿಗನಾಗಿದ್ದ ರಾಹುಲ್​ಗೆ 14 ಕೋಟಿ ಮೇಲೆ ಬಿಡ್​ ಸಲ್ಲಿಸದೇ ಇರುವುದು ನಾಚಿಕೆ ಅನ್ಸಿದೆ.

ಸ್ಟಾರ್ ಪ್ಲೇಯರ್ಸ್ ಇದ್ರೂ ಬಿಡ್ ಮಾಡದೇ ಸೈಲೆಂಟ್!

ಇನ್ನು ಆರ್​ಸಿಬಿ ದೇಶೀ ಆಟಗಾರರಿಗಿಂತ ವಿದೇಶಿಗರ ಮೇಲೆಯೇ ಹೆಚ್ಚು ಆಸಕ್ತಿ ತೋರಿಸಿತ್ತು.  8.75 ಕೋಟಿ ರೂಪಾಯಿಗೆ ಇಂಗ್ಲೆಂಡ್ ತಂಡದ ಹೊಡಿಬಡಿ ಆಟಗಾರ ಲಿಯಾಮ್ ಲಿವಿಂಗ್​ಸ್ಟನ್ ಖರೀದಿಸಿದ್ದ ಆರ್​ಸಿಬಿ ಕೈತುಂಬಾ ಕಾಸಿದ್ರೂ ಹಿಂದೆ ಮುಂದೆ ನೋಡಿದ್ರು. ಹಾಗಂತ ಬರೀ ರಾಹುಲ್​ಗೆ ಮಾತ್ರವಲ್ಲ, ಹೊಡಿಬಡಿ ಆಟಗಾರ ಡೇವಿಡ್ ಮಿಲ್ಲರ್ (7.5 ಕೋಟಿ), ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ (11.75 ಕೋಟಿ)​, ಭಾರತದ ವೇಗಿ ಮೊಹಮ್ಮದ್ ಸಿರಾಜ್ (12.25 ಕೋಟಿ), ಸೌತ್ ಆಫ್ರಿಕಾದ ಕಗಿಸೋ ರಬಾಡ (10.75 ಕೋಟಿ), ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್​ (15.75 ಕೋಟಿ), ಮೊಹಮ್ಮದ್ ಶಮಿ (10 ಕೋಟಿ), ಡೆವೋನ್ ಕಾನ್ವೆ (6.75 ಕೋಟಿ) ಸೇರಿದಂತೆ ಪ್ರಮುಖ ಆಟಗಾರರನ್ನೇ ಖರೀದಿಸದೆ ಕೈಬಿಟ್ಟಿತು. ಪ್ರತಿ ಆವೃತ್ತಿಯಲ್ಲೂ ಮಾಡುವ ತಪ್ಪನ್ನೇ ಈ ಬಾರಿಯೂ ರಿಪೀಟ್ ಮಾಡಿದೆ.

ಟ್ರೋಲ್ ನಲ್ಲೇ ಆರ್ ಸಿಬಿ ಮ್ಯಾನೇಜ್ ಮೆಂಟ್ ಜಾಡಿಸಿದ ಫ್ಯಾನ್ಸ್!

ಪಂಜಾಬ್ ಕಿಂಗ್ಸ್, ಹೈದ್ರಾಬಾದ್ ಫ್ರಾಂಚೈಸಿಗಳು ನಾ ಮುಂದು ತಾ ಮುಂದು ಅಂತಾ ಬಿಡ್ಡಿಂಗ್ ಮಾಡ್ತಿದ್ರೆ ಬೆಂಗಳೂರಿನವ್ರು ಮಾತ್ರ ಇದ್ದೂ ಇಲ್ಲದಂತಿದ್ರು. ಇದ್ರಿಂದ ಸಿಟ್ಟಾಗಿರೋ ಫ್ಯಾನ್ಸ್ ಬಗೆಬಗೆಯಾಗಿ ಟ್ರೋಲ್ ಮಾಡ್ತಿದ್ದಾರೆ. ಆರ್ ಸಿಬಿ ಮ್ಯೂಚುಯಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡಲು ಹಣವನ್ನು ಉಳಿಸಿಕೊಳ್ತಿದೆ ಎಂದು ಕೆಲವ್ರು ಕಾಲೆಳೆದಿದ್ದಾರೆ. ಇನ್ನೂ ಹಲವು ಅಭಿಮಾನಿಗಳು ಆರ್ ಸಿಬಿ ಕಪ್ ಖರೀದಿ ಮಾಡಲು ಎಲ್ಲಾ ಹಣವನ್ನು ಉಳಿಸಿಕೊಳ್ಳುತ್ತಿದೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನೊಂದಷ್ಟು ಜನ ವಿರಾಟ್ ಕೊಹ್ಲಿ ಮಗನಿಗೆ ಲಂಡನ್‌ನಲ್ಲಿ ಸ್ಕೂಲ್ ಫೀಸ್ ಕಟ್ಟಲು ಹಣವನ್ನು ಉಳಿಸಿಕೊಳ್ಳುತ್ತಿದೆ ಎಂದು ತಮಾಷೆ ಮಾಡಿದ್ದಾರೆ.  ಹಾಗೇ  ಆರ್‍ ಸಿಬಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲು ಕಾಸು ಉಳಿಸಿಕೊಳ್ಳುತ್ತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.  ಇನ್ನು ಬೆಂಗಳೂರಿನ ಬಸವನಗುಡಿಯಲ್ಲಿ ಕಡ್ಲೇಕಾಯಿ ಪರಿಷೆ ನಡಿತಾ ಇರೋದ್ರಿಂದ ಪರಿಷೆಯಲ್ಲಿ ಕಡ್ಲೆಕಾಯಿ ಕೊಳ್ಳೋಕೆ ಸೇವಿಂಗ್ಸ್ ಮಾಡ್ತಿದ್ದಾರೆ ಅಂತಾ ಟೀಕಿಸಿದ್ದಾರೆ.

ಫ್ರಾಂಚೈಸಿಯ ಈ ಹುಚ್ಚಾಚಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಹಲವು ಕರ್ನಾಟಕದ ಕ್ರಿಕೆಟಿಗರು ಕೂಡ   ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಹುಲ್‌ರನ್ನು ಅಷ್ಟೇ ಅಲ್ಲ ಅಭಿನವ್ ಮನೋಹರ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್ ರಂತಹ ಕರ್ನಾಟಕದ ಆಟಗಾರರನ್ನು ಕೂಡ ಆರ್ ಸಿಬಿ ಖರೀದಿ ಮಾಡಿಲ್ಲ ಅಂತಾ ಕಿಡಿ ಕಾರಿದ್ದಾರೆ. ಒಟ್ನಲ್ಲಿ ಬೆಂಗಳೂರು ತಂಡದ ಮಾಲೀಕರಿಗೆ ಕಪ್ ಗೆಲ್ಲೋದೇ ಇಷ್ಟ ಇಲ್ಲ ಅನ್ಸುತ್ತೆ. ಅದಕ್ಕೇ ಕೈಯಲ್ಲಿ ಕಾಸಿದ್ರೂ ಒಳ್ಳೆ ಪ್ಲೇಯರ್ಸ್ ನ ಕೊಂಡುಕೊಳ್ಳೋ ಮನಸ್ಸು ಮಾಡಿಲ್ಲ. ಹರಾಜಿನಲ್ಲೇ ಹಿಂಗೆ ಫ್ಲ್ಯಾಪ್ ಶೋ ತೋರಿಸಿದ್ರೆ 2025ರ ಐಪಿಎಲ್​ನಲ್ಲಿ ಕಪ್ ಗೆಲ್ಲೋಕೆ ಸಾಧ್ಯನಾ ಅನ್ನೋದೇ ಅಭಿಮಾನಿಗಳ ಪ್ರಶ್ನೆ.

Shwetha M

Leave a Reply

Your email address will not be published. Required fields are marked *