ಎಂಬಪ್ಪೆ ಪಾಲಾದ ‘ಗೋಲ್ಡನ್ ಬೂಟ್’- ಮೆಸ್ಸಿ ಕೈ ಸೇರಿದ ‘ಗೋಲ್ಡನ್ ಬಾಲ್’

ಎಂಬಪ್ಪೆ ಪಾಲಾದ ‘ಗೋಲ್ಡನ್ ಬೂಟ್’- ಮೆಸ್ಸಿ ಕೈ ಸೇರಿದ ‘ಗೋಲ್ಡನ್ ಬಾಲ್’

ಕತಾರ್: ಫಿಫಾ ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಲಿಯೋನೆಲ್ ಮೆಸ್ಸಿ ಪಾಲಾಗಿದೆ. ಆದರೆ, ಗೋಲ್ಡನ್ ಬೂಟ್ ಈ ಬಾರಿ ಮೆಸ್ಸಿಗೆ ದೊರೆಯಲಿದೆ ಅಂತಾ ಅದೆಷ್ಟೋ ಅಭಿಮಾನಿಗಳು ಕಾಯ್ತಿದ್ರು. ಆದರೆ ಪ್ರತಿಷ್ಠಿತ ಗೋಲ್ಡನ್ ಬೂಟ್ ಫ್ರಾನ್ಸ್ ನ ಸ್ಟಾರ್ ಆಟಗಾರ ಕಿಲಿಯನ್ ಎಂಬಪ್ಪೆ ಪಡೆಯುವಲ್ಲಿ ಯಶಸ್ವೀಯಾಗಿದ್ದಾರೆ.

ಇದನ್ನೂ ಓದಿ:  ಫಿಪಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಚಾಂಪಿಯನ್ – ಮೆಸ್ಸಿ ಮ್ಯಾಜಿಕ್‌ಗೆ ಅಭಿಮಾನಿಗಳು ಫಿದಾ

ಈ ಬಾರಿಯ ವಿಶ್ವಕಪ್ ಎತ್ತಿಹಿಡಿಯುವ ಫೆವರೇಟ್ ತಂಡವೆನಿಸಿಕೊಂಡ ಅರ್ಜೆಂಟೀನಾ ಕೊನೆಗೂ ಅಭಿಮಾನಿಗಳ ಆಸೆಯಂತೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಇದರ ಜೊತೆಗೆ ಕೋಟಿ ಕೋಟಿ ಅಭಿಮಾನಿಗಳ ಹೃದಯಗೆದ್ದಿರುವ ಲಿಯೋನೆಲ್ ಮೆಸ್ಸಿ ಶ್ರೇಷ್ಠ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಫೈನಲ್‌ನಲ್ಲಿ ಎರಡು ಗೋಲುಗಳನ್ನ ಗಳಿಸಿದ ಮೆಸ್ಸಿ, ಟೂರ್ನಿಯಲ್ಲಿ ಒಟ್ಟು ಏಳು ಗೋಲುಗಳನ್ನ ದಾಖಲಿಸಿದ್ದರು. ಆದರೆ ಟೂರ್ನಿಯಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಫ್ರಾನ್ಸ್‌ನ ಕಿಲಿಯನ್ ಎಂಬಪ್ಪೆ ಪಡೆದುಕೊಂಡರು. ಫೈನಲ್‌ನಲ್ಲಿ ಎಂಬಪ್ಪೆ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಟೂರ್ನಿಯ ಅತ್ಯುತ್ತಮ ಗೋಲ್‌ ಕೀಪರ್‌ಗೆ ನೀಡುವ ಗೋಲ್ಡನ್ ಗ್ಲೋವ್ ಪ್ರಶಸ್ತಿ ಅರ್ಜೆಂಟೀನಾದ ಎಮಿಲಿಯಾನೋ ಮಾರ್ಟಿನೆಜ್ ಕೈ ಸೇರಿತು. ಟೂರ್ನಿಯ ಉದಯೋನ್ಮುಖ ಆಟಗಾರ ಎಂಬ ಗೌರವ, ಅರ್ಜೆಂಟೀನಾ ಆಟಗಾರ ಎಂಜೋ ಫೆರ್ನಾಂಡಿಸ್ ಗೆ ದಕ್ಕಿದೆ.

suddiyaana