ಈ ಪಾತ್ರೆಗಳಲ್ಲಿ ಹಾಲು ಕಾಯಿಸುವ ಮುನ್ನ ಎಚ್ಚರ! – ಹಾಲು ಕೆಡೋದು ಮಾತ್ರವಲ್ಲ.. ಆರೋಗ್ಯಕ್ಕೂ ಕಂಟಕ!

ಅಡುಗೆ ಅಂತಾ ಬಂದಾಗ ರುಚಿ ಜೊತೆಗೆ ಶುಚಿಯೂ ಮುಖ್ಯ. ಯಾವ ಪದಾರ್ಥಗಳನ್ನ ಬಳಸಬೇಕು ಅಂತಾ ತಿಳಿದುಕೊಳ್ಳೋದ್ರ ಜೊತೆಗೆ ಯಾವ ಪಾತ್ರೆಗಳಲ್ಲಿ ಅಡುವೆ ಮಾಡಬೇಕು ಅನ್ನೋ ಅರಿವು ಕೂಡ ಇರಬೇಕು. ಹಾಲು ಕಾಯಿಸುವಾಗ ನೀವು ಈ ಪಾತ್ರೆಗಳನ್ನ ಬಳಸಿದ್ರೆ ಆರೋಗ್ಯ ಕೆಡುವುದು ಪಕ್ಕಾ!
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಫ್ರೆಂಡ್ಶಿಪ್ ಮಾಡೋ ಮುನ್ನ ಎಚ್ಚರ! - ಮಹಿಳೆ ಹೆಸರಲ್ಲಿ 80 ವರ್ಷದ ವೃದ್ಧನಿಗೆ ಕೋಟಿ ಕೋಟಿ ಪಂಗನಾಮ!
ಅಡುಗೆ ಮಾಡುವಾಗ ತರಕಾರಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೇವೆ ಆದರೆ, ಆಹಾರವನ್ನು ಬೇಯಿಸುವ ಪಾತ್ರೆಗಳನ್ನ ಶುಚಿಯಾಗಿಟ್ಟುಕೊಳ್ಳುವುದು ಮುಖ್ಯ. ಇಲ್ಲದಿದ್ರೆ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಬರುತ್ತೆ. ಹಾಲು ಕಾಯಿಸುವಾಗಲೂ ಕೆಲವೊಂದು ಪಾತ್ರೆಗಳನ್ನ ಬಳಸಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಅಲ್ಯೂಮಿನಿಯಂ ಪಾತ್ರೆಗಳು: ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಹಾಲನ್ನು ಕುದಿಸುವುದು ಅಥವಾ ಬೇಯಿಸುವುದು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ದೀರ್ಘಕಾಲ ಹಾಲನ್ನು ಕುದಿಸುವುದರಿಂದ ಹಾಲಿನಲ್ಲಿ ಅಲ್ಯೂಮಿನಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದು ಆಲ್ಝೈಮರ್ ಕಾಯಿಲೆಯಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಗಾಜಿನ ಜಾರ್ : ಗಾಜಿನ ಪಾತ್ರೆಗಳಲ್ಲಿ ಹಾಲನ್ನು ಕುದಿಸುವುದು ಸುರಕ್ಷಿತ. ಇದು ಪ್ರತಿಕ್ರಿಯಾತ್ಮಕವಲ್ಲ. ಆದ್ದರಿಂದ ಹಾಲಿನೊಂದಿಗೆ ಏನೂ ಬೆರೆಯುವುದಿಲ್ಲ. ಉತ್ತಮ ಗುಣಮಟ್ಟದ ಮತ್ತು ಆಹಾರ ದರ್ಜೆಯ ಉಕ್ಕಿನಲ್ಲಿ ಹಾಲನ್ನು ಕುದಿಸುವುದು ಸುರಕ್ಷಿತ..
ತಾಮ್ರದ ಪಾತ್ರೆಗಳು : ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ತಾಮ್ರದ ಪಾತ್ರೆಯಲ್ಲಿ ಬೇಯಿಸಬಾರದು. ಹಾಲನ್ನು ತಾಮ್ರದಲ್ಲಿ ಬಿಸಿ ಮಾಡಿದ ತಕ್ಷಣ, ಅದರ ಕಣಗಳು ಹಾಲಿನಲ್ಲಿ ಕರಗಿ ಹಾಲು ವಿಷಕಾರಿಯಾಗುತ್ತದೆ.

ನೋಡಿರಿ

