ಇಲ್ಲಿ ಶಿಸ್ತಿನ ಪಾಠ, ಮಕ್ಕಳಿಗಿಲ್ಲ ಪುಸ್ತಕದ ಹೊರೆ – ಕೋಟ್ಯಾಧಿಪತಿಗಳ ಮಕ್ಕಳೂ ಕಸ ಎತ್ತಲೇ ಬೇಕು!

ಶಿಕ್ಷಣ ವ್ಯವಸ್ಥೆ ಒಂದೊಂದು ದೇಶದಲ್ಲಿ ಬೇರೆ ಬೇರೆ ತರ ಇರುತ್ತೆ.. ನಮ್ಮ ದೇಶದಲ್ಲಿ ಮಕ್ಕಳು ಮಾತನಾಡುವುದ್ದಕ್ಕೆ ಕಲಿಯುವ ಮುಂಚೆಯೇ ಎಬಿಸಿಡಿಯನ್ನ ಕಲಿಸುತ್ತಾರೆ. ಆದ್ರೆ ಜೀವನದ ಮೌಲ್ಯವನ್ನ ಕಲಿಸುವುದು ಮರೆತಿರುತ್ತಾರೆ. ಆದ್ರೆ ಜಪಾನ್ನಲ್ಲಿ ಸುಮಾರು 10 ವರ್ಷದ ವಯಸ್ಸು ತಲುಪುವವರೆಗೆ ಮಕ್ಕಳಿಗೆ ಯಾವುದೇ ದೊಡ್ಡ ಪರೀಕ್ಷೆಗಳನ್ನು ನಡೆಸುವುದಿಲ್ಲ. ಮೊದಲ 3 ರಿಂದ 4 ವರ್ಷಗಳ ಕಾಲ ಶಾಲೆಯಲ್ಲಿ ಮಕ್ಕಳಿಗೆ ಅಂಕಗಳು ಅಥವಾ ಸ್ಪರ್ಧೆಯ ಒತ್ತಡ ನೀಡುವುದಿಲ್ಲ. ಈ ಅವಧಿಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಯಾಕೆಂದರೆ, ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳಾಗಿ ರೂಪಿಸುವುದು ಶಿಕ್ಷಣದ ಮುಖ್ಯ ಗುರಿ ಎಂದು ಅಲ್ಲಿ ನಂಬಲಾಗುತ್ತದೆ.

ಜಪಾನ್ನ ಶಾಲೆಗಳಲ್ಲಿ ಗಣಿತ ಅಥವಾ ವಿಜ್ಞಾನಕ್ಕೂ ಮುನ್ನ ಮಕ್ಕಳಿಗೆ ನೈತಿಕ ಮೌಲ್ಯಗಳು ಮತ್ತು ಶಿಷ್ಟಾಚಾರಗಳನ್ನು ಕಲಿಸಲಾಗುತ್ತದೆ. ಇತರರನ್ನು ಗೌರವಿಸುವುದು, ವಿಶೇಷವಾಗಿ ಹಿರಿಯರನ್ನು ಗೌರವಿಸುವುದು, ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಪ್ರೀತಿ ಹೊಂದುವುದು, ಸತ್ಯನಿಷ್ಠೆ, ಸ್ವಯಂ ನಿಯಂತ್ರಣ ಮತ್ತು ಸತ್ಯವನ್ನೇ ಹೇಳುವಂತಹ ಗುಣಗಳನ್ನು ಮಕ್ಕಳು ಅಲ್ಲಿ ಮೊದಲಿಗೆ ಕಲಿಯುತ್ತಾರೆ. ಈ ರೀತಿಯ ಶಿಕ್ಷಣದಿಂದ ಜಪಾನ್ ಮಕ್ಕಳು ಶಿಸ್ತು, ಸಹನೆ ಮತ್ತು ಹೊಣೆಗಾರಿಕೆಯಲ್ಲಿ ವಿಶ್ವದಲ್ಲೇ ಉತ್ತಮ ಎಂದು ಪರಿಗಣಿಸಲಾಗಿದೆ.

ಜಪಾನ್ ಶಾಲೆಗಳ ಮತ್ತೊಂದು ವಿಶಿಷ್ಟ ಅಂಶವೆಂದರೆ ಅಲ್ಲಿ ಸ್ವಚ್ಛತೆಗಾಗಿ ಪ್ರತ್ಯೇಕ ಕೆಲಸಗಾರರು ಇರುವುದಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ತಮ್ಮ ತರಗತಿ ಕೊಠಡಿಗಳು, ದಾರಿಗಳು ಮತ್ತು ಕೆಲವೊಮ್ಮೆ ಶೌಚಾಲಯಗಳನ್ನೂ ತಾವೇ ಸ್ವಚ್ಛಗೊಳಿಸುತ್ತಾರೆ. ಈ ವಿಧಾನವನ್ನು ಓ ಸೋಜಿ ಎಂದು ಕರೆಯುತ್ತಾರೆ.
ಜಪಾನ್ನಲ್ಲಿ ಮಧ್ಯಾಹ್ನದ ಊಟ ಸಮಯವೂ ಒಂದು ರೀತಿಯ ತರಬೇತಿಯಂತೆಯೇ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಊಟವನ್ನು ತಾವೇ ಹಂಚಿಕೊಳ್ಳುತ್ತಾರೆ ಮತ್ತು ಶಿಕ್ಷಕರೊಂದಿಗೆ ಕೂತು ಊಟ ಮಾಡುತ್ತಾರೆ. ಊಟದ ನಂತರ ಬಳಕೆಯಾದ ಪಾತ್ರೆಗಳು ಅಥವಾ ಹಾಲಿನ ಕಾರ್ಟನ್ಗಳನ್ನು ತಾವೇ ಸ್ವಚ್ಛಗೊಳಿಸಿ ಮರುಬಳಕೆಗೆ ಸಿದ್ಧಪಡಿಸುತ್ತಾರೆ.

ನೋಡಿರಿ

