ಇಂಗ್ಲೆಂಡ್ ಪರ ಬ್ಯಾಟರ್ ಗಳ ಭರ್ಜರಿ ಪ್ರದರ್ಶನ -10 ವರ್ಷಗಳ ಬಳಿಕ ಭಾರತ ಕೆಟ್ಟ ದಾಖಲೆ  

ಇಂಗ್ಲೆಂಡ್ ಪರ ಬ್ಯಾಟರ್ ಗಳ ಭರ್ಜರಿ ಪ್ರದರ್ಶನ -10 ವರ್ಷಗಳ ಬಳಿಕ ಭಾರತ ಕೆಟ್ಟ ದಾಖಲೆ  

ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ 4ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ರು. ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ ಫಸ್ಟ್ ಇನ್ನಿಂಗ್ಸ್​ನಲ್ಲಿ 358 ರನ್​ಗಳನ್ನ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪಡೆ ಭಾರತದ ಬೌಲರ್​ಗಳ ಬೆವರಿಳಿಸಿದ್ದಾರೆ.

ಇದನ್ನೂ ಓದಿ : ಪೆಟ್ಟು ತಿಂದಲ್ಲೇ ರಿಷಭ್ ಪಂತ್ ಅರ್ಧಶತಕ – ನೋವಲ್ಲೇ ಆಡಿದ್ದರು ಕುಂಬ್ಳೆ, ಸಚಿನ್!

ಟೀಂ ಇಂಡಿಯಾ ನೀಡಿದ್ದ 350+ ಸ್ಕೋರ್ ನೋಡಿದಾಗ ಒಂದು ರೇಂಜ್​ಗೆ ಬಿಗ್ ಸ್ಕೋರ್ ಅನ್ಸಿದ್ದು ನಿಜ. ಬಟ್ ಯಾವಾಗ ಇಂಗ್ಲೆಂಡ್ ಬ್ಯಾಟಿಂಗ್​ಗೆ ಇಳೀತೋ ಅಲ್ಲಿ ಸವಾಲಾಗಿದ್ದು ರನ್ಸ್ ಅಲ್ಲ ವಿಕೆಟ್ ತೆಗೆಯೋದು ಅನ್ನೋದು ಗೊತ್ತಾಗೋಕೆ ಜಾಸ್ತಿ ಹೊತ್ತು ಬೇಕಾಗ್ಲಿಲ್ಲ. ಓಪನರ್ಸ್ ಆಗಿ ಕಣಕ್ಕಿಳಿದ ಝಾಕ್ ಕ್ರಾಲಿ 84 ರನ್ಸ್ ಗಳಿಸಿದ್ರೆ ಬೆನ್ ಡಕೆಟ್ ಅಂತೂ ಅಟ್ಯಾಕಿಂಗ್ ಮೋಡ್​ನಲ್ಲೇ ಬ್ಯಾಟ್ ಬೀಸಿ 94 ರನ್ಸ್ ಬಾರಿಸಿದ್ರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲೀ ಪೋಪ್ 77 ರನ್ ಗಳಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋ ರೂಟ್ ಅಂತೂ ಭರ್ಜರಿ ಶತಕದೊಂದಿಗೆ 150 ರನ್​ಗಳ ಇನಿಂಗ್ಸ್ ಆಡಿದರು. ಆ ಬಳಿಕ ಬಂದ ಬೆನ್ ಸ್ಟೋಕ್ಸ್ ಕೂಡ ಬೌಲರ್​​ಗಳ ಬೆಂಡೆತ್ತಿದ್ರು. 77 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡು ಬರೋಬ್ಬರಿ 544 ರನ್​ಗಳಿಸಿದೆ.

ಟೀಂ ಇಂಡಿಯಾದ ಬೌಲಿಂಗ್ ಅದೆಷ್ಟು ವೀಕ್ ಆಗಿದೆ ಅನ್ನೋದಕ್ಕೆ ಇಂಗ್ಲೆಂಡ್​ ಗಳಿಸಿದ ಸ್ಕೋರೇ ಸಾಕ್ಷಿ. ಅದ್ರಲ್ಲೂ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ವಿರುದ್ಧ ವಿದೇಶಿ ಟೆಸ್ಟ್​ನಲ್ಲಿ ತಂಡವೊಂದು 500+ ರನ್ ಕಲೆಹಾಕಿದೆ. ಅಂದರೆ ಕೊನೆಯ ಬಾರಿ ಭಾರತ ತಂಡವು ವಿದೇಶಿ ಟೆಸ್ಟ್​ನಲ್ಲಿ 500+ ರನ್ ನೀಡಿದ್ದು 2015 ರಲ್ಲಿ. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್​ಗಳು 572 ರನ್ ನೀಡಿದ್ದರು. ಇದಾದ ಬಳಿಕ 2016 ರಿಂದ ಟೀಮ್ ಇಂಡಿಯಾ ಒಮ್ಮೆಯೂ ವಿದೇಶಿ ಟೆಸ್ಟ್​​​ನಲ್ಲಿ 500+ ರನ್​ ನೀಡಿರಲಿಲ್ಲ. ಆದರೆ ಈ ಬಾರಿ 544* ರನ್​ ಕಲೆಹಾಕುವುದರೊಂದಿಗೆ ಟೀಮ್ ಇಂಡಿಯಾದ ದಶಕದ ಪಾರುಪತ್ಯಕ್ಕೆ ಇಂಗ್ಲೆಂಡ್ ತೆರೆ ಎಳೆದಿದೆ. ಭಾರತಕ್ಕಿಂತ 186 ರನ್ ಲೀಡ್ ಪಡೆದಿದೆ. ಈ ಮೂಲಕ ಬೃಹತ್ ಮೊತ್ತದತ್ತ ಆಂಗ್ಲ ಪಡೆ ಮುನ್ನುಗ್ಗಿದೆ. ಸ್ಟೋಕ್ಸ್ ಇನ್ನೂ ಕ್ರಿಸ್ ಕಾಯ್ದುಕೊಂಡಿದ್ದಾರೆ. ಇನ್ನೂ ಮೂರು ವಿಕೆಟ್​​ಗಳು ಇಂಗ್ಲೆಂಡ್ ಬಳಿ ಇವೆ. ಹೀಗಾಗಿ 600+ ರನ್ಸ್ ಬಂದ್ರೂ ಅಚ್ಚರಿ ಇಲ್ಲ.

ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್​ಗೆ ಇಳಿದಿದ್ದರಿಂದ ಅವ್ರ ಮೇಲೆ ಸಾಕಷ್ಟು ಹೋಪ್ಸ್ ಇತ್ತು. ಬಟ್ ಬುಮ್ರಾ ಕೈಯಿಂದಲೂ ವಿಕೆಟ್ ತೆಗೆಯೋಕೂ ಸಾಧ್ಯ ಆಗಿರಲಿಲ್ಲ. ಕೊನೆಗೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಜೇಮಿ ಸ್ಮಿತ್ ಒಬ್ರ ವಿಕೆಟ್ ಉರುಳಿಸಿದ್ರು. ಇನ್ನು ಸಿರಾಜ್ ಕಥೆಯೂ ಅದೇ. ಟಾಪ್ ಆರ್ಡರ್ ಬ್ಯಾಟರ್ಸ್ ವಿಕೆಟ್ ತೆಗೆಯದೇ ಇದ್ರೂ ಕೊನೆಯಲ್ಲಿ ಕ್ರಿಸ್ ವೋಕ್ಸ್ ರನ್ನ ಬೌಲ್ಡ್ ಮಾಡಿದ್ರು. ಉಳಿದಂತೆ ಜಡ್ಡು ಮತ್ತು ಸುಂದರ್, ಹಾಗೇ ಅನ್ಶುಲ್ ತಲಾ ಒಂದೊಂದು ವಿಕೆಟ್ ಎಗರಿಸಿದ್ರು. 135 ಓವರ್‌ ಬೌಲ್‌ ಮಾಡಿದ ಭಾರತದ ಬೌಲರ್ಸ್‌ 7 ವಿಕೆಟ್‌ ಪಡೆಯುವಲ್ಲಿ ಮಾತ್ರ ಸಕ್ಸಸ್ ಆದ್ರು. ಅದೂ ಕೂಡ ಮೂರನೇ ದಿನ ಸಿಕ್ಕಿದ್ದೇ ಐದು ವಿಕೆಟ್. ಅಂದ್ರೆ ಆ ಮಟ್ಟಿಗೆ ಆಂಗ್ಲ ಬ್ಯಾಟರ್ಸ್ ಕಾಟ ಕೊಟ್ರು.

Shantha Kumari