ಆಲ್ರೌಂಡರ್ ಪಾಂಡ್ಯ ಪವರ್ ಕಟ್! ಹಾರ್ದಿಕ್ ಜಾಲಿ ಲೈಫ್ ಈಗ ಖಾಲಿ!
ಯಾರಿಗೂ ಬೇಡವಾದ್ರಾ T20I ಹೀರೋ?

ಆಲ್ರೌಂಡರ್ ಪಾಂಡ್ಯ ಪವರ್ ಕಟ್!  ಹಾರ್ದಿಕ್ ಜಾಲಿ ಲೈಫ್ ಈಗ ಖಾಲಿ!ಯಾರಿಗೂ ಬೇಡವಾದ್ರಾ T20I ಹೀರೋ?

ತುಂಬಾ ಜಾಲಿ ಜಾಲಿಯಾಗಿದ್ದ ಹಾರ್ದಿಕ್ ಪಾಂಡ್ಯ  ಜೀವನ ಈಗ ಖಾಲಿ ಖಾಲಿಯಂತಾಗಿದೆ. ಟಿ20ಯಲ್ಲಿ ಮಿಂಚುತ್ತಿದ್ದ ಪಾಂಡ್ಯ ಗ್ರಹಚಾರವೇ ಸರಿ ಇದ್ದಂತೆ ಕಾಣ್ತಿಲ್ಲ.. ಟಿ20 ವಿಶ್ವಕಪ್ ಗೆದ್ದಾಗ ಮಹಿಕಾ ಶರ್ಮಾ ಜೊತೆ ಮೈದಾನದಲ್ಲೇ ಉರುಳಾಡಿದ ಮೇಲೆ ಪಾಂಡ್ಯ ಲಕ್ ಕೈ ಕೊಟ್ಟಂತೆ ಕಾಣ್ತಿದೆ. ಅಲ್ಲಿ ತನಕ ತಾನು ಮುಟ್ಟಿದೆಲ್ಲಾ ಚಿನ್ನ ಅನ್ನೋ ರೀತಿಯಲ್ಲಿತ್ತು ಹಾರ್ದಿಕ್ ಪಾಂಡ್ಯ ಲೈಫ್.. ಆದ್ರೆ ಟಿ20 ವಿಶ್ವಕಪ್ ಮುಗಿದ ಮೇಲೆ ಪಾಂಡ್ಯ ಲೈಫ್‌ನಲ್ಲಿ ಯಾವುದು ಸರಿಯಾಗಿ ನಡೆಯುತ್ತಿಲ್ಲ..

ಹಾರ್ದಿಕ್ ಪಾಂಡ್ಯ ಲೈಫ್ ಫುಲ್ ಜಿಂಗಲಾಲಾವಾಗಿತ್ತು.. ಟಿ20Iನಲ್ಲಿ ಹೊಡಿಬಡಿ ಆಟ.. ನತಾಶಾ ಬಿಟ್ಟು ಮೇಲೂ ಹೆಚ್ಚು ತಲೆಕೆಡಿಸಿಕೊಳ್ಳದ ಪಾಂಡ್ಯ ಮಹಿಕಾ ಶರ್ಮಾ ಜೊತೆ ಫುಲ್ ಜಾಲಿ ಮಾಡೋಕೆ ಶುರುಮಾಡಿದ್ರು. ಆದ್ರೆ ಯಾವಾಗ ಮಹಿಕಾ ಜೊತೆ ಮೈದಾನದಲ್ಲೇ ಕಿಸ್ ಕೊಡ್ತಾ , ವೀಕ್ಷಕರ ಕೆಂಗಣ್ಣಿಗೆ ಗುರಿಯಾದ್ರೋ ಅಲ್ಲಿಂದ ಪಾಂಡ್ಯ ಲೈಫ್ ಫುಲ್ ಚೇಂಜ್ ಆಗಿತ್ತು.. ಎಲ್ಲದ್ದಕಿಂತ ಹೆಚ್ಚಾಗಿ ಟಿ20 ವಿಶ್ವಕಪ್‌ ಗೆದ್ದಾಗ ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ಬಿದ್ದು ಉರುಳಾಡಿದ್ರು.. ಮೈಮೇಲೆ ಟೀ ಇಂಡಿಯಾದ ಫ್ಲಾಗ್ ಇದೇ ಅನ್ನೋದ್ದನ್ನೋ ಕೂಡ ಮರೆತಿದ್ದರು.. ಇದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡ್ತು.. ಆಮೇಲೆ ಪಾಂಡ್ಯ ಲಕ್ ಕೂಡ ಕೈ ಕೊಡ್ತು..

ದೂರವಾದ ಕೈನಾಲ್-ಹಾರ್ದಿಕ್ ಪಾಂಡ್ಯ

ಇನ್ನೂ ಟಿ20ಐ ವಿಶ್ವಕಪ್ ಮುಗಿದ ನಂತ್ರ ಅಣ್ಣ ಕೈನಾಲ್ ಪಾಂಡ್ಯ ಮತ್ತು ತಮ್ಮ ಹಾರ್ದಿಕ್ ಪಾಂಡ್ಯ ದೂರ ದೂರ ಆದ್ರು. ಮೊದ್ಲು ಅಣ್ಣತಮ್ಮ ಅಂದ್ರೆ ಹೀಗಿರಬೇಕು ಅಂತ ಎಲ್ಲಾರು ಹೇಳುವಂತೆ ಇದ್ದರು. ಆದ್ರೆ ಮಹಿಕಾ ವಿಚಾರಕ್ಕೆ ಇವರಿಬ್ಬರು ದೂರವಾಗಿದ್ದಾರೆ ಅನ್ನೋ ಟಾಕ್ ಕೂಡ ಇದೆ.

IPLನಲ್ಲಿ MI ಪರ ಕಳಪೆ ನಾಯಕತ್ವ

ಈ ಸಲದ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಕಂಪ್ಲೀಟ್ ಫೆಲ್ಯೂರ್ ಆಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡ ಕೇವಲ ಮೂರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತಳಮಟ್ಟಕ್ಕೆ ಕುಸಿದಿದೆ. 2024ರಲ್ಲಿ 10ನೇ ಸ್ಥಾನ, 2025ರಲ್ಲಿ ಪ್ಲೇಆಫ್ ಹಂತಕ್ಕೇರಿದ್ದರೂ, ಇತ್ತೀಚಿನ 2026ರ ಸೀಸನ್‌ನಲ್ಲಿ ತಂಡ ಮತ್ತೊಮ್ಮೆ ಕೇವಲ 4 ಪಂದ್ಯಗಳನ್ನು ಗೆದ್ದು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರೊಂದಿಗೆ ನಾಯಕನಾಗಿ ಮತ್ತು ಆಟಗಾರನಾಗಿ ಹಾರ್ದಿಕ್ ಪಾಂಡ್ಯ 206 ರನ್ ಮತ್ತು 4 ವಿಕೆಟ್ ತೆಗೆದಿದ್ದು, ಈ ಬಾರಿ ಕೂಡ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ಗೂ ಮುನ್ನ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್​ ಕೈ ಬಿಟ್ಟರೂ ಅಚ್ಚರಿಪಡಬೇಕಿಲ್ಲ.

ಹಿರಿಯ ಆಟಗಾರರ ಜೊತೆ ಹಳಸಿದ ಸಂಬಂಧ

ಹಾರ್ದಿಕ್ ಪಾಂಡ್ಯ ಅವರು ಕೇವಲ ಮೈದಾನದಲ್ಲಿ ಮಾತ್ರವಲ್ಲದೆ, ಡ್ರೆಸ್ಸಿಂಗ್ ರೂಮ್​ನಲ್ಲಿಯೂ ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸತತ ಸೋಲುಗಳು, ಅಭಿಮಾನಿಗಳಿಂದ ಎದುರಾದ ಟೀಕೆಗಳು ಮತ್ತು ತಂಡದ ಕೆಲವು ಹಿರಿಯ ಆಟಗಾರರಿಂದ ಸರಿಯಾದ ಸಹಕಾರ ಸಿಗದೇ ಇರುವುದು ಹಾರ್ದಿಕ್ ಅವರನ್ನು ತೀವ್ರ ಮಾನಸಿಕ ಒತ್ತಡಕ್ಕೆ ದೂಡಿದೆ. ಹೀಗಾಗಿಯೇ ಐಪಿಎಲ್​ ಸೀಸನ್‌ನ ಮಧ್ಯಭಾಗದಲ್ಲೇ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಹೋಗುವ ಇಚ್ಛೆಯನ್ನು ಮ್ಯಾನೇಜ್‌ಮೆಂಟ್‌ಗೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಜಸ್​ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರೊಂದಿಗೆ ಹಾರ್ದಿಕ್ ಅವರ ಸಂಬಂಧ ಚೆನ್ನಾಗಿಲ್ಲ ಅನ್ನೋ ಚರ್ಚೆಗಳೂ ಸೋಷಿಯಲ್ ಮೀಡಿಯಾದಲ್ಲಿ  ಜೋರಾಗಿವೆ.

ಟಿ20 ಸರಣಿಯಿಂದ ಹಾರ್ದಿಕ್ OUT

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಲಾಗಿಲ್ಲ.  BCCI ಇವರ ಕೆಲಸದೊತ್ತಡ ನಿರ್ವಹಣೆ ಮತ್ತು ಫಿಟ್‌ನೆಸ್ ಕಾಳಜಿಯಿಂದಾಗಿ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಿದೆ.

ಅಫ್ಘಾನ್ ಸರಣಿಯಿಂದಲೂ ಪಾಂಡ್ಯ ಹೊರಕ್ಕೆ

ಬೆನ್ನುನೋವಿನಿಂದ ಚೇತರಿಸಿಕೊಂಡು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡಿದ್ದ ಹಾರ್ದಿಕ್ ಪಾಂಡ್ಯ, ಇದೀಗ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. 2027ರ ವಿಶ್ವಕಪ್ ದೃಷ್ಟಿಯಿಂದ ಇವರ ಗಾಯ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ.

ಹಾರ್ದಿಕ ದೊಡ್ಡ ಶತ್ರುವಾದ ಗಾಯ

ಹಾರ್ದಿಕ್ ಪಾಂಡ್ಯಗೆ ಗಾಯಗಳೇ ದೊಡ್ಡ ತಲೆನೋವಾಗಿದೆ. ಇತ್ತೀಚೆಗೆ ಮುಗಿದ ಐಪಿಎಲ್​ನಲ್ಲೂ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು . ಗಾಯದಿಂದ ಇವರು ನಾಲ್ಕರಿಂದ ಐದು ಗುಂಪು ಹಂತದ ಪಂದ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಐಪಿಎಲ್​ಗೂ ಮೊದಲು ಗಾಯದಿಂದಾಗಿ ಹಲವಾರು ಪ್ರಮುಖ ಅಂತರರಾಷ್ಟ್ರೀಯ ಪಂದ್ಯಾವಳಿಗಳು ಮತ್ತು ಸರಣಿಗಳನ್ನು ಸಹ ಕಳೆದುಕೊಂಡರು. ಗಾಯದಿಂದಾಗಿ ಪಾಂಡ್ಯ 2025 ರ ಏಷ್ಯಾಕಪ್​ನಿಂದಲೂ ಹಿಂದೆ ಸರಿಯಬೇಕಾಯಿತು. ಅದೇ ಗಾಯದಿಂದಾಗಿ ಏಷ್ಯಾಕಪ್ ನಂತರ ನಡೆದ ಆಸ್ಟ್ರೇಲಿಯಾ ಪ್ರವಾಸಕ್ಕೂ ಪಾಂಡ್ಯ ಗೈರಾಗಿದ್ದರು. ಆದಾಗ್ಯೂ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಹಾರ್ದಿಕ್ ಪಾಂಡ್ಯ 2026 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2026 ರ ಟಿ20 ವಿಶ್ವಕಪ್‌ನ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ, ಹಾರ್ದಿಕ್ ಪಾಂಡ್ಯ 160.74 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸುವುದರ ಜೊತೆಗೆ ಒಂಬತ್ತು ವಿಕೆಟ್‌ಗಳನ್ನು ಸಹ ಪಡೆದರು. ಇದೀಗ ಹಾರ್ದಿಕ್ ಪಾಂಡ್ಯ ಮತ್ತೊಂದು ಗಾಯಕ್ಕೆ ಒಳಗಾಗಿದ್ದು ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದಾರೆ. 2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಆಯ್ಕೆದಾರರು ಹಾರ್ದಿಕ್ ಅವರನ್ನು ಟಿ20 ಕ್ರಿಕೆಟ್‌ನಿಂದ ದೂರ ಇಟ್ಟಿದ್ದಾರೆ. ಈಗ ಅಫ್ಘಾನ್ ಸರಣಿಯಿಂದಲೂ ಹೊರ ಬಿದ್ದಿದ್ದಾರೆ..  ಜಾಲಿಜಾಲಿಯಾಗಿದ್ದ ಪಾಂಡ್ಯ ಲೈಫ್ ಈಗ ಖಾಲಿ ಖಾಲಿಯಾದಂತಿದೆ. ಟಿ20 ವಿಶ್ವಕಪ್‌ ನಂತ್ರ ಅದರಲ್ಲೂ ಮಹಿಕಾ ಜೊತೆಗಿನ ಸುತ್ತಾಟದ ನಂತ್ರ ಲಕ್‌ ಕೈ ಹಿಯುತ್ತಿಲ್ಲ.. ಐಪಿಎಲ್‌ನಲ್ಲಿ ಕಳಫೆ ಫಾರ್ಮ್‌ನಿಂದ ಹೊರಬಂದು ಟೀ ಇಂಡಿಯಾದಲ್ಲಿ ಅಬ್ಬರಿಸಬೇಕು ಎನ್ನುವಾಗ ಗಾಯದ ಸಮಸ್ಯೆ ಪಾಂಡ್ಯಗೆ ಬಿಟ್ಟು ಬಿಡದೆ ಕಾಡುತ್ತಿದೆ..

Kishor KV

Leave a Reply

Your email address will not be published. Required fields are marked *