ಆರ್ ಸಿಬಿ ಕೈ ಜಾರಲ್ಲ IPL ಕಪ್ 18ನೇ ಮೆಟ್ಟಿಲಲ್ಲಿ ಟ್ರೋಫಿ ದರ್ಶನ
ಜಗ ಮೆಚ್ಚಿದ ತಂಡಕ್ಕಿದೆ ಅದೃಷ್ಟ

ಐಪಿಎಲ್ 2025 ರ ಸೀಸನ್ ಭಾರಿ ಕುತೂಹಲ ಮೂಡಿಸಿದೆ. ಪ್ಲೇಆಫ್ ತಲುಪಲು ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಬಹುತೇಕ ಲೀಗ್ನಿಂದ ಹೊರಗುಳಿದಿವೆ. ಇಂತಹ ಸಂದರ್ಭದಲ್ಲಿ ಕಪ್ ಗೆಲ್ಲುವ ತಂಡ ಯಾವುದು ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ ಆರ್ಸಿಬಿ ಮೇಲೆ ಈ ಸಲ ಎಲ್ಲರಿಗೂ ಹೋಪ್ ಹೆಚ್ಚಾಗಿದೆ.
ಐಪಿಎಲ್ 2025 ರ ಟ್ರೋಫಿಯನ್ನು ಯಾವ ತಂಡ ಎತ್ತಿ ಹಿಡಿಯುತ್ತದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಐಪಿಎಲ್ 2025 ರ ಚಾಂಪಿಯನ್ ರೇಸ್ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಂಚೂಣಿಯಲ್ಲಿವೆ.
ಈ ಸಲ ಕಪ್ ಗೆಲ್ಲುತ್ತೆ ಆರ್ಸಿಬಿ
ಈ ಸಲದ ಐಪಿಎಳ್ ಫೈನಲ್ ಬಗ್ಗೆ ಮಾತಾನಾಡಿದ ಸುನಿಲ್ ಗವಾಸ್ಕರ್, ಮುಂಬೈ ಇಂಡಿಯನ್ಸ್ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸರಿ ಸಮವಾಗಿದೆ. ಆದಾಗ್ಯೂ ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ರೇಸ್ನಲ್ಲಿ ಸ್ವಲ್ಪ ಮುಂದಿದೆ. ಬೆಂಗಳೂರು ತಂಡ ಐಪಿಎಲ್ 2025 ಪ್ರಶಸ್ತಿಯನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ಸ್ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ ಹಾಗೇ ಪಿಲ್ಡಿಂಗ್ ಕೂಡ ಚೆನ್ನಾಗಿದೆ. ಮುಂಬೈ ಇಂಡಿಯನ್ಸ್ ತಂಡವು ಬಲಿಷ್ಠವಾಗಿದ್ದು, ಮುನ್ನಡೆ ಸಾಧಿಸಿದೆ. ಆದರೆ ಆರ್ಸಿಬಿ ಖಂಡಿತವಾಗಿಯೂ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿದೆ ಎಂದು ಗವಾಸ್ಕರ್ ಭವಿಷ್ಯ ನುಡಿದ್ದಾರೆ.
ಅಂಬಾಟಿ ರಾಯುಡು ಭವಿಷ್ಯ
2025ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ಗೆ ಅರ್ಹತೆ ಪಡೆಯಬಲ್ಲ ನಾಲ್ಕು ತಂಡಗಳನ್ನು ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಅವರು ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಆರಿಸಿದ್ದಾರೆ.
ಅನಿಲ್ ಕುಂಬ್ಳೆ ಭವಿಷ್ಯ ನಿಜವಾಗುತ್ತಾ?
ಇದೇ ವೇಳೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಲೆ ಅವರು ಕೂಡ ಈ ಬಾರಿ ಪ್ಲೇಆಫ್ಸ್ಗೆ ಅರ್ಹತೆ ಪಡೆಯಬಲ್ಲ ನಾಲ್ಕು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನ ಮಾಡಿದ್ದಾರೆ.
ಪ್ಲೇಆಫ್ಸ್ ಬಗ್ಗೆ ಕೈಫ್ ಭವಿಷ್ಯ
ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಅವರು, ಪ್ಲೇಆಫ್ಸ್ಗೆ ಅರ್ಹತೆ ಪಡೆಯಬಲ್ಲ ತಮ್ಮ ನೆಚ್ಚಿನ ತಂಡಗಳನ್ನು ಆರಿಸಿದ್ದಾರೆ. ಇವರು ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಅತ್ಯುತ್ತಮ ಲಯದಲ್ಲಿದೆ. ಈಗ ಆರ್ಸಿಬಿಗೆ ಇರೋದು ಟಾಪ್ 2 ನಲ್ಲಿ ಸ್ಥಾನ ಪಡೆಯೋದು. ಹೇಗಾದ್ರೂ ಪಾಯಿಂಟ್ಸ್ ಟೇಬಲ್ನಲ್ಲಿ ಒಂದು ಅಥವಾ ಎರಡನೇ ಸ್ಥಾನ ಪಡೆದ್ರೆ, ಆರ್ಸಿಬಿ ಫೈನಲ್್ಗೆ ಹೋಗುವುದು ಪಕ್ಕಾ.. ಫೈನಲ್ಗೆ ಹೋಯ್ತು ಅಂದ್ರೆ ಕಪ್ ಗೆಲ್ಲೋದು ಕೂಡು ಪಕ್ಕಾ. ಇನ್ನೂ ಮುಂಬೈ, ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಯಾರು ಪ್ಲೇ ಆಫ್ಗೆ ಎಂಟ್ರಿ ಕೊಡ್ತಾರೆ? ಯಾರು ಸೋಲ್ತಾರೆ ಅನ್ನೋ ಟೆನ್ಷನ್ ಹೆಚ್ಚಾಗಿದೆ. ೆಕೆಕೆಆರ್ ಭವಿಷ್ಯ ಲಕ್ ಮೇಲೆ ನಿಂತಿದೆ. ಸಿಎಸ್ಕೆ, ರಾಜಸ್ಥಾನ ರಾಯಲ್ಸ್ ಮತ್ತು ಹೈದ್ರಾಬಾದ್ ತಂಡಗಳು ಪ್ಲೇ ಆಫ್ನಿಂದ ಹೊರ ನಡೆದಿದೆ.. ಹೀಗಾಗಿ ಈ ಸಲದ ಐಪಿಎಲ್ ಲೀಗ್ ಹಂತದಲ್ಲೇ ಸಖತ್ ಕಿಕ್ ಕೊಡ್ತಿದೆ.