ಆರ್‌ಸಿಬಿ ಟೀಮ್‌ಗೆ ಇಂಜುರಿ ಶಾಕ್ – ಇಬ್ಬರು ಔಟ್, ಸ್ಟಾರ್ ಬೌಲರ್ ಎಂಟ್ರಿ?

ಈ ಬಾರಿಯ ಐಪಿಎಲ್ ಮಿನಿ ಆಕ್ಷನ್ನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದಿತ್ತು. ಎಸ್ಪೆಷಲಿ ಆರ್‌ಸಿಬಿ ಬೌಲಿಂಗ್ ಲೈನ್ಅಪ್ ಅಷ್ಟೊಂದು ಸ್ಟ್ರಾಂಗ್ ಆಗಿ ಕಾಣ್ತಿಲ್ಲ. ಇದ್ರ ಬೆನ್ನಲ್ಲೇ ಆರ್ಸಿಬಿಯಲ್ಲಿರೋ ಇಬ್ಬರು ಫಾರಿನ್ ಪ್ಲೇಯರ್ಸ್ಗಳು ಇಂಜ್ಯೂರಿಗೆ ಒಳಗಾಗಿದ್ದು, ಟೂರ್ನಿಯಲ್ಲಿ ಆಡ್ತಾರಾ? ಇಲ್ವಾ? ಅನ್ನೋದು ಕೂಡ ಗ್ಯಾರಂಟಿ ಇಲ್ಲ. ಇದೀಗ ಆರ್‌ಸಿಬಿ ತಮ್ಮ ಬೌಲಿಂಗ್ನ್ನ ಇನ್ನಷ್ಟು ಸ್ಟ್ರಾಂಗ್ ಮಾಡೋಕೆ ಹೊಸ ಸ್ಟಾರ್ ಬೌಲರ್ನ ಮೇಲೆ ಕಣ್ಣಿಟ್ಟಿದೆ. ಆ ಬೌಲರ್ ಯಾರು? ಆರ್ಸಿಬಿಯಲ್ಲಿ ಯಾರೆಲ್ಲಾ ಇಂಜ್ಯೂರಿಗೊಳಗಾಗಿದ್ದಾರೆ ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಜೈ ಹೋ ಜೈಸ್ವಾಲ್ – ಆಂಗ್ಲರ ವಿರುದ್ಧ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಇಂಗ್ಲೆಂಡ್ ಮೂಲದ ಆಟಗಾರ ಟಾಮ್ ಕರನ್ರನ್ನ ಆರ್‌ಸಿಬಿ ಸುಮಾರು 1.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು. ಆದ್ರೆ ಆಸ್ಟ್ರೇಲಿಯಾದಲ್ಲಿ ಬಬಿಗ್ ಬ್ಯಾಶ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡ್ತಿದ್ದ ಟಾಮ್ ಕರನ್ ಕಾಲಿನ ಇಂಜ್ಯೂರಿಗೆ ಒಳಗಾಗಿದ್ದಾರೆ. ಹೀಗಾಗಿ ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲೂ ಟಾಮ್ ಕರನ್ ಆಡ್ತಾ ಇಲ್ಲ. ಮಾರ್ಚ್ 22ರಂದು ಆರಂಭವಾಗುವ ಐಪಿಎಲ್ನಲ್ಲೂ ಟಾಮ್ ಆಡ್ತಾರೆ ಅನ್ನೋದು ಕನ್ಫರ್ಮ್ ಇಲ್ಲ. ಹೀಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಹೊಸ ಬೌಲರ್ನನ್ನ ಟೀಮ್‌ಗೆ ಸೇರಿಸಿಕೊಳ್ಳೋ ಬಗ್ಗೆ ಯೋಚನೆ ಮಾಡ್ತಾ ಇದೆ. ಆ ಬೌಲರ್ ಮತ್ಯಾರೂ ವರ್ಲ್ಡ್ ಕ್ರಿಕೆಟ್ನ ನ್ಯೂ ಸೆನ್ಸೇಷನ್ ಶಾಮರ್ ಜೋಸೆಫ್. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮ್ಯಾಚ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದು ವೆಸ್ಟ್ಇಂಡೀಸ್ನ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದ ಶಾಮರ್ ಜೋಸೆಫ್ರನ್ನ ಟೀಮ್‌ಗೆ ಸೇರಿಕೊಳ್ಳೋ ಪ್ಲ್ಯಾನ್ನಲ್ಲಿ ಆರ್‌ಸಿಬಿ ಇದೆ ಅಂತಾ ಹೇಳಲಾಗ್ತಿದೆ. ಶಾಮರ್ ಜೋಸೆಫ್ ಇದುವರೆಗೂ ಯಾವುದೇ ಐಪಿಎಲ್ ಮ್ಯಾಚ್ಗಳನ್ನ ಆಡಿಲ್ಲ. ಆಕ್ಷನ್ ವೇಳೆಯೂ ಶಾಮರ್ ಹೆಸರು ಇರಲಿಲ್ಲ. ಶಾಮರ್ ಜೋಸೆಫ್ರಂಥಾ ಪ್ಲೇಯರ್ರನ್ನ ಖರೀದಿ ಮಾಡೋದು ಒಳ್ಳೆಯ ಡಿಸೀಶನೇ. ಈಗಾಗ್ಲೇ ಆರ್‌ಸಿಬಿ ಮತ್ತೊಬ್ಬ ವೆಸ್ಟ್ಇಂಡೀಸ್ ವೇಗ ಅಲ್ಜಾರಿ ಜೋಸೆಫ್ರನ್ನ 11 ಕೋಟಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ಶಾಮರ್ ಜೋಸೆಫ್ ಕೂಡ ಬಂದ್ರೆ, ಆರ್‌ಸಿಬಿ ಓಪನಿಂಗ್ ಬೌಲಿಂಗ್ ಪ್ಯಾರ್ ತುಂಬಾ ಎಫೆಕ್ಟಿವ್ ಆಗಬಹುದು. ಅಲ್ಜಾರಿ ಮತ್ತು ಶಾಮರ್ ಇಬ್ಬರೂ ವೆಸ್ಟ್ಇಂಡೀಸಿಗರೇ ಆಗಿರೋ ಕಾರಣ ಅವರ ನಡುವಿನ ಅಂಡರ್ಸ್ಟ್ಯಾಂಡಿಂಗ್ ಕೂಡ ಚೆನ್ನಾಗಿಯೇ ಇರುತ್ತೆ.
ಆದ್ರೆ ಶಾಮರ್ ಜೋಸೆಫ್ ಮೇಲೆ ಕೇವಲ ಆರ್‌ಸಿಬಿ ಅಷ್ಟೇ ಅಲ್ಲ, ಬೇರೆ ಫ್ರಾಂಚೈಸಿಗಳು ಕೂಡ ಕಣ್ಣಿಟ್ಟಿವೆ. ಶಾಮರ್ಗೆ ಈಗ ಹ್ಯೂಜ್ ಡಿಮ್ಯಾಂಡ್ ಇದೆ. ಈಗಾಗ್ಲೇ ಮೂರು ಫ್ರಾಂಚೈಸಿಗಳು ಶಾಮರ್ ಜೋಸೆಫ್ರನ್ನ ಖರೀದಿ ಮಾಡೋಕೆ ಪ್ಲ್ಯಾನ್ ಮಾಡಿವೆಯಂತೆ. ಶಾಮರ್ ಜೋಸೆಫ್ ಪರ್ಫಾಮೆನ್ಸ್ ಬಗ್ಗೆ ಇನ್ಫಾರ್ಮೇಶನ್ ಕಲೆಕ್ಟ್ ಮಾಡಿವೆಯಂತೆ. ಹೀಗಾಗಿ ವೆಸ್ಟ್ಇಂಡೀಸ್ ಫಾಸ್ಟ್ ಬೌಲರ್ ವಿಚಾರವಾಗಿ ಏನು ಬೇಕಾದ್ರೂ ಬೆಳವಣಿಗೆಗಳಾಗಬಹುದು. ಇತ್ತ ಆರ್‌ಸಿಬಿ ಅಭಿಮಾನಿಗಳಂತೂ ಶಾಮರ್ ಜೋಸೆಫ್ ನಮ್ಮ ಟೀಮ್‌ಗೆ ಬರಲಿ ಅಂತಾ ಕಾಯ್ತಾ ಇದ್ದಾರೆ.
ಒಂದ್ಕಡೆ ಟಾಮ್ ಕರನ್ ಇಂಜ್ಯೂರಿಗೆ ಒಳಗಾಗಿದ್ರೆ, ಆರ್ಸಿಬಿಯ ಮತ್ತೊಬ್ಬ ಆಲ್ರೌಂಡರ್ ಲಾಕಿ ಫರ್ಗ್ಯೂಸನ್ ಕೂಡ ಗಾಯದ ಸಮಸ್ಯೆ ಎದುರಿಸ್ತಾ ಇದ್ದಾರೆ. ನ್ಯೂಜಿಲ್ಯಾಂಡ್ನಲ್ಲಿ ನಡೆದ ಸೂಪರ್ ಸ್ಮ್ಯಾಶ್ ಟಿ20 ಲೀಗ್ ಫೈನಲ್ ಮ್ಯಾಚ್ಗೂ ಮುನ್ನ ಲಾಕಿ ಫರ್ಗ್ಯೂಸನ್ ಗಾಯಗೊಂಡಿದ್ರು. ಹೀಗಾಗಿ ಆ ಮ್ಯಾಚ್ನ್ನ ಕೂಡ ಫರ್ಗ್ಯೂಸನ್ಗೆ ಆಡೋಕೆ ಸಾಧ್ಯವಾಗಿರಲಿಲ್ಲ. ಕೆಲ ಮಾಹಿತಿಗಳು ಪ್ರಕಾರ ಆರ್ಮ್ಸ್ಟ್ರಿಂಗ್ ಇಂಜ್ಯೂರಿಯಾಗಿದೆ ಅಂತಾ ಹೇಳಲಾಗ್ತಿದೆ. ಒಂದು ವೇಳೆ ಸ್ಟ್ರಿಂಗ್ ಇಂಜ್ಯೂರಿಯಾದ್ರೆ ಇದು ಸ್ವಲ್ಪ ಸೀರಿಯಸ್ ವಿಚಾರವೇ. ಫರ್ಗ್ಯೂಸನ್ಗೆ ಮೂರು ತಿಂಗಳಾದ್ರೂ ರೆಸ್ಟ್ ಬೇಕಾಗಬಹುದು. ಮಾರ್ಚ್ 22ಕ್ಕೆ ಐಪಿಎಲ್ ಶುರುವಾಗ್ತಿದೆ. ಹೀಗಾಗಿ ಫರ್ಗ್ಯೂಸನ್ ಐಪಿಎಲ್ನಲ್ಲಿ ಆಡೋದು ಯಾಕೋ ಡೌಟ್ ಅಂತಾ ಕಾಣ್ತಿದೆ. ಹೀಗಾಗಿ ಆರ್‌ಸಿಬಿ ಈಗ ಒಂದಷ್ಟು ರಿಪ್ಲೇಸ್ಮೆಂಟ್ ಮಾಡೋ ಬಗ್ಗೆ ಯೋಚನೆ ಮಾಡ್ತಿರಬಹುದು. ಆರ್‌ಸಿಬಿ ಸ್ಕ್ವಾಡ್ನಲ್ಲಿ ಕೆಲ ಬದಲಾವಣೆಗಳಾಗಬಹುದು. ಹೀಗಾಗಿಯೇ ವೆಸ್ಟ್ಇಂಡೀಸ್ ಶಾಮರ್ ಜೋಸೆಫ್ ಆರ್‌ಸಿಬಿ ಜಾಯಿನ್ ಆಗ್ತಾರಾ ಅನ್ನೋ ಸುದ್ದಿ ಓಡಾಡ್ತಿದೆ.
ಒಂದು ವೇಳೆ ರಿಪ್ಲೇಸ್ ಮಾಡ್ತಾರೆ ಅನ್ನೋದಾದ್ರೆ ಆರ್‌ಸಿಬಿ ಒಬ್ಬ ಸ್ಪಿನ್ನರ್ನ್ನ ಕೂಡ ಚೂಸ್ ಮಾಡೋ ಬಗ್ಗೆ ಚಿಂತನೆ ಮಾಡಬಹುದು. ನಿಮಗೆ ಗೊತ್ತಿರೋ ಹಾಗೆ ಆರ್ಸಿಬಿಯಲ್ಲಿ ಎಫೆಕ್ಟಿವ್ ಸ್ಪಿನ್ನರ್ಸ್ಗಳ ಶಾರ್ಟೇಜ್ ಇದೆ. ಟಾಮ್ ಕರನ್ ಮತ್ತು ಫರ್ಗ್ಯೂಸನ್ ಇಬ್ಬರೂ ಐಪಿಎಲ್ನಲ್ಲಿ ಆಡಲ್ಲ ಅಂದ್ರೆ ಒಬ್ಬ ಪೇಸ್ ಬೌಲರ್ ಮತ್ತು ಸ್ಪಿನ್ನರ್ ಆರ್‌ಸಿಬಿ ಪಿಕ್ ಮಾಡ್ಲೂ ಬಹುದು. ಸ್ಟಿಲ್, ಟಾಮ್ ಕರನ್ ಇಲ್ಲಾ ಫರ್ಗ್ಯೂಸನ್ ಇವರಿಬ್ಬರಲ್ಲಿ ಯಾರೇ ಅನ್ಅವೈಲೇಬಲ್ ಆದ್ರೂ ರಿಪ್ಲೇಸ್ ಮಾಡೋಕೆ ಶಮಾರ್ ಜೋಸೆಫ್ ಹೊರತಾಗಿ ಆರ್‌ಸಿಬಿ ಬಳಿ ಇನ್ಯಾವೆಲ್ಲಾ ಪ್ಲೇಯರ್ಸ್ಗಳ ಆಪ್ಷನ್ ಇದೆ ಅನ್ನೋದನ್ನ ಕೂಡ ಇಲ್ಲಿ ನೋಡೋಣ.
ಜೇಮ್ಸ್ ನೀಶಾಮ್
ನ್ಯೂಜಿಲ್ಯಾಂಡ್ ಆಲ್ರೌಂಡರ್ ಜೇಮ್ಸ್ ನೀಶಾಮ್ರನ್ನ ಆರ್ಸಿಬಿಗೆ ಪಿಕ್ ಮಾಡಬಹುದು. 2023ರ ಬಳಿಕ ಅವರ ಬ್ಯಾಟಿಂಗ್ ಸ್ಟ್ರೈಕ್ರೇಟ್ 136.08ನಷ್ಟಿದೆ. ಬೌಲಿಂಗ್ನಲ್ಲೂ ಎಫೆಕ್ಟಿವ್ ಆಗಿದ್ದಾರೆ.
ಜ್ಯಾಸನ್ ಹೋಲ್ಡರ್
ಇನ್ನು ವೆಸ್ಟ್ಇಂಡೀಸ್ನ ಮತ್ತೊಬ್ಬ ಆಟಗಾರ ಜ್ಯಾಸನ್ ಹೋಲ್ಡರ್ರನ್ನ ಟೀಮ್‌ಗೆ ಸೇರಿಸಿಕೊಳ್ಳೋ ಆಪ್ಷನ್ ಆರ್ಸಿಬಿಗೆ ಇದೆ. ಪವರ್ಪ್ಲೇ ಮತ್ತು ಮಿಡ್ಲ್ ಓವರ್ಸ್ಗಳಲ್ಲಿ ಜ್ಯಾಸನ್ ಹೋಲ್ಡರ್ ಎಫೆಕ್ಟಿವ್ ಆಗಿ ಬೌಲಿಂಗ್ ಮಾಡೋ ಕೆಪಾಸಿಟಿ ಹೊಂದಿದ್ದಾರೆ. ಹಾಗೆಯೇ ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಬಂದು ಒಂದಷ್ಟು ರನ್ ಕೂಡ ಮಾಡ್ತಾರೆ.
ಜ್ಯಾಮಿ ಓವರ್ಟನ್
ಇಂಗ್ಲೆಂಡ್ನ ಆಲ್ರೌಂಡರ್ ಜ್ಯಾಮಿ ಓವರ್ಟನ್ ಕೂಟ ಟಾಮ್ ಕರನ್ ಇಲ್ಲಾ ಫರ್ಗ್ಯಸನ್ರನ್ನ ರಿಪ್ಲೇಸ್ ಮಾಡಬಹುದು. ಓವರ್ಟನ್ ಒಬ್ಬ ಕ್ವಾಲಿಟಿ ಪೇಸ್ ಬೌಲರ್. ಮಿಡ್ಲ್ ಓವರ್ಗಳಲ್ಲಿ ಮತ್ತು ಡೆತ್ ಓವರ್ಗಳಲ್ಲಿ ಆರ್ಸಿಬಿಗೆ ಯೂಸ್ ಮಾಡಗಬಹುದು. ಹಾಗೆಯೇ ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ ಕೂಡ ಮಾಡ್ತಾರೆ. ಜಗತ್ತಿನಾದ್ಯಂತ ಬೇರೆ ಬೇರೆ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿರೋದ್ರಿಂದ ಒಂದಷ್ಟು ಎಕ್ಸ್ಪೀರಿಯನ್ಸ್ ಕೂಡ ಇದೆ.
ಕ್ವೇನಾ ಮಫಾಕಾ
ಸೌತ್ ಆಫ್ರಿಕಾದ ಈ ಯಂಗ್ಸ್ಟರ್ ಈ ಬಾರಿಯ ಅಂಡರ್-19 ವರ್ಲ್ಡ್ಕಪ್ನಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ. 17 ವರ್ಷದ ಕ್ವೇನಾ ಟೂರ್ನಿಯಲ್ಲಿ 12 ವಿಕೆಟ್ ಪಡೆದಿದ್ದಾರೆ. ಅದ್ರಲ್ಲೂ ಎರಡು ಬಾರಿ ಐದು ವಿಕೆಟ್ ತೆಗೆದಿದ್ದಾರೆ. ನ್ಯೂಬಾಲ್ನಲ್ಲಂತೂ ಟಾಪ್ ಕ್ಲಾಸ್ ಬೌಲಿಂಗ್ ಮಾಡಿದ್ದು, ಯಾರ್ಕರ್ ಸ್ಪೆಷಲಿಸ್ಟ್ ಬೇರೆ. ಟಿ20 ಫಾರ್ಮೆಟ್ನಲ್ಲಿ ಯಾರ್ಕರ್ನ ಇಂಪಾರ್ಟೆನ್ಸ್ ಏನು ಅನ್ನೋದು ನಿಮಗೆ ಗೊತ್ತೇ ಇದೆ. ಹೀಗಾಗಿ ಡೆತ್ ಓವರ್ಗಳಲ್ಲಿ ಕ್ವೇನಾ ಟೀಮ್ ದೊಡ್ಡ ವೆಪನ್ ಆಗ್ಬಹುದೋ ಏನೊ. ಸೋ ಇಷ್ಟು ಮಂದಿ ಪೈಕಿ ಆರ್‌ಸಿಬಿ ಯಾರನ್ನ ಬೇಕಿದ್ರೂ ಪಿಕ್ ಮಾಡಬಹುದು.
ಇನ್ನು ಆರ್ಸಿಬಿಯ ಮತ್ತೊಬ್ಬ ಮೇನ್ ಪ್ಲೇಯರ್ ಗ್ಲೇನ್ ಮ್ಯಾಕ್ಸ್ವೆಲ್ ಕೆಲ ದಿನಗಳ ಹಿಂದೆ ದೊಡ್ಡ ಕಾಂಟ್ರೋವರ್ಸಿಯಲ್ಲೇ ಸಿಕ್ಕಾಕ್ಕೊಂಡಿದ್ರು. ಪಾರ್ಟಿಯೊಂದರಲ್ಲಿ ಅತಿಯಾಗಿ ಕುಡಿದು ಅಣ್ಣ ಫುಲ್ ಟೈಟ್ ಆಗಿದ್ರು. ಎಷ್ಟರ ಮಟ್ಟಿಗೆ ಅಂದ್ರೆ ಗ್ಲೇನ್ ಮ್ಯಾಕ್ಸ್ವೆಲ್ರನ್ನ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಲಾಗಿತ್ತು. ಕುಡಿದಿದ್ದು ಜಾಸ್ತಿಯಾಗಿ ಮ್ಯಾಕ್ಸ್ವೆಲ್ ಹೆಲ್ತ್ ಅಪ್ಸೆಟ್ ಆಗಿತ್ತು. ಈಗ ಡಿಸ್ಚಾರ್ಜ್ ಆಗಿ ಮತ್ತೆ ನೆಟ್ ಪ್ರಾಸ್ಟೀಸ್ ಶುರು ಮಾಡಿದ್ದಾರೆ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್ ಗ್ಲೇನ್ ಮ್ಯಾಕ್ಸ್ವೆಲ್ ಬಗ್ಗೆ ವರಿ ಮಾಡಬೇಕಾದ ಅವಶ್ಯಕತೆ ಇಲ್ಲ. ಐಪಿಎಲ್ನಲ್ಲಿ ಆಡೋದಂತೂ ಫಿಕ್ಸ್.