ಅಯೋಧ್ಯೆ ರಾಮ ಮಂದಿರದ ಮೇಲೆ ಹಾರಾಡಿದ ಕೇಸರಿ ಧ್ವಜ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ

ಅಯೋಧ್ಯೆಯಲ್ಲಿ ರಾಮ ಮಂದಿರದ ಮೇಲೆ ಕೇಸರಿ ಧ್ವಜ ಇಂದು ಹಾರಾಡಿದೆ(. ಇಂದು ಪ್ರಧಾನಿ ನರೇಂದ್ರ ಮೋದಿ ಭಗವಾಧ್ವಜದ ಧ್ವಜಾರೋಹಣವನ್ನು ನೆರವೇರಿಸಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಮೂಲೆ ಮೂಲೆಗಳಿಂದ ಗಣ್ಯಾತೀಗಣ್ಯರು ಅಯೋಧ್ಯೆಗೆ ಬಂದಿಳಿದಿದ್ದಾರೆ. ಮತ್ತೊಂದೆಡೆ ಸುಮಾರು 500ವರ್ಷಗಳ ಕಾಲ ಕೋಟ್ಯಂತರ ಹಿಂದೂಗಳು ಕಂಡಿದ್ದ ಕನಸು ನನಸಾಗುತ್ತಿರುವುದನ್ನು ಕೋಟ್ಯಂತರ ಜನ ಕಣ್ತುಂಬಿಕೊಂಡಿದ್ದಾರೆ
ಈ ಸಮಾರಂಭವು “ಅಭಿಜೀತ್ ಮುಹೂರ್ತ”ದ ಸಮಯದಲ್ಲಿ ನಡೆದಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ಈ ಭವ್ಯ ಕಾರ್ಯಕ್ರಮದಲ್ಲಿ ಸುಮಾರು 6,000 ರಿಂದ 8,000 ಆಹ್ವಾನಿತ ಗಣ್ಯರಿದ್ದಾರೆ. ಇನ್ನು ಶ್ರೀರಾಮ ಲಲ್ಲಾನ ಸನ್ನಿಧಿಯಲ್ಲಿ ನಡೆಯುತ್ತಿರುವ ಈ ಮಂಗಳ ಕಾರ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಅಯೋಧ್ಯೆಗೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಹುನಿರೀಕ್ಷಿತ ಭಾರತ ಭೇಟಿ ಮತ್ತೊಮ್ಮೆ ಮುಂದೂಡಿಕೆ

ನೋಡಿರಿ

